Total Pageviews

Tuesday, September 29, 2020

ಅಬ್ಬಾಸ್‍ರೊಂದಿಗೆ ‘ಜನ್ನತ್ ಮೊಹಲ್ಲಾ’ ಹುಡುಕುತ್ತ

           ಬಹಳ ಅದ್ಭುತ ಕೈಗ ಸುಖ ಉಂಡಿದ್ದೇನೆ.

ನಾನು ಕೈ ತುತ್ತು ಉಂಡು ಬೆಳೆದಿದ್ದೇನೆ ಕೈ ಕಥೆ ಕೈಗೆ ಗೊತ್ತಾಗಬಾರದು ಎಂಬ ನಮ್ಮ ಜನಪದರ ಜಾಣ್ಣುಡಿಗೆ ಎಷ್ಟೊಂದು ಚಿಂತಿಸಿದ್ದೇನೆ. ಅಯ್ಯೋ, ಅದ್ಯಾವ ಘಳಿಗೆಯಲ್ಲಿ ಹಾಳು ಕೈ ಹಚ್ಚಿದೆನೋ ಕೂಸಿಗೆ ಹೀಗಾಯಿತು ಎಂದು ಗೋಳಾಡುವ ಅವ್ವಂದಿರನ್ನು ನೋಡಿದ್ದೇನೆ. ನನ್ನ ಕೈಗೂ ಬಾ ಕೂಸೆನನ್ನನ್ನು ಉದ್ದರಿಸು ಎಂದು ಕರೆದ ಶೋಡಷಿಯರು, ಕೆನ್ನೆ ರಂಗಾಗಿಸಿಕೊಂಡಿದ್ದನ್ನು ನೋಡಿದ್ದೇನೆರಾಮನ ಕೈ ಹಿಡಿದು ಸೀತೆ, ಲವನ ಕೈ ಹಿಡಿದು ಕುಶ, ಸಂಜಯನ ಕೈ ಹಿಡಿದು ದೃತರಾಷ್ಟ್ರ, ಕೃಷ್ಣನ ಕೈ ಹಿಡಿದು ಗೊಲ್ಲರು, ಗೋಪಿಯರು, ಗುರು ಗೋವಿಂದನ ಕೈ ಹಿಡಿದು ಶರೀಫ, ಬುದ್ಧನ ಕೈ ಹಿಡಿದು ಬಿಂದುಸಾರ ಅಬ್ಬಾ!

ದೇಶದ ಇತಿಹಾಸವೆನ್ನುವುದು ರೀ ಕೈಗಳ ಕಥೆಯಲ್ಲವೆ?”

ಇವು 2014ರಲ್ಲಿ ಪ್ರಕಟಗೊಂಡ ನನ್ನಹೆಣ್ಣು ಹೇಳುವ ಅರ್ಧ ಸತ್ಯಕೃತಿಯ ಕೊನೆಯಸೋಕಿದ ಕೈಗಳ ಸುಖವ ನೆನೆದುಲೇಖನದಕೆಲವು ಸಾಲುಗಳು. ವಾರದ ಹಿಂದೆಯಷ್ಟೇ ಗತಿಸಿದ ಕಥೆಗಾರ ಗೆಳೆಯ ಅಬ್ಬಾಸ್ ಮೇಲಿನಮನಿ, ಮೇಲಿನ ನನ್ನ ಸಾಲುಗಳನ್ನು ನನಗೇ ಓದಿ, ಗದ್ಗದಿತರಾಗುತ್ತಿದ್ದರುವಿಚಿತ್ರಸಂಕಟ, ಸಮಾಧಾನ, ಪಲಾಯನ, ಪಲ್ಲಟಗಳ ಚಕ್ರತೀರ್ಥದಲ್ಲಿ ನಿಂತು ನನ್ನ ಸಾಲುಗಳನ್ನು ಅಂದು ನನಗೆ ಅಬ್ಬಾಸ್ ಒಪ್ಪಿಸುತ್ತಿದ್ದರು.

ನಾನು ಸಂತೆಯಲ್ಲಿ ನಿಂತ ಜಂಗಮ. ಕೃತಿಯಲ್ಲಿಮಾತಾಡುತ್ತಿರುವುದೆಲ್ಲವೂ ಸೂಳೆ ಸಂಕವ್ವರೊಂದಿಗೆ. ಅವರೆಲ್ಲರ ಮಮತೆಯ ಕೈ ನೆನೆದು ಬರೆದ ಕೊನೆಯ ಲೇಖನ ಗೆಳೆಯ ಅಬ್ಬಾಸರ ಎದೆ ಒದ್ದೆಗೊಳಿಸಿತ್ತು.

