Total Pageviews

Saturday, January 6, 2018

ಮಹಾನಮನ

ನಾನು ಬೆಂಗಳೂರು ನಿವಾಸಿಯಾಗಿ ಮುರೂವರೆ ವರ್ಷ. ಮೆಜೆಸ್ಟಿಕ್ನಿಂದ ಕನ್ನಡ ಭವನ ಅಥವಾ ಟೌನ್ಹಾಲ್ಗಳೆಡೆಗೆ ಬರುವಾಗಲೆಲ್ಲ ನನ್ನ ದೃಷ್ಟಿ ಕಾವೇರಿ ಭವನ, ಬಾದಾಮಿ ಹೌಸ್ ಹಾಗೂ ಶಿಕ್ಷಕರ ಸದನಗಳೆಡೆಗೆ ಹರಿಯದೇ ಇರಲಿಲ್ಲ. ಗುರುಗಳಾದ ಚಂಪಾ ಅವರಂತೂ ಶಿಕ್ಷಕರ ಸದನದಲ್ಲಿಸಂಕ್ರಮಣ ಸಾಹಿತ್ಯ ಸಮ್ಮೇಳನಮಾಡಿ ನಮ್ಮೆಲ್ಲರ ನೆನಪನ್ನು ಶ್ರೀಮಂತಗೊಳಿಸಿದರು.
ಕಾವೇರಿ ಭವನವೂ ಅಷ್ಟೆ. ಇಡೀ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಜಲಮಂಡಳಿ, ಬೃಹತ್ ಸಂಖ್ಯೆಯ ಸಫಾಯಿ ಕರ್ಮಚಾರಿಗಳು, ಹಲವಾರು ಸಂಘಟನೆ ಹೀಗೆ ಏನೆಲ್ಲಗಳನ್ನು ಒಳಗೊಂಡಿರುವ ಕಾವೇರಿ ಭವನ ಒಂದು ದೊಡ್ಡ ಲೋಕ. ಇದಕ್ಕೊಂದು ಕೊಂಡಿ ಪ್ರೀತಿಯ ಸಂಘಟಕ ಗೆಳೆಯ ಶಂಕರ ಹೂಗಾರ.
ಬೆಂಗಳೂರಿಗೆ ಬಂದಂದಿನಿಂದ ಮಹಾ ಬೆಂಬಲವಾದವರು ಗೆಳೆಯ ಶಂಕರ ಹೂಗಾರ. ಸದಾ ಚಳುವಳಿ, ಚಿತ್ರರಂಗ, ಸಾಹಿತ್ಯ, ಪತ್ರಿಕೆ ಮತ್ತು ಪ್ರಕಟನೆಗಳಲ್ಲಿ ತೊಡಗಿಸಿಕೊಂಡು ರಾಜ್ಯದಲ್ಲಿ ಹೂಗಾರ ಸಮಾಜಕ್ಕೆ, ಸಮುದಾಯಕ್ಕೆಅಸ್ಮಿತೆಯನ್ನು ತರಲು ಯತ್ನಿಸಿದವರು. ತಮ್ಮ ಪುಷ್ಪ ದೀಪಿಕಾ ಪತ್ರಿಕೆ ಮೂಲಕ ಅನೇಕ ಪ್ರತಿಭಾವಂತ ಲೇಖಕರನ್ನು ಪರಿಚಯಿಸಿದವರು. ನನ್ನಪ್ರೀತಿ ನಲವತ್ತು ರೀತಿಕೃತಿಯನ್ನು ಪ್ರಕಟಿಸಿ ಪ್ರೇಮಿಗಳ ದಿನಾಚರಣೆಗೆ ವಿಸ್ತø ಅರ್ಥವನ್ನು ನೀಡಲು ಯತ್ನಿಸಿದವರು. ಪ್ರೀತಿಯ ಗೆಳೆಯ ಶಂಕರ ಹೂಗಾರರ ಮೂಲಕವೇ ಇತ್ತೀಚೆಗೆ ನಾನು ಕಾವೇರಿ ಭವನಕ್ಕೆ ಕಾಲಿಟ್ಟದ್ದು.
ದಿನಾಂಕ 28 ಡಿಸೆಂಬರ್ 2017 ರಂದು ಜಲಮಂಡಳಿಯ ಗೆಳೆಯರೆಲ್ಲ ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಜಯಂತೋತ್ಸವ ಹಾಗೂ ಕನ್ನಡ ರಾಜೋತ್ಸವವನ್ನು ಅದ್ದೂರಿಯಾಗಿ ಹಮ್ಮಿಕೊಂಡಿದ್ದರು. ಬಹುತೇಕ ನಾನು ಕಂಡ ಅತ್ಯಂತ ಅದ್ದೂರಿ ಸಮಾರಂಭಗಳಲ್ಲಿ ಇದೂ ಒಂದು.
ನಾನು ಕನ್ನಡ ನಾಡು-ನುಡಿ, ಸಂಸ್ಕøತಿ ಕುರಿತು ಮಾತನಾಡಿದರೆ ಗೆಳೆಯ ಪ್ರೊ. ಬಿಪಿನ್ ನಾಗರಾಜ್ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮರ ಜೀವನ ಮತ್ತು ಹೋರಾಟ ಕುರಿತು ಮಾತನಾಡಿದರು. ಯಾವುದೇನಿತ್ತೋ ಗೊತ್ತಿಲ್ಲ. ಆದರೆ ಈಗ ಎಲ್ಲ ವಾದಗಳೂ ತಮ್ಮ ಮೊದಲಿನ ಅತಿರೇಕಗಳನ್ನು ಕಳೆದುಕೊಂಡು ಸರ್ವರಿಗೂ ಹಿತವಾಗುವ, ಸಮಗ್ರವಾಗುವತ್ತ ಹೊರಳುತ್ತಿವೆ ಎನ್ನುವುದಂತೂ ಸತ್ಯ.
