“Why do you study so
much? What secret are you looking for? Life will reveal it to you very soon. I
already know everything, without reading or writing. Not very long ago, maybe
only a few days back, I was a girl going her way through a world of precise and
tangible colors and forms. Everything was mysterious, and something was always
hidden; guessing at nature was a game for me. If only I had know how hard it is
to gain knowledge so suddenly, as though the Earth had been elucidated by a
single ray of light! Now I live on a planet of pain, transparent like ice. It
is as if I’d understood everything all at once, in a matter of seconds. My best
friends and the girls I know have slowly become women. I grew old in a few
seconds, and now everything is blamed and flat. I know that there is nothing
else, because if there were, I would see it.”
- Frida
Khalo
ಫ್ರಿದಾ ಕಾಹ್ಲೊ ಒಬ್ಬ ಶ್ರೇಷ್ಠ ಮೆಕ್ಸಿಕನ್
ಚಿತ್ರಕಲಾವಿದೆ. ಬಣ್ಣ ಮತ್ತು ಬದುಕಿನ ಅನುಭವದಲ್ಲಿ ಇವಳು ನಮ್ಮ ಅಮೃತ್ ಶೇರ್‍ಗಿಲ್ರನ್ನು ನೆನಪಿಸುತ್ತಾಳೆ.
ಈ ಮೇಲೆ ಉದ್ಧರಿಸಿದ ನನ್ನ ಮಾತುಗಳು ಆಕೆ ತನ್ನ ಮೊದಲ ಪ್ರಿಯಕರನಿಗೆ ಬರೆದ ಪತ್ರಗಳಿಂದ ಆಯ್ದುಕೊಂಡವುಗಳು.
ಸಾಂಪ್ರದಾಯಿಕ ಚಿಂತನೆಯಲ್ಲಿ ಅನುಭವ ಮಾಗಲು ವಯಸ್ಸಿನ ಲೆಕ್ಕಾಚಾರ ಬಹಳ ಮುಖ್ಯವಾಗುತ್ತದೆ. ಆದರೆ ಇದನ್ನು
ಸಾರಾಸಗಟಾಗಿ ತಿರಸ್ಕರಿಸುತ್ತಾಳೆ ಫ್ರಿದಾ. ತೊಂಬತ್ತು ವರ್ಷದ ಒಬ್ಬ ಕಲಾವಿದ ಅಥವಾ ಲೇಖಕನಿಗೆ ಸಾಧ್ಯವಾಗದ
ಒಂದು ಅನುಭವ ಹತ್ತೊಂಬತ್ತು ವರ್ಷದ ಒಬ್ಬ ಎಳೆಯನಿಗೆ ಸಾಧ್ಯವಾಗಬಹುದು. ಅನುಭೂತಿಗೆ ಆತ್ಮದ ತೀವ್ರತೆ
ಮುಖ್ಯವಾಗುತ್ತದೆಯೇ ವಿನಹ ದೇಹವನ್ನು ಹೈರಾಣಾಗಿಸುವ ವಯಸ್ಸಲ್ಲ.
ದಿನಾಂಕ 17/11/2013 ರಿಂದ 19/11/2013 ರವರೆಗೆ,
ಹಾಸನಾಂಬಾ ಕಲಾಕ್ಷೇತ್ರದಲ್ಲಿ ನಡೆದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸುತ್ತ, ಕುಮಾರಿ
ಐಶ್ವರ್ಯಳನ್ನು ಮುಂದಿಟ್ಟುಕೊಂಡು ನಾನು ಈ ಮಾತುಗಳನ್ನು ಹೇಳಬೇಕಾಯಿತು. ಈ ದಿನದ ವಿಚಿತ್ರ ನೋಡಿ,
ಇದನ್ನು ನೀವು ವಿಶೇಷ ಎಂದುಕೊಳ್ಳಲೂಬಹುದು. ಇದೆ ಕಲಾಕ್ಷೇತ್ರದ ಇನ್ನೊಂದು ಮಗ್ಗುಲಲ್ಲಿ ‘ಕುರುಕ್ಷೇತ್ರ’ದಂತಹ
ನಾಟಕ ಪ್ರದರ್ಶನಗೊಳ್ಳುತ್ತಿದೆ. ಕುರುಕ್ಷೇತ್ರವೆಂದರೆ ಯುದ್ಧ, ರಕ್ತಪಾತ ಮತ್ತು ಕೋಲಾಹಲ. ಇದು ಕುಂಚದ
ಕುಸುರಿಯಂತಹ ನವಿರಾದ ಕ್ರಿಯೆಗೆ ಬಾಹ್ಯದಲ್ಲಿ ಸಂಪೂರ್ಣ ವಿರುದ್ಧ ಎನ್ನುವಂತೆ ಭಾಸವಾಗುತ್ತದೆ.
ಆದರೆ ಅದು ನಮ್ಮ ಮೇಲಸ್ತರದ ಓದಷ್ಟೆ.
ಇವು ಒಂದು ಇನ್ನೊಂದರಲ್ಲಿ ಎರಕ ಹೊಯ್ದುಕೊಂಡಿವೆ.
ಕುಂಚಕ್ಕು ಕೋಲಾಹಲವನ್ನೆಬ್ಬಿಸುವ ಶಕ್ತಿ ಇದೆ. ಕುರುಕ್ಷೇತ್ರಕ್ಕೂ ಶಾಂತಿಯ ಸಂದೇಶವನ್ನು ನೀಡುವ ಮುಕ್ತ
ಮಾರ್ಗವಿದೆ. ಇವೆರಡರ ಹಿಂದೆಯೂ ಒಂದೇ ಶಕ್ತಿ, ಒಬ್ಬನೇ ವ್ಯಕ್ತಿ ಆತ ಕೃಷ್ಣ. ಕೃಷ್ಣನೆಂದರೆ ಬಣ್ಣ,
ಬೆಳಕಿನ ಕಣ್ಣು, ಬಣ್ಣಗಳ ಗೋಕುಲಾಷ್ಟಮಿ, ಹಸಿ ಮಣ್ಣು ಮತ್ತು ಆಸೆಯಿಂದ ಹಂಬಲಿಸುವ ಮನಸ್ಸು ಎನ್ನುವುದು
ಎಷ್ಟು ಸತ್ಯವೋ ಆತನೆಂದರೆ ಕುರುಕ್ಷೇತ್ರ ಎನ್ನುವುದು ಕೂಡ ಅಷ್ಟೇ ಸತ್ಯ. ಈ ಆಲೋಚನೆಯ ಬೆಳಕಿನಲ್ಲಿ
ಇಂದಿನ ನನ್ನ ಉದ್ಘಾಟನಾ ಭಾಷಣ ಮುಂದುವರೆಯಿತು.
ಜೊತೆಗಿದ್ದವರು ಐಶ್ವರ್ಯಳ ಗುರು ಶ್ರೀ ಬಿ.ಎಸ್.ದೇಸಾಯಿ,
ವಾರ್ತಾ ಇಲಾಖೆಯ ನಿರ್ದೇಶಕರು, ಹಿರಿಯ ಪತ್ರಕರ್ತ ಮಿತ್ರ ಆರ್.ಪಿ.ವೆಂಕಟೇಶಮೂರ್ತಿ ಹಾಗೂ ಕಲಾವಿದರ
ಬಳಗ.
No comments:
Post a Comment