Total Pageviews

Friday, January 27, 2017

ತುಂಬೆ ಹೂವಿಟ್ಟು ಶರಣೆಂದೆ


ಕಣ್ಣೀರಿನಿಂದ ನಾ ಸೋತೆನು
ತಿಂಗಳದಾ ಬೆಳಕಿನಲಿ ಮರೆಯಾದೆನು
ಪಾಪದ ಕೂಳನ್ನು ನಾ ತಿಂದೆನು
ನನ್ನಾಣೆಗೂ, ನಿನ್ನಾಣೆಗೂ ಮೆಲ್ಲಗೆ ಮೆತ್ತಗೆ ಬಾ
ನಾ ಕರೆದಂಗೆ ಬಾ, ನಾ ಕೂಗಿದಂಗೆ ಬಾ
ಇದು ಕಿಕ್ಕೇರಿ ನಾರಾಯಣರು ನನ್ನಿಂದ ಹಾಡಿಸಿಕೊಳ್ಳುತ್ತಿದ್ದ ಅವರೇ ಸಂಗ್ರಹಿಸಿದ ಜೇನುಕುರುಬರ ವಿರಹ ಗೀತೆ. ಪದ್ಯ ಸಾರುವಂತೆ ಸ್ವಯಂ ನಾರಾಯಣರೇ ಈಗ ಬೆಳಕಿನಲ್ಲಿ ಮರೆಯಾದ ಕಿರಣ. ಅವರೆಂದರೆ ನನಗೀಗ ಹಾಡಷ್ಟೆ.
ನನ್ನ ದಿನಚರಿಯು ದಾಖಲಿಸುವಂತೆ 2001 ರಿಂದ 2003 ರವರೆಗೆ ನಾನು ಮೈಸೂರು ಸೇಂಟ್ರಲ್ ಇನ್ಸ್ಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್ (ಸಿಐಐಎಲ್) ವಾಸಿ. ಆಚೆ ಬದಿ ಹಳೆಮನೆ, ಈಚೆ ಬದಿ ಕಿಕ್ಕೇರಿ ನಾರಾಯಣ, ಮಧ್ಯ ಮಾರುತಿ ತಳವಾರ. ಗೊತ್ತು-ಗುರಿಗಳಿಲ್ಲದೆ ದಿಕ್ಕೆಟ್ಟು ಬದುಕು ಸಮಸ್ಯಗಳ ದಟ್ಟ ಕಾಡಾದಾಗ ನಾನು ಬೆಳಕಿಗಾಗಿ ತಡಕಾಡುತ್ತಿದ್ದೆ. ಇಂಥ ವೇಳೆಯಲ್ಲಿ ನನ್ನನ್ನು ಎಳೆಯ ಗೆಳೆಯನಂತೆ ಗೌರವಿಸಿ, ತಾಯಿಯಂತೆ ಕಾಯ್ದವರು ಪ್ರೊ. ಕಿಕ್ಕೇರಿ ನಾರಾಯಣ. ಕುಮಾರಿ ಜನ್ನಿಪರ್ ಬೇಯರ್ ನನ್ನ ಸಂಶೋಧನಾಧಿಕಾರಿಗಳಾಗಿದ್ದರೂ ಕೂಡ ಕಿಕ್ಕೇರಿ ನಾರಾಯಣರೇ ನನ್ನ ಅಣತಿಯಾಗಿದ್ದರು.
ಮೃದು ಮಾತು, ಕುರುಕಲು ತಿಂಡಿ, ಆಳ ಆಲೋಚನೆ, ಸಾಕು ಸಾಕೆನ್ನುವಷ್ಟು ಚಹಾ, ಇಬ್ಬರೂ ಸೇರಿ ಚಹಾ ಕುಡಿದು ಒಮ್ಮೆ ಆಸ್ಪತ್ರೆಗೆ ದಾಖಲಾಗಿದ್ದು ಈಗ ನೆನಪಷ್ಟೆ. ಇದು ಪ್ರೊ. ಕಿಕ್ಕೇರಿ ನಾರಾಯಣ. 2001 ರಿಂದ 2017ರವರೆಗಿನ ನಮ್ಮ ಹದಿನೇಳು ವರ್ಷಗಳ ಪ್ರೀತಿಯಲ್ಲಿ ಪ್ರೊ. ನಾರಾಯಣ ಒಂದೇ ಒಂದು ದಿನ ಸಿಟ್ಟಿಗೆ ಬಂದದ್ದನ್ನು ನಾನು ನೋಡಲೇ ಇಲ್ಲ ಎಂದರೆ ಅಚ್ಚರಿ ಪಡಬೇಕಾಗಿಲ್ಲ. ವೃತ್ತಿ ವೈಷಮ್ಯದ ಹಲವು ಹೇಸಿಗೆಗಳಲ್ಲಿ ಕೆಲವು ಬಾರಿ ನೊಂದುಕೊಂಡ ಕಿಕ್ಕೇರಿ ತುಂಬಾ ಸುಸಂಸ್ಕø ಮನುಷ್ಯರಾಗಿದ್ದರು.
2005ರಲ್ಲಿ ನನ್ನ ಮದುವೆಯಾದ ಆರಂಭದ ದಿನಗಳು ತುಂಬಾ ಪ್ರಕ್ಷುಬ್ಧವಾಗಿದ್ದವು. ನನ್ನ ವೈವಾಹಿಕತೆಯನ್ನು ಕಾಯ್ದುಕೊಳ್ಳಲು ಒಂದು ಸುರಕ್ಷಿತ ಸ್ಥಳದ ಅವಶ್ಯಕತೆ ಇತ್ತು. ಬಾಗಲಕೋಟೆ ಬಳಿಯ ಬೀಳಗಿ ಬೆಟ್ಟದಲ್ಲಿ ಮದುವೆಯಾಗಿ ಧಾರವಾಡದಿಂದ ಹೊರಟು, ಒಂದು ಮುಂಜಾವು ಮೈಸೂರಿಗೆ ಬಂದಿಳಿದ ನಮ್ಮಿಬ್ಬರನ್ನು ತಮ್ಮ ಕೆಂಬಣ್ಣದ ಕಾರಿನಲ್ಲಿ ಮನೆಗೆ ಕರೆದೊಯ್ದು ಕಾಪಾಡಿದವರು ಪ್ರೊ. ನಾರಾಯಣ.
ಇರುವ ಇಬ್ಬರಿಗೆ ಕಾರು, ಟು-ವ್ಹೀಲರ್, ಮನೆ ತುಂಬ ಪುಸ್ತಕ, ದವಸ-ಧಾನ್ಯ, ಕೆಲಸದಾಳು ಹಾಲಮ್ಮ ಹೀಗೆ ಎಲ್ಲವನ್ನೂ ನಮ್ಮ ಸುತ್ತಲೂ ಸಿದ್ಧಪಡಿಸಿ ಸಂಭ್ರಮದಿಂದ ಸಂಶೋಧನೆಯ ಕೆಲಸಕ್ಕಾಗಿ ಊಟಿಗೆ ಹೋಗಿ ಬಿಟ್ಟರು ನಾರಾಯಣ. ನಾನು ನನ್ನ ಹೆಂಡತಿ ಪದ್ದು ನಮ್ಮ ಭವಿಷ್ಯದ ಮನೆ-ಮಕ್ಕಳುಗಳೆಂಬ ಮುದ್ದು ಮುದ್ದಾದ ಕನಸುಗಳನ್ನೆಲ್ಲ ಹೆಣೆದದ್ದು ನಾರಾಯಣರ ಮನೆಯಲ್ಲಿಯೇ. ಈಗಿನ ನನ್ನಜೋಳಿಗೆಎಂಬ ಮನೆಯ ರೂಪರೇಷೆಗಳು ಸಿದ್ಧವಾಗಿದ್ದು ಆದಿನಗಳಲ್ಲಿಯೆ.
