Total Pageviews

Friday, October 12, 2018

ಬರವಣಿಗೆ: ಅಪ್ರತಿಮ, ಅಸಾಮಾನ್ಯ!


ಕೀಟ್ಸ್ ಬಗ್ಗೆ ನನಗೆ ಜ್ಞಾನವಿರಲಿಲ್ಲ. ಒಂದಿಷ್ಟು ತಿಳುವಳಿಕೆ ಇತ್ತು. ಆತನ ಪ್ರಸಿದ್ಧ, ಜನಪ್ರಿಯ ಸಾಲು ‘A thing of beauty is joy forever’ ಹಾಗೂ ಆತ ರಚಿಸಿರುವ ನೀಳ್ಗವನ ‘Isabella’ ಮಾತ್ರ ಗೊತ್ತಿದ್ದವು. ‘ನೀರ ಮೇಲೆ ನೆನಪ ಬರೆದುನಿಮ್ಮ ಪುಸ್ತಕ ಓದಲು ತೊಡಗಿದಂತೆ ಕೀಟ್ಸ್ ಅಗಾಧ ಪ್ರತಿಭೆಯ ಅರಿವು ನನಗಾಗ ತೊಡಗಿತು. ಆತ ಎದುರಿಸಿದ ಎಡರು-ತೊಡರುಗಳು, ಸಹಿಸಿದ ವೇದನೆ-ಯಾತನೆಗಳು, ಆತನಿಗೆ ಬಂದತಹ ದೈಹಿಕ ಅನಾರೋಗ್ಯ, ಆಘಾತ, ನೀಡಿದ ಪ್ರೇಮಭಂಗ ಹಾಗೂ ಆತನ ಬರವಣಿಗೆಗೆ ಸಂದ biting and discoursing ವಿಮರ್ಶೆಗಳುಇದ್ಯಾವೂ ಆತನ ಕಾವ್ಯ ರಚನೆಗೆ, ಸಾಹಿತ್ಯ ಸೃಷ್ಟಿಗೆ ಅಡ್ಡಿಯಾಗಲಿಲ್ಲ. ಅವನಲ್ಲಿನ ಅದಮ್ಯ ಕಾವ್ಯ ಪ್ರೀತಿ, ಬರೆಯಬೇಕೆಂಬ ಅವನಲ್ಲಿನ ಅಸದಳ ತುಡಿತ ಅವನ ಬರವಣಿಗೆ ಪ್ರೇರಣೆ, ಉತ್ತೇಜನ ನೀಡಿದುದರ ಫಲಶೃತಿಯಾಗಿ ಅಮರ ಸಾಹಿತ್ಯ ಸೃಸ್ಟಿಯಾಯಿತು. ನೀವೇ ಉದ್ಗರಿಸಿದ ಹಾಗೆ He is in Mars.

