Total Pageviews

Thursday, January 5, 2017

ಇವ ನಿಮ್ಮವನೆಂದೆನಿಸಿದಿರಯ್ಯಾ



ಕವಿ ಗೆಳೆಯ ರಘುನಂದನನ ಒತ್ತಾ ನವೆಂಬರ್ 03 ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿತಿಳಿ ಚಂದ್ರನ ಮೌನಕಾವ್ಯ ಸಂಕಲನದ ಬಿಡುಗಡೆಯ ಸಮಾರಂಭದ ಅಧ್ಯಕ್ಷತೆಯನ್ನು ಒಪ್ಪಿಕೊಂಡಿದ್ದೆ. ತುಂಬಾ ವ್ಯವಸ್ಥಿತವಾದ, ಸೊಗಸಾದ ಕಾರ್ಯಕ್ರಮವಾದರೂ ನನಗೆ ಸೊಗಸಿರಲಿಲ್ಲ ಒಳಗೆ. ಕಾರಣವಿಷ್ಟೆ, ಮನುಷ್ಯ ಮಿತಿ. ಮಿತಿಯೇ ಆತನ ಎಲ್ಲ ಸಾಮಾಜಿಕ ಅಸ್ತಿತ್ವಗಳ ಹಿಂದಿರುವ ಗತ. ಎಲ್ಲಿಯವರೆಗೆ ಮಿತಿಗಳ ಪ್ರಜ್ಞೆ ಇರುತ್ತದೆಯೊ ಅಲ್ಲಿಯವರೆಗಷ್ಟೇ ಹಿತವಾದ ಸಂಬಂಧ, ಸಂಭ್ರಮ ಹಾಗೂ ಸಾಹಿತ್ಯದ ಬಾಳು. ಮಿತಿಯೇ ಮನುಷ್ಯನ ಮಹಾಸೌಂದರ್ಯ. ಹೆಜ್ಜೆ ಹಿಂದಾದರೂ ತಪ್ಪು, ಹೆಜ್ಜೆ ಮುಂದಾದರೂ ಅವಸರ, ಹೆಜ್ಜೆ ಜೊತೆಯಾಗಿರುವುದೆ ನಿರಾಯಾಸದ ಬಾಳಿನ ಸೋಪಾನ.
 ಒಂದು ವಾರದ ಹಿಂದಿನ ಬಾಗಲಕೋಟೆಯ ಗೆಳೆಯ ಪ್ರಕಾಶ ಖಾಡೆಯ ಕಾರ್ಯಕ್ರಮದಿಂದ ಬೇಲೂರು ರಘುನ ಕಾರ್ಯಕ್ರಮದವರೆಗೂ ನನ್ನ ಹೆಜ್ಜೆ ಒಂದಿಷ್ಟು ಮುಂದಾದವೇನೊ ಎಂಬ ಮುಜುಗರವೇ ಸೊಗಸಿನ ಹಿತ ಹಾಳಾಗಲು ಕಾರಣಿಕ ಅಂಶ. ಎರಡೂ ಸಮಾರಂಭಗಳಲ್ಲಿ ಅಧ್ಯಕ್ಷತೆಯ ಜವಾಬ್ದಾರಿ ನನ್ನದು. ಯಾಕೊ ಒಳಗೊಳಗೆ ಭೀಷ್ಮಾಚಾರ್ಯನ ಪಾತ್ರ ಮಾಡುತ್ತಿರುವ ಮುಜುಗರ. ಬಾಗಲಕೋಟೆಯಲ್ಲಂತೂ ಎಂಟು ಗಂಟೆಗಳ ನಿರಂತರ ಘನ ಗಂಭೀರ ಉಪಸ್ಥಿತಿ. ಇಲ್ಲಿ ಬೆಂಗಳೂರಲ್ಲೂ ಅಷ್ಟೆ. ಸಾಲುಮರದಮ್ಮನೊಂದಿಗೆ ಸಾಲು ಸಾಲು ನೆನಪುಗಳ ಸಂಭ್ರಮ
 ನವಂಬರ್ 09 ರಂದುಪದನಾಟ್ಯ ವೇದಿಕೆಯ ಅತಿಥಿಯಾಗಿ ಬೆಂಗಳೂರು ವಿಶ್ವವಿದ್ಯಾಲಯದ ಆವರಣಕ್ಕಂಟಿಕೊಂಡ ಕಲಾಗ್ರಾಮದಲ್ಲಿ ನಾ.