ಬಹಳ ಬರೆಯದ ಪ್ರೊ. ಕಿಕ್ಕೇರಿ ನಾರಾಯಣ ಬಹಳ ಮಾತನಾಡಲೂ ಇಲ್ಲ. ದೇವನೂರ ಮಹದೇವ, ಕೃಷ್ಣ ಆಲನಹಳ್ಳಿ, ಲಿಂಗದೇವರೊಂದಿಗಿದ್ದೂ ನಾರಾಯಣರ ಆಲೋಚನಾ ಕ್ರಮ ಭಿನ್ನವಾಗಿತ್ತು. ಬಹುತೇಕ ಸಾಹಿತ್ಯಕ ಸಾಧನೆ, ಭಾಷಣ ಯಾವುದನ್ನೂ ಹಂಬಲಿಸಿ ಅಪ್ಪಿಕೊಂಡವರಲ್ಲ ಅವರು. ಭಾಷಾ ಅಧ್ಯಯನ ಕೇಂದ್ರದಲ್ಲಿದ್ದು, ಸಂಸ್ಥೆಯ ಅಕಾಡೆಮಿಕ್ ಸೆಕ್ರೆಟರಿಯಾಗಿ ನಿವೃತ್ತರಾದರೂ ವೃತ್ತಿ ಅವರ ಜೀವನೋಪಾದಿಯ ದಾರಿಯಾಗಿತ್ತಷ್ಟೆ. ಹಾಲತಿ ಸೋಮಶೇಖರರಅರುಹು-ಕುರುಹುಗೆ ಒಂದಿಷ್ಟು ಬರೆದರಾದರೂ ಅದು ಒಂದು ಪ್ರಯೋಗದ ನೆಲೆಯಲ್ಲಿಯೇ ಉಳಿದುಕೊಂಡಿತು. ನನ್ನೊಂದಿಗೆ ಬಾಗಲಕೋಟೆ, ಧಾರವಾಡ, ಬೇಲೂರುಗಳಿಗೆ ಮಮತೆಯ ತಾಯಿಯಂತೆ ಬಂದ ನಾರಾಯಣರೊಡಗೂಡಿ ನಾನು ಅವರ ಹುಟ್ಟೂರು ಕಿಕ್ಕೇರಿ, ಮಾಣಂದವಾಡಿ ಮಲೈಮಹಾದೇಶ್ವರ ಬೆಟ್ಟಗಳಿಗೂ ಹೋದೆ. ಪ್ರೊ. ನಾರಾಯಣ ನನ್ನಶಬ್ಧಸೂತಕದಿಂದಕೃತಿಗೆ ಬೆನ್ನುಡಿ ಬರೆದರೆ ನಾನು ಅವರ ಎರಡು ನಾಟಕಗಳ ಕುರಿತು ಹೀಗೆ ಬರೆದಿದ್ದೆ
ಬಿದಿರು ಮಂಡಲ
ಕಿಕ್ಕೇರಿ ನಾರಾಯಣರಬಿದಿರು ಮಂಡಲಒಂದು ರೀತಿಯಲ್ಲಿ ಮುರಿದ ಮಾನವೀಯ ಸಂಬಂಧಗಳ ಕುರಿತಾದ ನಾಟಕ. ಅರಸು ಹೆಂಡತಿಯನ್ನು, ಹೆಂಡತಿ ಮಗುವನ್ನು; ಪ್ರಿಯೆ ಪ್ರಿಯಕರನನ್ನು, ಅಣ್ಣ ತಂಗಿಯನ್ನು; ಕಾಡಿನ ಮಕ್ಕಳು ಕಾಡನ್ನು, ನಾಡಿನ ಜನಗಳು ನ್ಯಾಯವನ್ನು - ಹೀಗೆ ಒಂದು ಇನ್ನೊಂದರೊಂದಿಗೆ ಸಂಬಂಧಗಳನ್ನು ಕಳೆದುಕೊಂಡು ಅಸಂಗತ ಹಾಗೂ ಅಮಾನವೀಯವಾಗಿ ನಿಂತ ವಿಷಯ, ವಸ್ತುಗಳು `ಬಿದಿರು ಮಂಡಲ ಜೀವ ಸೆಲೆಗಳು, ನಿಜಕ್ಕೂಬಿದಿರು