ಕೀಟ್ಸ್ ಪತ್ರಗಳನ್ನು ದಾಖಲಿಸುತ್ತಲೇ ಅವನ ಅನನ್ಯ ವ್ಯಕ್ತಿತ್ವವನ್ನು ಅನಾವರಣಗೊಳಿಸಿರುವ ನಿಮ್ಮ ಶೈಲಿಗೆ ನಾನು ಮಾರುಹೋಗಿದ್ದೇನೆ. ಅವನ ಪತ್ರಗಳನ್ನು ನಮ್ಮೆದುರು ಹರವಿಡುತ್ತ ಅವನ ಕಾವ್ಯದ ಅಪ್ರತಿಮತೆಯ ಬಗ್ಗೆ ಶರಾ ಬರೆಯುತ್ತಲೇ ನಿಮ್ಮ ಬರವಣಿಗೆ ಮುಂದೆ ಮುಂದೆ ಸಾಗುತ್ತದೆ. ಕೀಟ್ಸ್ ಕಾಲದ ಸಾಹಿತ್ಯ ಪರಿಸರವನ್ನೂ ಯಶಸ್ವಿಯಾಗಿ ಕಟ್ಟಿಕೊಟ್ಟಿದ್ದೀರಿ. ಆತನ ಗೆಳೆಯರಾದ ರೊನಾಲ್ಡ್ಸ, ಲೀ ಹಂಟ್, ಹೈಡನ್, ಬೇಲಿ, ಚಾಟರ್ಟನ್, ಬ್ರೇನ್ ಮೊದಲಾದವರು ನಮಗೂ ಆತ್ಮೀಯರಾಗತೊಡಗುತ್ತಾರೆ. ಜೊತೆಗೆನೇ ಇಂಗ್ಲೀಷ್ ಸಾಹಿತ್ಯ ದಿಗ್ಗಜರಾದ ಚಾಸ್ಸರ್, ಸ್ಪೆನ್ಸ್ರ್, ಮಿಲ್ಟನ್, ಷೇಕ್ಸ್ಪೀಯರ್, ವಡ್ಸ್ವರ್ಥ, ಶೆಲ್ಲಿ, ಬೈರನ್ಗಳ ಸಾಹಿತ್ಯದ ಸತ್ವವನ್ನು ಪರಿಚಯಿಸಿರುವುದು ನಿಮ್ಮ ಆಳವಾದ ಅಧ್ಯಯನದ ಕಥೆ ಹೇಳುತ್ತದೆ.
ಕೀಟ್ಸ್ ಕುರಿತು ಓದಲು ತೊಡಗಿದಂತೆಯೇ ನನಗೆ “I stood amidst trees and was a tree’ ಎಂಬ ಎಜ್ರಾಪಾಂಡ್ ಸಾಲುಗಳು ನೆನಪಾದವು. ಪುಸ್ತಕ ಮುಗಿಯುವಕ್ಕಿಂತ ಮುಂಚೆಯೇ ಕೀಟ್ಸ್ ನನ್ನನ್ನು ಆವರಿಸಿಕೊಂಡುಬಿಟ್ಟಿದ್ದ. ನಿಮ್ಮ ಪ್ರಸ್ತುತ ಪುಸ್ತಕ ಹಾಗೇ ಸುಮ್ಮನೆ ಓದಿ ಮುಗಿಸುವಂಥದ್ದಲ್ಲ. ಪ್ರತಿ ಸಾಲು ಓದುವಾಗಲೂ ಓದುಗ ಎಚ್ಚರವಾಗಿರಬೇಕು, ಜಾಗರೂಕನಾಗಿರಬೇಕು ನಿಮ್ಮ ಬರವಣಿಗೆ demands complete attention from the readers. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ It compels readers to concentrate ಯಾಕೆಂದರೆ ಇಲ್ಲಿ every sentence is measured and used; ಅಷ್ಟೇ ಅಲ್ಲ every word is weighed and utilised. ನಿಮ್ಮ ಬರವಣಿಗೆಯಲ್ಲಿ ವಿನೂತನ ಆಲೋಚನೆಗಳಿವೆ, ನಾವಿನ್ಯತೆಯಿಂದ ಕೂಡಿದ ಚಿಂತನೆಗಳಿವೆ ಮತ್ತು ಇವುಗಳಿಗೆ ಪೂರಕವಾಗಿ ಆಳವಾದ ಅಧ್ಯಯನವಿದೆ. ಅಂತೆಯೇ ನಿಮ್ಮ ಬರವಣಿಗೆ appears quite different and distinct from others. ಈ ಸಂಗತಿಯನ್ನು ಮುನ್ನುಡಿಕಾರರಾದ ಪ್ರೊ. ಸಿ. ಆರ್. ಯರವಿತೆಲಿಮಠ ಕೂಡ ಗುರುತಿಸಿದ್ದಾರೆ. ಉಭಯ ಭಾಷೆಗಳ ಮೇಲೆ ನೀವು ಹೊಂದಿರುವ ಪ್ರಭುತ್ವ ಮತ್ತು ಪ್ರಾವಿಣ್ಯತೆ ಪುಸ್ತಕದಲ್ಲಿ ಢಾಳಾಗಿ ಎದ್ದು ಕಾಣುತ್ತದೆ. ನಿಮ್ಮ ಕಾವ್ಯ-ಭಾಷೆ ಹಾಗೂ ವಿಮರ್ಶೆಯ ಭಾಷೆ ಎಲ್ಲರಿಗೂ ಸಿದ್ಧಿಸುವಂಥದ್ದಲ್ಲ. ಕೀಟ್ಸ್ ಕಾವ್ಯ ಹಾಗೂ ಪತ್ರಗಳ ಅನುವಾದ ಅಪ್ರತಿಮ. ಅವಳ ಬಟ್ಟೆ ಇವಳಿಗುಡಿಸಿ ಹಾಡಿದ್ದೀರಿ ಅಲ್ಲವೆ? ನಿಮ್ಮ ಗದ್ಯವೋ ಪಗದ್ಯವೇ ಸರಿ!
ಪುಸ್ತಕದ ಕುರಿತು ಬರೆಯುವುದು ಬಹಳ ಭಾರವಾದ ಕೆಲಸ ಎಂದೆನಿಸಿದೆ. ಏನಿದ್ದರೂ ನಾನು ಲಘು ಓದಿಗೆ, ಹಗುರ ಬರಹಗಳಿಗೆ ಸೀಮಿತಗೊಂಡಂಥ  ಒಬ್ಬ lesser known writer. ಭಾರವನ್ನು ಇನ್ನಷ್ಟು ಎತ್ತರಕ್ಕೆ ನೆಗುವಲು ಹೋಗಿ ಏನಾದರು ಮಾಡಿಕೊಂಡೇನೆಂಬ ಭಯ ನನಗಿದೆ. ಇಲ್ಲಗೇ ಮುಗಿಸುವುದು ಒಳಿತು ಎಂದೆನಿಸಿದೆ.
ನಿಮಗೆ ಅಭಿನಂದನೆಗಳು.
                                                                   ಜಯವಂತ ಕಾಡದೇವರ
                                                                                ಬನಹಟ್ಟಿ