Total Pageviews

Tuesday, October 4, 2011

ಸಿನಿಮಾ ಮರೆಯಬಾರದ ಸಿನಿಮಾ ರಾಮಸ್ವಾಮಿ

                

                               ಸಿನಿಮಾ ಮರೆಯಬಾರದ ಸಿನಿಮಾ ರಾಮಸ್ವಾಮಿ

 ಇವರು ಸಿನಿಮಾ ರಾಮಸ್ವಾಮಿ. ಬೇಲೂರಿನ ನನ್ನ ಸಂಶೋಧನೆಗಳಲ್ಲಿ ರಾಮಸ್ವಾಮಿಯೊಂದಿಗಿನ ಈ ಒಡನಾಟವೂ ಒಂದು.ಕೋಟೆ ಸಿದ್ಧೇಶ್ವರ ಬೀದಿಯಲ್ಲಿ ನನ್ನ ಮನೆ ಬದಲಾಯಿಸಿ ವೈಕುಂಠ ಬೀದಿಗೆ ಬಂದ ಮೇಲೆ ನನ್ನ ಲಕ್ಷ್ಯ ಪದೇ ಪದೇ ಈ ಹಿರಿಯ ಜೀವದ ಕಡೆಗೆ ಹರಿಯಲಾರಂಭಿಸಿತು.
                ಇವರು ಸಿನಿಮಾ ರಾಮಸ್ವಾಮಿ, ಯಾಕೆಂದರೆ ಸಿನಿಮಾ ಇಲ್ಲದ ಇವರ ಬದುಕಿನ ಯಾವ ಘಳಿಗೆಯೂ ಇಲ್ಲ. ಈಗ ಇವರಿಗೆ ೯೦ ರ ಯೌವ್ವನ! ಅಂದಹಾಗೆ ಈಗಲೂ ಗಡದ್ದಾಗಿ ಹನ್ನೆರಡು ಗಂಟೆ ನಿದ್ರಿಸುತ್ತಾರೆ. ಉಳಿದ ಹನ್ನೆರಡು ಘಂಟೆ ಸಿನಿಮಾ ಬದುಕುತ್ತಾರೆ. ಒಂದು ಕಾಲ ಇತ್ತು, ಮೂಟೆಯಲ್ಲಿ ದುಡ್ಡು ಬಾಚಿಕೊಂಡು ಒಂದೇ ಸಮಯಕ್ಕೆ ಹತ್ತಾರು ಸಿನಿಮಾ ಥೇಯಿಟರ್‌ಗಳನ್ನು ನಡೆಸುತ್ತಿದ್ದ ರಾಮಸ್ವಾಮಿ ಅದೇ ಶ್ರದ್ಧೆ ಮುತುವರ್ಜಿಯೊಂದಿಗೆ ಈಗ ಬೇಲೂರಿನ ತಮ್ಮದೇ `ರೇಣುಕಾ ಚಿತ್ರ ಮಂದಿರ'ದಲ್ಲಿ ಪೇಪರಮೆಂಟ್, ಪಾಪಡ್, ಮತ್ತು ಪಾನೀಯಗಳನ್ನು ಮಾರುತ್ತಾರೆ. ನಮ್ಮ ರಾಮಸ್ವಾಮಿ ಯಾವಾಗಲಾದರೂ ಅಷ್ಟೇ, ಅವರು ವಿತರಕರು. ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದ ನಿರ್ಲಿಪ್ತ ಮನಸ್ಸು. ಮಾತು ಕಡಿಮೆ, ಜೀವನ ಮಂತ್ರವೇ ದುಡಿಮೆ. ಅವರು ಹೇಳುವುದಿಷ್ಟೆ, ಆಳಾಗಿ ದುಡಿಯುವನು ಅರಸನಾಗಿ ಬದುಕಬಲ್ಲ.
                ನವ್ಹೆಂಬರ್ ೨೨,೧೯೨೭ ರಲ್ಲಿ ರಾಮಸ್ವಾಮಿಯವರು ಚಿತ್ರದುರ್ಗದಲ್ಲಿ ಜನಿಸಿದರಂತೆ. ಈ ಚಿತ್ರದುರ್ಗವೇ ಹೀಗೆ, ಬಂಡೆಗಲ್ಲು, ಬಿಸಿಲನ್ನು ತನ್ನ ಒಡಲೊಳಗೆ ಇಟ್ಟುಕೊಂಡಂತೆ ಅನೇಕ ಪ್ರತಿಭೆಗಳಿಗೂ ಒಡಲಾಸರೆ ನೀಡಿದೆ. ಅಂತೆಯೇ ನಮ್ಮ ರಾಮಸ್ವಾಮಿಯವರಿಗೂ. ಇವರ ತಂದೆ ಸೆಂಟ್ರಲ್ ಗೌರ್‍ನಮೆಂಟ್ ನೌಕರರಂತೆ. ಇವರು ಹುಟ್ಟಿದ ಆರು ತಿಂಗಳಲ್ಲಿಯೇ ವಿಧಿವಶರಾದರು. ಇವರ ತಾಯಿಯ ತಂದೆ, ಅಂದರೆ ಅಜ್ಜನ ಮನೆಯಲ್ಲಿ ರಾಮಸ್ವಾಮಿ ತಮ್ಮ ಹೈಸ್ಕೂಲ್‌ವರೆಗಿನ ಶಿಕ್ಷಣ ಪೂರೈಸಿದರು. ಇವರದೇನು ಅರಸು ಮನೆತನವೇ? ಬದುಕಿಗೊಂದು ಬಾಗಿಲು ತೆರೆಯಬೇಕಾಗಿತ್ತು, ಇವರ ಬದುಕಿನಲ್ಲಿ ಆ ಬಾಗಿಲು ತೆರೆದ ಪುಣ್ಯಾತ್ಮನೇ ಗುಬ್ಬಿ ವೀರಣ್ಣ.
                ೧೯೪೦ ರ ಆಸು-ಪಾಸು. ಗುಬ್ಬಿ ನಾಟಕ ಕಂಪನಿ ಚಿತ್ರದುರ್ಗಕ್ಕೆ ಬಂದಿತು. ಆಗ ನಮ್ಮ  ರಾಮಸ್ವಾಮಿ  ತಾತಾಚಾರ್ ಶರ್ಮ ರವರ ಸಂಪಾದಕತ್ವದ `ವಿಶ್ವ ಕರ್ನಾಟಕ' ಪತ್ರಿಕೆಯ ಚಿತ್ರದುರ್ಗದ ಎಜೆಂಟ್‌ರಾಗಿದ್ದರು. ಇದೇ ವೇಳೆ ಬಂದ ಗುಬ್ಬಿ ಕಂಪನಿ ಮ್ಯಾನೇಜರ್‌ಗೆ ನಾಟಕಕ್ಕಾಗಿ ಲೈಸನ್ಸ್ ಬೇಕಿತ್ತು. ತಮ್ಮ ಪತ್ರಿಕಾ ಪ್ರಭಾವವನ್ನು ಬಳಸಿ ನಮ್ಮ ರಾಮಸ್ವಾಮಿ ಒಂದು ತಿಂಗಳಿನ ಲೈಸನ್ಸ್‌ನ್ನು ಕೊಡಿಸಿದರು. ಹೀಗೆ, ರಾಮಸ್ವಾಮಿ  ಹದಿನೇಳರ ವಯಸ್ಸಿನಲ್ಲಿ ಗುಬ್ಬಿ ಕಂಪನಿ ಸೇರಿದರು.
                ಜೂನ್ ೭,೧೯೪೦ ರಾಮಸ್ವಾಮಿ ಬದುಕಿನಲ್ಲಿ ಮತ್ತೊಂದು ತಿರುವು, ಗುಬ್ಬಿ ವೀರಣ್ಣನವರು ದಾವಣಗೆರೆಯಲ್ಲಿ ವಿನೋದಾ ಚಿತ್ರ ಮಂದಿರವನ್ನು ಪ್ರಾರಂಭಿಸಿ, ಈಶ್ವರಲಾಲ್ ಮತ್ತು ನಟಿ ಖುರ್ಷಿದ್ ತಾರಾಗಣದ ‘ಹೋಲಿ' ಚಿತ್ರವನ್ನು ಪ್ರದರ್ಶಿಸಲಾರಂಭಿಸಿದರು. ಈಗ ಒಬ್ಬ ಯೋಗ್ಯ ಯುವಕನ ನಿರೀಕ್ಷೆಯಲ್ಲಿದ್ದರು ಗುಬ್ಬಿ ವೀರಣ್ಣನವರು. ಹೀಗಾಗಿ ೬ ರೂಪಾಯಿ ಸಂಬಳದ ವ್ಯಕ್ತಿಗೆ ೧೫ ರೂಪಾಯಿ ಸಂಬಳ  ನೀಡಿ ರಾಮಸ್ವಾಮಿಯನ್ನು ದಾವಣಗೆರೆಗೆ ಕರೆಸಿಕೊಂಡರು. ಯಾಕೆಂದರೆ ಇದಕ್ಕಿಂತಲೂ ಮುಖ್ಯವಾಗಿ ವೀರಣ್ಣನವರು `ಸುಭದ್ರಾ' ಚಿತ್ರವನ್ನು ಮಾಡುವುದಕ್ಕಾಗಿ ಪೂನಾಕ್ಕೆ ಹೋಗಬೇಕಿತ್ತು. ಇದೆಲ್ಲವು ವ್ಯವಹಾರ ಮತ್ತು ವಿಶ್ವಾಸದ ಪ್ರಶ್ನೆಯಾಗಿದ್ದರಿಂದ ಇವೆರಡನ್ನು ಗಳಿಸಿದ್ದ ರಾಮಸ್ವಾಮಿ ವೀರಣ್ಣನವರ ಹೃದಯಕ್ಕೆ ಹತ್ತಿರವಾಗಿದ್ದರು.
               ಗುಬ್ಬಿ ನಾಟಕ ಕಂಪನಿಯಲ್ಲಿ ೬ ರೂಪಾಯಿ ಸಂಬಳದ ಎಲೆಕ್ಟ್ರಿಷಿಯನ್ ಆಗಿದ್ದ ನಮ್ಮ ರಾಮಸ್ವಾಮಿ  ಸ್ಮರಿಸಿಕೊಳ್ಳುವುದು  ಮಾತ್ರ ವೀರಣ್ಣನವರ ವಿದ್ಯಾ ಪ್ರೇಮವನ್ನು. ಗುಬ್ಬಿ ನಾಟಕ ಮಂಡಳಿ ಯಾವುದೇ ಊರಲ್ಲಿದ್ದರೂ ಸರಿ, ಪ್ರತಿ ಶುಕ್ರವಾರ ಆ ಪ್ರದೇಶದ ವಿದ್ವಾಂಸರನ್ನು ಕರೆದು ಸನ್ಮಾನಿಸುವ ಒಂದು ವಿನೂತನ ವಿಚಾರವನ್ನು ಪಾಲಿಸುತ್ತಿತ್ತು ಎನ್ನುವುದನ್ನು. ಕುರುಕ್ಷೇತ್ರ ನಾಟಕವನ್ನು ಆಂಧ್ರ, ತಮಿಳುನಾಡುಗಳಲ್ಲಿ ಪ್ರದರ್ಶಿಸಿ ವೀರಣ್ಣನವರು ಕನ್ನಡ ಚಲನಚಿತ್ರ ಜಗತ್ತನ್ನು ಕಟ್ಟಿದ ಅವಧೂತ ಎನ್ನುತ್ತಾರೆ ನಮ್ಮ ರಾಮಸ್ವಾಮಿ.
              ೧೯೫೦ ರಲ್ಲಿ ಅರಕಲಗೂಡು ತಾಲೂಕಿನ ಕೋಣನೂರಿನಲ್ಲಿ ಸ್ವಂತ ಟೂರಿಂಗ್ ಥೇಯಿಟರನ್ನು ಪ್ರಾಂಭಿಸಿದ ಇವರು ೧೯೭೭ ರ ವರೆಗೆ ೩ ತಿಂಗಳಿಗೊಮ್ಮೆ ಊರುಗಳನ್ನು ಬದಲಾಯಿಸುತ್ತಾ, ಜಾತ್ರೆಗಳನ್ನು ಅರಸುತ್ತಾ ಅಲೆಮಾರಿಯಾಗಿದ್ದರು. ೧೯೭೯ರಲ್ಲಿ ಎಲ್ಲ ಥೇಯಿಟರ್‌ಗಳನ್ನು ಮಾರಿ ಬೆಂಗಳೂರಿಗೆ ಬಂದು ಸಿನಿಮಾ ವಿತರಕರಾಗಿ(ಡಿಸ್ಟ್ರಿಬ್ಯೂಟರ್)ಆಗಿ ಜೀವನ ಪಾರಂಭಿಸಿದರು. ಹಾಸನದ ಇಂಪೀರಿಯಲ್ ಥೆಯಿಟರ್ ಮತ್ತು ಪಿಕ್ಚರ್ ಪ್ಯಾಲೆಸ್ಸಿನಲ್ಲಿ ಮಾರ್ನಿಂಗ್ ಶೋಗಳನ್ನು ಬಾಡಿಗೆ ಆಧಾರಿತವಾಗಿ ನಡೆಸುತ್ತಿದ್ದರು. ಒಂದು ಕಾಲದ ೬ ರೂ ಸಂಬಳದ ರಾಮಸ್ವಾಮಿ ಈಗ ಇಡೀ ಹಾಸನ ಜಿಲ್ಲೆಗೆ ಮತ್ತು ಆಗಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಚಿತ್ರ ವಿತರಕರು ಮತ್ತು ಪ್ರದರ್ಶಕರಾಗಿ
ಬೆಳೆದಿದ್ದರು.