ಇದೇ ವೇದಿಕೆಯಲ್ಲಿ ನನ್ನೊಂದಿಗೆ ..ಎಸ್ ಅಧಿಕಾರಿ ತುಷಾರ ಗಿರಿನಾಥ್, ಎಂ.ಆರ್.ವೆಂಕಟೇಶ್, ಜಗದೀಶ ಹಾಗೂ ಗೆಳೆಯ ಶಂಕರ ಹೂಗಾರ. ಕಾರ್ಯಕ್ರಮ ಮುಗಿದಾಗ ಮಧ್ಯಾಹ್ನದ ಮೂರು ಗಂಟೆ.
ಇದೇ ದಿನ ಸಾಯಂಕಾಲ ಬೆಂಗಳೂರಿನ ಮಲ್ಲೇಶ್ವರಂದ ಸೇವಾಸದನದಲ್ಲಿ ಗೆಳೆಯ ಯೋಗೇಶ ಎನ್ ನಿರ್ದೇಶಿಸಿದ, ವ್ಯಾಸ ದೇಶಪಾಂಡೆಯವರು ರಚಿಸಿದ ನಾಟಕಯಾರಿಗೂ ಹೇಳೋಣ ಬ್ಯಾಡಪ್ರದರ್ಶನ. ಸಾರಥ್ಯ ಹಿರಿಯ ರಂಗಕರ್ಮಿಗಳಾದ ಶ್ರೀ ತುಮಕೂರು ಶಿವಕುಮಾರ್ ಅವರದು.
ನಾಟಕ ಎಂದರೆ ಶಿವಕುಮಾರ್ ಎನ್ನುವಷ್ಟು ರಂಗಾನುರಕ್ತಿ ಅವರದು. 22ಕ್ಕೂ ಮೀರಿದ ಬಾನುಲಿ ನಾಟಕ, ನಾಡಿನುದ್ದಕ್ಕೂ 400ಕ್ಕೂ ಮೀರಿ ಪ್ರದರ್ಶನ, ಬಾದಲ್ ಸರ್ಕಾರ್, ವಿಜಯ ಟೆಂಡೂಲ್ಕರ್ ಹಾಗೂ ಎಂ.ಎಸ್ ಸತ್ಯು ಅವರೊಂದಿಗಿನ ನಂಟು ತುಮಕೂರು ಶಿವಕುಮಾರ್ ಅವರನ್ನೀಗ ರಂಗ ಜಂಗಮನನ್ನಾಗಿಸಿವೆ.
ಇಂದಿನ ನಾಟಕದ ಸೂತ್ರದಾರ ಅವರೆ. ನಾಟಕ ಉದ್ಘಾಟನಾ ಸಮಾರಂಭದ ಅಧ್ಯಕ್ಷನಾಗಿ ನಾನು, ನನ್ನೊಂದಿಗೆ ಮುಖ್ಯ ಅಥಿತಿಗಳಾಗಿ ಆಲೆಮನೆ ಸುಂದರಮೂರ್ತಿ ಹಾಗೂ ನಾಟಕ ಉದ್ಘಾಟಕರಾಗಿ ನಾಟಕ ಅಕಾಡೆಮಿಯ ಸದಸ್ಯರೂ, ಆತ್ಮೀಯ ಗೆಳೆಯ, ನಾಟಕಕಾರ ಬೇಲೂರು ರಘುನಂದನ ಹಾಗೂ ಇತರರು.
ಸಾಹಿತ್ಯ ಅಕಾಡೆಮಿಯ ಸದಸ್ಯನಾಗಿ ನಾನು, ನಾಟಕ ಅಕಾಡೆಮಿಯ ಸದಸ್ಯನಾಗಿ ಗೆಳೆಯ ಬೇಲೂರು ರಘುನಂದನ ಇಬ್ಬರೂ ಒಂದು ರೀತಿ ಮಾತನಾಡಿದ್ದು ಆತ್ಮಾವಲೋಕನದ ಹಿನ್ನಲೆಯಲ್ಲಿ. ಅಕಾಡೆಮಿಗಳು ವೈಚಾರಿಕ ಸಮನ್ವಯತೆಯ ಕೇಂದ್ರಗಳಾಗಬೇಕು. ಅದಕ್ಕಾಗಿ ಸದಸ್ಯರುಗಳು ಓದಿನ ಹಲವು ದಾರಿಗಳನ್ನು ತೆರೆದುಕೊಂಡಿರಬೇಕು. ಓದಿನ ಅನಿವಾರ್ಯವಾದ ವಿಚಾರಗಳ ವಿಭಜನೆ ಜ್ಞಾನವನ್ನೂ ಅದೇ ನೆಲೆಯಲ್ಲಿ ನೋಡುವಂತೆ ಮಾಡಬಾರದು.
ಇದೇ ಆಶಯದ ಹಿನ್ನೆಲೆಯ ಇಂದಿನ ನಾಟಕಯಾರಿಗೂ ಹೇಳೋಣ ಬ್ಯಾಡವನ್ನು ಕೆಲಹೊತ್ತು ವಿಕ್ಷಿಸಿದ ನಂತರ ನನ್ನದುರಂಗನಿರ್ಗಮನ’.
ಇದು 2017 ಕೊನೆಯ ಕಾರ್ಯಕ್ರಮ ಹೀಗಾಗಿ ಇದಕ್ಕೊಂದು ಮಹಾನಮನ.

              ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು.