Total Pageviews

Tuesday, May 3, 2016

ಶ್ರೀವಿಜಯನಿಗಾಗಿ ಶಿರಬಾಗಿಸಿದ್ದೇನೆ



      ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು, 45ನೇ ವಯಸ್ಸಿನೊಳಗಾಗಿ ಗಣನೀಯ ಸಾಹಿತ್ಯಿಕ ಸೇವೆ ಸಲ್ಲಿಸಿದ ಬರಹಗಾರರಿಗೆ ನೀಡುವ, 2013ನೇ ಸಾಲಿನಶ್ರೀವಿಜಯ ಸಾಹಿತ್ಯ ಪ್ರಶಸ್ತಿಗಾಗಿ ನಾನು ಭಾಜನನಾಗಿದ್ದೇನೆಂದು ಅಧಿಕೃತವಾಗಿ ದಿನಾಂಕ:12/04/2016 ರಂದು ಘೋಷಿಸಿದೆ. ಸುದ್ದಿ ತಿಳಿಯುತ್ತಲೇ ಸಾವಿರಾರು ಅಭಿಮಾನಿಗಳು ಅಭಿನಂದಿಸಿದ್ದೀರಿ, ಆಶಿರ್ವದಿಸಿದ್ದೀರಿ ನಿಮ್ಮ ಅಭಿಮಾನಕ್ಕೆ ಋಣಿಯಾಗಿದ್ದೇನೆ.

    .ಗು. ಹಳಕಟ್ಟಿ ವೇದಿಕೆ ವಿಜಯಪುರ, ಬಸವೇಶ್ವರ ವಿದ್ಯಾವರ್ಧಕ ಸಂಘ ಬಾಗಲಕೋಟ, ವಿದಾವರ್ಧಕ ಸಂಘ ಬಾಗಲಕೋಟ, ಸರಕಾರಿ ಪ್ರಥಮ ದರ್ಜೆ ಕಾಲೇಜು ನೆಲಮಂಗಲ, ಕನ್ನಡ ಯುವಜನ ಸಂಘ ಹೊಂಬೆಗೌಡನಗರ ಬೆಂಗಳೂರು ಪ್ರಶಸ್ತಿಗೂ ಪೂರ್ವಭಾವಿಯಾಗಿ ಸನ್ಮಾನಿಸಿ ಅಭಿಮಾನ ತೋರಿಸಿವೆ. ಇವರೆಲ್ಲರಿಗೂ ನಾನು ಋಣಿಯಾಗಿದ್ದೇನೆ


       ದಿನಾಂಕ:05/05/2016 ರಂದು ಸಾಯಂಕಾಲ ಐದು ಗಂಟೆಗೆ ಕನ್ನಡ ಸಾಹಿತ್ಯ ಪರಿಷನ್ಮಂದಿರದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ನಿವೆಲ್ಲ ನನ್ನೊಂದಿಗಿರುತ್ತೀರಿ. ನಿಮ್ಮ ಶಬ್ಧ, ಸಂವೇದನೆ, ಕನಸು, ಹಾರೈಕೆ ಹೀಗೆ ಏನೆಲ್ಲವೂ ಆಗಿರುವ ರಾಗಂನನ್ನು ಸಂಭ್ರಮಿಸುತ್ತೀರಿ ಎಂದುಕೊಂಡಿದ್ದೇನೆ. ಇದಕ್ಕೂ ಮುಂಚೆ ಶ್ರೀವಿಜಯ ಯಾರು? ಕನ್ನಡ ಸಾಹಿತ್ಯಕ್ಕೆ ಈತ ತೋರಿಸಿದ ರಾಜ ಮಾರ್ಗ ಯಾವುದು? ಎನ್ನುವ ನಿಮ್ಮ ಕುತೂಹಲಕ್ಕೆ ನನ್ನ ವಿದ್ಯಾ ಗುರುಗಳಾದ ಡಾ. ಸಿ.ಆರ್.ವೈ ಅವರದೇಸಿಯತೆ ಮತ್ತು ದೇಸಿವಾದಎನ್ನುವ ಪ್ರಕಟಣಾ ಹಂತದ ಕೃತಿಯ ಕೆಲವು ವಿಚಾರಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ


ದೇಸಿಯ ಮೊಟ್ಟ ಮೊದಲ ಉಲ್ಲೇಖವಿರುವುದು ನೃಪತುಂಗನ(ಶ್ರೀವಿಜಯನ) “ಕವಿರಾಜಮಾರ್ಗದಲ್ಲಿ ಬರುವ ಕೆಳಗಿನ ಪದ್ಯದಲ್ಲಿ:

               ದೋಸಮಿನಿತೆಂದು ಬಗೆದು


ದ್ವಸಿಸಿತಮಿ ಸಂದು ಕನ್ನಡಂಗಳೊಳೆಂದುಂ


ವಾಸುಗಿಯು ಮೊಪೆಯಲಾರದೆ


ಬೇಸಮಿಗುಂ ದೇಶಿ ಬೇಪೆವೇಲಿಪ್ಪುದ ವೆಂ


ದೇಶಿ ಎನ್ನುವಲ್ಲಿ ನೃಪತುಂಗ(ಶ್ರೀವಿಜಯ) ಪ್ರಾದೇಶಿಕ ಪ್ರಭೇದಗಳನ್ನು ಗಮನಿಸಿದ್ದಾನೆ. ಕನ್ನಡದ ದೇಶಿ ಪ್ರಕಾರಗಳು (ಪ್ರಾಂತೀಯ ಉಪಭಾಷೆಗಳು) ವೈವಿಧ್ಯಮಯವಿರುವುದನ್ನು ಕಂಡು ಆದಿಶೇಷನು ಬೆರಗಾಗಿದ್ದಾನೆ. ‘ದೇಶ್ಯಅಥವಾದೇಶಿಪದದ ತದ್ಭವದೇಸಿ’. ದೇಸಿ ಎನ್ನುವುದು ಶಿಷ್ಟ ಭಾಷೆಯಿಂದ ಬೇರೆಯಾದ ಉಪಭಾಷೆಯ ಪ್ರಕಾರವಾಗಿ ಪ್ರಾಂತೀಯ ವಿಶೇಷತೆಯನ್ನು ಹೊಂದಿರುತ್ತದೆ. ದೇಸೀಯತೆ ಎಂದರೆ ಕನ್ನಡತನ, ಪ್ರಾದೇಶಿಕತೆ ಎಂದು ಅರ್ಥವಾಗುತ್ತದೆ. “ಯಾವ ಲಕ್ಷಣಕ್ಕೂ ಒಳಗಾಗದೆ ದೇಸಿ ಗಬ್ಬಿಗರ ಪ್ರತಿಭಾ ಬಲದಿಂದ ಪದ-ಹಾಡುಗಳ ರೂಪದಲ್ಲಿ ಉದಯಿಸಿದುದು ಎಂದು ಇದರ ತಾತ್ಪರ್ಯವಿರಬೇಕು.”


ಕನ್ನಡದಲ್ಲಿ ಬರಿ ಮಾರ್ಗ ಇಲ್ಲವೆ ಬರಿ ದೇಸಿ ಕೃತಿಗಳನ್ನು ಊಹಿಸಲಿಕ್ಕಾಗದು. ನಮಗೆ ಹೆಚ್ಚಾಗಿ ಕಂಡುಬರುವುದು ಮಾರ್ಗ ದೇಸಿಗಳ ಸಮ್ಮಿಲನ, ಸಮನ್ವಯ. ಇದನ್ನು ವಿವರಿಸಲು ನಾವು ಪುನಃ ಶ್ರೀವಿಜಯ ಕವಿರಾಜಮಾರ್ಗದಲ್ಲಿ ಹೇಳಿದುದನ್ನೇ ಉಲ್ಲೇಖಿಸಬೇಕಾಗಿದೆ :


ನುಡಿಗಳೊಡಂಬಡಲ್ ಬಗೆಸವೊಲ್ ಬಗೆಯಂ ಮಿಗಲೀಯದೊಂದೆ ನಾಲ್ನುಡಿ ಬೆಡಂಗೆ ಕನ್ನಡಿದ ಮಾತಿನೊಳ್ ವಿಕತಾಕ್ಷರಂಗಳೊಳ್ ತೊಡರದೆ ಸಕ್ಕದಂಗಳ ಪದಂ ಹವಣಾಗಿರೆ ಮುಲ್ಪುವೆತ್ತುದಾಂಗುಡಿವಿಡುವಂತೆ ನೀಳ್ಗುವಿಲೆ ಪೇಳ್ವುದು ನೀತಿ ನಿರಂತರ ಕ್ರಮಂ


ಶ್ರೀವಿಜಯ ಹೇಳುವಂತೆ ಕವಿಯು ತನ್ನ ಮನಸ್ಸನ್ನು ತನ್ನ ಸುಡಿಗಳಲ್ಲಿ ನೇರ ಒಡಮೂಡಿಸುವಂತೆ ನಾಣ್ಣುಡಿಗಳ ಬೆಡಗನ್ನು ಬಳಸಿಕೊಳ್ಳಬೇಕು. ಕಷ್ಟಕರವಾದ ಸಂಸ್ಕø ಶಬ್ಧವನ್ನು ಬಳಸದೆ ಹವಣರಿತು ಮೆಲ್ಪುವೆತ್ತ ಪದಗಳನ್ನು ನಾಣ್ಣುಡಿಗಳ(ಗಾದೆಗಳ)ನ್ನು ಬಳಸಿದರೆ ಅದರ ನೈಜಸತ್ವ ತಿಳಿಯುವುದು.

     ಬನ್ನಿ ಕನ್ನಡವಾಗೋಣ, ಕನ್ನಡವ ಸಂಭ್ರಮಿಸೋಣ


No comments:

Post a Comment