ಬಹುತೇಕ 2015,ಬೆಂಗಳೂರಿನ ಮಾರತಹಳ್ಳಿಯಲ್ಲಿ ತಪ್ಪಿ ಗೃಹಪ್ರವೇಶಯೊಂದರ ಸಮಾರಂಭದಲ್ಲಿ ಸಿಕ್ಕಿಹಾಕಿಕೊಂಡಿದ್ದೆ ನಾನು. ಆದರೆ ಅಬ್ಬಾಸರ ಫೋನನ್ನು ಎತ್ತಿಕೊಳ್ಳದಿರುವಂತಿರಲಿಲ್ಲ. ಅವರು ಹೇಳುತ್ತಿದ್ದರು, ‘ರಾಗಂ, ನಮ್ಮ ಮತ್ತು ನಿಮ್ಮ ಮಧ್ಯದಲ್ಲಿ ಒಂದು ತೆಳ್ಳನೆಯ ಗೆರೆ ಇದೆ. ಅದರಾಚೆ ನೀವು, ಇನ್ನಷ್ಟು ಮುಂದೆ ಹೋದರೆ ನೀವು ಕನ್ನಡದ ಗೀಬ್ರಾನ್’. ಅದು ಅಬ್ಬಾಸರ ಆತ್ಮಸೌಂದರ್ಯ, ಅದಕ್ಕೊಂದು ನಮನ.

ಅದರೀಚೆ, “ನಾನು ಕನ್ನಡದ ರಾಗಂ. ಯಾರ ಮರುಸೃಷ್ಟಿಯೂ ಅಲ್ಲ, ಮರುರೂಪವಾಗುವ ಅವಶ್ಯಕತೆಯೂ ಇಲ್ಲ. ನಾನು ನಾನಾಗಬೇಕಿದೆ ಅಷ್ಟೆ. ಅಬ್ಬಾಸ್ ನಿಮ್ಮ ಪ್ರೀತಿಗೆ, ಓದಿಗೆ, ಅಭಿಮಾನಕ್ಕೆ ಋಣಿಯಾಗಿದ್ದೇನೆ. ಗದ್ದಲದಲ್ಲಿದ್ದೇನೆ, ಮತ್ತೆ ಮಾತಾಡುತ್ತೇನೆ.”

ಫೋನಿನ ಈಚೆ ಭೌತಿಕವಾಗಿ 600 ಕಿ.ಮೀಗಳ ಅಂತರದಲ್ಲಿದ್ದ ಗೆಳೆಯ ಅಬ್ಬಾಸ್ ಅತೃಪ್ತರಾದರು, ಅವರಿಗಿನ್ನೂ ಮಾತು ಬೇಕಿತ್ತು. ವಿನಾಕಾರಣ ಸಂತೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ನನಗೆ ಮಾತು ಸಾಕಾಗಿತ್ತು.

ಐದು ವರ್ಷಗಳವರೆಗೆ ಕೇವಲ ತ್ತಾರು ಮೈಲಿ ನನ್ನಿಂದ ಭೌತಿಕ ಅಂತರದಲ್ಲಿದ್ದ ಅಬ್ಬಾಸ್ ಯಾಕೆ ಮನಬಿಚ್ಚಿ ಮಾತನಾಡಲಿಲ್ಲ? ಮನುಷ್ಯನೊಬ್ಬ, ಮನುಷ್ಯನೊಂದಿಗೆ, ಮನುಷ್ಯನಾಗಿ, ಸಹಜ-ಸರಳವಾಗಿ ಹಂಚಿಕೊಳ್ಳಬಹುದಾದುದನ್ನು ಯಾಕೆ ಹಂಚಿಕೊಳ್ಳಲಿಲ್ಲ? ಬಾಗಲಕೋಟೆ ಎಂಬ ಸ್ವಕಲ್ಪಿತ ಜಗತ್ತಿನಾಚೆ ನನ್ನನ್ನು ಚಿಂತನೆಗೋ, ಸೃಷ್ಟಿಗೋ, ಸಂಕಲ್ಪಕ್ಕೋ ಇವರು ಯಾಕೆ ದೂಡಲಿಲ್ಲ? ನಮ್ಮ ಸಮಕಾಲೀನತೆಯ ಜವಾಬ್ದಾರಿಗಳೇನು? ಆದರ್ಶಗಳೇನು? ನಿರ್ಗಮನ ಅಥವಾ ಸಾವು ನಮ್ಮ ಸೃಷ್ಟಿಯೊಂದಿಗೆ ಅಂಟಿಕೊಂಡ ಕರಾಳ ವಾಸ್ತವ. ಇದಕ್ಕಾಗಿ ನಮ್ಮ ಅಸಮಾಧಾನಗಳ ನಂತರವೂ ನಾವು ತಯ್ಯಾರಿ ಮಾಡಿಟ್ಟ ಪರಂಪರೆ ಏನು?