              ಎಲ್ಲವನ್ನು ಕಂಡುಂಡ ಜೀವ ೧೯೬೭ರಲ್ಲಿ ಬೇಲೂರಿಗೆ ಬಂತು. ಆನಂತರ ೫೦ ವರ್ಷ ಈ ಊರ ಉಸಿರೊಳಗೆ ಉಸಿರಾಗಿ ಹೋಯಿತು. ಇಡೀ ಕರ್ನಾಟಕವನ್ನು ಸುತ್ತಿದ ನಮ್ಮ ರಾಮಸ್ವಾಮಿ ಬೇಲೂರಿನ ಮುನ್ಸಿಪಲ್ ಕೌನ್ಸಿಲರ್ ಆಗಿ ಎರಡು ಸಾರಿ ಆಯ್ಕೆಯಾಗಿದ್ದಾರೆ. ಒಮ್ಮೆ ಅವಿರೋಧ ಇನ್ನೊಮ್ಮೆ  ನೇರ ಚುನಾವಣೆಯ ಮೂಲಕ. ಒಂದೇ ಸಮಯಕ್ಕೆ ಏಳು ಚಿತ್ರಮಂದಿರಗಳನ್ನು ನಡೆಸಬಲ್ಲವರಾಗಿದ್ದ ರಾಮಸ್ವಾಮಿ ಈಗ ರಾಜಕಾರಣವನ್ನೂ ಮಾಡಬಲ್ಲವನಾಗಿದ್ದ. ಆದರೆ ಮನುಷ್ಯತ್ವ, ಸ್ನೇಹ ಮತ್ತು ಪ್ರೀತಿಯ ಪ್ರಶ್ನೆ ಬಂದಾಗ ಅವರು ನೆನೆಯುವುದು ರಾಜ್‌ಕುಮಾರ್, ಹುಣಸೂರು ಕೃಷ್ಣಮೂರ್ತಿ, ಜಿ ವ್ಹಿ ಅಯ್ಯರ್ ಮತ್ತು ಅನ್ನದಾತ ಗುಬ್ಬಿ ವೀರಣ್ಣನವರನ್ನು ಮಾತ್ರ. ಅವರದೇ ಮಾತುಗಳಲ್ಲಿ ಹೇಳಬೇಕೆಂದರೆ"gubbi company is the university  of  drama . ಆನಂತರ ಬಂದ ಸುಬ್ಬಯ್ಯ ನಾಯ್ಡುಯವರನ್ನು ಕೂಡ ನಮ್ಮ  ರಾಮಸ್ವಾಮಿ ಅದೇ ಒದ್ದೆ ಕಣ್ಣುಗಳಿಂದ ಸ್ಮರಿಸುತ್ತಾರೆ.
              ರಾಮಸ್ವಾಮಿಯವರಿಗೆ ಇದುವರೆಗು ನಿಮಗೆ ಕೈತುಂಬ ಹಣ ನೀಡಿದ ಚಿತ್ರಗಳಾವವು ಎಂದು ಪ್ರಶ್ನಿಸಿದರೆ ನಮ್ಮ ರಾಮಸ್ವಾಮಿ ಕೊಡುವ ಪಟ್ಟಿ ಬಹಳ ದೊಡ್ಡದು. ಅವುಗಳಲ್ಲಿ ಆಯ್ದ ಕೆಲವನ್ನು ನಾನು ನಿಮ್ಮ ಮುಂದೆ  ಇಡಬಹುದಷ್ಟೇ. `ಭೂ ಕೈಲಾಸ', `ಆದರ್ಶ ಸತಿ', `ಸಹೋದರ', ‘ರತ್ನ ಮಂಜರಿ', ‘ಕೃಷ್ಣ ದೇವರಾಯ', `ರತ್ನಗಿರಿ ರಹಸ್ಯ', `ಬೇಡರ ಕಣ್ಣಪ್ಪ', `ಭಕ್ತ ಕುಂಬಾರ', `ಅಮರಶಿಲ್ಪಿ ಜಕಣಾಚಾರಿ', `ತಾಯಿ ನುಡಿ', ಮುತೈದೆ ಭಾಗ್ಯ',
`ನಾಗರಹಾವು', `ಬಂಧನ', `ಸಿಂಹಾದ್ರಿಯ ಸಿಂಹ', `ಆಪ್ತರಕ್ಷಕ'.ಹೀಗೆ ನೆನಪುಗಳು ಅನಂತ.
              ಚಿತ್ರೋದ್ಯಮಿಯಾಗಿ ನೀವು ಹೇಳಿಕೊಳ್ಳುವುದೇನು? ನಿಮ್ಮ ಹಕ್ಕೇನು? ಎಂದು ಕೇಳಿದರೆ ರಾಮಸ್ವಾಮಿ  ಹೇಳುತ್ತಾರೆ, "I am  senior  most  in  the whole kannda  industry  "ಎನ್ನುತ್ತಾರೆ.
              ನಮ್ಮ ರಾಮಸ್ವಾಮಿಗೆ `ಪದ್ಮಭೂಷಣ'ವಂತೂ ಸಿಕ್ಕಿಲ್ಲ, ಐದು ಗಂಡು ಒಂದು ಹೆಣ್ಣು ಹೀಗೆ ಆರು ಮಕ್ಕಳ ತಂದೆಯಾಗುವ ಭಾಗ್ಯ ತಪ್ಪಿಲ್ಲ, ಒಬ್ಬ ಮಗ ತೀರಿದ್ದಾನೆ, ಅಳಿಯ ತೀರಿದ್ದಾನೆ, ಜೀವನ ವ್ಯವಹಾರ ಮುಂದುವರೆದಿದೆ. ಮುಂದುವರೆಯುತ್ತದೆ. ಮುಂದುವರೆಯಲೇಬೇಕು. ನಾವೆಲ್ಲ  ಕನ್ನಡ ಚಿತ್ರರಂಗದ ಈ ಹಿರಿಯ ಜೀವಕ್ಕೆ ಒಂದು ಬಾರಿ "Wish You  happy  long  life "! ಹೇಳಬೇಕಲ್ಲವೇ.           
             
                          



Saturday, October 1, 2011

MALCAM X


                                                     MALCAM X      
                                                  (೧೯೨೫ ರಿಂದ ೧೯೬೫)  

ನಮ್ಮ ಸಮರ್ಥನೆ ಇವನಿಗೆ ಬೇಕಿಲ್ಲ.ಇಡೀ ಯೂರೋಪನ್ನು,ಅದರಲ್ಲೂ ಮುಖ್ಯವಾಗಿ  ಕ್ರಿಶ್ಚಿಯನ್ ಆಲೋಚನೆಗಳನ್ನು ಬುಡಮೇಲುಗೊಳಿಸಿದವನು ಇವನು. ನನ್ನ ಅಪರೂಪದ ಓದಿಗೆ ಸಿಕ್ಕಿ ಬಿದ್ದಾತ. ಈತನನ್ನು  ಮಾಲ್ ಕಾಮ್ ಎಂದು ಕರೆಯುತ್ತಾರೆ. ರಜನೀಶ್ ಕಂಡ ಹಿಪ್ಪಿಗಳಿಂದ ಸಧ್ಯದ ಅಂಗಿಯ ಮೇಲೊಂದು ಅಂಗಿ ಹಾಕಿಕೊಳ್ಳುವ ಜಿಪ್ಸಿಗಳಂತೆ ನನ್ನ ಸಾವಿರಾರು ವಿಧ್ಯಾರ್ಥಿ ಸಮೂಹದ ಹಿಂದಿರುವ ಮನಸ್ಸು ಮಾಲ್ ಕಾಮ್.ಕೆಳಗೆ ಚಡ್ಡಿ ಹರಿದರೂ ಅರಿವಿಲ್ಲದೇ ಅರಚುವ ಗಾಯಕ ಮಹೋದಯರಿಗೂ
ಈತನೇ ಆರಾಧ್ಯ ದೈವ. ಟೀ ಶರ್ಟ್ ಗಳ ಮೇಲೆ ಎಂದು ಹಾಕಿಕೊಳ್ಳುವ ಸಂತಾನಗಳಿಗೂ ಹೊತ್ತಿಲ್ಲ ಈ ಯಾರು ಎಂದು.ಕನಿಷ್ಟ ನಿಮಗೆ ಗೊತ್ತಾಗುತ್ತಿದೆ,ಆತ ಮಾಲ್ ಕಾಮ್
ಸೀಝರ್ ನ ನಂತರ,ಹಿಟ್ಲರನ ನಂತರ ಈ ಮಾಲ್ ಕಾಮ್ ಸೆರೆಗಿಂತಲೂ ಸುಲಭವಾಗಿ, ಬರೀ ಪದಗಳಿಂದಲೇ ಜಗತ್ತನ್ನು ತನ್ನ ಕಿರುಬೆರಳಿನಿಂದ ಕುಣಿಸಿದವನು ಇವನು. ಈತನ ಒಂದು ಅಪರೂಪದ ಭಾಷಣ ಈಗ ನಿಮ್ಮ ಮುಂದಿದೆ. ಈತ ನನ್ನ ದೇವ್ರ್ಂತೂ ಅಲ್ಲ. ಆದರೆ ಇದುವರೆಗಿನ ನನ್ನ ಯಾವ ದೇವರು ಇವನಷ್ಟು ಆಕರ್ಷಿಸಿಲ್ಲ.ಛೇ!ಸುಂದರಿಯರಂತೂ ಸಾಧ್ಯವೇ ಇಲ್ಲ.