ಮಂಡಲ ಕೇಂದ್ರ ಸನ್ನಿವೇಶವೇ ಸೇತುವೆ ಮತ್ತು ಸೇತುವೆಯ ಹಾಡು. ಆದರೆ ಇದು ಮುರಿದ ಸೇತುವೆ. ತುಂಬ ಸಾಂಕೇತಿಕವಾಗಿ ಬಳಸಲ್ಪಟ್ಟ ಸೇತುವೆಯ ಪ್ರತಿಮೆ ಏನೆಲ್ಲವನ್ನೂ ಸಂಪರ್ಕಿಸುವ ಕನಸು ಕಾಣುತ್ತಿದೆ, ಅಲ್ಲಾವುದ್ದೀನನ ದೀಪ ಅಧ್ಯಾತ್ಮದ ಬೆಳಗಿಗೆ ಬಯಸಿದಂತೆ ಕಾಡು ಮತ್ತು ನಾಡನ್ನು ಮನುಷ್ಯ ಮತ್ತು ನಿಸರ್ಗವನ್ನು ರಂಗಭೂಮಿ ಮತ್ತು ಅದರ ಪರಿಕಲ್ಪನೆಯೇ ಇಲ್ಲದ ಜೇನುಕುರುಬರನ್ನು -ಹೀಗೆ ಮುರಿದ ಸೇತುವೆಗಳೇಬಿದಿರು ಮಂಡಲ ಮುಖ್ಯ ಪ್ರಶ್ನೆ. ಇದನ್ನು ಪುನರ್ ರಚಿಸಿಕೊಂಡಾಗ ಮಾತ್ರ ಹೊಸ ಅರ್ಥ ಹಾಗೂ ಸಾಧನೆಯ ಜಗತ್ತಿಗೆ ಹೋಗಲು ಸಾಧ್ಯವಿದೆ. ಮನಸ್ಸಿನ ಯಾವುದೋ ಮೂಲೆಯಲ್ಲಿ ರಾಜಾ ವಿಕ್ರಮಾದಿತ್ಯನ ಕುರ್ಚಿಯ ಕತೆಯನ್ನು ನೆನೆಪಿಸುವಬಿದಿರು ಮಂಡಲಸಂಪೂರ್ಣ ಜನಪದೀಯ. ಜನಮಾನಸದಲ್ಲಿ ಜನಜನಿತವಾಗಿರುವ ಮಂಡಲದ ಕತೆಯನ್ನು ಆಧರಿಸಿ ಸಾಗುವ ನಾಟಕ ಮೂಲ ಜರ್ಮನಿಯ ಶ್ರೇಷ್ಟ ನಾಟಕಕಾರ ಬರ್ಟೊಲ್ಟ್ ಬ್ರೆಕ್ಟ್ಕಕೇಷಿಯನ್ ಚಾಕ್ ಸರ್ಕಲ್ ಕನ್ನಡ ಸಂವಾದಿ ಎಂದು ಲೇಖಕರಾಗಲೀ; ನಮ್ಮ ರಂಗ ಚಿಂತಕರಾಗಲಿ ಹೇಳಿಕೊಂಡದ್ದು ಯಾತಕ್ಕೋ ನನಗೆ ತಿಳಿಯುವುದಿಲ್ಲ. ಬದಲಾಗಿ ನಾಟಕವನ್ನು ಜನಪದರ ನ್ಯಾಯ ಪದ್ದತಿಯಾದ ಮಂಡಲ ನ್ಯಾಯದ ಪುನರ್ ಪ್ರಸ್ತುತೀಕರಣ ಎಂದರೆ ಚೆನ್ನಾಗಿತ್ತು ಎನ್ನಿಸುತ್ತದೆ. ಸಂಪೂರ್ಣ ಬ್ರೆಕ್ಟ್ ಮತ್ತು ಆತನ ಬರಹಗಳೇ ಭಾರತೀಯ ಜನಪದ ಶೈಲಿಗಳ ಕಾವ್ಯಗಳ ಒಂದು ಮೀನಿಯೇಚರ್ ಆಗಿರುವಾಗ ನನ್ನ ಮೇಲಿನ ವಾದಕ್ಕೆ ಪುಷ್ಟಿ ಸಿಗಲಾರದೆ?
ನಾಟಕದ ನಾಯಕ ಒಂದು ರೀತಿಯಲ್ಲಿ ಬಿದಿರು ಮಂಡಲವೇ ಎನ್ನಿ. ಮಂಡಲ ಜೇನು ಕುರುಬ ಜನಾಂಗದ ಸಾಮಾಜಿಕ, ಸಾಂಸ್ಕøತಿಕ, ಧಾರ್ಮಿಕ ಹಾಗೂ ರಾಜಕೀಯ ಬದುಕಿನಲ್ಲಿ ಒಂದು ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ. ಗಾಳಿ ಕರೆಯೋದು, ಮಾಟ, ಜೇಟ್ಲೆ, ಕೊಂತ, ಪ್ರಜೆ, ನ್ಯಾಯ ನಿರ್ಣಯ, ಹಾಡಿಯ ರಚನೆ ಎಲ್ಲವೂ ಮಂಡಲದ ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಇಲ್ಲಿ ಮಂಡಲ ಒಂದು ನಿರಂತರತೆಯ, ಒಕ್ಕಟ್ಟಿನ ಹಾಗೆ ನಿಷಿದ್ದ ಸಂಕೇತವೂ ಹೌದು. ಮಂಡಲವನ್ನು ಮೀರಿ ಅವರು ಏನನ್ನೂ ಮಾಡಲಾರರು, ಬದುಕನ್ನೂ ಕೂಡಾ. ಮಂಡಲದೊಳಗಿನಿಂದ ಪರಿಷ್ಕರಣಗೊಂಡು ಮಂಡಲದೊಳಗೇ ಬದುಕನ್ನು ಹವಿಸ್ಸು ಹಾಕುವ ಜೇನುಕುರುಬರು ಮಂಡಲಾಧೀಶರು ಮಾತ್ರ ಅಲ್ಲ, ಅಲೆಮಾರಿಗಳು, ಬರ್ಟೊಲ್ಟ್ ಬ್ರೆಕ್ಟ್  “ಕಕೇಷಿಯನ್ ಚಾಕ್ ಸರ್ಕಲ್ನಲ್ಲಿ ನ್ಯಾಯಕ್ಕಾಗಿ ಮಂಡಲ ಕೊರೆಯುವುದು.. ಜೇನು ಕುರುಬರಲ್ಲಿ ಮಂಡಲ ಅವರ ಜೀವನ ರಚನೆಯ ಭಾಗವಾಗಿರುವುದ ಹಾಗೂ ಕಿಕ್ಕೇರಿ ನಾರಾಯಣರ ಬಿದಿರು ಮಂಡಲದಲ್ಲಿ ಮಂಡಲವೇ ನಿರ್ಣಾಯಕ ಸ್ಥಳವಾಗಿರುವುದು ಒಂದು ಅಪೂರ್ವ ಸಂಯೋಜನೆ.
ಸೂತ್ರೀಕರಣ, ಸಂಭಾಷಣೆಗಳ ಅಬ್ಬರ, ಬೌದ್ಧಿಕ ಕಸರತ್ತುಗಳ ಹಳೆಯ ಪ್ರಭಾವಗಳಿಂದ ಹೊರಬಂದು ಹೊಸ ಪ್ರಯೋಗದತ್ತ ನಮ್ಮ ರಂಗಭೂಮಿ ಸಾಗುತ್ತಿದೆ ಎನ್ನಲುಬಿದಿರು ಮಂಡಲಆಧಾರವಾದೀತು. ಇಲ್ಲಿ ಬುದ್ದಿಯ ವರಸೆಯಿಂದ ಏನಾದರೂ ಸ್ಥಾಪಿಸಬೇಕು ಎನ್ನುವುದರ ಬದಲಾಗಿ ಹೊಸ ರೀತಿಯಲ್ಲಿ ಹೇಳಬೇಕು ಎಂಬ ತುಡಿತ ಮುಖ್ಯವಾದುದರಿಂದ ನಾಟಕಕಾರನ ಪಾತ್ರ ಗಮನಾರ್ಹವಾಗಿದೆ.