ಡಿಸೋಜಾ ಅವರಕೊಳಗನಾಟಕದ ಪ್ರದರ್ಶನ ಪೂರ್ವಭಾವಿಯಾಗಿ ಅನ್ಯ ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರದ ಮೂಲಕ ಬಂದ ನಾಟಕಗಳ ಕುರಿತು ಮಾತನಾಡಬೇಕಾಯಿತು. ನಾಟಕದ ವೇದಿಕೆಯನ್ನು ಗಂಭೀರವಾದ ಕೇಳುಗರು ಸೇರಿದಾಗ ಹೀಗೆ ಬಳಸಿಕೊಳ್ಳುವ ಬೆಂಗಳೂರಿನ ರಂಗಕರ್ಮಿಗಳ ಕಾರ್ಯ ವೈಖರಿ ಬಹಳ ಇಷ್ಟವಾಯಿತು. ಬಹಳ ದಿನಗಳ ನಂತರ ಬಸವಲಿಂಗಯ್ಯನವರ ಭೇಟ್ಟಿಯಾಯಿತು. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಧಾರವಾಡದ ಕಮ್ಮಟಗಳಲ್ಲಿ ರಂಗ ವಿಭಜನೆಯನ್ನು ಖಂಡಿಸಿ ಪ್ರಶ್ನೆಗಳನ್ನು ಕೇಳಿ ಅವರೊಂದಿಗೆ ಜಗಳಾಡುತ್ತಿದ್ದ ನೆನಪುಗಳು.
 ನವೆಂಬರ್ 12, ಬೆಂಗಳೂರಿನನಯನಸಭಾಂಗಣದಲ್ಲಿ ಗೆಳೆಯ ಬೆಲೂರು ರಘುನಂದನ ಬಹು ಪ್ರದರ್ಶಿತ ಹಾಗೂ ಬಹುಚರ್ಚಿತ ನಾಟಕರಕ್ತವರ್ಣೆ ಲೋಕಾರ್ಪಣೆ. ನನ್ನೊಂದಿಗೆ ಎಂ.ಎಸ್. ಆಶಾದೇವಿ, ಗುಡಿಹಳ್ಳಿ ನಾಗರಾಜ ಮತ್ತು ನಾಟಕದ ನಿರ್ದೇಶಕಿ ದ್ರಾಕ್ಷಾಯಿಣಿ ಭಟ್ಟ. ಬಸವನಗುಡಿಯ ಪ್ರದರ್ಶನವನ್ನು ನಾನು ಹಾಗೂ ಗೆಳೆಯ ಸುಬ್ಬು ಹೊಲೆಯಾರ ನಾಟಕವನ್ನು ಜೊತೆಯಾಗಿ ನೋಡಿ ಸಂಭ್ರಮಿಸಿದವರು. ರಘುನಂದನನ ಪ್ರತಿಭೆಗೆ ಇದೊಂದು ನಾಟಕ ಸಾಕು. ತಾಯಿಯಾಗದ ಯಾವ ವ್ಯಕ್ತಿಯೂ ಇಂಥ ಒಂದು ನಾಟಕವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ
 ಡಿಸೆಂಬರ್ 20 ನನ್ನ ಪಾಲಿನ ವಿಶೇಷ ದಿನ. ಬಿಜಾಪುರದ ಬಿ.ಎಲ್.ಡಿಯ ಬಂಗಾರೆವ್ವ ಸಜ್ಜನ ಆವರಣದಲ್ಲಿಯ ವಚನ ಪಿತಾಮಹ  .ಗು.ಹಳಕಟ್ಟಿ ಸಂಶೋಧನಾ ಕೇಂದ್ರ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರುಗಳ ಸಂಯುಕ್ತ ಆಶ್ರಯದಲ್ಲಿಹಳೆಯ ಬೇರು ಹೊಸ ಚಿಗುರುಎಂಬ ವಿಶೇಷ ಕಾರ್ಯಕ್ರಮ. ಇಂಡಿ ತಾಲೂಕಿನ .ಸಾ. ಅಧ್ಯಕ್ಷರಾದ ಪ್ರೊ. ಎಸ್.ಕೆ.ಕೊಪ್ಪ ಹಾಗೂ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಶ್ರೀ ಮಧಭಾವಿಯವರ ವಿಶೇಷ ಪರಿಶ್ರಮದಿಂದಾಗಿ ಕಾರ್ಯಕ್ರಮ ರೂಪಗೊಂಡಿತ್ತು. ಇಬ್ಬರು ಹಳಬರನ್ನು ಕುರಿತು-ಇಬ್ಬರು ಯುವ ಚಿಂತಕರು, ಹಾಗೆಯೆ ಇಬ್ಬರು ಯುವ ಬರಹಗಾರರನ್ನು ಕುರಿತು ಇಬ್ಬರು ಹಿರಿಯ ಲೇಖಕರು ಮಾತನಾಡಿದ್ದೆ ಕಾರ್ಯಕ್ರಮದ ವಿಶೇಷತೆ. ಶ್ರೀರಂಗ ಹಾಗೂ ಶಿಸುಸಂಗಮೇಶರನ್ನು ಕುರಿತು ಮೊದಲ ಭಾಗದಲ್ಲಿ ಇಬ್ಬರು ಎಳೆಯ ಗೆಳೆಯರು ತಮ್ಮ ವಿಮರ್ಶೆಯನ್ನು ಮಂಡಿಸಿದರು.
 ಎರಡನೆಯ ಭಾಗದಲ್ಲಿ ನನ್ನ ಅರವತ್ತೆರಡು ಕೃತಿಗಳು ಹಾಗೂ ಇತರ ಸಾಂಸ್ಕøತಿಕ ಸಾಧನೆ ಕುರಿತು ನಿರಂತರ ಒಂದೂವರೆ ಗಂಟೆಗಳ ಕಾಲ ನನ್ನ ವಿದ್ಯಾಗುರುಗಳಾದ ಪ್ರೊ ಆರ್.ಕೆ ಕುಲಕರ್ಣಿ ಮಾತನಾಡಿದರೆ, ಗೆಳೆಯ ಮಲ್ಲಿಕಾರ್ಜುನ ಮೇತ್ರಿಯವರ ಸಾಹಿತ್ಯ ಸಾಧನೆ ಕುರಿತು ಶ್ರೀ ಮಧಭಾವಿ ಅವರು ಮಾತನಾಡಿದರು. ಶ್ರೀರಂಗ, ನಾನು ಹಾಗೂ ಗೆಳೆಯ ಮೇತ್ರಿ ಮೂವರೂ ಇಂಡಿ ತಾಲೂಕಿನವರು ಎಂಬ ಸಂಗತಿ ಕೊಪ್ಪ ಅವರ ಅಭಿಮಾನಕ್ಕೆ ವಿಶೇಷ ಕಾರಣವಾಗಿರಲೂಬಹುದು.
 ಫ.ಗು.ಹಳಕಟ್ಟಿ, ಹರ್ಡೇಕರ ಮಂಜಪ್ಪ ಹಾಗೂ ಬಂಥನಾಳ ಶಿವಯೋಗಿಗಳು ಉತ್ತರ ಕರ್ನಾಟಕದ ಸಾಂಸ್ಕøತಿಕ ಅಸ್ಮಿತೆಗಾಗಿ ಎಂಥ ಹೋರಾಟದ ಬಾಳನ್ನು ಎದುರಿಸಿದರೊ ಅದು ಯುವ ಬರಹಗಾರರಾದ ನಮ್ಮಂಥವರಿಗೆ ಆದರ್ಶವಾಗಬೇಕು ಎನ್ನುವುದು ವೇದಿಕೆಯ ಒಟ್ಟು ಆಶಯ ಹಾಗೂ ಹಾರೈಕೆ.
ನಾನು 2016 ಅಂತ್ಯಕ್ಕೆ ನನ್ನ 45ನೇ ವಯಸ್ಸಿನಲ್ಲಿ ಎಲ್ಲೆಲ್ಲೋ, ಏನೆನೋ ಅರಸುತ್ತ ದೂರ ಹೋಗಿದ್ದ ನನ್ನನ್ನು ಬಳಿ ಕರೆದು ಎದೆಗೆತ್ತಿಕೊಂಡು ಇವ ನಮ್ಮವನೆಂದು ಸಾರಿ ಹೆಮ್ಮೆಪಟ್ಟ ನನ್ನ ಜನಗಳ ಪ್ರೀತಿಗೆ ಋಣಿಯಾಗಿದ್ದೇನೆ. ಸಮ್ಮೇಳನಗಳಿಂದ ಸಾಮಾನ್ಯವಾಗಿ ದೂರವೇ ಉಳಿಯುವ ನನ್ನನ್ನು ಕರೆದು, ನನ್ನನ್ನೇ ಒಂದು ಸಮ್ಮೇಳನವಾಗಿಸುವ, ಚಿಂತನೆ-ಸಮಾರಂಭವಾಗಿಸುವ ಭಾವಶ್ರೀಮಂತಿಕೆ ನನ್ನ ನಂತರದವರಿಗೂ ನಿರಂತರವಾಗಿರಲಿ ಎನ್ನುವುದೊಂದೇ ನನ್ನ ಕೋರಿಕೆ

No comments:

Post a Comment