 

ಕಪ್ಪು ರಾಷ್ಟ್ರನಿಷ್ಠ ಮುಸ್ಲಿಂ ನಾಯಕ. ೧೯೨೫ ಮೇ ೧೯ರಂದು ಒಮಾಹದಲ್ಲಿ ಜನಿಸಿದ. ಮಾರ್ಕಸ್‌ಗಾರ್ವೆಯ ಅನುಯಾಯಿಯಾದ ಈತನ ತಂದೆ ಕಪ್ಪು ರಾಷ್ಟ್ರನಿಷ್ಠ ಜನಗಳ ನಾಯಕ. ರಾಷ್ಟ್ರಭ್ರಷ್ಟರಾದ ಇವರು ಒಮಾಹಾ, ನೆಬ್ರಾಸಾಕಾ, ಮಿಲ್‌ಉಕೆ, ವಿಸ್ಕನ್‌ಸಿನ್, ಲಾನ್‌ಸಿಂಗ್ ಮತ್ತು ಮಿಚಿಗನ್‌ಗಳನ್ನು ಸುತ್ತುತ್ತಾ ಅಲೆಮಾರಿಯಾಗಿದ್ದರು. ೧೯೨೯ರಲ್ಲಿ ಇವರ ಮನೆಗೆ ಬೆಂಕಿಯಿಡಲಾಯಿತು. ಹಾಗೂ ೧೯೩೧ರಲ್ಲಿ ಮಾಲ್‌ಕಾಮ್ ಘಿ ದಾಳಿಗೊಳಗಾದ. ೧೯೩೭ರಲ್ಲಿ ಮಾನಸಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಯಿತು. ಹೀಗಾಗಿ ಈತನ ಶಿಕ್ಷಣ ಅತಂತ್ರವಾಗಿ ಬೊಸ್ಟನ್‌ನಲ್ಲಿ ಸಣ್ಣ ಪುಟ್ಟ ನೌಕರಿ, ಅಪರಾಧಗಳನ್ನು ಮಾಡುತ್ತ ಚಿಲ್ಲರೆ ಜೀವನವೇ ಗತಿಯಾಯಿತು. ೧೯೪೨ರಲ್ಲಿ ವೇಶ್ಯಾವಾಟಿಕೆ ಹಾಗೂ ಇತರ ಅಪರಾಧಿ ಚಟುವಟಿಕೆಯಲ್ಲಿ ತೊಡಗಿರುವುದಕ್ಕಾಗಿ ೧೯೪೬ರಲ್ಲಿ ಬಂಧಿತನಾಗಿ ಸೆರೆಯಲ್ಲಿ ಇರಿಸಲ್ಪಟ್ಟ.
ಸೆರೆಮನೆಯಲ್ಲಿ ಸ್ವ ಅಧ್ಯಯನಕ್ಕೆ ತೊಡಗಿದ ಈತ ತನ್ನ ಸಹೋದರನ ಸಹಾಯದಿಂದ  ನೇಷನ್ ಆಫ್ ಇಸ್ಲಾಂದ ಸಂಘಟನೆಯ ನಾಯಕನಾದ ಎಲಿಜಾ ಮಹಮ್ಮದನಿಗೆ ಪರಿಚಿತನಾದ. ಬಿಳಿಯರೆಂದರೆ ರಾಕ್ಷಸರು ಎಂದು ಹೇಳುತ್ತ ಮಹಮ್ಮದ ತಿರುಗಾಡುತ್ತಿದ್ದ ಕಾಲ ಅದು. ಕಪ್ಪು ಜನರು ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಬಿಳಿಯರ ಸಂಸ್ಕೃತಿಯಿಂದ ಪ್ರತ್ಯೇಕವಾಗಬೇಕು ಎಂದು ಬೋಧಿಸುತ್ತಿದ್ದ ಸಂದರ್ಭ.
೧೯೫೨ರಲ್ಲಿ ಮಾಲ್‌ಕಾಮ್‌ನು X ಎನ್ನುವ ಹೊಸ ಹೆಸರನ್ನು ಇಟ್ಟುಕೊಂಡ. ಬಂಧಮುಕ್ತನಾದ ಈತನನ್ನು ಹೊಸ ಸಂಘಟನೆಯ ಸ್ಥಾಪನೆಗಾಗಿ ಫಿಲಾಡೆಲ್ಫಿಯಾಕ್ಕೆ ಕಳುಹಿಸಲಾಯಿತು. ೧೯೫೦ ರಿಂದ ೬೦ರ ಸುಮಾರಿಗೆ ಮಾಲ್‌ಕಾಮ್ X ತನ್ನ ಅಭೂತಪೂರ್ವ ಭಾಷಣಗಳಿಂದ ನೇಷನ್ ಆಫ್ ಇಸ್ಲಾಂ ಎನ್ನುವ ಸಂಘಟನೆಗೆ ಹತ್ತು ಸಾವಿರ ಜನರನ್ನು ಸೇರಿಸಿದ. ಅಂದಿನ ಕಾಲೇಜು ಸಮಾರಂಭಗಳಲ್ಲಿ, ಸಾರ್ವಜನಿಕ ಭಾಷಣಗಳಲ್ಲಿ, ರೇಡಿಯೋ ಹಾಗೂ ಟೆಲಿವಿಜನ್‌ಗಳಲ್ಲಿ ಮಾಲ್‌ಕಾಮ್, ಮನೆಮಾತಾಗಿದ್ದ. ಕಪ್ಪು ಜನಾಂಗದ ನಾಯಕವಾಗಿ ಆತ ಇದುವರೆಗೂ ಕಿಂಗ್ ಮಾರ್ಟಿನ್ ಲೂಥರ್ ಬೋಧಿಸಿದುದರ ವಿರುದ್ಧ ಬೋಧನೆಗಳನ್ನು ನೀಡಲು ಆರಂಭಿಸಿದ. ಈ ಕಾರಣಕ್ಕಾಗಿ ಬಿಳಿ ಹಾಗೂ ಕಪ್ಪು ಜನಗಳು ಭಯಭೀತರಾದರಲ್ಲದೇ ಈತ ಜನಾಂಗೀಯ ಕಲಹಕ್ಕೆ ಕಾರಣವಾಗಬಹುದು ಎಂದು ಚರ್ಚಿಸಲಾಯಿತು. ಈತನನ್ನು ಭಯಾನಕ ಬೆಳವಣಿಗೆಯ ಸಂಕೇತದಂತೆ ಮಾಧ್ಯಮಗಳಲ್ಲಿ ಬಿಂಬಿಸಲಾಯಿತು.