ಕಾಡು ಕೋಳಿ
ಕಾಡು ಕೋಳಿ - ಜೋಡಿ ನವಿಲು ಕಿಕ್ಕೇರಿ ನಾರಾಯಣರ ನಾಟಕ. ನಾಟಕ ಪರಂಪರೆಗೆ ಇದನ್ನು ಮತ್ತೆ ಪರಿಚಯಿಸಲು ಹೋಗುವುದು ನನ್ನ ಮೂರ್ಖತನವಾದೀತು. ಯಾಕೆಂದರೆ ಆಗಲೇ ನಾಟಕ ನಾಡಿನುದ್ದಕ್ಕೂ ಅನೇಕ ಯಶಸ್ವಿ ಪ್ರಯೋಗಗಳನ್ನು ಕಂಡು, ದೂರದರ್ಶನ ಡಿ.ಡಿ. 1 ರಿಂತಲಂತೂ ಸಾಕಷ್ಟು ಬಾರಿ ಪುನರ್ ಪ್ರಸಾರಗೊಂಡು ಮನೆ ಮನೆಚಿ ಮಾತಗಿದೆ. ಆದರೆ ಅಗಸ್ಟ 18ರಂದು ಇದು ಪುಸ್ತಕ ರೂಪದಲ್ಲಿ ಬಿಡುಗಡೆಯಾಗುತ್ತಿರುವ್ಯದರಿಂದ ಪುಸ್ತಕ ಪರಂಪರೆಗೆ ಇದನ್ನು ಪರಿಚಯಿಸುವ ಕಾರ್ಯವೇ ಲೇಖನದ ಉದ್ದೇಶ.
ಕಾಪ್ಕ ದಿನಚರಿಯಲ್ಲಿ ಒಂದು ಮಾತು ಹೀಗಿದೆ. “ ಸಣ್ಣ ದೇಶಗಳ ಇತಿಹಾಸ ದೊಡ್ಡ ದೇಶಗಳ ಇತಿಹಾಸಕ್ಕಿಂತ ಸಣ್ಣದಾಗಿರುತ್ತದೆ ಎಂದು ತಿಳಿಯುವುದು ಒಂದು ಪ್ರಮಾದಎಂದು. ಇಚಿಥ ಪ್ರಮಾದಗಳೇ ಎಷ್ಟೆಲ್ಲಾ ಅನಾಹುತಗಳಿಗೆ ಕಾರಣವಾಗಿವೆ. ಇಲ್ಲಿ ಇತಿಹಾಸ ಎಚಿದರೆ ಬರೀ ಕಾಲಕ್ಕೆ ಜೋತು ಬಿದ್ದ ಒಂದು ಕಲ್ಪನೆ ಎಚಿದೂ ಭಾವಿಸಬಾರದು. ಬದುಕು ಸಂಸ್ಕøತಿ, ಪ್ರೀತಿ ಎಂದು ನೋಡಿದಾಗ ಅದರ ವಿಸ್ತೀರ್ಣ, ಅರ್ಥವಾಗುತ್ತದೆ. ಅದರ ಹಿಂದಿನ ತುಡಿತ ವೇದ್ಯವಾಗುತ್ತದೆ. ಇತಿಹಾಸ ನಿರ್ಮಾಣವಾದದ್ದೂ ಬರೀ ಅಧಿಕಾರಕ್ಕಾಗಿ ಅಲ್ಲ, ಬದಲಾಗಿ ಅದನ್ನು ಮೀರಿದ ಇನ್ನೇನೇನೋ ವಿಷಯಗಳಿಗಾಗಿ, ಎಚಿದೂ ತಿಳಿಯುತ್ತಿದೆ. ಮೂಲತಃ ಗಂಭೀರ ಚಿಂತಕರಾದ ಕಿಕ್ಕೇರಿ ನಾರಾಯಣರು ತಮ್ಮ ನಾಕಟಕಾಡು ಕೋಳಿ-ಜೋಡಿ ನವಿಲುಹೇಳಿರುವುದೇ ಇದನ್ನು ಇದು ಬರೀ ನಾಟಕವಲ್ಲ.
