Total Pageviews

Thursday, December 8, 2016

ನಮ್ಮದಲ್ಲದ ದಾರಿಯನ್ನು ಎಷ್ಟು ತುಳಿದರೇನು?


ಶಿಕ್ಷಣ ಮತ್ತು ನ್ಯಾಯಗಳು, ಅಧಿಕಾರ ಮತ್ತು ಐಶ್ವರ್ಯಗಳಿಗಿಂತ ಪ್ರಮುಖವಾದವುಗಳು ಎಂದು ಪ್ರಪಂಚದ ಎಲ್ಲ ಮಾನವ ಸಮುದಾಯಗಳು ಒಪ್ಪಿಕೊಂಡಿವೆ.
                                                                               -      ಐನಸ್ಟಿನ್
--------------------------------------------------------------------------------------

ಪ್ರಪಂಚ ಕಂಡ ಅದ್ಭುತ ಚಿಂತಕರಲ್ಲಿ ರವೀಂದ್ರನಾಥ ಟ್ಯಾಗೋರರು ಒಬ್ಬರು ಎನ್ನುವ ನನ್ನ ವಾಕ್ಯ ತುಂಬ ಕ್ಲೀಷೆಯಾಯಿತು. ಪರವಾಗಿಲ್ಲ, ಭಾಷಿಕ ಚೌಕಟ್ಟಿನಲ್ಲಿ ಅವರ ಅದ್ಭುತ ವ್ಯಕ್ತಿತ್ವಕ್ಕೆ ಕನ್ನಡಿಯಾಗುವ ಮತ್ತೊಂದು ಮಾರ್ಗ ಇಲ್ಲ ಎನ್ನುವ ಕಾರಣಕ್ಕಾಗಿ ಎಲ್ಲರೂ ಹೇಳಬಹುದಾದುದನ್ನೇ ನುಡಿದು ನೆಮ್ಮದಿ ಪಟ್ಟಿದ್ದೇನೆ. ನಮ್ಮ ಗುರುದೇವ ಟ್ಯಾಗೋರ 1924ರಲ್ಲಿ ಚೈನಾದ ಪ್ರವಾಸದಲ್ಲಿದ್ದಾಗ ನೀಡಿದ ಒಂದು ಮಹತ್ವದ ಭಾಷಣದ ಕೆಲವು ಸಾಲುಗಳನ್ನು ನಿಮ್ಮೊಂದಿಗಿನ ಚರ್ಚೆಗಾಗಿ ಇಲ್ಲಿ ಎತ್ತಿಕೊಂಡಿದ್ದೇನೆ. ಅಂದಹಾಗೆ, ಭಾಷಣವು 1925ರಲ್ಲಿ ಚೈನಾದಲ್ಲಿ, ಮುಂದೆ 1949ರಲ್ಲಿವಿಶ್ವಭಾರತಿ ಕ್ವಾರ್ಟರ್ಲಿಯಲ್ಲಿ ಹಾಗೂ 1964ರಲ್ಲಿ ಮತ್ತೆಬೌಂಡಲೆಸ್ ಸ್ಕಾಯ್ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಆಕ್ಸಫರ್ಡ್ ಪ್ರೆಸ್ನಿಂದ ಹೀಗೆ ಹಲವಾರು ಬಾರಿ ಮುದ್ರಣವಾಗಿದೆ. ಭಾಷಣದ ಓದೇ ಒಂದು ಅದ್ಭುತ ಅನುಭೂತಿ ಎಂದು ನನ್ನ ನಂಬಿಕೆ.
ನಾಗರಿಕತೆ(Civilization) ಎನ್ನುವುದು ಮೂಲತಃ ಯೂರೋಪಿಯನ್ ಪದವಾಗಿದ್ದು ಅದರ ಸರಿಯಾದ ಅರ್ಥ ಏನೆಂದು ತಿಳಿದುಕೊಳ್ಳಲು ನಾವಿನ್ನೂ ಶ್ರಮಿಸುತ್ತಿದ್ದೇವೆ. ಕುದುರೆಯ ಹಲ್ಲುಗಳನ್ನು ಎಣಿಸದೆ ಯಾರೋ ಅತ್ಯಂತ ಗೌರವದಿಂದ ಕಾಣಿಕೆಯಾಗಿ ಕೊಟ್ಟರು ಎಂಬ ಒಂದೇ ಒಂದು ಕಾರಣಕ್ಕೆ ಕುದುರೆಯನ್ನು ನಾವು ಸ್ವೀಕರಿಸಿದಂತೆ, ಪೂರ್ಣ ವಿಶ್ವಾಸದೊಂದಿಗೆ ನಾವುನಾಗರಿಕತೆಎಂಬ ಪದವನ್ನು ಸ್ವೀಕರಿಸಿದ್ದೇವೆ. ಬಹಳ ತಡವಾಗಿ ಇತ್ತೀಚಿಗೆ ನಾವು ಭಾರತೀಯರು ಅದರ ನಿಜವಾದ ಅರ್ಥದಲ್ಲಿ ಅದನ್ನು ಅರ್ಥೈಸಿಕೊಳ್ಳಲು ಯತ್ನಿಸಿದ್ದೇವೆ ಹಾಗೂ ಯುರೋಪಿಯನ್ನರು ಇದನ್ನು ಹೀಗೆ ಅಂದುಕೊಂಡಿರಬಹುದೆ? ಎಂದು ಕುತೂಹಲ ಪಟ್ಟಿದ್ದೇವೆ. ಈಗ ನಮ್ಮಷ್ಟಕ್ಕೇ ನಾವು ಪ್ರಶ್ನಿಸಿಕೊಳ್ಳೋಣ. ನಮ್ಮ ಭಾಷೆಗಳಲ್ಲಿ ಬದುಕಿನ ಸಮಗ್ರ ದರ್ಶನದ ಅರ್ಥ ಹೊರಡಿಸುವ ಕೆಲವು ಪದಗಳಂತೆಯೇನಾಗರಿಕತೆ(Civilization)ಎನ್ನುವ ಪದವೂ ವಿಸ್ತøತವಾಗಿದೆಯೆ?
