Total Pageviews

Tuesday, November 13, 2018

ಗಾಂಧೀಜಿ ದೃಷ್ಟಿಯಲ್ಲಿ ರಾಮಾಯಣ



ನಾಯಿ ಸೆ ನಾಯಿ ಲೇತ್
ಧೋಭೀ ಸೆ ಧೋಭೀ ಲೇತ್
ಲೇಕೆ ಮಜೂರಿಯಾಂ ಯೆ ಜಾತಿ ಕೋ ದಿಖಾಯಿಯೋ
ಪ್ರಭು ಆಯೆ ಮೋರೆ ಘಾಟ್
ತೋ ಪಾರ್ ಮೈ ಉತಾರ್ ದಿ
ಜಬ್ ಆವೂಂ ಮೈ ತೋರೆ ಘಾಟ್
ತೊ ಪಾರ್ ಮೋಹಿ ಉತಾರಿಯೋ
 ಇವು ಅನೂಪ್ ಝಲೋಟಾ ಹಾಡಿ, ಲೋಕವಿಖ್ಯಾತಗೊಳಿಸಿದರಾಮ ಭಜನೆ ಕೆಲವು ಸಾಲುಗಳು. ಭಜನೆಯ ಮುಖ್ಯ ಚರಣರಾಮ ಚರಣ ಸುಖ್ದಾಯಿ. ಇಡೀ ಭಜನೆ ಅಯೋಧ್ಯೆಯ ಅರಸ, ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಪಾದಸ್ಪರ್ಶದ ಮಹಿಮೆಯನ್ನು ಹೇಳುತ್ತಾ ಹೋಗುತ್ತದೆ. ಯಾವ ಪಾದುಕೆಗಳನ್ನಿಟ್ಟುಕೊಂಡು ಹದಿನಾಲ್ಕು ವರ್ಷಗಳವರೆಗೆ ಭರತ ಅಯೋಧ್ಯೆಯನ್ನಾಳಿದನೋ, ಯಾವ ಪಾದಗಳ ಸ್ಪರ್ಶದಿಂದ ಕಲ್ಲಾಗಿದ್ದ ಅಹಲ್ಯೆ ಮರುಜನ್ಮ ಪಡೆದಳೋ, ಯಾವ ಪಾದಗಳ ದಾರಿ ಕಾಯುತ್ತಾ ಶಬರಿ ಕುಳಿತಿದ್ದಳೋ, ಯಾವ ಪಾದಗಳು ತನ್ನ ಸರ್ವಸ್ವವೂ ಎಂದು ಹನುಮ ಹಾಡಿ ಕೊಂಡಾಡಿದ್ದನೋ ಪಾದಗಳ ಕುರಿತು ಒಂದು ಮೋಜಿನ ಪ್ರಸಂಗವನ್ನು ಭಜನೆಯಲ್ಲಿ ಅನೂಪ್ ಝಲೋಟಾ ತುಂಬಾ ಸೊಗಸಾಗಿ ವಿವರಿಸುತ್ತಾರೆ-

ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿಕೊಂಡು ಶ್ರೀರಾಮಚಂದ್ರ ಲಕ್ಷ್ಮಣ, ಸೀತೆಯ ಸಮೇತವಾಗಿ ಅಯೋಧ್ಯೆಯೆಡೆಗೆ ಹೊರಟಿದ್ದಾರೆ. ದಾರಿ ಮಧ್ಯದಲ್ಲೊಂದು ನದಿ. ಅದನ್ನೀಗ ಅವರು ದಾಟಬೇಕು. ಅಂಬಿಗನೊಬ್ಬ ದೋಣಿಯೊಂದಿಗೆ ನದಿಯ ದಡದಲ್ಲಿದ್ದಾನೆ. ಅದು ಹೇಗೊ, ತನ್ನ ಇಡೀ ಜೀವಮಾನದ ಕಾಯುವಿಕೆಯಾಗಿದ್ದ ತನ್ನ ಪ್ರಭು ಶ್ರೀರಾಮಚಂದ್ರ ಇದೇ ದಾರಿಯ ಮೂಲಕ, ತನ್ನ ನದಿಯನ್ನು ದಾಟಿಕೊಂಡೇ ಹೋಗುತ್ತಾರೆ, ತನಗೆ ಅವರನ್ನು ಹತ್ತಿರದಿಂದ ನೋಡುವ, ಅವರ ಪಾದಗಳನ್ನು ಮುಟ್ಟುವ ಒಂದು ಅವಕಾಶ ಸಿಗುತ್ತದೆ ಎಂದು ಅವನಿಗೆ ಗೊತ್ತು. ಅಂದುಕೊಂಡಂತೆಯೇ ಆಯಿತು. ಶ್ರೀರಾಮಚಂದ್ರ ಅದೇ ಮಾರ್ಗವಾಗಿ ಬಂದರು. ನದಿ ದಾಟಲು ಅಂಬಿಗನ ಸಹಾಯವನ್ನೇ ಕೇಳಿದರು. ಸಂಭ್ರಮವಾದ ಅಂಬಿಗ, ಶ್ರೀರಾಮನ ಪಾದ ತೊಳೆದು, ನಮಸ್ಕರಿಸಿ ದೋಣಿ ಹತ್ತಿಸುವ ಮುಂಚೆ ಅಂಬಿಗ ಶ್ರೀರಾಮಚಂದ್ರನಿಗೊಂದು ಷರತ್ತು ಹಾಕಿದ. ಆತ ಹೇಳಿದ, “ಪ್ರಭೂ, ನಿಮ್ಮ ಪಾದ ಸ್ಪರ್ಶದಿಂದ ಕಲ್ಲೊಂದು ನಾರಿಯಾಗಿ ಮರುಜನ್ಮ ಪಡೆದುದನ್ನು ಕೇಳಿದ್ದೇನೆ. ನಾನು ಬಡ ಅಂಬಿಗ, ನನಗೋರ್ವ ಪ್ರೀತಿಯ ಹೆಂಡತಿಯೂ ಇದ್ದಾಳೆ. ದಯವಿಟ್ಟು ನಿಮ್ಮ ಪಾದಗಳ ಸ್ಪರ್ಶದಿಂದ ನನ್ನ ದೋಣಿ ಮತ್ತೊಂದು ಹೆಣ್ಣಾಗಿ ನನ್ನ ಬೆನ್ನು ಬೀಳುವುದಿಲ್ಲ ಎನ್ನುವ ಭರವಸೆಯನ್ನು ನೀಡಿದರೆ ಮಾತ್ರ ನಾನು ನಿಮ್ಮನ್ನು ನದಿ ದಾಟಿಸುತ್ತೇನೆ. ಮುಗುಳ್ನಕ್ಕ ಮಹಾಪ್ರಭು ಭರವಸೆ ನೀಡಿ, ನದಿ ದಾಟಿ ಈಚೆ ದಡಕ್ಕೆ ಬಂದು ಅಂಬಿಗನ ಸೇವೆಗೆ ಏನಾದರೂ ಕೊಡಬೇಕಲ್ಲ? ಆದರೆ ಈಗ ತನ್ನ ಬಳಿ ಕೊಡಲು ಏನೂ ಇಲ್ಲ. ತಾನೀಗ ಅರಸನಲ್ಲ, ವನವಾಸದಲ್ಲಿರುವ ಶ್ರೀ ಸಾಮಾನ್ಯ ಎಂದು ಯೋಚಿಸುತ್ತ, ತಕ್ಷಣ ಧರ್ಮಪತ್ನಿ ಸೀತೆಗೆ ಸಂಕೇತ ರವಾನಿಸುತ್ತಾರೆ. ಸನ್ನೆ ತಿಳಿದ ಸೀತಾಮಾತೆ ತನ್ನ ಕೊರಳೊಳಗಿನ ಚೂಡಾಮಣಿಯನ್ನು ಅಂಬಿಗನಿಗೆ ಮಜೂರಿಯಾಗಿ ಕೊಡಲು ಹೋದಾಗ, ಅದನ್ನು ನಯವಾಗಿ ನಿರಾಕರಿಸುತ್ತ, ಅಂಬಿಗ ಮೇಲಿನ ಪದ್ಯವನ್ನು ಶ್ರೀರಾಮಚಂದ್ರನಿಗೆ ಹೇಳುತ್ತಾನೆ. ಅರ್ಥವಿಷ್ಟೆ, “ಯಾವ ತರಹ ನಾಯಿದನಿಂದ ನಾಯಿದ, ಅಗಸನಿಂದ ಅಗಸ ಹಣ ಪಡೆದು ತಮ್ಮ ತಮ್ಮ ವೃತ್ತಿ ವಿರೋಧಿ ನಿಲುವನ್ನು ಪ್ರದರ್ಶಿಸಬಾರದೋ ಅದೇ ರೀತಿ ಅಂಬಿಗನೊಬ್ಬ ಅಂಬಿಗನಿಂದ ಕೂಲಿ ಪಡೆದು ಅವಹೇಳಿಸಬಾರದು. ಪ್ರಭುವೇ, ನಾವಿಬ್ಬರು ಒಂದೇ ವೃತ್ತಿಯವರು. ನೆಲದ ನದಿಯ ಅಂಬಿಗ ನಾನಾದರೆ ಸಂಸಾರವೆಂಬ ಭವಸಾಗರದ ಅಂಬಿಗ ನೀವು. ನನ್ನ ನದಿಯ ದಡಕ್ಕೆ ಬಂದಾಗ ನಿಮ್ಮನ್ನಾಚೆ ದಾಟಿಸಿದ್ದೇನೆ, ಇದು ನನ್ನ ವೃತ್ತಿ. ಮುಂದೊಮ್ಮೆ ನಾನು ಭವದ ದಡಕ್ಕೆ ಬಂದು ನಿಂತಾಗ ಅಂಬಿಗರಾಗಿ ನೀವು ನನ್ನನ್ನು ಆಚೆ ದಡ ಸೇರಿಸಿರಿ, ವ್ಯವಹಾರ ಮುಗಿದುಹೋಗುತ್ತದೆ.
ಇದೊಂದು ಅಧ್ಬುತ ಭಜನ್. ಕೇಳಿದಷ್ಟೂ ಕೇಳಬೇಕೆನ್ನುವ ಒರತೆ ಉಳಿದುಕೊಂಡುಬಿಡುತ್ತದೆ. ಜೊತೆಗೆ ಶ್ರೀರಾಮಚಂದ್ರ ಪ್ರಜಾಸ್ನೇಹಿಯಾದ, ಲೋಕಮುಖಿಯಾದ, ಆದರ್ಶ ರಾಜನಾದ ಬಗೆಗೆ ನಿದರ್ಶನಗಳು ದೊರೆಯುತ್ತವೆ. ಒಂದರ್ಥದಲ್ಲಿ ಶ್ರೀರಾಮ ರೂಪುಗೊಂಡ ಮತ್ತು ರಾಮರಾಜ್ಯದ ಪರಿಕಲ್ಪನೆ ಇಲ್ಲಿ ಹೇಗೆ ರೂಪುಗೊಂಡಿತು ಎನ್ನುವ ನಮ್ಮ ಕುತೂಹಲಗಳಿಗೆ ಉತ್ತರಗಳೂ ಇಲ್ಲಿ ಸಿಗುತ್ತವೆ.
ಭಾರತೀಯ ವಿದ್ಯಾಭವನ ಆಯೋಜಿಸಿದ ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿಯ ದಿನಾಚರಣೆಯೊಂದರಲ್ಲಿ ಭಾಗವಹಿಸಿ, ದೇಶದ ಮಹತ್ವದತುಳಸಿ ರಾಮಾಯಣ ವಿಶ್ಲೇಷಕ, ಮುರಾರಿ ಬಾಪು, ‘ರಾಮರಾಜ್ಯ ಪ್ರಾರಂಭವಾದುದು ಯಾವಾಗ? ಎನ್ನುವ ಪ್ರಶ್ನೆಯೊಂದನ್ನು ಸಾರ್ವಜನಿಕವಾಗಿ ಎತ್ತಿಕೊಳ್ಳುತ್ತಾರೆ. ಸಾಮಾನ್ಯರು ಹೇಳುವಂತೆ ಶ್ರೀರಾಮಚಂದ್ರನ ಹದಿನಾಲ್ಕು ವರ್ಷಗಳ ವನವಾಸದ ನಂತರದ ಅವರ ಆಡಳಿತಾವಧಿಯೇ ರಾಮರಾಜ್ಯದ ಮೂಲ ಎನ್ನಲಾಗಿದೆ. ಆದರೆ ಮುರಾರಿ ಬಾಪು ಕೊಡುವ ಉತ್ತರ ಭಿನ್ನ, “ವಿಶ್ವಾಮಿತ್ರ ದಶರಥ ಮಹಾರಾಜನ ಬಳಿ ಬಂದು, ಯಜ್ಞಕ್ಕೆ ಭಂಗ ತರುತ್ತಿದ್ದ ರಾಕ್ಷಸಿ ಚಟುವಟಿಕೆಗಳನ್ನು ಪ್ರತಿರೋಧಿಸಲು ಯಾವಾಗ ರಾಮ-ಲಕ್ಷಣರನ್ನುನಡೆಯಿಸಿಕೊಂಡುಅರಣ್ಯಕ್ಕೆ ಕರೆದೊಯ್ದನೋ ಅಲ್ಲಿಂದ ರಾಮರಾಜ್ಯದ ಪುಟ ಪ್ರಾರಂಭವಾಯಿತು. ಮಹಲುಗಳಲ್ಲಿ ಸುಖವನನುಭವಿಸುತ್ತ, ರಥಗಳನ್ನೇರಿ ಗುರುಕುಲಗಳಿಗೆ ಬರುವ ರಾಜರ ಮಕ್ಕಳಿಂದ ಶ್ರೀಸಾಮಾನ್ಯರ ಹಿತರಕ್ಷಣೆಯಾಗದು. ನೆಲದ ಮೇಲೆ ನಡೆದಾಡದವನು ಇನ್ನೊಬ್ಬರಿಗೆ ನೆರಳು ನೀಡುವಷ್ಟು ಎತ್ತರಕ್ಕೆ ಬೆಳೆಯಲಾರನು ಎನ್ನುವ ತಿಳುವಳಿಕೆಯೊಂದಿಗೆ ರಾಮ-ಲಕ್ಷ್ಮಣರನ್ನು ವಿಶ್ವಾಮಿತ್ರ ಅರಣ್ಯದ ಸಂಕಷ್ಟಗಳ ದಾರಿಯಲ್ಲಿ ಬರೀಗಾಲಿನಲ್ಲಿ ನಡೆಯಿಸಿಕೊಂಡು ಹೋಗುತ್ತಾನೆ. ಹಳ್ಳಿ, ಹಳ್ಳ-ಕೊಳ್ಳ, ಬಿಸಿಲು-ಗಾಳಿ, ಬಡವ-ಬಲ್ಲಿದರ ವಾಸ್ತವಗಳನ್ನು ತೋರಿಸುತ್ತ ಹೋಗುತ್ತಾನೆ. ಅದು ಅರಸನಾಗುವವನೊಬ್ಬನನ್ನು ಅರಿವಿನೆಡೆಗೆ ನಡೆಯಿಸಿಕೊಂಡು ಹೋದ ಮಹತ್ವದ ದಾರಿ. ಅದು ಭರತ, ಅಹಲ್ಯೆ, ಶಬರಿ, ಹನುಮ ಹಾಗೂ ಅಂಬಿಗನು ಪೂಜಿಸಲು ಹಂಬಲಿಸುವ ಪಾದಗಳನ್ನು ರೂಪಿಸಿದ ದಾರಿ. ಅದು ರಾಮರಾಜ್ಯದ ಪರಿಕಲ್ಪನೆಗಳು ಚಿಗುರೊಡೆದ ದಾರಿ. ಇದುವೇ ಮುಂದೆ ಬಂದಗಾಂಧಿಎಂಬ ಹೋರಾಟಗಾರನ ದಾಂಡಿ ಸತ್ಯಾಗ್ರಹಕ್ಕೆ ಮಾದರಿಯಾದ ದಾರಿ. ವಾಹನಗಳನ್ನು ಹತ್ತಿಕೊಂಡು ದಾಂಡಿಗೆ ಹೋಗಿದ್ದರೆ ಸಾಮ್ರಾಜ್ಯಶಾಹಿಗಳ ವಿರುದ್ಧ ತನ್ನ ದೇಶವನ್ನು ಎಬ್ಬಿಸಿ ನಿಲ್ಲಿಸಲಾಗದು ಎನ್ನುವ ವಾಸ್ತವವನ್ನು ತಿಳಿದಿದ್ದ ಗಾಂಧೀಜಿ, ಹಳ್ಳಿ-ಹಾಡಿ-ನಗರಗಳ ಮೂಲಕ ನಡೆದುಕೊಂಡು ಹೋಗಿಯೇ ದಾಂಡಿಯನ್ನು ತಲುಪುತ್ತಾರೆ. ರಾಮರಾಜ್ಯದ ದಾರಿಯಲ್ಲಿಯೇ ಸಾಗಿ, ದೇಶಕ್ಕೊಂದು ಹೊಸ ಅಸ್ಮಿತೆಯನ್ನು ಸಾಧ್ಯವಾಗಿಸುತ್ತಾರೆ. ಹಿನ್ನೆಲೆಯಲ್ಲಿಯೇ ಗಾಂಧೀಜಿಯ ಪ್ರಜಾಸತ್ತಾತ್ಮಕ ಆಡಳಿತದ ಪರಿಕಲ್ಪನೆ ಮತ್ತು ಸತ್ಯಾಗ್ರಹದ ಪರಿಕಲ್ಪನೆ ರೂಪಗೊಂಡಿದ್ದು.
ರಾಮನಿಂದ ಹುಟ್ಟಿದಆದರ್ಶ ರಾಜ್ಯ ಪರಿಕಲ್ಪನೆ ಗಾಂಧೀಜಿಯಲ್ಲಿ ವ್ಯಾಖ್ಯಾನಗೊಂಡು, ವಿನೋಭಾರವರೆಗೂ ಅನುಸರಣೆಯಾಗುತ್ತದೆ. ಯೂನಿಯನ್ ಗೌರ್ವನ್ಮೆಂಟ್ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸುವ ಹಿನ್ನೆಲೆಯಲ್ಲಿ ದೆಹಲಿಗೆ ಬರಲು ವಿನೋಭಾ ಅವರಿಗೆ ಆಮಂತ್ರಣವನ್ನು ನೀಡಿದಾಗ, ನಿಗದಿತ ದಿನದಂದು ವಾರ್ದಾದಿಂದ ದೆಹಲಿಗೆ ತಮಗೆ ಬರಲಾಗುವುದಿಲ್ಲ ಎಂದು ವಿನೋಭಾ ತಿಳಿಸುತ್ತಾರೆ. ಗಾಂಧೀಜಿಯರಾಮರಾಜ್ಯಪರಿಕಲ್ಪನೆಯ ನೈತಿಕ ಜವಾಬ್ದಾರಿಯನ್ನು ಹೊತ್ತಿದ್ದ ಮತ್ತುಭೂದಾನ್ಚಳುವಳಿಯ ನಾಯಕತ್ವವನ್ನು ವಹಿಸಿಕೊಂಡಿದ್ದ ವಿನೋಭಾ, ವಾರ್ದಾದಿಂದ ದೆಹಲಿಗೆ ವಿಮಾನ ಹತ್ತಿಕೊಂಡು ಹೋಗುವುದರ ಬದಲು ಕಾಲ್ನಡಿಗೆಯಿಂದ ಹೋದರೆ ಜನಸಾಮಾನ್ಯರ ಸಂಕಷ್ಟಗಳನ್ನು ಅರಿಯಬಹುದು, ಜಮೀನುದಾರರ ಮನಪರಿವರ್ತನೆ ಮಾಡಿ, ದುಡಿದು ತಿನ್ನುವ ರೈತರಿಗೆ ಭೂಮಿಗಳನ್ನು ಇಸಿದು ಕೊಡಬಹುದು ಎನ್ನುವ ಲೆಕ್ಕಾಚಾರವಿರುತ್ತದೆ. ಅಂದುಕೊಂಡಂತೆಯೇ ಅದೆಷ್ಟೋ ಜಮೀನುದಾರರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು, ಬಳಕೆದಾರರಿಗೆ ಭೂಮಿಯನ್ನು ನೀಡಿದರಾಮರಾಜ್ಯ ಆದರ್ಶದ ಬೀಜವೊಂದು ಮೊಳಕೆಯೊಡೆಯಲು ಕಾರಣರಾಗುತ್ತಾರೆ. ಹೀಗೆಂದ ಮೇಲೆ ರಾಮರಾಜ್ಯಏನಾಗಿತ್ತು? ಅದರ ಮುಂದಿನ ಆದರ್ಶವೇನಿತ್ತು? ಎನ್ನುವುದನ್ನು ಗಾಂಧೀಜಿಯ ಸಾಲುಗಳಲ್ಲಿಯೇ ಓದಬೇಕು. 1929ರಲ್ಲಿಯಂಗ್ ಇಂಡಿಯಾದಲ್ಲಿ ಗಾಂಧೀಜಿ ಬರೆಯುತ್ತಾರೆBy Ramarajya I do not mean Hindu Raj. I mean by Ramarajya Divine Raj, the Kingdom of God. …Whether Rama of my imagination ever lived or not on this earth, the ancient ideal of Ramarajya is undoubtedly one of true democracy in which the meanest citizen could be sure of swift justice without an elaborate and costly procedure.  …Ramarajya of my dream ensures equal rights alike of prince and pauper.”
ಇಂತಹರಾಮರಾಜ್ಯವೆಂಬ ಆದರ್ಶವನ್ನು ಗಾಂಧೀಜಿ ಗ್ರಹಿಸಿದ್ದು ಎಲ್ಲಿಂದ? ವಾಲ್ಮೀಕಿ ರಾಮಾಯಣದಿಂದಲೋ, ಅಥವಾ ದೇಶದಲ್ಲಿ ಕಾಲ-ಕಾಲಕ್ಕೆ ರಚನೆಗೊಂಡ ರಾಮಾಯಣಗಳಿಂದಲೋ, ರಾಮಾಯಣದ ಪಠ್ಯ ಪರಂಪರೆಯಿಂದಲೋ ಅಥವಾ ಮೌಖಿಕ ಹಿನ್ನೆಲೆಯಿಂದಲೋ? ಗಾಂಧೀಜಿಯವರ ಸಮಾಜೋ-ಸಾಂಸ್ಕøತಿಕ ಹಾಗೂ ರಾಜಕೀಯ ಚಿಂತನೆಗಳನ್ನು ರೂಪಿಸಿದ, ಪ್ರಭಾವಿಸಿದ ರಾಮಾಯಣ ಯಾವುದು?
ಒಂದು ಹೇಳಿಕೆಯಂತೆ ದೇಶದಲ್ಲಿ ಮುನ್ನೂರರಿಂದ ಮೂರು ಸಾವಿರ ರಾಮಾಯಣಗಳಿವೆ. ಆದರೆ ಗಾಂಧೀಜಿ ಸ್ವಯಂ ಸ್ಪಷ್ಟಪಡಿಸಿರುವಂತೆ ತನ್ನೆಲ್ಲ ವಿಚಾರ-ಪರಿಕಲ್ಪನೆಗಳಿಗೆ, ಆದರ್ಶ-ಅನುಸರಣೆಗಳಿಗೆ ತುಳಸಿದಾಸರರಾಮಚರಿತ ಮಾನಸವೇ ಮೂಲ ಪ್ರೇರಣೆಯಾಗಿದೆ“I want, not Banabhatta's Kadambari but Tulsidas's Ramayana. I have my doubts whether Kadambari will be with us forever, but Tulsidas's work will certainly endure. Let us at present get just rotli, ghee and milk from our literature. Later on we shall add almonds, pistachio nuts, etc., and produce something like Kadambari. I believe that the spirit of compassion which I have learnt to value as a Vaishnava and of which I have drunk deep from Tulsidas's Ramayana teaches me to pray for nothing else but this. The cruel oppression of the Antyajas in the name of Hinduism is intolerable to me; it ought to be so to every Hindu. Have you ever read Tulsidas’s Ramayana? If you do not know Hindi fairly well, probably you have not read it. The great saint wrote his Ramayana in my opinion, to glorify Rama’s name. For me it has been a talisman”.
ತುಳಸಿದಾಸರರಾಮಚರಿತ ಮಾನಸಗಾಂಧೀಜಿಯ ಜೀವನದುದ್ದಕ್ಕೂ ರಾಮನಾಮ ಜಪಕ್ಕೆ ಕಾರಣವಾಯಿತು ಎನ್ನುವುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಬರೀ ಜಪವಾಗಿರದೇ ಆತ್ಮಶೋಧದ ಬಗೆಯಾಗಿತ್ತು ಎಂಬುದು. ತಮ್ಮ ಬಾಲ್ಯದ ಏಳರಿಂದ ಹದಿನಾರನೇ ವಯಸ್ಸಿನ ಶೈಕ್ಷಣಿಕ ಅವಧಿಯಲ್ಲಿಯೇರಾಮಚರಿತ ಮಾನಸ ಸೊಗಸು ದಕ್ಕಿತು ಎಂದು ಗಾಂಧೀಜಿ ತಮ್ಮ ಆತ್ಮಕಥೆಯಲ್ಲಿ ಬರೆದುಕೊಳ್ಳುತ್ತಾರೆ. ಮೂಲತಃ ವೈಷ್ಣವ ನಂಬಿಕೆಯಿಂದ ಬಂದಿದ್ದ ಗಾಂಧೀಜಿಗೆ ತಮ್ಮ ಜನಾಂಗದಲ್ಲಿ ಶ್ರೀಮಂತ ಹವೇಲಿಗಳಲ್ಲಿ, ಕಣ್ಣು ಕೋರೈಸುವ ಬೆಳಕಿನ ಮಧ್ಯ ನಡೆಯುತ್ತಿದ್ದ ಭಜನೆಗಳು ಆಕರ್ಷಿಸಲಿಲ್ಲ. ಅಂತರ್ಮುಖಿಯಾಗಿದ್ದ ಗಾಂಧೀಜಿಯನ್ನು ನೋಡಿಕೊಳ್ಳುತ್ತಿದ್ದ ರಂಭಾ ಎಂಬ ಸೇವಕಿ ಸ್ವಪ್ನಗಳು ಬಿದ್ದರೆ ರಾಮನಾಮವನ್ನು ಜಪಿಸಬೇಕು ಎಂದು ತಿಳಿಸಿದಳಷ್ಟೆ. ರಾಮನಾಮವೆಂದರೇನು? ಎಂದು ಗ್ರಹಿಸದ ವಯಸ್ಸಿನಲ್ಲಿದ್ದ ಗಾಂಧೀಜಿ ತಾನು ಅತ್ಯಂತ ಪ್ರೀತಿಸುತ್ತಿದ್ದ ರಂಭಾಳಿಗೆ ಗೌರವವನ್ನು ಸೂಚಿಸುವ ಸಲುವಾಗಿ ರಾಮನಾಮವನ್ನು ಜಪಿಸಲಾರಂಬಿಸುತ್ತಾರೆ. ಬಾಲ್ಯದಲ್ಲಿ ಪ್ರಾರಂಭವಾದ ಭಜನೆ ತಮ್ಮ ಉಸಿರಿನ ಕೊನೆಯ ಶಬ್ದದವರೆಗೂ ಬೆರೆತು ಹೋಗಿಬಿಡುತ್ತದೆ. ಮಧ್ಯದಲ್ಲಿ ಪೋರಬಂದರಿನಲ್ಲಿದ್ದಾಗ ತಮ್ಮ ಸಹೋದರನೊಂದಿಗೆ ಸೇರಿಕೊಂಡು, ಕುಷ್ಠರೋಗಪೀಡಿತ ಗುರುವೊಬ್ಬರಿಂದರಾಮರಕ್ಷಣೆಮಂತ್ರದ ಉಚ್ಛಾರಣಾ ಕ್ರಮವನ್ನು ಕಲಿಯುತ್ತಾರೆ. ಅವರಿಗೆ ಇದನ್ನು ಪಾಠ ಮಾಡುತ್ತಿದ್ದ ಲಾಢಾ ಮಹಾರಾಜ್ ಎಂಬ ವ್ಯಕ್ತಿ ರಾಮರಕ್ಷಣೆಯ ಪಠಣದಿಂದ ತಾನು ಕುಷ್ಠರೋಗದಿಂದ ಮುಕ್ತನಾದೆ ಎಂದು ತಿಳಿಸುತ್ತಾರೆ. ಹಾಗೆ ನೋಡಿದರೆ ಗಾಂಧೀಜಿ ತಮ್ಮ ಜೀವನದಲ್ಲಿ ಅನೇಕ ಸಂಗತಿಗಳನ್ನು ಇಂತಹ ಸಣ್ಣ-ಸಣ್ಣ ಹೇಳಿಕೆ ಮತ್ತು ಚರ್ಚೆಗಳಿಂದಲೇ ಇಪ್ಪತ್ತೊಂದು ಉಪವಾಸದ ಅವಧಿಯಲ್ಲಿ ಪಂ.ಮದನ್ ಮೋಹನ್ ಮಾಳವೀಯ ಮಹಾಭಾರತವನ್ನು ಕಲಿಸಿದ ರೀತಿಗೆ ಬೆರಗಾಗಿ ಗಾಂಧೀಜಿ ಮಹಾಭಾರತವನ್ನೋದಲಾರಂಭಿಸುತ್ತಾರೆ. ಅದು ಅವರ ಪಾಲಿನಮದರ್ ಗೀತಾಆಗಿ ಮಾರ್ಪಡುತ್ತದೆ.
