Total Pageviews

Thursday, May 18, 2017

‘ಕೊನೆ’ಎಂಬ ಕೊನೆಯಿರದ ಪಯಣ



    
 ಗಂಟೆಗಳವರೆಗೆ ಮದಿರಾಲಯಗಳಲ್ಲಿ ಕುಳಿತು ಒಂದರ ಮೇಲೊಂದರಂತೆ ಖಾಲಿ ಮಾಡುವ ಕುಡಿತದ ಹಂಬಲ ಹಿಂಗುವುದು ಅದರ ಕೊನೆಯ ಹನಿಯಲ್ಲಿ. ಇದರಂತೆಯೇ ಕವಿತೆ, ಕವಿತೆಯಂತೆಯೇ ಕಾಮ, ಕಾಮದಂತೆಯೇ ಧ್ಯಾನ. ಯಾವುದೋ ಒಂದು ಮಹಾ ಘಟಿಸುವಿಕೆಯ ನಿರೀಕ್ಷೆಯ ಕೊನೆಯ ಹಂತ ಅದರ ಕೊನೆಯ ಹನಿ ಅಥವಾ ಹನಿಗಳನ್ನು ದಾಖಲಿಸಿಕೊಂಡ ಒಂದು ಬರಹ.

ಕೊನೆಎನ್ನುವ ಪದದ ಮೋಹಕ್ಕೆ ಬಿದ್ದು ಪ್ರಕಟಗೊಂಡ ಸಾಹಿತ್ಯವನ್ನು ನಾನು ಗಮನಿಸಿದ್ದೇನೆ. ಸಾಕ್ರಟೀಸ್ಕೊನೆಯ ದಿನಗಳು, ‘ ಲಾಸ್ಟ್ ಲಕ್ಚರ್, ‘ಕಾಫರ್ ಕೊನೆಯ ಪತ್ರಗಳು, ಅಬ್ಬಾಸರಕೊನೆಯ ಪುಟ, ಗಾಂಧಿಯಅಂತಿಮ ದಿನಗಳು, ಮಾಂಟೋನಕೊನೆಯ ಪತ್ರಗಳುಹೀಗೆ ಸಾಲು ಸಾಲಾಗಿ ನಿಲ್ಲುವ ಪುಸ್ತಕಗಳು ಜೀವನ ದರ್ಶನದ ಮಹಾ ಬೆಳಕನ್ನು ತಮ್ಮೊಳಗೇ ಬಚ್ಚಿಟ್ಟುಕೊಂಡಿವೆ. ಸೃಜನಶೀಲತೆಯ ವಿಚಿತ್ರವೇ ಅದು. ನೀವು ಇಲ್ಲಿ ಯಾವಾಗಲೂ ಕಾಯಬೇಕಾದುದುಕೊನೆಎಂಬ ಕೊನೆಯವರೆಗೆ
 ಕಾಲಾತೀತವಾಗಿ ನೋಡಿದಾಗಲೂ ಕೊನೆಎಂಬ ರೋಚಕತೆ ಕಾಡಿದ ಬಗೆಗೆ ಅನೇಕ ಸಾಕ್ಷಿಗಳು ದೊರೆಯುತ್ತವೆ. ನೆಪೋಲಿಯನ್ಕೊನೆಯ ದಿನಗಳಬಗೆಗೆ ನಿಮಗದೆಷ್ಟು ಗೊತ್ತಿದೆಯೋ ನಾನರಿಯೆ. ಒಂದು ಸಾಂಸ್ಕøತಿಕ ಪರಿಧಿಯೊಳಗೆ ಸಾಮಾಜಿಕ ಕ್ರಾಂತಿಯ ಮಹಾನ್ ಕನಸನ್ನು ಕಂಡ ಬಸವಣ್ಣನ ಕೊನೆಯ ಬಗೆಗೆ ನಮಗೇನೂ ದಕ್ಕಲೇ ಇಲ್ಲ. ಆದರೆ ವ್ಯಕ್ತಿಯೊಬ್ಬನ ಶಕ್ತಿಯ ಪರಾಕಾಷ್ಠತೆಯ ಪ್ರದರ್ಶನವಾಗುವುದು ಅವನಕೊನೆಯಲ್ಲಿಯೇ ಎನ್ನುವ ಹಿನ್ನೆಲೆಯಲ್ಲಿಯೇ ನಮ್ಮ ಶರಣರು ಹೇಳಿದರು, ‘ಶರಣರ ಮಹಿಮೆ ಮರಣದಲ್ಲಿ ನೋಡು.’ ಇಲ್ಲಿ ಮರಣ ಎನ್ನುವು ಬದುಕಿನ ಕೊನೆಯ ಪುಟ ಎನ್ನುವ ಸೂಚ್ಯಾರ್ಥ ಇದರಲ್ಲಿದೆ ಎಂದು ನಾನು ವಿವರಿಸಬೇಕಿಲ್ಲ.
ನನ್ನನ್ನು ಕಾಡಿದ ಭಾರತೀಯ ಲೇಖಕರುಗಳು ಎಷ್ಟು ಜನ? ಎಂದು ಪ್ರಶ್ನಿಸಿಕೊಂಡರೆ ಬರುವ ಉತ್ತರ ಸಾವಿರದ ಲೆಕ್ಕದಲ್ಲೇನೂ ಇಲ್ಲ, ಬೆರಳೆಣಿಕೆಯಷ್ಟೆ. ಬೆರಳೆಣಿಕೆಯ ಬರಹಗಾರರಲ್ಲಿ ಸಾದತ್ ಹಸನ್ ಮಾಂಟೋ ಕೂಡ ಒಬ್ಬ. ಮಾಂಟೋನ ಕೊನೆಯ ದಿನಗಳು ಅತ್ಯಂತ ದಯನೀಯವಾಗಿದ್ದವು. ಕೊನೆಯ ದಿನಗಳನ್ನು ಒಂದಿಷ್ಟು ಜೈಲು, ಮತ್ತಷ್ಟು ಹುಚ್ಚಾಸ್ಪತ್ರೆ, ಇನ್ನಷ್ಟು ಬೀದಿ ಬೀದಿಗಳಲ್ಲಿ ಅಲೆದು ಆತ ಕಳೆದ. ಎಲ್ಲ ಹಿಂಸೆಯಿಂದ ಮುಕ್ತಗೊಳಿಸಲು ಆತನ ಕೊನೆಗಾಗಿ ಕಾಯ್ದವಳು ಆತನ ಹೆಂಡತಿ. ಮಾಂಟೋ ಇಲ್ಲದ ಅರೆಕ್ಷಣದ ಬದುಕೂ ಅಸಾಧ್ಯವಾಗಿದ್ದರೂ ಕೂಡ ಆತ ಒಮ್ಮೆ ಮರೆಯಾಗಿ ಬಿಡಲಿ ಎಂದೇ ಅವಳು ಪ್ರಾರ್ಥಿಸುತ್ತಿದ್ದಳು. ಯಾಕೆಂದರೆ ಮಾಂಟೋ ಮನುಷ್ಯರಿಗೆ ಅರ್ಥವಾಗುವ ಸಂದರ್ಭ ಅದಾಗಿರಲಿಲ್ಲ. ಮನುಷ್ಯತ್ವ ಮಾರಣಹೋಮವಾಗಿ ಮಾಂಟೋನಂಥ ಮನುಷ್ಯ ನಿಬ್ಬಾಗಿ ಕಾಣುವ ಭಾರತೀಯ ಸಾಮಾಜಿಕ ಮತ್ತು ರಾಜಕೀಯ ಸಂದರ್ಭವದು
 ಆತ ಇಂಥ ಕೊನೆಯ ದಿನಗಳಲ್ಲೂ ಅಪರೂಪದ ಪತ್ರಗಳನ್ನು ಬರೆದಿದ್ದಾನೆ. ‘ಮಾಂಟೋ ಕಿ ಖತ್ನುಮಾಯೆಎನ್ನುವ ಸೊಗಸಾದ ಪುಸ್ತಕ ಒಂದು ಹಿಂದಿ ಭಾಷೆಯಲ್ಲಿದೆ. ಅದನ್ನೆತ್ತಿಕೊಂಡು ಏನೋ ಮಾಡಲು ಹೊರಟವ ನಾನು. ಮತ್ತೆ ಬದಿಗೆ ಸರಿಸಿದ್ದೇನೆ. ಯಾಕೆಂದರೆ, ಭಾರತ ಇನ್ನೂ ಆತನ ಬರಹದ ನಿರೀಕ್ಷೆಯ ಮನೋವಿಕಾಸವನ್ನು ಸಾಧಿಸಿಲ್ಲ ಎಂದೇ ನನ್ನ ವಾದ.