ಗತಿಸಿದ ಗೆಳೆಯ ಅಬ್ಬಾಸ್  ಎಲ್ಲ ಪ್ರಶ್ನೆಗಳ ಹೆಗಲ ಹೆಣವಷ್ಟೆ. ಉತ್ತರಿಸಬೇಕಾದಹಗಲ ಹೆಣಗಳುಈಗಲೂ ನಾವೇ ಸಾಂಸ್ಕøತಿಕಲೋಕದ ದಶದಿಕ್ಕುಗಳು ಎನ್ನುವ ಕನಸನ್ನು ಕರೋನಾದಲ್ಲಿಯೂ ಕಾಣುತ್ತಿವೆ.

ಅಂದಿನಿಂದ ಇಂದಿಗೆ ಐದು ವರ್ಷಗಳ ಅಂತ. ಇದು ಧ್ವನ್ಯಾಂತರವಷ್ಟೆ. 2019 ಡಿಸೆಂಬರ್ ಕೊನೆಯಲ್ಲಿ ಕನಕಗಿರಿಯಲ್ಲಿ ಹಿಂದಿನರಾತ್ರಿ ಸುಟ್ಟ ಹೆಣದ ಬೆಳಕಿನಲ್ಲಿ ನಾವಿಬ್ಬರೂ ಸೇರಿದ್ದೆವು. ಎಳೆಯ ಗೆಳೆಯ ಇಮಾಮ್ಸಾಬ್ ಹಡಗಲಿ ಬರೆದಮಿರ್ಜಾ ಗಾಲಿಬ್ಕೃತಿ ಲೋಕಾರ್ಪಣೆಯ ಅನನ್ಯ ಸಂದರ್ಭವದು.

1857 ಭಾರತದ ಪ್ರಥಮಸ್ವಾತಂತ್ರ್ಯ ಸಂದರ್ಭದಲ್ಲಿ ನಿರ್ಮಾಣಗೊಂಡ ಒಂದು ಪುರಾತನ .ಬಿಯಲ್ಲಿ ನಮ್ಮಿಬ್ಬರಿಗೂ ಎರಡು ವಿಶೇಷ ಕೋಣೆಗಳು. ಒಂದು ಕೋಣೆಯನ್ನು ಮುಂಜಾನೆ ಬರಲಿರುವ ನನ್ನ ಕುಟುಂಬಕ್ಕಿರಲಿ ಎಂದು ನಾನು ಮತ್ತು ಅಬ್ಬಾಸ್ ಒಂದೇ ಕೋಣೆಯ ಸಂಗಾತಿಗಳಾದೆವು.

ಅಬ್ಬಾಸ್ ತುಂಬಾ ಡಿಪ್ರೆಶನ್ದಲ್ಲಿದ್ದರು. ಮಗನಭವಿಷ್ಯ ದೊಡ್ಡ ಚಿಂತೆಯಾಗಿತ್ತು. ‘ರಾಗಂ, ನನ್ನೆಲ್ಲ ಉತ್ಸಾಹಗಳೂ ತೀರಿವೆ. ಅನಾವಶ್ಯಕವಾಗಿ ನನಗೆ ವಿಪರೀತ ಕಿರುಕುಳ, ಹಿಂಸೆ, ಹಿಮ್ಮೆಟ್ಟಿಸುವಿಕೆ, ತುಳಿಯುವಿಕೆ ನನ್ನವರಿಂದಲೇ ಆಗಿದೆ. ಇವರ ಮಧ್ಯ ನಾನು ನಿಮ್ಮನ್ನು ಸರಿಯಾಗಿ ಗ್ರಹಿಸಲಿಲ್ಲ, ನನ್ನನ್ನು ಕ್ಷಮಿಸಿಬಿಡಿ.’ ಹೀಗೆ ಹೇಳುತ್ತ ತಾನೇ ಕಳೆದ, ತನ್ನದೇ ಪ್ರದೇಶದ, ತನ್ನವರೇ ಎಂದು ನಿತ್ಯ ಸಂಪರ್ಕದಲ್ಲಿದ್ದ ಗೆಳೆಯರ, ಸಂದರ್ಭಗಳ ವಿಚಾರಗಳನ್ನು ಅಬ್ಬಾಸ್ ಬಿಚ್ಚಿಟ್ಟಾಗ, ಅವರಿಗೊಂದು ಚಹಾ ಕುಡಿಯಿಸಿ, ‘ಲೆಕ್ಕ ಭಗವಂತನಿಗಿರಲಿ, ನಿಮ್ಮೊಂದಿಗೆ ನೀವು ಇರಿಎಂದು ಹೇಳುವ ಹೊರೆತು ನನಗೆ ಅನ್ಯ ದಾರಿ ಇರಲಿಲ್ಲ.