ಸ್ವಯಂ ಆತನ ನೇಷನ್ ಆಫ್ ಇಸ್ಲಾಂ ಗುಂಪಿನ ಜನರೇ ಅವನಿಂದ ಭೀತಗೊಂಡರು. ೧೯೬೩ರಲ್ಲಿ ಅಮೆರಿಕೆಯ ಅಧ್ಯಕ್ಷ ಜಾನ್ ಎಫ್ ಕೆನಡಿಯ ಕೊಲೆಯನ್ನು ಕುರಿತು ಚರ್ಚಿಸಿದ ಮಾಲ್‌ಕಾಮ್ ಎಲಿಜಾ ಮಹಮ್ಮದನ ಅವಕೃಪೆಗೆ ಒಳಗಾದ ಹಾಗೂ ನೇಷನ್ ಆಫ್ ಇಸ್ಲಾಂದ ಸಂಘಟನೆಯಿಂದ ಹೊರದಬ್ಬಲ್ಪಟ್ಟ. ೧೯೬೪ರಲ್ಲಿ ಈತ ಹೊಸ ಸಂಘಟನೆಯಾದ ಆರ್ಗನೈಜೇಷನ್ ಆಫ್ ಆಫ್ರೊ ಅಮೆರಿಕನ್ ಯುನಿಟಿಗೆ ಚಾಲನೆ ನೀಡಿದ.
ಅದೇ ವರ್ಷ ಮೆಕ್ಕಾಗೆ ಹೋದ ಈತ ಮಿಡಲ್ ಈಸ್ಟ್ ಮತ್ತು ಆಫ್ರಿಕಾಗಳಲ್ಲಿ ಅಧ್ಯಯನವನ್ನು ಮುಂದುವರೆಸಿದ. ಬದಲಾವಣೆಗೊಂಡ ಮನುಷ್ಯನಾಗಿ ೧೯೬೪ರಲ್ಲಿ ಯುನೈಟೆಡ್ ಸ್ಟೇಟ್ಸ್‌ಗೆ ಮರಳಿ ಬಂದ ಹಾಗೂ ಸಾಂಪ್ರದಾಯಿಕ ಮುಸ್ಲಿಂನಂತೆ ಎಲ್-ಹಜ್ ಮಲಿಕ್ ಎಲ್ ಷಹಬಾಜ್ ಎಂದು ಹೆಸರಿಟ್ಟುಕೊಂಡ. ಈತನ ಹೊಸ ಧಾರ್ಮಿಕ ಚಿಂತನೆ ಸಮಾಜವಾದ, ವಸಹಾತುಶಾಹಿಯ ವಿರೋಧ ಹಾಗೂ ಕಪ್ಪು ಜನಾಂಗದ ಅರಿವುಗಳಂತಹ ವಿಷಯಗಳನ್ನು ಒಳಗೊಂಡಿತು. ತಾನು ಎಲಿಜಾ ಮಹ್ಮದ್ ಹೇಳುವ ಬಿಳಿಯರೆಲ್ಲರು ರಾಕ್ಷಸರು ಎನ್ನುವ ಮಾತನ್ನು ಒಪ್ಪಿಕೊಳ್ಳುವುದಿಲ್ಲ. ಕಪ್ಪು ಜನಾಂಗದ ದುರ್ದೆಸೆಗೆ ಆರ್ಥಿಕತೆಯೇ ಕಾರಣ ವಿನಃ ಬಣ್ಣ ಅಲ್ಲ. ಪ್ರತ್ತೇಕವಾದ ಯಾವ ಸಮಸ್ಯೆಯನ್ನೂ ಬಗೆಹರಿಸದು ಎಂದು ಹೊಸ ವಾದ ಪ್ರಾರಂಭಿಸಿದ. ೧೯೬೪ ಮತ್ತು ೬೫ರಲ್ಲಿ ನಿರಂತರವಾಗಿ ಎಲಿಜಾ ಮಹ್ಮದನ ಅನೈತಿಕ ಸಂಬಂಧಗಳು ಆ ಕಾರಣವಾಗಿ ಹುಟ್ಟಿದ ಎಂಟು ಮಕ್ಕಳುಗಳನ್ನೆಲ್ಲ ಬಿಳಿ ಜನಾಂಗದ ಮುಂದೆ ಪರಿಚಯಿಸುತ್ತ ತಿರುಗಾಡಿದ. ೧೯೬೫ರ ಫೆಬ್ರವರಿ ೧೪ರಂದು ಈತನ ಕೊಲೆಯ ಮೊದಲ ಯತ್ನ ನಡೆಯಿತು. ಅದೇ ಅಂದರೆ ೨೧ ಫೆಬ್ರವರಿ ೧೯೬೫ರಲ್ಲಿ ಮೂವರು ಶಸ್ತ್ರಧಾರಿಗಳು ಮಾಲ್‌ಕಾಮ್‌ನ ಮೇಲೆ ಗುಂಡಿನ ಮಳೆಗರೆದರು.
ಮಾಲ್‌ಕಾಮ್‌ನ ಸಾವಿನ ಕುರಿತು ಮಿಶ್ರ ಪ್ರತಿಕ್ರಿಯೆ ಬಂದವು. ಯಾರು ಖಡ್ಗದಿಂದ ಬದುಕನ್ನು ಪ್ರಾರಂಭಿಸುತ್ತಾರೋ ಅದಕ್ಕೇ ಬಲಿಯಾಗುತ್ತಾರೆ ಎಂದು ಕೆಲವರು ಪ್ರತಿಕ್ರಿಯಿಸಿದರು. ೧೯೬೬ರಲ್ಲಿ ‘ದ ಆಟೋಬಯೋಗ್ರಾಫಿ ಆಫ್ ಮಾಲ್‌ಕಾಮ್ X ಪ್ರಕಟವಾಗುವರೆಗೂ ಇದೇ ಅಭಿಪ್ರಾಯ ಮುಂದುವರೆಯಿತು. ಆದರೆ ೧೯೮೮ರಿಂದ ೯೧ರವರೆಗೆ ಆತನ ಆತ್ಮಕಥೆ ಅದ್ಭುತವಾಗಿ ಮಾರಾಟವಾಗಿ ಕಪ್ಪು ಜನರ ಸ್ವಾಭಿಮಾನ, ಅರಿವು ಮತ್ತು ಒಗ್ಗಟ್ಟಿನ ಸಂಕೇತವಾದ. ಕಪ್ಪು ಜನರ ಕ್ರಾಂತಿ ನಾಯಕನೆಂದು ಬಿರುದಾಂಕಿತನಾದ. Spikelee ಎಂಬ ನಿರ್ದೇಶಕ ಇವರ ಬದುಕನ್ನು ಆಧರಿಸಿ Do the right thing ಎನ್ನುವ ಸಿನೇಮಾ ಮಾಡಿದ. ಸಂಗೀತಗಾರರೂ, ಆಟಗಾರರೂ, ಕಾಲೇಜು ವಿದ್ಯಾರ್ಥಿಗಳು X ಎನ್ನುವ ಆತನ ಹೆಸರನ್ನು ಮೈ - ಬಟ್ಟೆಗಳ ಮೇಲೆ ಹಾಕಿಕೊಂಡು ಓಡಾಡಲಾರಂಭಿಸಿದರು. ಆತನ ನಾಯಕತ್ವದ ಗುಣಗಳನ್ನು ಪೂಜಿಸಲಾರಂಭಿಸಿದರು. ಮಾಲ್‌ಕಾಮ್ ಹೇಳಿದ “ಗೋಡೆಗಳು ಕಿರಿದಾಗಿವೆ ಆದರೆ ಸಾಮಾಜಿಕ ನ್ಯಾಯದ ಗೋಡೆ ಬಲಿಷ್ಟವಾಗಿದೆ”, ‘ಈ ಸಮಯದಲ್ಲಿ ನಾವು ಯಾರು?, ‘ನಾವು ಬ್ಯಾಲೆಟ್ ಆಗಬೇಕು ಇಲ್ಲ ಬುಲೆಟ್ ಆಗಬೇಕು’ ಇಂತಹ ಆತನ ಮಾತುಗಳು, ಭಾಷಣಗಳು ಜನಜನಿತವಾದವು.