ಯಾವುದೋ ಆಕಸ್ಮಿಕ ರೂಪ ಆಕೃತಿಗಳನ್ನು ಪಡೆಯುತ್ತ, ಅದ್ಭುತ ಎನ್ನಿಸಿಕೊಳ್ಳುತ್ತ, ಸಾಮಾಜಿಕ ಘಟನೆಗಳು ಬೆಳೆದ ಮಾತ್ರಕ್ಕೆ, ಏನೋ ಸಾಧಿಸಿದ ಮಾತ್ರಕ್ಕೆ, ನಾಗರಿಕತೆಯಾಗಲಾರದು. ‘ನಾಗರಿಕತೆಎನ್ನುವುದು ನಮಗೆ ಅನವರತವೂ ನೈತಿಕ ಶಕ್ತಿಯಾಗಿ ಸಮಾಜದಲ್ಲಿ ಪರಿಪೂರ್ಣನಾಗಿ ಬೆಳೆಯುವ ರೀತಿಯನ್ನು ಕಲಿಸುವ ಮಾರ್ಗದರ್ಶಿಯಾಗಬೇಕು. ಭೌತಿಕ ಸಾಂಕೇತಿಕತೆ ಇರುವ ಅಥವಾ ನಿರ್ಜೀವಗಳಿಗೆ ಅನ್ವಯಿಸಿದಾಗಪರಿಪೂರ್ಣಎಂಬ ಪದದ ಅರ್ಥ ಅತ್ಯಂತ ಸರಳ ಹಾಗೂ ನಿರ್ದಿಷ್ಟವಾಗಿದೆ. ಆದರೆ ನಿರಂತರ ತನ್ನ ಮಿತಿಗಳನ್ನು ಮೀರಿ ಬೆಳೆಯುವ ದಾರಿಯಲ್ಲಿರುವ ಹಾಗೂ ಅತ್ಯಂತ ಸಂಕೀರ್ಣವೂ ಆಗಿರುವ ಮನುಷ್ಯನಿಗೆ ಪದ ಅನ್ವಯಿಸಿದಾಗಪರಿಪೂರ್ಣಎನ್ನುವುದನ್ನು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ನಿರೀಕ್ಷಿಸಲಾಗದು. ಪದದ ವ್ಯಾಖ್ಯಾನವನ್ನು ಅನೇಕ ಜನಾಂಗಗಳು ಅನೇಕ ರೀತಿಯಲ್ಲಿ ಗ್ರಹಿಸಿವೆ.
ನಾಗರಿಕತೆ(Civilization) ಎಂಬ ಪದಕ್ಕೆ ನಮ್ಮ ಭಾಷೆಯಲ್ಲಿ ಅತ್ಯಂತ ಹತ್ತಿರವಾದ ಸಮಾನಾರ್ಥ ಪದಧರ್ಮ. ಒಂದರ್ಥದಲ್ಲಿ ಆಧುನಿಕ ಕೆಲವು ಪದಗಳನ್ನು ಬಿಟ್ಟರೆ, ಜೀವ ವಿರೋಧಿಯಾದ ಅಥವಾ ಬದುಕಿನ ಪರಿಧಿಯಿಂದ ಹೊರತಾದ ಒಂದು ಪದವೂ ನಮ್ಮ ಶಬ್ಧಕೋಶಗಳಲಿಲ್ಲ. ‘ಧರ್ಮಪದದ ಅರ್ಥ - ಯಾವುದು ನಮ್ಮೆಲ್ಲರನ್ನು ಅವಿಚ್ಛಿನವಾಗಿರಿಸುವುದರೊಂದಿಗೆ ಸುಖಿ ಸಾಮ್ರಾಜ್ಯದೆಡೆಗೆ ದಾರಿದೀಪದಂತೆ ನಡೆಯಿಸಿಕೊಂಡು ಹೋಗುವುದೊ ಅದು ಎಂದು ಅರ್ಥ.
ಆದರೆ ದುರಂತವೆಂದರೆ ನಮ್ಮದನ್ನು ಬದಿಗಿರಿಸಿ ನಾವು ಕಳೆದ ಒಂದು ಶತಮಾನದಿಂದ ಪಶ್ಚಿಮದಸಮೃದ್ಧಿಎಂಬ ರಥದ ಸೆಳೆತಕ್ಕೊಳಗಾಗಿದ್ದೇವೆ. ಅದರ ಧೂಳಿಗೆ ಬೆರಗಾಗಿದ್ದೇವೆ. ಅದರ ಅಬ್ಬರದ ಶಬ್ಧಕ್ಕೆ ಮರುಳಾಗಿದ್ದೇವೆ. ನಮ್ಮ ವಿವಶತೆಗೆ ಪಾಮರರಾಗಿದ್ದೇವೆ. ಅದರ ರಭಸದಿಂದ ಪುಳಕಿತರಾಗಿದ್ದೇವೆ. ಎರವಲು ರಥದೊಳಗಿನ ಪಯಣವನ್ನು ನಾವುಪ್ರಗತಿಎಂದು ಗುರ್ತಿಸಿದ್ದೇವೆ. ಪ್ರಗತಿಯನ್ನು ನಾವು ಭಾರತೀಯರುನಾಗರಿಕತೆ(Civilization) ಎಂದಿದ್ದೇವೆ. ಈಗೊಂದು ವೇಳೆ ಪ್ರಗತಿ ಎಂದರೇನು? ಯಾರ ಪ್ರಗತಿ? ಎಂದು ಪ್ರಶ್ನಿಸಿಕೊಂಡರೆ ನಮ್ಮ ಪ್ರಗತಿಯ ಬುಡವೇ ಅಲ್ಲಾಡಿ ಬಿಡುತ್ತದೆ. ಬಹಳ ತಡವಾಗಿ ನಮಗೊಂದು ತಿಳುವಳಿಕೆ ಬಂದಿದೆ, ಅದರ ಪ್ರಕಾರ ನಮಗೆ ಪ್ರಗತಿ ಎಂದರೆ ರಥದ ವೈಜ್ಞಾನಿಕ ಪರಿಪೂರ್ಣತೆ ಅಷ್ಟೇ ಅಲ್ಲ ಬದಲಾಗಿ ಅದು ಸಾಗುವ ದಾರಿಯಲ್ಲಿಯ ತಗ್ಗು ದಿಣ್ಣೆಗಳನ್ನೂ ಗಮನಿಸುವುದಾಗಿದೆ. ಪ್ರಗತಿ ಬರೀ ರಥಕ್ಕಲ್ಲ, ದಾರಿಗೂ ಅನ್ವಯಿಸುತ್ತದೆ.”
ಹಾಗಾದರೆ, ನಾಗರೀಕತೆಯ ನಮ್ಮ ಆಲೋಚನೆಗಳೇ ಇಡಿಯಾಗಿ ಎಡವಟ್ಟಾಗಿವೆ ಅಂದಹಾಗಾಯಿತು. ನದಿಗಳು ನಾಗರೀಕತೆಗೆ ತೊಟ್ಟಿಲು ಎನ್ನುವುದಾದರೆ, ಶಿಕ್ಷಣ ತೊಟ್ಟಿಲು ತೂಗಿದ ಕೈ ಎನ್ನಬಹುದೇನೊ. ಅಂದಾಗ ರೀತಿಯಲ್ಲಿ ನಾಗರೀಕತೆಗೆ ಪ್ರೇರಣೆಯಾದ/ ತಳಹದಿಯಾದ ತರಬೇತಿ, ಶಿಕ್ಷಣ ಹಾಗೂ ಅವುಗಳಿಗೆ ಆಶ್ರಯ ತಾಣಗಳಾದ ನೆಲೆಗಳೆಲ್ಲವೂ ಈಗ ನಮ್ಮ ಚರ್ಚೆಯ ಸಂಗತಿಗಳಾಗಬೇಕು ಅಲ್ಲವೆ? ಇಂಥ ತಾಣಗಳಲ್ಲಿ ಮಹತ್ವದವುಗಳು ಗುರುಕುಲ, ಶಾಲೆ, ಕಾಲೇಜು ಹಾಗೂ ಶಿಕ್ಷಣವನ್ನು ಧರ್ಮವಾಗಿಸಿಕೊಂಡ ಮಠ, ಮದರಸ ಅಥವಾ ಮಿಶಿನರೀಸ್. ಪದಗಳಷ್ಟೇ ಭಿನ್ನ ಇಲ್ಲಿ ನಡೆಯುವ ಕ್ರಿಯೆ ಒಂದೆ. ಆಚರಿಸಲಾಗುವ, ಆಚರಿಸಲ್ಪಡಬೇಕಾದ ಧರ್ಮ ಒಂದೆ. ಹೀಗಾಗಿ ಇವುಗಳನ್ನು ಧರ್ಮ ಸಮೇತ ಸರಿಗೊಳಿಸಿದರೆ ಭಾರತದ ನಾಗರೀಕತೆ ವಿಶ್ವಕ್ಕೆ ಮಾದರಿಯಾಗಬಹುದಲ್ಲವೆ?
ಭಾರತೀಯ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಒಂದೊಮ್ಮೆ ವಾತಾವರಣ ಹೇಗಿತ್ತು ಎನ್ನುವುದಕ್ಕೆ ಇಲ್ಲೊಂದು ನಿದರ್ಶನವಿದೆ. ‘ನಿಸರ್ಗ ಮತ್ತು ಮಾನವ ಬದುಕುಉಪನ್ಯಾಸವನ್ನು 1966 ಜುಲೈ 30ರಂದು ಸಿ.ವಿ.ರಾಮನ್ ಅವರು ಮದ್ರಾಸ್ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಘಟಿಕೋತ್ಸವದಲ್ಲಿ  ನೀಡಿದ್ದಾರೆ. ಇದು ಕೂಡ ನಮ್ಮ ನಾಗರೀಕತೆ ಉರ್ಫ ಶಿಕ್ಷಣ ಕುರಿತಾದುದೆ ಆಗಿದೆ. ಅವರು ಹೇಳುತ್ತಾರೆ – “ಮುಕ್ತ ನಿಸರ್ಗ ಹಾಗೂ ಗಾಳಿಯನ್ನು ಅನುಭವಿಸುತ್ತಿದ್ದೀರಿ. ಕನಿಷ್ಠ ನೀವು ಕ್ಷಯರೋಗದಿಂದಾದರೂ ಸಾಯಲಾರಿರಿ ಎಂಬ ಭರವಸೆ ನನಗಿದೆ. ಅನೇಕ ಪದವೀಧರರು ನನ್ನ ಹಸ್ತಲಾಘವ ಮಾಡಿದ್ದಾರೆ. ಆದರೆ ಎಲ್ಲ ಪ್ರಶಸ್ತಿ ವಿಜೇತರ ಹಸ್ತಲಾಘವ ಮಾಡಿ ನಾನು ಧನ್ಯನಾಗಿದ್ದೇನೆ ಎಂದು ಭಾವಿಸುತ್ತೇನೆ. ಇದೇ ರೀತಿ ಇನ್ನೊಂದು ಘಂಟೆ ನಾನು ಮಾತನಾಡುತ್ತ ಹೋದರೆ ನನ್ನ ಕೈಗಳಿಂದ ಏನನ್ನೂ ಎತ್ತಿಕೊಳ್ಳಲಾರದಷ್ಟು ನಾನು ಅಶಕ್ತನಾಗಿ ಬಿಡುತ್ತೇನೆ. ಯಾಕೆಂದರೆ ನಿಮ್ಮವುಗಳೆಲ್ಲ ಸಶಕ್ತವಾದ ಯುವಕರ ಕೈಗಳು. ನಿಮ್ಮನ್ನು ನೋಡಿ ಖುಷಿಯಾಗುತ್ತದೆ. ಅವುಗಳು ಹೇಗಿರಬೇಕೋ ಹಾಗೆಯೇ ಇವೆ. ನೀವು ಅಭಿಯಂತರರು ಹತೋಡಿಯನ್ನು ಎತ್ತದಷ್ಟು ಹೇಡಿಗಳಾಗಿ ಬಿಟ್ಟರೆ ಏನು ಉಪಯೋಗ ಹೇಳಿ? ಶಾರೀರಿಕ ಕ್ಷಮತೆ, ಶಕ್ತಿ, ಎಲ್ಲ ಅಧ್ಯಯನಗಳ ತಳಹದಿಯಾಗಿದೆ.” ದುರಂತದ ಸಂಗತಿ ಎಂದರೆ ಇಂದು ಆರ್ಥಿಕ ಅಭಿವೃದ್ಧಿಯತ್ತ ಗಮನಿಸುತ್ತ ಮಾನಸಿಕ ಹಾಗೂ ಶಾರೀರಿಕ ಕ್ಷಮತೆಯ ಪ್ರಶ್ನಡಗಳನ್ನೇ ಮರೆತಿದೆ.
ಮೇಲಿನ ಎರಡೂ ವಿಚಾರಗಳಿಗೆ ಪೂರಕವಾಗಿ ಗಾಂಧಿ ಇನ್ನೊಂದೆಡೆ ಉತ್ತರಿಸುತ್ತಾರೆ. ಮೇಲಿನವುಗಳು ಬರೀ ಆಶಯಗಳಷ್ಟೆ. ಟ್ಯಾಗೋರ ಯಾವುದು ನಾಗರಿಕತೆ ಅಲ್ಲ ಎನ್ನುವುದನ್ನು ಹೇಳುತ್ತಾರೆ. ಸಿ.ವಿ.ಆರ್ ನಾಗರೀಕತೆಯಿಂದ ಪ್ರೇರಿತಗೊಂಡ ಶಿಕ್ಷಣಕ್ಕೆ ಯಾವ ಜವಾಬ್ದಾರಿಗಳು ಬೇಕು, ಶಿಕ್ಚಣದ ನೊಗ ಹೊರುವ ಯುವಕ-ಯುವತಿಯರು ಹೇಗಿರಬೇಕು ಎನ್ನುವುದನ್ನು ಹೇಳುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಗಾಂಧಿ ಕೆಳಗಿನ ಸಾಲುಗಳಲ್ಲಿ ಒಟ್ಟು ಭಾರತೀಯ ಶಿಕ್ಷಣ ವ್ಯವಸ್ಥೆಗೇ ಕನ್ನಡಿಯನ್ನು ಹಿಡಿಯುತ್ತಾರೆ. ಇದು ಕಟುವಾಸ್ತವ. ಮೌಲಿಕವಾಗಿ ಕುಸಿದು ಭೌತಿಕವಾಗಿ ವಿಸಾರವಾಗುತ್ತಿರುವ ಶಿಕ್ಷಣವನ್ನು ಕುರಿತ ಗಾಂಧೀಜಿಯವರ ಪ್ರತಿಕ್ರಿಯೆ - “ಭಾರತದ ಪ್ರತಿ ಪ್ರಾಂತಗಳಲ್ಲೂ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದು ಇಂದು ಬರೀ ವ್ಯಸನವಾಗಿದೆ. ಸುಮ್ಮನೆ ಪ್ರತಿಷ್ಠೆಗಾಗಿ ಹುಟ್ಟುಹಾಕುವ ಇಂಥ ವಿಶ್ವವಿದ್ಯಾಲಯಗಳಿಗೆ ಒಂದು ಸರಿಯಾದ ಹಿನ್ನೆಲೆ, ದೃಷ್ಟಿಕೋನ ಕಾಣುತ್ತಿಲ್ಲ. ಅವುಗಳ ಪೆÇ್ರೀತ್ಸಾಹಕ್ಕೆ ಬೇಕಾದ ಯೋಗ್ಯ ಶಾಲೆ-ಕಾಲೇಜುಗಳ ಅವಶ್ಯಕತೆಯ ಚಿಂತೆಯೂ ಯಾರಿಗೂ ಇದ್ದಂತಿಲ್ಲ. ತಳಹದಿ ಸರಿಯಾಗಿದ್ದರೆ ಮಾತ್ರ ವಿಶ್ವವಿದ್ಯಾಲಯ ಎಂಬ ನಮ್ಮ ಅಭಿಮಾನದ ಸೌಧ ಒಂದು ಮಹತ್ವದ ಸಾಧನೆಯಾಗಲು ಸಾಧ್ಯವಿದೆ.
ರಾಜಕೀಯವಾಗಿ ಸ್ವತಂತ್ರರಾದ ನಾವು ಪಾಶ್ಚಾತ್ಯ ಚಿಂತನೆಗಳಿಂದ ಇಂದಿಗೂ ಸ್ವತಂತ್ರರಾಗಿಲ್ಲ. ಅವರನ್ನು ಬರೀ ಅನುಕರಿಸಿದ ಮಾತ್ರಕ್ಕೆ ನಮ್ಮ ಸಮಸ್ಯೆಗಳು ಇಲ್ಲವಾಗುವುದಿಲ್ಲ. ಪಶ್ಚಿಮದಿಂದ ಒಳ್ಳೆಯದೇನೂ ಬರಲಿಲ್ಲ ಎಂದು ನನ್ನ ವಾದವಲ್ಲ. ಆದರೆ ಪಶ್ಚಿಮದ ಆಲೋಚನೆಗಳಿಗೇ ಸಂಪೂರ್ಣ ನಮ್ಮನ್ನು ನಾವು ಕೊಟ್ಟುಬಿಡುವುದನ್ನು ತಪ್ಪಿಸುವುದು ನಮ್ಮ ಕರ್ತವ್ಯವಲ್ಲವೇ? ವಿಶ್ವವಿದ್ಯಾಲಯಗಳಿಗೆ ಯಾವ ಕಾಲಕ್ಕೂ ದೊಡ್ಡ-ದೊಡ್ಡ ಕಟ್ಟಡಗಳ ಅವಶ್ಯಕತೆಯಿಲ್ಲ. ಬೆಳ್ಳಿ-ಬಂಗಾರದಿಂದ ಮಾಡಿದ ಲಾಂಛನಗಳು ಅಲ್ಲಿ ಬೇಕಿಲ್ಲ. ಅದಕ್ಕೆ ಬೇಕಿರುವುದು ಸಾರ್ವಜನಿಕ ಸಹಮತಿ, ಸಮ್ಮತಿ ಹಾಗೂ ಶಿಕ್ಷಣದ ರಥವನ್ನು ಎಳೆಯಬಲ್ಲ ಆರೋಗ್ಯವಂತ ಸಮರ್ಥ ಶಿಕ್ಷಕರು. ಇಲ್ಲಿರುವವರಿಗೆ ತಲೆ ಬೇಕು, ಕನಸುಗಳು ಬೇಕು. ವಿಶ್ವವಿದ್ಯಾಲಯಗಳಿಗೆ ಯಾವ ಕಾಲಕ್ಕೂ ಸರ್ಕಾರದ ಧನಸಹಾಯವಿರಕೂಡದು, ಜನತೆ ತಮಗೆ ವಿಶ್ವವಿದ್ಯಾಲಯಗಳು ಬೇಕು ಎನ್ನುವುದಾದರೆ ಅವುಗಳನ್ನು ತಮ್ಮ ಸ್ವಸಂಗ್ರಹದಿಂದ ಪೆÇೀಷಿಸಿ ಬೆಳೆಸಬೇಕು. ಹೀಗಾದಾಗ ಮಾತ್ರ ಒಂದು ವಿಶ್ವವಿದ್ಯಾಲಯ ಯಾವ ಕಾರಣಕ್ಕೆ ಹುಟ್ಟಿತು ಎನ್ನುವ ಅರಿವಿನ ದೀವಿಗೆ ಅಲ್ಲಿ ಸದಾ ಉರಿಯುತ್ತದೆ. ವಿಶ್ವವಿದ್ಯಾಲಯ ತಳದಿಂದ ತುದಿಯವರೆಗೂ ಗಟ್ಟಿಯಾಗಿರುತ್ತದೆ. ಇಂಥವುಗಳಿಂದ ಬರುವ ವಿದ್ಯಾರ್ಥಿಗಳು ಸಮಾಜವನ್ನು ಸಶಕ್ತಗೊಳಿಸುತ್ತಾರೆ. ಒಳ್ಳೆಯ ಹೊಲದಲ್ಲಿ ಬಿತ್ತಿದ ಫಸಲು ಒಳ್ಳೆಯ ರೀತಿಯಿಂದಲೇ ಬರುವಂತೆ ಜನರು ಒಳ್ಳೆಯ ಮನಸ್ಸಿನಿಂದ ತೊಡಗಿಸಿದ ಹಣ ನೂರ್ಮಡಿಯಾಗಿ ಪವಿತ್ರ ಫಲ ನೀಡುತ್ತದೆ. ಆದರೆ ಪಾಶ್ಚಾತ್ಯ ಅನುಕರಣೆಯಲ್ಲಿ ಸರ್ಕಾರದ ಧನಸಹಾಯದಿಂದ ಹುಟ್ಟುವ ವಿಶ್ವವಿದ್ಯಾಲಯಗಳು ಸಂಪೂರ್ಣ ವಿರುದ್ಧಮುಖಿಯಾಗಿರುತ್ತವೆ. ಭಾರತ ತನಗೆ ಸಿಕ್ಕ ಸ್ವಾತಂತ್ರ್ಯವನ್ನು ಸರಿಯಾಗಿ, ಸಮರ್ಥವಾಗಿ ಜೀರ್ಣಿಸಿಕೊಳ್ಳುವವರೆಗೂ ಹೊಸ ವಿಶ್ವವಿದ್ಯಾಲಯಗಳ ಅವಶ್ಯಕತೆಯಿಲ್ಲ.”
ಕನಿಷ್ಠ ಕಳೆದ ಒಂದು ಶತಮಾನದಿಂದ ನಮ್ಮ ದೇಶದ ಶಿಕ್ಷಣ ಒಂದೇ ನಿಶ್ಚಿತ ಉದ್ದೇಶಕ್ಕಾಗಿ ರೂಪಿತವಾದಂತಿದೆ. ಬಂಡವಾಳಶಾಹಿಯನ್ನು ಪ್ರೋತ್ಸಾಹಿಸುವ ಅದು ಬರೀ ವಿದೇಶಿಗರಿಂದ ಪ್ರೋತ್ಸಾಹಗೊಂಡಿದೆ. ಭಾರತೀಯ ಹಳ್ಳಿಗಳು ಕಡೆಗಣಿಸಲ್ಪಟ್ಟು ನಗರಗಳ ಆರಾಧನೆ ನಡೆದಿದೆ. ಸಾಧ್ಯವಾದಷ್ಟು ನಗರದ ಅವಕಾಶಗಳಿಂದ ದೂರವಿರಸಲ್ಪಟ್ಟ ಇವುಗಳು ಕೊಳಗೇರಿಗಳಂತಾಗಿವೆ. ಹೀಗಾಗಿ ರೀತಿ ಉದ್ವಸ್ಥಗೊಂಡ ಸಮಾಜದ ಪರಿಚಾರಿಕೆಯಂತೆ ಇಲ್ಲಿಂದ ಬರುವ ನಮ್ಮ ಶಿಕ್ಷಣ ಕೆಲಸ ಮಾಡುತ್ತಿದೆ.
ನಮ್ಮ ಭಾರತದ ಸಮಾಜದ ಹೊಸ ಸಾಧ್ಯತೆ ಹಳ್ಳಿಗಳಿಂದ ಮಾತ್ರ. ಅಲ್ಲಿಯ ಶಿಕ್ಷಣದ ಪರಿಶುದ್ಧಿಯಿಂದ ಮಾತ್ರ. ಇಂಚು ಇಂಚಾಗಿ ಪ್ರಜಾಪ್ರಭುತ್ವದ ನಮ್ಮ ಮೌಲ್ಯಗಳು ನನ್ನ ಶಿಕ್ಷಣದಿಂದಲೇ ಪರೀಕ್ಷೆಗೊಳಪಡಬೇಕಾಗಿವೆ. ಪ್ರಜಾಸತಾತ್ಮಕ ವಿವೇಕ ರಾಷ್ಟ್ರದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಜೀವನಗಳನ್ನು ಹಾಸುಹೋಗಬೇಕಾಗಿದೆ. ಹಳ್ಳಿಗರೊಂದಿಗೆ ವರ್ತಿಸಬೇಕಾದಾಗ ಪ್ರತಿಯೊಬ್ಬ ಭಾರತೀಯನೂ ಸಹನಶೀಲನಾಗಬೇಕಾಗಿದೆ, ಅಹಿಂಸಾವಾದಿಗಳಾಗಿರಬೇಕಿದೆ. ಇಂಥ ಶಿಕ್ಷಣವನ್ನು ಅಲ್ಲಲ್ಲಿಯ ಶಾಲೆ, ಕಾಲೇಜುಗಳಿಂದಲೇ ನಮ್ಮ ಯುವ ಜನಾಂಗ ಪಡೆಯಬೇಕಿದೆ. ಹಳ್ಳಿಗರ ಮನಸ್ಸನ್ನು ಗೆಲ್ಲುವ ಮುಂಚೆ ಅನೇಕ ಕಷ್ಟಗಳಿಗೆ ಎದೆಯೊಡ್ಡಬೇಕಾಗಿದೆ. ಇದು ಸಾಧ್ಯವಾದರೆ ಮಾತ್ರ ದೇಶಕ್ಕೊಂದು ಭವಿಷ್ಯ ಸಾಧ್ಯ ಎನ್ನಬಹುದು ಎನ್ನುವುದು ಗಾಂಧೀಜಿಯ ದೊಡ್ಡ ನಂಬಿಕೆಯಾಗಿತ್ತು. ಆದರೆ ದರ್ಶನಹೀನ ನವನಾಗರೀಕತೆಯ ಧಾವಂತದಲ್ಲಿದ್ದ ನಾವು ಮೌಲಿಕವಾಗಿ ಕುಸಿದೆವು. ಅಂತೆಯೇ ಗಾಂಧೀ ಹೇಳಿದರು – “ಇಂದು ನೀವು ನನಗಿಂತಲೂ ಸಂಕಷ್ಟದಲ್ಲಿದ್ದೀರಿ. ಶಾಲಾ ಕಾಲೇಜುಗಳ ವಾತಾವರಣ ಪರಿಶುದ್ಧವಾಗಿ ಉಳಿದಿಲ್ಲ. ಮೊದಲು ಅವುಗಳ ಶುದ್ಧೀಕರಣವಾಗಬೇಕಿದೆ. ಎಷ್ಟೆಲ್ಲ ಹಣ ಮತ್ತು ಸಮಯವನ್ನು ವ್ಯಯಮಾಡಿ ಓದಿಯೂ ನೀವೀಗ ನೆಮ್ಮದಿಯಾಗಿಲ್ಲ. ಯಾಕೆಂದರೆ ನೀವು ಸ್ವಾವಲಂಬಿಗಳಾಗಿಲ್ಲ. ನಾನು ಚಿಂತಾಜನಕ ಸ್ಥಿತಿ ಬದಲಾಗಬೇಕೆಂದು ಆಶಿಸುತ್ತೇನೆ. ನಿಟ್ಟಿನಲ್ಲಿ ನಿಮಗೆ ಸಹಾಯ ಮಾಡಲು ಇರುವ ಕುಟುಂಬದ ಕಸಬುಗಳನ್ನು ನೀವು ಎಲ್ಲಿಯವರೆಗೆ ಗೌರವಿಸುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಶಿಕ್ಷಣ ಹೀಗೆಯೇ ಕುಂಟುತ್ತಲೇ ಸಾಗಬೇಕಾಗುತ್ತದೆ. ಭಾರತಕ್ಕೆ ಸ್ವರಾಜ್ಯ ಬಂದಿದೆ. ಅದು ನಿಮ್ಮ ಕೈಗಳಿಗೆ ಹರಿಯಬೇಕಿದೆ. ಮೇಲು-ಕೀಳು, ಹಿಂದೂ-ಮುಸ್ಲಿಂ ಎನ್ನುವ ಮಿತಿಗಳಿಂದ ಹೊರಬರುವವರೆಗೂ ಸ್ವರಾಜ್ಯಕ್ಕೆ ಯಾವ ಅರ್ಥವೂ ಇಲ್ಲ. ಧರ್ಮ ಬೇರೆ. ನಾವು ಭಾರತೀಯರಾಗಿರಲು ಧರ್ಮವೇನು ಅಡ್ಡಿಯಾಗಿರಬೇಕಿಲ್ಲವಲ್ಲ.”
ಶಿಕ್ಷಣವೆಂದರೆ ಹೃದಯದ ವಿಕಸನ, ಇದು ನಮ್ಮಲ್ಲಿರುವ ಅನೇಕ ರೀತಿಯ ನ್ಯೂನತೆಗಳಿಂದ ನಮ್ಮನ್ನು ಮುಕ್ತಗೊಳಿಸುವ ಸೋಪಾನ ಎಂದು ನಮ್ಮ ದೇಶದ ಗುರು ಪರಂಪರೆ ಹೇಳುತ್ತ ಬಂದಿದೆ. ನಿಜವಾಗಿಯೂ ಮಾನಸಿಕ, ಭೌತಿಕ ಮತ್ತು ರಾಜಕೀಯ ಗುಲಾಮಗಿರಿಗಳಿಂದ ಮನುಷ್ಯನನ್ನು ಮುಕ್ತಗೊಳಿಸುವುದೇ ಶಿಕ್ಷಣದ ಆದ್ಯ ಗುರಿಯಾಗಿದೆ. ಇದನ್ನು ಸಾಧಿಸದ ಯಾವುದೇ ರೀತಿಯ ಕಲಿಕೆಯೂ ಅರ್ಥಹೀನ. ಸದುದ್ದೇಶವಿಲ್ಲದೆ ಶಿಕ್ಷಣ ನಮ್ಮ ಯುವ ಜನಾಂಗವನ್ನು ಕೇವಲ ಮಾಹಿತಿಗಳ ಕೋಶವಾಗಿ ಮಾರ್ಪಡಿಸುತ್ತಿದೆಯೆ ವಿನಃ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಕನಸುಗಾರರನ್ನಾಗಿ ರೂಪಿಸುವುದಿಲ್ಲ.
ನಮಗೆಲ್ಲ ಗೊತ್ತಿರುವಂತೆ ಶಿಕ್ಷಣ ಮತ್ತು ಶಿಕ್ಷಕರ ಕುರಿತು ಒಂದು ಮಹತ್ವದ ಹೇಳಿಕೆಯಿದೆ, “A bad teacher complaints, An average teacher explains, A good teacher teaches, A best teacher inspires”.  ಶತಮಾನಗಳಿಂದ ಭಾರತವು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿ ಸುಸಂಸ್ಕøತರನ್ನಾಗಿಸಿದ ಗುರುಪರಂಪರೆಯ ದೇಶವಾಗಿದೆ. ಆನಾದಿ ಕಾಲದಿಂದಲೂ ಕಾರಣಕ್ಕಾಗಿಯೇ ಇರಬಹುದು ಭಾರತವು ಶಿಕ್ಷಣದ ಮೂಲಕ ಆತ್ಮದ ವಿಕಸನಕ್ಕೆ ಕೊಟ್ಟಷ್ಟು ಮಹತ್ವವನ್ನು ಲೌಕಿಕ ಆಲೋಚನೆಗಳಿಗೆ ಎಂದೂ ಕೊಡಲಿಲ್ಲ. ಅತ್ಯಂತ ಭದ್ರವಾದ ಆಧ್ಯಾತ್ಮಿಕ ತಳಹದಿಯ ಮೇಲೆಯೇ ಭಾರತೀಯ ಮಕ್ಕಳ ಶೈಕ್ಷಣಿಕ ತರಬೇತಿ ನಡೆಯಬೇಕೆನ್ನುವುದನ್ನು ಭವ್ಯ ದೇಶದ ಮಹಾನ್ ಶಿಕ್ಷಣ ತಜ್ಞರಾದ ಸ್ವಾಮಿ ವಿವೇಕಾನಂದ, ಗುರುದೇವ ರವೀಂದ್ರನಾಥ ಠ್ಯಾಗೋರ್, ಸರ್ವಪಲ್ಲಿ ರಾಧಾಕೃಷ್ಣ, ಮಹತ್ಮಾ ಗಾಂಧಿ, ಮೌಲಾನಾ ಅಬ್ದುಲ್ ಕಲಾಂ, .ಪಿ.ಜೆ ಮತ್ತು ಇನ್ನೂ ಅನೇಕ ಚಿಂತಕರು ಕಾಲ-ಕಾಲಕ್ಕೆ ತಿಳಿಸುತ್ತಲೇ ಬಂದಿದ್ದಾರೆ.