ಕರೋನಾ ಪೂರ್ವದ ಭೇಟಿಯೇ ಮ್ಮ ಕೊನೆಯ ಭೇಟಿ ಎನ್ನುವ ಸಂಕೇತವಿರಲಿಲ್ಲ, ಆದರೆ, ಭಾಷೆ ಇತ್ತು. ಇದರ ನಂತರವೂ ನನ್ನ ಕಾದಂಬರಿಜಗದ್ವಂದ್ಯ ಭಾರತಂಗೆ ಕುವೆಂಪು ಕಾದಂಬರಿ ಶ್ರೇಷ್ಠ ಪ್ರಶಸ್ತಿ ಘೋಷಣೆಯಾದಾಗ ಅಬ್ಬಾಸ್ ಫೋನಾಯಿಸಿ ಮಾತಾಡಿದ್ದಿದೆ. ಅದೆ ಕೊನೆಯ ಧ್ವನಿ, ಈಗ ನೆನಪಷ್ಟೆ.

ಅಬ್ಬಾಸ್ ಗತಿಸಿದ ದಿನ ನಾನು ಅವರ ಕರ್ಮಭೂಮಿಯಾದ ಗುಳೇದಗುಡ್ಡದಲ್ಲಿದ್ದೆ. ಜನ್ನತ್ ಮೊಹಲ್ಲಾದ ದಾರಿಯಲ್ಲಿದ್ದೆ. ಅವರದೇ ಪ್ರಶ್ನೆಗಳ ಉತ್ತರದ ಹುಡುಕಾಟದಲ್ಲಿದ್ದೆ. ಶಿಷ್ಯ ಹಾಗೂ ಎಳೆಯ ಗೆಳೆಯ ಚಂದ್ರಶೇಖರ ಹೆಗಡೆಯೊಂದಿಗೆ ಮತ್ತೆ ಮತ್ತೆ ನೆಲದ ಚಹಾ ಹೀರುತ್ತ ಆತ್ಮಸಂವಾದದಲ್ಲಿದ್ದೆ. ಪತ್ರಿಕೆಯ ಗೆಳೆಯರೊಬ್ಬರು ಬೈಟ್ಗಾಗಿ ಕಾಯುತ್ತಿದ್ದರು. ಮೃತ್ಯುವಿಗಿಂತ ಬೈಟ್ ಉಂಟೆ? ಅದು ದಕ್ಕಿಸಿಕೊಳ್ಳಿ ಸಾಕು ಎಂದೆ.

ನನ್ನ ವರ್ತನೆಗೆ ಪ್ರೀಯ ಮಿತ್ರ ಡಾ. ರಾಜಕುಮಾರ ಬಡಿಗೇರ ನಗುತ್ತಿದ್ದ. ನಾನು ಎತ್ತದ, ಎತ್ತಲೇ ಬಾರದೆಂದು ನಿರ್ಧರಿಸಿಕೊಂಡ ನನ್ನ ಮೊಬೈಲಿನಲ್ಲಿ ತಪ್ಪಿತಸ್ಥರ ಅಫಿಡವಿಟ್ಟು ದಾಖಲಾಗುತ್ತಲೇ ಇತ್ತು. ಅಬ್ಬಾಸರ ಹೆಣ ಚಿತ್ರದುರ್ಗದಿಂದ ಬಾಗಲಕೋಟೆಯತ್ತ ಹೊರಟಿತ್ತು. ಅದ್ಯಾವ ಒರತೆಗೋ? ಧನ್ಯತೆಗೋ? ಸಂಭ್ರಮಕ್ಕೋ? ಅವರೇ ಉತ್ತರಿಸಬೇಕು.

ಬಯಸುತ್ತೇನೆ ಗೆಳೆಯ, ನೀನು ಹುಡುಕುತ್ತಿದ್ದಜನ್ನತ್ ಮೊಹಲ್ಲಾ ದಾರಿ ನಿನಗೂ ದಕ್ಕಲಿ, ಬೊಟ್ಟಲ ತುಂಬಾ ಹೆಂಡ ಹಿಡಿದುಕೊಂಡು, ಸಂಸಾರವಂದಿಗನಾಗಿ ದಾರಿಯಲ್ಲಿ ಬರುವ ಭಾಗ್ಯ ನಮಗೂ ಸಿಗಲಿ.