ಈಸ್ಟರ್ ಸಂಡೆಯ ರಾತ್ರಿ ನೀವೆಲ್ಲ ಇಷ್ಟೊಂದು ಸಂಖ್ಯೆಯಲ್ಲಿ ನನ್ನ ಮಾತುಗಳನ್ನು ಕೇಳಲು ಬಂದದ್ದು ಹೃದಯ ಸ್ಪರ್ಶಿಯಾಗಿದೆ. ನಾನು ಮತ್ತು ನೀವು ಈ ರಾತ್ರಿ ಆಫ್ರಿಕನ್ - ಅಮೇರಿಕನ್‌ಗಳ ಹಾಗೆ ಅಥವಾ ನೀಗ್ರೋಗಳ ಹಾಗೆ ನಮಗಿಷ್ಟ ಬಂದುದನ್ನು ಕೇಳಲು, ನೋಡಲು ಹೋಗುವಷ್ಟು ಸ್ವತಂತ್ರರಲ್ಲ. ಯಾಕೆಂದರೆ ನಾವು ನೀಗ್ರೊಗಳೆಂದು ಹೇಳಿಕೊಳ್ಳುವ ಭಾಗ್ಯವೂ ನಮಗಿಲ್ಲ. ಹಾಗಾದರೆ ನಾವು ಯಾರು? ನಾವು ಆಫ್ರಿಕನ್ನರು, ಆಫ್ರಿಕಾದಲ್ಲಿಯೇ ಇರಬೇಕಾದವರು. ನಾವು ಅಮೇರಿಕನ್ನರಲ್ಲ. ಆಫ್ರಿಕಾದಿಂದ ಮಾರಾಟವಾಗಿ ಅಮೇರಿಕಾಕ್ಕೆ ತರಲ್ಪಟ್ಟವರು. ನಮ್ಮ ಪೂರ್ವಜರು ಇಲ್ಲಿ ಯಾತ್ರಾರ್ಥಿಗಳಾಗಿ ಬರಲಿಲ್ಲ. ನಾವು Pಟಚಿಥಿmouಣh ಹೆಬ್ಬಂಡೆಯ ಮೇಲೆ ಇಳಿಯಲಿಲ್ಲ. ಹೆಬ್ಬಂಡೆಯನ್ನೇ ನಮ್ಮ ಎದೆಗಳ ಮೇಲೆ ಇಳಿಸಲಾಯಿತು. ನಮ್ಮ ಇಚ್ಛೆಗೆ ವಿರುದ್ಧವಾಗಿ ನಮ್ಮನ್ನಿಲ್ಲಿ ಕರೆತಂದದ್ದು ನಮ್ಮನ್ನು ಇಲ್ಲಿ ನಾಗರಿಕರನ್ನಾಗಿ ಮಾಡುವುದಕ್ಕಾಗಿ ಅಲ್ಲ. ಅಥವಾ ಸಂವಿಧಾನದ ಹಕ್ಕುಗಳನ್ನು ಅನುಭವಿಸಲು, ಈ ದಿನದ ಸುಖವನ್ನು ಅನುಭವಿಸಲು ನಮ್ಮನ್ನು ತರಲಾಗಲಿಲ್ಲ.
ಇಂದು ನಾವು ಒಂದಿಷ್ಟು ಎಚ್ಚರಗೊಂಡಿದ್ದೇವೆ. ಅಮೇರಿಕನ್ನರಿಗೆ ಸಾಧ್ಯವಿರುವ ಹಕ್ಕುಗಳನ್ನು ನಾವೂ ಕೇಳುತ್ತಿದ್ದೇವೆ. ಅಂತೆಯೇ ಅವರು ನಮ್ಮನ್ನು ವೈರಿಗಳಂತೆ ನೋಡುತ್ತಿದ್ದಾರೆ. ಹೀಗಾಗಿ ಇದು ಒಂದು ರೀತಿಯ ನಿರೀಕ್ಷೆಗೆ ವಿರುದ್ಧವಾದ ಉಪಸ್ಥಿತಿ. ಅಂತೆಯೇ ನಮ್ಮ ಈ ಉಪಸ್ಥಿತಿಯನ್ನು ಅಮೇರಿಕಾದಲ್ಲೆಡೆಯಲ್ಲಿಯೂ ವಿಕೃತವಾಗಿ ದೊಡ್ಡದಾಗಿ ತೋರಿಸಲಾಗುತ್ತದೆ. ಯಾರು ಬ್ಲ್ಯಾಕ್ ನ್ಯಾಷನ್ಯಾಲಿಜಂನ್ನು ಒಪ್ಪಿಕೊಳ್ಳುತ್ತಿರುವರೋ ಅವರೆಲ್ಲರಿಗೂ ಸಮಸ್ಯೆ ಪ್ರಾರಂಭವಾಗುವುದು ಇಲ್ಲಿಯೇ. ನಮ್ಮ ಚಿಂತನೆಯನ್ನು ನಾವು ಕುಶಾಗ್ರಗೊಳಿಸಬೇಕಾದದು ಇಲ್ಲಿಯೇ. ಆದರೆ ಈ ಕುಶಾಗ್ರತೆ ಕೇವಲ ನಾಲ್ಕಾರು ಜನರು ಸಾಧಿಸಿದರೆ ಆಗುವುದಿಲ್ಲ. ಈ ದೇಶದಲ್ಲಿ ವಾಸವಾಗಿರುವ ಇಪ್ಪತ್ತೆರಡು ಮಿಲಿಯನ್ ಕಪ್ಪು ಜನರು ಕ್ರಿಯಾಶೀಲರಾದಾಗ ಮಾತ್ರ ಇದು ಸಾಧ್ಯ. ನಾವು ಚಿಂತಿಸುವಂತೆ, ನಾವು ಪ್ರವಹಿಸುವಂತೆ, ನಾವು ನೋಡುವಂತೆ ಅವರೆಲ್ಲರೂ ನೋಡುವಂತಾಗಬೇಕಿದೆ. ಆದರೆ ಬ್ಲ್ಯಾಕ್ ನ್ಯಾಷನಲಿಸ್ಟರ ಸಮಸ್ಯೆ ಇರುವುದೇ ಇಲ್ಲಿ. ಅವರು ಉಳಿದ ಸಂಘಟನೆಗಳಂತೆ ಇಲ್ಲಿ ಸೋಲುತ್ತಾರೆ. ಯಾವುದೇ ವಿಚಾರಧಾರೆ ನೀವು ಆಚರಿಸದೇ ಹೋದಲ್ಲಿ ಅರ್ಥಹೀನ. ದೇವರ ಮಾತುಗಳು ಕೂಡ. ಧಾರ್ಮಿಕ ಬೋಧನೆಗಳಾಗಲಿ, ರಾಜಕೀಯ ಚಿಂತನೆಗಳಾಗಲಿ, ಆರ್ಥಿಕ ಸುಧಾರಣೆಗಳಾಗಲಿ, ಅಥವಾ ಸಾಮಾಜಿಕ ಸುಧಾರಣೆಗಳಾಗಲಿ ಅವು ಉಪಯುಕ್ತವಾಗುವುದು ಅವುಗಳನ್ನು ಅನುಸರಿಸಿದಾಗ ಮಾತ್ರ. ನಾವು ಮತ್ತು ನೀವು ಕೇಳಿದ ‘ದೇವರ ವಾಕ್ಯಗಳು’ ಯಾರು ಅವುಗಳನ್ನು ಸೃಷ್ಟಿಸಿದರೋ ಅವರಿಗೆ ಮಾತ್ರ ಉಪಯುಕ್ತವಾಗಿದ್ದವು. ಸಮಾಜವಾದಿಗಳಿಗೆ ಸಾಮಾಜಿಕ ವಿಚಾರಗಳು, ರಾಜಕಾರಣಿಗಳಿಗೆ ರಾಜಕೀಯ ಸ್ಲೋಗನ್‌ಗಳು, ಹೀಗೆ. ಆದರೆ ನನಗೆ ಮತ್ತು ನಿಮಗೆ ಬೇಕಾದದು ಈ ಕ್ಷಣಕ್ಕೆ ಸಮಾಜವನ್ನು ಬದಲಾಯಿಸುವ, ನಮ್ಮನ್ನೂ ಮನುಷ್ಯರಂತೆ ನೋಡುವ ಚಿಂತನೆಗಳು ನಮಗೆ ಬೇಕು. ನಾವು ಇಲ್ಲಿ ಬದುಕದೇ ಹೋದರೆ ಇನ್ನೆಲ್ಲಿಯೂ ಬದುಕಲಾರೆವು. ಈ ದೇಶದಲ್ಲಿಯ ಇಷ್ಟೊಂದು ಆಫ್ರಿಕನ್ನರು ಮತ್ತೇ ಮರಳಿ ದೇಶಕ್ಕೆ ಹೋಗುವಲ್ಲಿ ಯಾಕೆ ಉತ್ಸುಕರಾಗಿದ್ದಾರೆ? ಯಾಕೆಂದರೆ ಒಂದು ಚಿಂತನೆ ಇಂದು ಸಹನೆಯ ಒಂದು ನಿರ್ದಿಷ್ಟ ಹಂತವನ್ನು ತಲುಪಿದೆ. ಒಂದು ಕಾಲಕ್ಕೆ ನಗರದ ೧೨೫ನೆಯ ರಸ್ತೆಯ ೭ನೇ ಕ್ರಾಸ್‌ಗೆ ಈ ಚರ್ಚೆ ಸೀಮಿತವಾಗಿತ್ತು. ಆದರೆ ಇಂದು ಕಾಲೇಜುಗಳ ಕ್ಯಾಂಪಸ್‌ಗಳಲ್ಲಿ, ರಾಷ್ಟ್ರದ ಆಚೆ ಬದಿಯಲ್ಲಿ ಕೂಡ ಆಫ್ರಿಕನ್ ನ್ಯಾಷನ್ಯಾಲಿಜಂ ಬಗ್ಗೆ ಚಿಂತನೆ ಪ್ರಾರಂಭವಾಗಿದೆ.
ಈ ನ್ಯಾಷನ್ಯಾಲಿಜಂ ವರ್ತಮಾನ ಮತ್ತು ಭವಿಷ್ಯದ ಭಯಂಕರ ಅಲೆ. ಇದು ಪ್ರಪಂಚದಲ್ಲೆಡೆಯಲ್ಲಿಯೂ ತುಳಿಯಲ್ಪಟ್ಟವರಿಗೆ ಪರಿಹಾರದ ಮಾರ್ಗ. ಇದನ್ನೆ ALIGERIANSರು, Nigeriansರು, Ghanaiansರರು, Ugandaದ ಜನರು, Tangenesika ದ ಜನರು, Sudan ಮತ್ತು Somaliand ಜನರು ಮುಕ್ತರಾಗಲು ಕಂಡುಕೊಂಡ ಮಾರ್ಗ. ಅವರು ರಾಜಕಾರಣವನ್ನು ಕಲಿತರು ಅಲ್ಲದೇ ಸ್ವಾತಂತ್ರ್ಯವನ್ನು ಪಡೆದರು. ಈ ಎಲ್ಲ ಜನರು ಕೇವಲ ಕಾಯುವುದರ ಮೂಲಕ, ಕನಸು ಕಾಣುತ್ತ ಕೂಡುವ ಮೂಲಕ ದೌರ್ಜನ್ಯದಿಂದ ಹೊರಗೆ ಬರಲಿಲ್ಲ. ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಅವರು ವಿಜಯಿಯಾಗಿದ್ದಾರೆ. ನನಗೆ ಮತ್ತು ನಿಮಗೂ ಕೂಡ ಈ ರಾಷ್ಟ್ರೀಯತೆಯೇ ಪರಿಹಾರ. ನಿಗ್ರೋಗಳಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ ಹಬ್ಬಿಸುವಲ್ಲಿ ಇರುವ ತೊಡಕಾದರೂ ಏನು?