ತುಳಸಿದಾಸರರಾಮಚರಿತ ಮಾನಸವೇ ಗಾಂಧೀಜಿಯ ಅನಾಸಕ್ತಿ ಯೋಗ, ಅಹಿಂಸೆ ಮತ್ತು ಸತ್ಯಾಗ್ರಹಗಳಿಗೆ ಪ್ರೇರಣೆ ನೀಡಿದ್ದು. ತಮ್ಮ ಪಾಲಿಗೆ ರಾಮಾಯಣಏನಾಗಿತ್ತು ಎಂದು ಗಾಂಧೀಜಿ ಹೀಗೆ ಸ್ಪಷ್ಟಪಡಿಸಿದ್ದಾರೆ, The story of Rama and Ravana is to my mind an allegory. In my preface to Anasaktiyoga I have explained what I understand by ‘incarnation’. What Rama used were spiritual weapons, i.e., Satyagraha against the material weapons of the ten-headed Ravana. There is intrinsic support in Tulsidas’s Ramayana for this interpretation. Since our recent penetration into the villages we have readings from Tulsidas’s Ramayana which is one of the gems of our religious literature. It is known to millions of villagers in North India, and its music is such that even listening to its chant will uplift you. Then the last thing is a recitation from Tulsidas’s Ramayana. This is a later introduction; since the village movement has been started, it has been found necessary to take some such thing to the villagers. Tulsidas’s Ramayana is known to millions of Indians north of the Vindhya Range. I regard this Ramayana as one of the richest spiritual treasures that humanity possesses. Its music is lofty and its language equally lofty.”

ಗಾಂಧೀಜಿ, ಕ್ರಿಶ್ಚಿಯನ್ನರ ನ್ಯೂ ಟೆಸ್ಟಾಮೆಂಟ್, ಮುಸ್ಲಿಮರಖುರಾನ್ಮತ್ತು ಜರೋಸ್ಟ್ರಿಯನ್ನರಝೆಂಡ್ ಅವೆಸ್ಟಾಗಳನ್ನು ಗೌರವದ ಒಂದೇ ನೆಲೆಯಲ್ಲಿ ಗ್ರಹಿಸಿದ್ದು. ಯಾವ ವ್ಯಕ್ತಿ, ಧರ್ಮ ಹಾಗೂ ಕೃತಿಯಿಂದ ಬದುಕಿನ ಸಮಗ್ರತೆ ಸಾಧ್ಯವಾಗುತ್ತಿತ್ತೋ ಅದು ಗಾಂಧೀಜಿಗೆ ಆದರ್ಶವಾಗುತ್ತಿತ್ತು. ಹೀಗಾಗಿ ಡಾ. ರವೀಂದ್ರಕುಮಾರ ಹೇಳುವಂತೆGandhi was a great Hindu, a true Indian, and real citizen of the world. He was greatly influenced by the central character of Ramayana and considered him an ideal model for mankind. Above all, Rama’s system of administration was, from his point of view, the true democracy. Rama has set a perfect example of an ideal son, brother, husband or a son-in-law. Gandhi, as I think, had a great regard for all his personal traits and relationships as a man.’ ಗಾಂಧೀಜಿಯ ಆದರ್ಶವಾದ, ವಾಸ್ತವವಾದ ಹಾಗೂ ಮಾನವತಾವಾದಗಳ ಬೇರುಗಳಿರುವುದು ತುಳಸಿದಾಸರ ಶ್ರೀ ರಾಮಚರಿತ ಮಾನಸದಲ್ಲಿಯೆ.

No comments:

Post a Comment