ಆಧುನಿಕ ಕಟ್ಟಡ, ಯೂನಿಫಾರ್ಮ್, ಲ್ಯಾಬೊರೇಟರೀಸ್, ಕಂಪ್ಯೂಟರ್ಗಳಿಂದ ಝಗಮಗಿಸುವ ನಮ್ಮ ಶಾಲೆ-ಕಾಲೇಜುಗಳಲ್ಲಿ ಇಂದು ಅನೇಕ ಜೀವನ ಮೌಲ್ಯಗಳು ಕ್ರಮೇಣ ನಶಿಸಿ ಹೋಗುತ್ತಿವೆ. ಸರಿಯಾದ ಶೈಕ್ಷಣಿಕ ವ್ಯವಸ್ಥೆಯಿಲ್ಲದ, ರಸ್ತೆ ಮತ್ತು ವಿದ್ಯುತ್ ಸೌಲಭ್ಯವಿಲ್ಲದ, ಸಾತ್ವಿಕ ಆಹಾರ, ಬಟ್ಟೆ ಮತ್ತು ವೈದ್ಯಕೀಯ ಅನುಕೂಲತೆಗಳಿಲ್ಲದ ಅಂದಿನ ಕಷ್ಟದ ದಿನಗಳಲ್ಲಿ ನಮ್ಮ ಹಿರಿಯರಿಗಿದ್ದ ಶೈಕ್ಷಣಿಕ ಪ್ರೀತಿ ಮತ್ತು ಶ್ರದ್ಧೆಗಳು ಇಂದು ಎಲ್ಲ ರೀತಿಯಿಂದಲೂ ಅನುಕೂಲಕರವಾದ ದಿನಗಳಲ್ಲಿ ಕಾಣುತ್ತಿಲ್ಲ. ಸ್ವಾತಂತ್ರ ಹೋರಾಟದ ವೇಳೆಯಲ್ಲಿ ಜೈಲುಗಳಲ್ಲೇ ಕುಳಿತು ಅತ್ಯುತ್ತಮ ಶೈಕ್ಷಣಿಕ, ಆರೋಗ್ಯ, ಆಧ್ಯಾತ್ಮ ಸಾಧನೆ ಮಾಡಿದ ಉದಾಹರಣೆಗಳಿವೆ.
ಕರ್ನಾಟಕ ಹಿಂದಿನ ಕಾಲೇಜು ಶಿಕ್ಷಣ ಆಯುಕ್ತರಾಗಿದ್ದ ಶ್ರೀ ಬಿ.ಜಿ.ನಂದಕುಮಾರ ತಮ್ಮನಂದಾವಲೋಕನದಲ್ಲಿ ಒಂದು ಮಾತನ್ನು ಒಪ್ಪಿಕೊಳ್ಳುತ್ತಾರೆ. “ಪ್ರಸ್ತುತ ದೇಶದಲ್ಲಿರುವ ನಮ್ಮ ಶಾಲಾ-ಕಾಲೇಜುಗಳೆಲ್ಲ ಒಂದು ರೀತಿ ಲವ-ಲವಿಕೆಯಿಲ್ಲದೆ, ಜೀವನ ಉತ್ಸಾಹವಿಲ್ಲದೆ, ಬರೀ ಪಠ್ಯಕ್ರಮದ ವ್ಯವಸ್ಥಿತ ಜೈಲುಗಳಾಗಿ ಮಾರ್ಪಡುತ್ತಿವೆ. ನಮ್ಮ ಮಕ್ಕಳು ದಿನೇ-ದಿನೇ ಅಭಿಮಾನ ಶೂನ್ಯರಾಗುತ್ತಿದ್ದಾರೆ. ಯಾಂತ್ರಿಕವಾಗಿ ಮತ್ತು ತಾಂತ್ರಿಕವಾಗಿ ಗಣನೀಯ ಸಾಧನೆ ಮಾಡುತ್ತಿರುವ ದೇಶದ ವಿದ್ಯಾರ್ಥಿಗಳಲ್ಲಿ ಮಾನಸಿಕ ಮತ್ತು ಮೌಲಿಕ ಅಧಃಪತನವಾಗುತ್ತಿರುವಂತೆ ಕಂಡು ಬರುತ್ತಿದೆ. ಸಂದರ್ಭದಲ್ಲಿ ನೆನಪಾಗುವ ಸ್ವಾತ್ರಂತ್ರ್ಯ ಪೂರ್ವದ ಒಂದು ಘಟನೆ.
ಬಡಶಿಕ್ಷಕನೊಬ್ಬ ತನ್ನ ವೃತ್ತಿ ವ್ಯಾಪ್ತಿಯ ಸಮಸ್ಯೆಗಳನ್ನು ಹೇಳಿಕೊಳ್ಳಲು ಬ್ರಿಟಿಷ್ ಅಧಿಕಾರಿಯೊಬ್ಬರನ್ನು ಕಾಣಲು ಹೋದರಂತೆ. ಆದರೆ ಬ್ರಿಟಿಷ್ ಅಧಿಕಾರಿ ಬಂದ ಬಡಶಿಕ್ಷಕರಿಗೆ ಅವಮಾನವಾಗುವ ರೀತಿಯಲ್ಲಿ ಬೂಟುಗಳನ್ನು ಧರಿಸಕೊಂಡೆ ಎರಡೂ ಕಾಲುಗಳನ್ನು ಅವರ ಮುಖಕ್ಕೆ ಎದುರಾಗಿ ಟೇಬಲ್ ಮೇಲಿಟ್ಟು, ದುರಹಂಕಾರದಿಂದ ಮಾತನಾಡಿದನಂತೆ. ಸಂದರ್ಭದಲ್ಲಿ ಏನನ್ನು ಮಾತನಾಡದೇ ತಮ್ಮ ಇಲಾಖೆಯ ಸಮಸ್ಯೆಗಳನ್ನು ಶಿಕ್ಷಕ ಯಾಂತ್ರಿಕವಾಗಿ ಅಧಿಕಾರಿಯ ಅವರ ಮುಂದಿಟ್ಟು ಬಂದರಂತೆ. ಕೆಲವೇ ಕೆಲವು ದಿನಗಳ ನಂತರ ಅದೇ ಅಧಿಕಾರಿ ಶಿಕ್ಷಕರ ಶಾಲೆಗೆ ಭೇಟಿ ನೀಡಿದಾಗ ಅದಕ್ಕೆ ಪ್ರತಿಯಾಗಿ ಭಾರತೀಯ ಶಿಕ್ಷಕರೂ ಚಪ್ಪಲಿಗಳನ್ನು ತೊಟ್ಟಿದ್ದ ತಮ್ಮ ಕಾಲುಗಳನ್ನು ಅಧಿಕಾರಿಯ ಮುಖಕ್ಕೆ ಅಭಿಮುಖವಾಗಿ ಇಟ್ಟುಕೊಂಡು ಕುಳಿತು ಮಾತಾಡಿದರಂತೆ. ಇದೇನು ಮೇಲಾಧಿಕಾರಿಯೊಂದಿಗೆ ರೀತಿ ವರ್ತಿಸುತ್ತೀರಾ? ಎಂದು ಬ್ರಿಟಿಷ್ ಅಧಿಕಾರಿ ಸಿಡಿಮಿಡಿಗೊಂಡಾಗ, ಶಿಕ್ಷಕರು, ‘ಯಥಾ ರಾಜ, ತಥಾ ಪ್ರಜಾಎಂದು ಉತ್ತರಿಸಿದರಂತೆ.