ಈಗ ಪಾಶ್ಚಾತ್ಯ ಲೋಕದ ಜಾನ್ ಕೀಟ್ಸ್ ಎಂಬ ಎಳೆಯ ಗೆಳೆಯನ ಕೊನೆಯ ಪತ್ರಗಳನ್ನು ಹರಡಿಕೊಂಡು ನಿಮ್ಮೊಂದಿಗೆ ಸಂವಾದಕ್ಕಿಳಿದಿದ್ದೇನೆ. ಸಂದರ್ಭಕ್ಕೆ ಸಾಲುಗಳನ್ನು ಗೀಚಿಕೊಂಡು ಸಾಹಿತಿಗಳಾಗಿ, ಯೌವ್ವನದ ಹಂಗಾಮಿಗೆ ಮೈ ಹಾಸಿಕೊಂಡು ಪ್ರೇಮಿಗಳಾಗಿ, ಮುಪ್ಪು ಮುಪ್ಪರಿಗೊಂಡರೂ ಸಹಜವಾಗಿ ಸಿಗಬೇಕಾದ ಸಾವಿಗೂ ಭಿಕಾರಿಗಳಾದವರ ಮಧ್ಯ, ನೆಟ್ಟಗೆ ಯೌವ್ವನಕ್ಕೂ ಕಾಲಿಡದೇ, ಕೊನೆಯುಸಿರೆಳೆದ ಕವಿಯ ಕೊನೆಯ ಪತ್ರಗಳಿಂದ ನಾವೇನನ್ನೋ ಕಟ್ಟಿಕೊಳ್ಳಬೇಕಾದುದು ಇನ್ನೂ ಇದೆ ಎನ್ನುವ ನಂಬಿಕೆ ನನ್ನನ್ನು ಸಾಹಸಕ್ಕೆ ಪ್ರೇರೇಪಿಸಿದೆ.
ಇನ್ನಾವುದೇ ಕವಿಯನ್ನು ಕುರಿತು ನೀವು ಹೀಗೆ ಆಲೋಚಿಸಲಾಗದು. ಕುಡಿತವನ್ನು ತೆಗೆದುಬಿಟ್ಟರೆ ಖಯ್ಯಾಮ ಹೇಗೆ ಖಾಲಿಯಾಗುತ್ತಾನೊ, ಸಂವಾದ ತೆಗೆದುಬಿಟ್ಟರೆ ಹೇಗೆ ಸಾಕ್ರಟೀಸ್ ಬರಿದಾಗುತ್ತಾನೊ, ಪ್ರೀತಿಯನ್ನು ತೆಗೆದುಬಿಟ್ಟರೆ ಮರಭೂಮಿಯಾಗಿಬಿಡುತ್ತಾನೆ ಕೀಟ್ಸ್. ಪ್ರೀತಿ, ಅದು ನೀಡಿದ ಯಾತನೆಯೇ ಆತನ ಕಾವ್ಯದ ಸಮಗ್ರ ಅಸ್ತಿವಾರ. ಪ್ರೀತಿಯಿಂದ ಭಾರವಾದ ಅವನ ಕಾವ್ಯ, ಕಾವ್ಯಾಭಿವ್ಯಕ್ತಿಯಿಂದಲೇ ತುಂಬಿಹೋದ ಅವನ ಪ್ರೀತಿ ಪರಸ್ಪರ ಹೊರೆಯಲ್ಲ, ಬದಲಾಗಿ ಸಮರಸಗೊಂಡು ಹೊರಹೊಮ್ಮುವ ಸೌಂದರ್ಯ.

No comments:

Post a Comment