Total Pageviews

Tuesday, October 17, 2017

ಬೆಳಗಿಂಗೆ ಬೆಳಗಾಗಿ


ಮಹಾಕವಿ ವರ್ಜಿಲ್ನನ್ನು ಕುರಿತು ಒಂದು ಮಾತಿದೆ, ‘ಈತನಿಗಿಂತಲೂ ಹೆಚ್ಚು ಕಲಿತವರು, ಬುದ್ಧಿವಂತರು, ಪ್ರತಿಭಾವಂತರು ಮತ್ತು ವಿವೇಕಿಗಳಾದವರನ್ನು ಜಗತ್ತು ಕಂಡಿರಬಹುದು. ಆದರೆ ಪ್ರತಿಭೆ, ಅಭಿವ್ಯಕ್ತಿ, ಸಾಮಥ್ರ್ಯ, ಲೋಕಜ್ಞಾನ, ವಿನಯ, ವಿವೇಕ ಮತ್ತು ಕಾಲದ ಸ್ಪಂದನ ಇರಬೇಕಾದ
ಪ್ರಮಾಣದಲ್ಲಿ ಇದ್ದ ವರ್ಜಿಲ್ನಂಥವರು ಮಾತ್ರ ಕಾಣಸಿಗುವುದು ಬಹಳ ಅಪರೂಪಕ್ಕೆ ಎಂದು. ಇದು ಓಶೋನಿಗೂ ಅನ್ವಯವಾಗುವ ಮಾತು. ಯಾಕೆಂದರೆ ಈತನೂ ಅಷ್ಟೆ. ಇವನೊಂದು ವಿಚಿತ್ರವೆನ್ನುವಂತೆ ನಾವು ನೋಡಿರುವುದು ನಮ್ಮ ಲೋಕದ ಮಿತಿ. ಆದರೆ ಈತ ಒಂದು ಅಪರೂಪ ಅಷ್ಟೆ.
ತಿರಸ್ಕಾರದ ಯಾವುದೇ ಪೂರ್ವ ತಯ್ಯಾರಿಯಿಂದ ನೀವಿದ್ದರೂ ಅಷ್ಟೆ., ಓಶೋ ಓರ್ವ ವ್ಯಕ್ತಿಯಾಗಿದ್ದ ಎನ್ನುವುದಂತೂ ಸತ್ಯ. ಆದರೆ ಸಾಮಾನ್ಯ ಮನುಷ್ಯನ ಮಿತಿಗಳನ್ನು ಮೀರಿದ ಆತನೆ ಒಂದು ಚಿಂತನ ಪ್ರವಾಹ, ಹೊಸ ಜೀವನ ದೃಷ್ಟಿ ಮತ್ತು ಶಕ್ತಿ ಸ್ವರೂಪ.
ಪೂಜೆಯ ಪ್ರಗಾಢ ಪ್ರಪಂಚದಲ್ಲಿ ಆತನೊಬ್ಬ ನಾಸ್ತಿಕನಾಗಿ ಕಂಡ. ಮಾಹೋನ್ನತಿಯ ಸಾಂಪ್ರದಾಯಿಕ ದಾರಿಗಳನ್ನು ಧಿಕ್ಕರಿಸಿದ್ದ ಆತ ಮಹಾತ್ಮರಲ್ಲಿ ಧರ್ಮ ಬೀರುವಿನಂತೆ ಉಳಿದುಕೊಂಡ. ಲೈಂಗಿಕತೆಯ ಅವನ ಮಾತುಗಳು ಬರೀ ಚಪಲವಾಗಿರಲಿಲ್ಲ. ವರ್ತಮಾನದ ಒಳ ದುಗುಡಗಳೇ ಆತನ ಆಲೋಚನೆಯಾಗಿದ್ದರೂ ಆತ ಅಪರಾಧಿ ಎನ್ನಿಸಿಕೊಂಡ. ನಿರ್ವಿಕಾರಿಯಾಗಿದ್ದ ಆತನ ಮಾತುಗಳಲ್ಲಿ ಕೆಡುಕಿರಲಿಲ್ಲ. ದಾವ್ ಮಾತುಗಳಲ್ಲಿ ಹೇಳುವುದಾದರೆಉಪಕಾರ ಮಾಡುವುದನ್ನು ಅವನು ಬಿಟ್ಟಿದ್ದರಿಂದ ಅವನಷ್ಟು ಪರೋಪಕಾರಿ ಇಲ್ಲ
ಸತ್ಯದ ಭಾಷೆ ಯಾವಾಗಲೂ ಒಗಟಿನಂತಲ್ಲವೆ? ಹೀಗಾಗಿ ಓಶೋ ಒಗಟಾಗಿಯೇ ಉಳಿದುಕೊಂಡ.
ಅಂದಹಾಗೆ ನನ್ನ ಹೊಸ ರಚನೆಯ ಕುರಿತು ಅಥಣಿಯ ಮೋಟಗಿಮಠದ ಸ್ವಾಮಿಜಿಗಳಾದ ಪ್ರಭು ಚನ್ನಬಸವಸ್ವಾಮಿಜಿ ರವರು ಹೀಗೆ ಹೇಳುತ್ತಾರೆ - ಛಲಬಿಡದ ಪರಿಶ್ರಮ ಎಂತಹ ಯಶಸ್ಸನ್ನೂ ನೀಡಬಹುದು ಎನ್ನುವುದಕ್ಕೆ ನೀವೇ ಸಾಕ್ಷಿಯಾಗಿದ್ದೀರಿ ರಾಗಂ. ಯಾಕೆಂದರೆ; ನಿಮ್ಮ ಓಶೋ ಹೇಳಿದಂತೆ ಎಂದಿಗೂ ಬತ್ತಲೆಗೆ ಬೆರಗಾಗಬಾರದು !!
ನೀವುಗಾಂಧಿಯಲ್ಲಿ ಹೇಳಿಕೊಂಡಂತೆ ಸೃಜನಶೀಲತೆಯ ಸಂಕಟವೇ ಅಂತದ್ದು. ಅಂತರಂಗದೊಳಗೆ ಹತ್ತಿದ ಅರಿವಿನ ಜ್ವಾಲೆ ಹೊರಹಾಕುವವರೆಗೂ ನಿದ್ರೆ, ನೀರಡಿಕೆಯ ಪರಿವೇ ಇಲ್ಲದಂತಾಗುತ್ತದೆ. ಅಂತಹ ಅನ್ವೇಷಣೆಯನ್ನೇ ಅಭಿವ್ಯಕ್ತಿ ಮಾಡಿಕೊಂಡ ನಿಮ್ಮ ಅವಿಶ್ರಾಂತ ಬರ, ಅಂಬರ-ದಿಗಂಬರ, ಒಂದೊಂದ, ಸುಂದರ-ವಸುಂಧರ !!
ನಿಮ್ಮ ಕೃತಿಗಳು ಕೊರಳಿನಿಂದಲ್ಲ, ಕರುಳು ತುಂಬಾ ಮಾತನಾಡುತ್ತವೆ. ‘ವಿದ್ರೋಹಿಯಂತೂ ತುಂಬಾ ಕಾಡಿದೆ. ಕೆಲವು ರಾತ್ರಿಗಳು ನಶೆಯಲ್ಲಿಯೇ ಕಾಲ ಕಳೆದಿದ್ದೇನೆ. ಒಂದು ಚುಂಬಕ ಶಕ್ತಿ ನಿಮ್ಮ ಬರಹದಲ್ಲಿದೆ. ಹೇಳಬೇಕಾದದ್ದನ್ನು ನೇರವಾಗಿ ಹೇಳುತ್ತೀರಿ. ಧೈರ್ಯ-ಸ್ಥೈರ್ಯ ನಿಮ್ಮಲ್ಲಿದೆ.
ನಮಗೆ ಕಾಣದಿರುವ ಎಷ್ಟೊಂದು ವಿಷಯಗಳು ನಮ್ಮ ಕಣ್ಣ ತೆರೆಸುತ್ತವೆ. ಉರುಳು ಒಮ್ಮೊಮ್ಮೆ ಉರಿ ಹಚ್ಚುತ್ತದೆ; ಕರುಳು ಕಂಬನಿ ಮಿಡಿಯುತ್ತದೆ.
ಇತ್ತೀಚಿನ ಹೊಸ ತಲೆಮಾರಿನ ಲೇಖಕರನ್ನು ನೋಡಿದರೆ ಅಸಹ್ಯವೆನಿಸುತ್ತದೆ. ಇತಿಹಾಸದ ಪ್ರಜ್ಞೆಯಿಲ್ಲ. ಸಾಮಾಜಿಕ ಜವಾಬ್ದಾರಿಯಿಲ್ಲ, ಪ್ರಗತಿಪರ ಧೋರಣೆಯಿಲ್ಲ. ಅನೇಕರು ಮುಖವಾಡಗಳ ಮರೆಯಲ್ಲಿ ಮರೀಚಿಕೆಯಾಗಿದ್ದಾರೆ. ಆದರೆ! ನಿಮಗೆ ಯಾವ ಮುಖವಾಡವೂ ಇಲ್ಲ. ಒಬ್ಬ ಆದರ್ಶ ಚಿಂತಕ, ಲೇಖಕ ನಾಡಿನ ದೂರದೃಷ್ಟಿಯ ವಾರಸುದಾರನಾಗಿರುತ್ತಾನೆ. ಅಂತಹ ಅಪರೂಪದ ಆದರ್ಶ ನಿಮ್ಮಲ್ಲಿ ಕಂಡು ನಾನು ಹೆಮ್ಮೆಪಟ್ಟಿದ್ದೇನೆ. ಅಭಿಮಾನದಿಂದ ಬೀಗಿದ್ದೇನೆ. ಅದರಲ್ಲೂ ನಿಮ್ಮಜಾತ್ಯಾತೀತ ನಿಲುವು ನನಗೆ ತುಂಬಾ ಇಷ್ಟವಾಯಿತು. ಬಾಯಿಗೆ ಬಂದಂತೆ ಕಿರುಚಾಡುವಹಿಂದೂ ಆಗದೆ, ಭಾವೈಕ್ಯತೆಯ ಭಾರತೀಯನಾದದ್ದು ನನಗೆ ತುಂಬಾ ಸಮಾಧಾನ ತಂದಿದೆ.