೧)   ನಿಗ್ರೋಗಳು ಅಮೇರಿಕಾದಲ್ಲಿ ತಮ್ಮ ಪಾಲು ಇದೆ ಎಂದು ತಿಳಿದುಕೊಳ್ಳುತ್ತಾರೆ. ನಮ್ಮಂತೆ. ನಾವು ೩೧೦ ವರ್ಷಗಳಿಂದ ಗುಲಾಮರಾಗಿ ಬಾಳುತ್ತ ಇರುವೆವೇ ವಿನಃ ಏನನ್ನೂ ಪಡೆದೆವು ಎನ್ನುವದಕ್ಕೆ ಉತ್ತರ ಶೂನ್ಯವಾಗಿದೆ. ನಮ್ಮ ಪಾಲಿಗೆ ದಿನಕ್ಕೆ ಎಂಟೇ ಗಂಟೆ ಕೆಲಸವೆಂದು ನಿಯಮವಿರಲಿಲ್ಲ. ನಮ್ಮ ಪೂರ್ವಜರು ಇಲ್ಲಿ ದುಡಿದದ್ದು ದಿನವಿಡಿ, ವರ್ಷವಿಡಿ ಸೂರ್ಯ ಹುಟ್ಟುವ ಮುಂಚಿನ ಅವಧಿಯಿಂದ ಸೂರ್ಯ ಮುಳುಗಿದ ಅವಧಿಯ ನಂತರದವರೆಗೆ. ಅವರಿಗೆ ರಜೆ ಅನ್ನುವುದು ಇರಲಿಲ್ಲ. ರವಿವಾರ ಮಾತ್ರ ಅವರು ಕುಳಿತು ಹಾಡಿದ್ದು, ಸತ್ತಾಗ ಮಾತ್ರ ಅವರು ಈ ಗುಲಾಮಗಿರಿಯಿಂದ ಮುಕ್ತವಾದ್ದದ್ದು. ಈ ೩೧೦ ವರ್ಷದ ಗುಲಾಮಗಿರಿ ಈ ದೇಶದ ಆರ್ಥಿಕ ಮತ್ತು ರಾಜಕೀಯ ಸಮೃದ್ಧಿಯ ಅಡಿಪಾಯವಾಗಿದೆ. ಈಗ ನಾವು ಅವರಿಗೆ ತಿಳಿಸೋಣ, ಕಳೆದ ಇಷ್ಟು ವರ್ಷಗಳ ತೊಡಗಿಸಿಕೊಳ್ಳುವಿಕೆಗೆ ನಮಗೆ ನಮ್ಮ ಹಕ್ಕುಬೇಕು, ಇಲ್ಲ ಆಫ್ರಿಕಾಕ್ಕೆ ಮರಳಲು ನಾವು ಮುಕ್ತರಾಗಬೇಕು. ಇದೆಲ್ಲವೂ ಇಂದು ಈ ಕ್ಷಣದಲ್ಲಿ ನಡೆಯಬೇಕು.
ಸ್ನೇಹಿತರೇ,
ನಮ್ಮ ಮೊತ್ತ ಬಡ್ಡಿಸಮೇತ ಮರಳಬೇಕು, ನಮ್ಮ ಬದುಕುಗಳು ಹಸನಾಗಬೇಕು. ನೆನಪಿರಲಿ ನಮ್ಮ ಪೂರ್ವಜರು ಇಲ್ಲಿ ಯಾತ್ರಾರ್ಥಿಗಳಾಗಿ ಬರಲಿಲ್ಲ. ನಾವು Playmouth Rock ಮೇಲೆ ಇಳಿಯಲಿಲ್ಲ.  ಬದಲಾಗಿ ಆ ಬಂಡೆಗಲ್ಲನ್ನೇ ನಮ್ಮ ಎದೆಯ ಮೇಲೆ ಇಡಲಾಯಿತು.
ಇದನ್ನು ನಿಗ್ರೋ ಚಿಂತಿಸುವುದಾದರೆ ಹೋರಾಟ ಏನೆಂಬುದನ್ನು ಅವರಿಗೆ ಚೆನ್ನಾಗಿ ತಿಳಿಸಿರಿ, ಹೊಡೆದಾಟ ಏನೆಂಬುದನ್ನು ಕಲಿಸಿರಿ, ನಿಜವಾದ ಕ್ರಾಂತಿ ಎಂದರೇನು ಎನ್ನುವುದನ್ನು ಮನವರಿಕೆ ಮಾಡಿರಿ. ನೀವು ಸ್ವಾತಂತ್ರ್ಯದಲ್ಲಿ ಆಸಕ್ತರಾಗಿದ್ದೀರಿ ಎನ್ನುವುದಾದರೆ ಜುಡೋ, ಕರಾಟೆ, ಮಲ್ಲಯುದ್ಧ ಎಲ್ಲವನ್ನೂ ಕಲಿಯಬೇಕಿದೆ. Bullet ನಿಮಗೆ ಕೈಗೆ ಸಿಗುವದಿಲ್ಲ ಎನ್ನುವದಾದರೆ balletಗಾಗಿ ಸಂಘರ್ಷ ಪ್ರಾರಂಭಿಸಿರಿ. ಅವಕಾಶಗಳ ಸಮಾನತೆ ಸಾಧ್ಯವಿಲ್ಲ ಎನ್ನುವದಾದರೆ ಬದಲಾವಣೆಗೆ ಸಿದ್ಧರಾಗಿರಿ. ಅದು ನಮಗೆ ಸಿಗುತ್ತಿದ್ದರೆ ಒಳ್ಳೆಯದು. ಸಿಗದೇ ಹೋಗುವುದಾದರೆ ಸಿಗುವಂತಾಗಿಸಿಕೊಳ್ಳಿ. ನಮಗೆ ಚರ್ಚೆ ಬೇಕಿಲ್ಲ, ಪ್ರಮಾಣ ಬೇಕಿಲ್ಲ. ಬೇಕಾಗಿರುವುದು ಅದೊಂದೆ ಕ್ರಿಯೆ. ಹಾಗಾದರೆ ನಾನು ಮತ್ತು ನೀವು ಮಾಡಬೇಕಾದದು ಏನು? ನಮ್ಮ ಇಡೀ ಬದುಕು ಅವರು ನಮ್ಮೆಡೆಗೆ ನೋಡುವಂತೆ ಮಾಡುವುದರಲ್ಲಿಯೇ ಕಳೆದುಹೋಗಿದೆ. ಎಷ್ಟೇ ಬಲಾಢ್ಯವಾದ ಮಾನವ ಮಸೂದೆಯನ್ನು ಅವರು ರೂಪಿಸಿದ್ದರೂ, ಖಂಡಿತವಾಗಿಯೂ ಅದನ್ನು ಅವರು ಆಚರಣೆಗೆ ತರುವುದಿಲ್ಲ ಎನ್ನುವುದು ನಮಗೆ ಚೆನ್ನಾಗಿ ಗೊತ್ತಿದೆ. ನಮ್ಮ ನಮ್ಮ ಹೆಸರುಗಳನ್ನು ನಾವು ದಾಖಲಿಸಬೇಕಾದದ್ದು ಡೆಮಾಕ್ರೆಟ್ಸ್ ಆಗಿ ಅಥವಾ ರಿಪಬ್ಲಿಕನ್ಸ್ ಆಗಿ ಅಲ್ಲ. ಬದಲಾಗಿ Independents ಆಗಿ. ನಾವು ಹೀಗೆ ಚಿಂತಿಸುವ ಎಲ್ಲ ಸಹೋದರರನ್ನು, ಸಹೋದರಿಯರನ್ನು ಸೇರಿಸಿ ಒಂದು ಪಡೆಯನ್ನು ನಿರ್ಮಿಸಬೇಕಾಗಿದೆ. ಮತದಾನದ ಹಕ್ಕನ್ನು ಯಾವುದೇ ಕಾರಣಕ್ಕಾಗಿ ಅನುಲಕ್ಷಿಸಬಾರದಾಗಿದೆ. ಹಾಗೊಂದು ವೇಳೆ ಯಾರಾದರು ಉಳಿದರೆ ಬೇಜವಾಬ್ದಾರರಾದ ಅವರನ್ನು ನಗರಗಳಿಂದ ಹೊರಹಾಕಬೇಕಾಗಿದೆ. ಅಂದಾಗ ಮಾತ್ರ ಅದು ballot ಆಗಿಯೋ, ಇಲ್ಲ bulletಆಗಿಯೋ ಬದಲಾವಣೆಯಾಗುತ್ತದೆ.

* * *