Total Pageviews

Saturday, November 26, 2011

kannada

            ಕನ್ನಡದ(kannada) ಬಗೆಗೆ ಇಷ್ಟು ಗೊತ್ತಿದ್ದರೂ ಸಾಕು
   

ಯಾಕೆ ಕನ್ನಡಿಗರು ಕನ್ನಡವನ್ನು ಕುರಿತು ಅಭಿಮಾನಪಡಬೇಕು?ಇದಕ್ಕೆ ನಾನು ಕಂಡುಕೊಳ್ಳುವ ಉತ್ತರ ಕನ್ನಡದ  ಇತಿಹಾಸದ ಈ ಮುಂದಿನ ಅಂಶಗಳನ್ನು ಆದರಿಸಿದೆ. ಮತ್ತು  ಈ ಕಾರಣಗಳಿಗಾಗಿಯೇ ಅಭಿಮಾನ ಪಡಬೇಕಿದೆ. ಹಾಗೆಯೇ  ಇದನ್ನು ಅರಿತುಕೊಳ್ಳುವದು ಪ್ರತಿಯೊಬ್ಬ ಕನ್ನಡಿಗನ  ಜವಾಬ್ದಾರಿ ಎಂದು ನನಗನ್ನಿಸಿದೆ. 1) ಭಾರತಿಯ ಭಾಷೆಗಳಲ್ಲಿ  ಕನ್ನಡ ಮೂರನೆಯ ಅತಿ ಪ್ರಾಚೀನ ಭಾಷೆ 2) ಕನ್ನಡ ಎರಡು ಸಾವಿರ ವರುಷಗಳಿಗೂ ಪುರಾತನ. 3) ಕನ್ನಡ 99.99 % ತಾರ್ಕಿಕ ಭಾಷೆ 4) ಕನ್ನಡಕ್ಕೆ ಎಂಟು ಜ್ಞಾನಪೀಠಗಳ ಗರಿಮೆ, 5 )ವಿನೋಭಾ ಭಾವೆ ಅವರ ಪ್ರಕಾರ ಕನ್ನಡ ವಿಶ್ವ ಲಿಪಿಗಳ ರಾಣಿ. 6) ಕನ್ನಡಕ್ಕೆ ಸ್ವತಂತ್ರ ಲಿಪಿ 7) ಕನ್ನಡ ಭಾಷಾ ಉಚ್ಛಾರ ಮತ್ತು ಲಿಪಿಗಳ ಮಧ್ಯ ಸಮನ್ವಯ 8) ವಿದೇಶಿಗನೊಬ್ಬನಿಂದ (ಕಿಟಲ್) ಕನ್ನಡ ನಿಘಂಟು 9) ರಗಳೆ ಸಾಹಿತ್ಯ ಕನ್ನಡದಲ್ಲಿ ಮಾತ್ರ 10) ಭಾರತೀಯ ಲೇಖಕರುಗಳಲ್ಲಿಯೇ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಲೇಖಕ ಕುವೆಂಪು, ಕನ್ನಡಿಗ. 11) ಕನ್ನಡ ಛ್ಛಂಧಸ್ಸು ಉಳಿದೆಲ್ಲ ಭಾಷೆಗಳಿಗಿಂತಲೂ ಭಿನ್ನ 12) ಕನ್ನಡ ತಿಳುವಳಿಕೆ ಇಲ್ಲದೆ ಮಾರಾಠಿ ಭಾಷೆಯ ಅಧ್ಯಯನವೇ ಅಪೂರ್ಣ 13) ಕನ್ನಡದ ಹಟ್ಟಿ ಚಿನ್ನದ ಗಣಿಯಿಂಲೇ ಗ್ರೀಕರಿಗೆ ಸ್ಪೂರ್ತಿ 14) ಪ್ರಥಮ ಎನಸೈಕ್ಲೊಪೀಡಿಯಾ ಕನ್ನಡದಲ್ಲಿ, ಆನಂತರ ಶಿವ ತತ್ವ ರತ್ನಾಕರ ಎನ್ನುವ ಹೆಸರಿನಲ್ಲಿ ಸಂಸ್ಕ್ರತಕ್ಕೆ ಭಾಷಾಂತರ. 15) 230 ಬಿ ಸಿ ಯಲ್ಲಿಯೇ ಅಶೋಕನ ಬ್ರಹ್ಮಗಿರಿ ಶಾಸನದಲ್ಲಿ ಕನ್ನಡದ ಕುರುಹು 16) ಮೊದಲ ಮತ್ತು ಎರಡನೆ ಶತಮಾನದಲ್ಲಿ(ಎ ಡಿ)ಯೇ  ಗ್ರೀಕ ನಗೆ ನಾಟಕಗಳಲ್ಲಿ ಕನ್ನಡ ಪದಗಳ ಬಳಕೆ 17) ಕನ್ನಡದ ಹಲ್ಮಿಡಿ ಶಾಸನ 450(ಎ ಡಿ) ವರುಷಗಳಷ್ಟು ಪುರಾತನ 18) ಕನ್ನಡದ ಕವಿರಾಜ ಮಾಗ ಒಂದು ಪ್ರಭುದ್ದ ಕಾವ್ಯ 850(ಎ ಡಿ)ರಲ್ಲಿಯ ರಚನೆ 19) ಕನ್ನಡದ ವಚನ ಸಾಹಿತ್ಯ ಸಂಪೂಣ ದೇಶಿ ಮತ್ತು ವಿಶ್ವ ಸಾಹಿತ್ಯದಲ್ಲಿಯೇ ವಿಶಿಷ್ಟ 20) ಕನ್ನಡದ ದಾಸ ಸಾಹಿತ್ಯದಿಂದ  ಭಾರತದ ಭಕ್ತಿ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ 21) ಕನ್ನಡದ 16ನೇ ಶತಮಾನದ ಕನಕದಾಸರ ‘ರಾಮಧ್ಯಾನ ಚರಿತೆ’ ಒಂದು ವಿನೂತನ ಬರಹ 22) ಕನ್ನಡ ಈಗ ಶಾಸ್ತ್ರಿಯ ಭಾಷೆ 23) ಕನ್ನಡ ಭಾಷೆ ಎಂದರೆ ಹುಚ್ಚು, ಹಸಿವು ಮತ್ತು ಸಂಸ್ಕತಿ.

2 comments:

  1. ನಾವು ಮೂಲತಃ ಕನ್ನಡಿಗರಾದ್ದರಿ೦ದ ಕನ್ನಡವನ್ನು ಕುರಿತು ಅಭಿಮಾನಪಡಬೇಕು. ಜೊತೆಗೆ ನ೦ತರದ ಕಾರಣಗಳು! ಅಮ್ಮ ಯಾವಾಗಲೂ ಅಮ್ಮನೇ! ಅವಳ ಬಗ್ಗೆ ಅಭಿಮಾನ ಪಡಲು ವಿಶೇಷ ಕಾರಣಗಳು ಬೇಕಿಲ್ಲ. ಆದರೂ ನೀವು ಸ೦ಗ್ರಹಿಸಿರುವ ಮಾಹಿತಿ ಉಪಯುಕ್ತವಾಗಿದೆ. ಅಭಿನ೦ದನೆಗಳು ಸರ್, ನನ್ನ ಬ್ಲಾಗ್ ಗೆ ಭೇಟಿ ಕೊಡಿ.

    ReplyDelete
  2. thank you madam.surely i visit o your blog soon

    ReplyDelete