ವಿಶಾಲ ಸಾಮ್ರಾಜ್ಯದ ಕೀರ್ತಿಗೆ ಪಾತ್ರವಾಗಿದ್ದ ಮೈಸೂರು ಇತಿಹಾಸದ ಮುಂದೆ ಕೆಂಚನ ಹಾಡಿಯ ಇತಿಹಾಸ ಬಹಳ ಸಣ್ಣದು. ಆದರೆ ಇಚಿಥ ನೂರಾರು ಹಾಡಿಗಳು, ಸಾವಿರಾರು ಕೆಂಚರುಗಳ ಹೆಗಲ ಮೇಲೆಯೇ ಮೈಸೂರು ಪೀಠ ತನ್ನ ಅಸ್ತಿತ್ವವನ್ನು ಮೆರೆದದ್ದು. ಇನ್ನೊಬ್ಬರನ್ನೂ ಗೌರವಿಸದ ಹೊರತು ಸ್ವಯಂ ಗೌರ ಅಸಾಧ್ಯ, ಕೆಂಚನ ಹಾಡಿಯ ಕಾಡು ಕುರುಬರ ನಾಡಕ ಓದದ ಹೊರತು ಇತಿಹಾಸ್ ಬಗೆಗಿನ ನಮ್ಮ ತಿಳುವಳಿಕೆಯೇ ಅಪೂರ್ಣ ಎನ್ನುವ ರೀತಿಯಲ್ಲಿ ನಾಟಕಕಾರ ವಿಷಚಿುವನ್ನು ವಿವರಿಸುತ್ತಾ ಹೋಗಿದ್ದಾರೆ. Àಂಗಭೂಮಿಚಿ ಎಲ್ಲ ಆಶಯಗಳನ್ನು ಸಹಜವಾಗಿ ಪೂರೈಸುತ್ತಾ ಹಂತ ಹಂತವಾಗಿ ಬೆಳೆಯುತ್ತ ಹೋಗುವ ನಾಟಕ ರಂಗಪ್ರಯೋಗದಷ್ಟೇ ಯಶಸ್ವಿಯಾಗಿ ಕೃತಿಯ ರೂಪದಲ್ಲಿ ಬಂದಿದೆ.
        “ಕಾಡುಕೋಳಿ - ಜೋಡಿ ನವಿಲಿ ವಸ್ತು ವಸಾಹತುಶಾಹಿಯ ಉತ್ತರಾರ್ಧ ಹಗೂ ಭಾರತದ ಸ್ವಾತಂತ್ರದ ಪೂರ್ವದ್ದು ಎಂದು ನನ್ನ ಗ್ರಹಿಕೆ. ಹಾಗೆ ನೋಡೊದರೆ ಕಿಕ್ಕೇರಿಯವರು ಒಬ್ಬ ಶ್ರೇಷ್ಠ ನಾಟಕಕಾರರು ಎಂಬುದನ್ನು ವಿಷಚಿುದ ಆಯ್ಕೆಯಲ್ಲಿಯೇ ತೋರಿಸಿದ್ದಾರೆ. ವಸಾಹತು ಕಾಲ ಬದಲಾಗಿ ಸ್ವಾತಂತ್ರೋತ್ರದ ಭ್ರಮನಿರಸನಗಳು ಅನುಭವ ಪಟ್ಟು ಪುನರುಜ್ಜೀವನದ ಕನಸು ಕಾಣುವ ನಮ್ಮ ಇತಿಹಾಸದ ನಾಲ್ಕನೆಯ ಘಟ್ಟ ತಲುಪಿದ್ದರೂಕಾಡು ಕೋಳಿ ಜೋಡಿ ನವಿಲುಹಳೆಯದೆನ್ನಿಸಿಲ್ಲ, ಅಪ್ರಸ್ತುತಿಯ ಮಾತಂತೂ ಇಲ್ಲವೇ ಇಲ್ಲ.
ಅದೇನು ಖುಷಿಯಾಗಿತ್ತೊ ರಂಗಾಯಣದ ಸಂಸ ವನದಲ್ಲಿ ತಮ್ಮಬಿದಿರುಮಂಡಲಪ್ರದರ್ಶನಗೊಂಡ ರಾತ್ರಿ ಕಾಡುಮಕ್ಕಳೊಂದಿಗೆ ಕುಣಿದ ಪರಿ ನನ್ನಿಂದ ಮರೆಯಲಾಗುವುದಿಲ್ಲ. ಅಂತೆಯೆ ಬೀರು ಹಿರುತ್ತ ಕುರುಕಲು ತಿಂಡಿ ತಿನ್ನುತ್ತ, ಸಾಲು-ಸಾಲು ಸಿಗರೇಟುಗಳ ಬೆಳಕಿನಲ್ಲಿ ಬರುತ್ತಿದ್ದ ಅವರ ವಿಚಾರಗಳನ್ನೂ ನನ್ನಿಂದ ಮರೆಯಲಾಗುವುದಿಲ್ಲ. ಮಾತು-ಮೋಹ-ಬರಹ ಎಲ್ಲದರಲ್ಲೂ ಇತಿಮಿತಿಯವರಾದ ಪ್ರೊ ನಾರಾಯಣ ವಿದೇಶದಲ್ಲಿದ್ದ ಮಕ್ಕಳು, ವೃತ್ತಿಯಲ್ಲಿದ್ದ ಶ್ರೀಮತಿಯವರೊಂದಿಗೂ ಅಷ್ಟೇ ಸ್ಥಿತಪ್ರಜ್ಞರಾಗಿದ್ದರು. ಅನಾರೋಗ್ಯದ ಅನೇಕ ಸಂದರ್ಭಗಳಲ್ಲಿ ಒಂಟಿಯಾಗಿದ್ದರು. ಬದುಕಿನಲ್ಲಿ ಒಂದು ರೀತಿಯ ವಿಚಿತ್ರ ಪಾಠವಾಗಿದ್ದರು.
2016 ಡಿಸೆಂಬರ್ 27 ರಂದು ನನ್ನ ಗುರುಗಳಾದ ಪ್ರೊ. ಜಿ.ಬಿ.ಸಜ್ಜನ ಹಾಗೂ ಪ್ರೊ. ಆರ್.ಎಸ್.ಬಿರಾದಾರರ ಅಂತ್ಯಸಂಸ್ಕಾರ ಮುಗಿಸಿಕೊಂಡು ಮರಳಿ ಬೆಂಗಳೂರಿಗೆ ಬಂದು ಇನ್ನೂ ಮೈ ಮೇಲಿನ ಮಣ್ಣನ್ನು ಜಾಡಿಸಿಕೊಂಡಿರಲಿಲ್ಲ 2017 ಜನೇವರಿ 3 ರಂದು ಪ್ರೊ. ಕಿಕ್ಕೇರಿ ನಾರಾಯಣ ವಿಧಿವಶರಾದ ಸುದ್ದಿ. ಸಾವಿನ ಸರಣಿ ನನ್ನ ಕೈ ಬಿಡಲಾರದೆ ದೇವರೆ?
ವಾರದ ಹಿಂದಿನ ಮಾತಷ್ಟೇ. ಪ್ರೊ. ನಾರಾಯಣ ನನಗೆ ಫೋನಾಯಿಸಿನನ್ನ ಆರೋಗ್ಯ ಕ್ಷೀಣಿಸುತ್ತಿದೆ, ನಿಮ್ಮನ್ನು ಕಾಣಬೇಕು ಬಂದುಹೋಗಿಎಂದಿದ್ದರು. ಇಬ್ಬರು ಗುರುಗಳ ಸಾವು, ವರ್ಷಾಂತ್ಯ, ಮಕ್ಕಳ ಶಾಲೆ ಹಾಗೆ-ಹೀಗೆ ಎಂದು ಮಗ್ಗಲು ಹೊರಳಿಸಿದ್ದೇ ತಪ್ಪಾಯಿತು, ಒಂದು ದೀರ್ಘ ಒಡನಾಟದ ಜೀವ ದಕ್ಕದೆ ಹೋಯಿತು. ಕೊನೆಯ ಮಾತು, ದರ್ಶನ ಎಲ್ಲ ಬರೀ ಕನಸಾಯಿತು.
ಈಗ ನೆನಪುಗಳ ಮರುಕಳಿಸಿಕೊಳ್ಳುತ್ತ ಮಲಗಿದಾಗಲೆಲ್ಲ ಅವರ ಜನಪದ ಕವಿತೆಗಳ ಸಂಕಲನತುಂಬೆ ಹೂವಿಟ್ಟು ಶರಣೆನ್ನಿನೆನಪಾಗುತ್ತದೆ. ಅವರ ಚರಣಕೆ ಬಾಗಿ ತುಂಬೆ ಹೂವಿಟ್ಟು ನನ್ನ ಜೀವ ಶರಣೆನ್ನುತ್ತದೆ.