 ಗಮನಿಸಬೇಕಾದ ವಿಚಾರವೆಂದರೆ, ಅಂದಿನ ಭಾರತೀಯ ಶಿಕ್ಷಕ ಬಡವನಾಗಿದ್ದರೂ ದೇಶಾಭಿಮಾನಿಯಾಗಿದ್ದ, ಆತ್ಮಾಭಿಮಾನಿಯಾಗಿದ್ದ. ಹೀಗಾಗಿ ಅಂದಿನ ನೂರಾರು ಗುರುಗಳು ಸಾವಿರಾರು ಆತ್ಮಾಭಿಮಾನದ, ಸ್ವಾಭಿಮಾನದ ಮತ್ತು ಸ್ವಾಭಿಮಾನದ ಶಿಷ್ಯರನ್ನು ಸಿದ್ಧಗೊಳಿಸಲು ಸಾಧ್ಯವಾಯಿತು. ಆದರೆ ಈಗ ಸಾವಿರದ ಸಂಖ್ಯೆಯಲ್ಲಿ ಶಿಕ್ಷಕರಿದ್ದಾರೆ. ಆದರೆ ಇಂದು ಉತ್ತಮ ನಡತೆಯ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗುತ್ತಿಲ್ಲ. ವರ್ತಮಾನದ ಶೈಕ್ಷಣಿಕ ಸ್ಥಿತಿ ಬೌದ್ಧಿಕ ಗುಲಾಮಗಿರಿಯಿಂದ ಸಂಪೂರ್ಣ ಮುಕ್ತವಾಗಿಲ್ಲವೆನ್ನಬಹುದು. ವಿದ್ಯಾರ್ಥಿಗಳಿಗಿಂತಲೂ ಸ್ವಯಂ ನಮ್ಮ ಶಿಕ್ಷಕರ ಆಲೋಚನಾ ಕ್ರಮವೇ ಎಲ್ಲೋ ದಾರಿ ತಪ್ಪಿದೆ. ವಿದ್ಯಾರ್ಥಿಗಳನ್ನು ರೂಪಿಸುವ ಗುರುವಿಗೆ ಗುರಿ ಇಲ್ಲದಂತಾದರೆ ಗುರುತರ ಜವಾಬ್ದಾರಿಯ ಜನಾಂಗವನ್ನು ಹೇಗೆ ತಾನೆ ರೂಪಿಸುವುದು? ಅವರ ಅಧ್ಯಯನಶೀಲತೆ, ಶಿಸ್ತು ಮತ್ತು ಶ್ರದ್ಧೆಗಳಲ್ಲಿ ಇಂದು ದೊಡ್ಡ ಕಂದಕ-ಬಿರುಕುಗಳನ್ನು ಕಾಣುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ಹಿಂದಿನವರಂತೆ ಆತ್ಮಸ್ಥೈರ್ಯವನ್ನು, ಉತ್ತಮ ಚಾರಿತ್ರ್ಯವನ್ನು ಮತ್ತು ರಾಷ್ಟ್ರಾಭಿಮಾನವನ್ನು ತುಂಬುವಲ್ಲಿ ಶಿಕ್ಷಕರು ವಿಫಲರಾಗಿದ್ದಾರೆ.” ಇವು ಸರ್ವಶಕ್ತರಾದ, ಸರ್ಕಾರಿ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಒಪ್ಪಿದ ಮಾತುಗಳು ಎನ್ನುವುದನ್ನು ನಾವಿಲ್ಲಿ ಗಂಭೀರವಾಗಿ ಪರಿಗಣಿಸಬೇಕು. ಹಾಗಾದರೆ ಇಂಥ ಆತ್ಮಹೀನ ಶಿಕ್ಷಣವನ್ನು ಸರಿಪಡಿಸುವ ಯಾವ ಕಾರ್ಯವೂ ಇದುವರೆಗೆ ನಡೆಯಲಿಲ್ಲವೆ? ಖಂಡಿತವಾಗಿಯೂ ಶಿಕ್ಷಣದ ನ್ಯೂನ್ಯತೆಗಳನ್ನು ಸರಿಪಡಿಸುವ ಪ್ರಯತ್ನಗಳು ದೇಶದಲ್ಲಿ ಕಾಲ ಕಾಲಕ್ಕೆ ನಡೆದಿವೆ.  
ನಮಗೆಲ್ಲ ಗೊತ್ತಿರುವಂತೆಜ್ಞಾನ, ವಿಜ್ಞಾನ ವಿಮುಕ್ತಯೇ, ಇದು ನಮ್ಮ ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ) ಘೋಷ ವಾಕ್ಯ. ಇದು ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಲೆಂದೇ ಇರುವ ಒಂದು ಮಹತ್ವದ ಸಂಸ್ಥೆ. ಶಿಕ್ಷಣ ಶುದ್ಧೀಕರಣ, ಆನ್ವಯಿಕತೆ ಇದನ್ನೇ ಗುರಿಯಾಗಿಸಿಕೊಂಡು 1953ರಲ್ಲಿ ಪ್ರಾರಂಭವಾದ ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮೀಶನ್ (ಯುಜಿಸಿ) ನಿರಂತರ ದೇಶದ ವಿಶ್ವವಿದ್ಯಾಲಯಗಳ ಹಾಗೂ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟವನ್ನು ಅಭಿವೃದ್ಧಿಪಡಿಸುವುದರಲ್ಲಿ ಕಾರ್ಯನ್ಮೋಖವಾಗಿದೆ. ದೇಶದ ಪ್ರಮುಖ ನಗರಗಳಾದ ಪುಣೆ, ಭೂಪಾಲ, ಕಲ್ಕತ್ತಾ, ಹೈದ್ರಾಬಾದ್, ಗೌಹಾತಿ ಮತ್ತು ಬೆಂಗಳೂರಿನಲ್ಲಿ ಯುಜಿಸಿಯು ತನ್ನ ಶಾಖೆಗಳನ್ನು ಪ್ರಾರಂಭಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಸದಾ ಅದು ಕ್ರಿಯಾಶೀಲವಾಗಿದೆ. ಈಗ ಅದು ತನ್ನ ಐವತ್ತು ವರ್ಷಗಳನ್ನು ಪೂರೈಸಿ 2002ರಲ್ಲಿ ಸುವರ್ಣ ಮಹೋತ್ಸವನ್ನು ಕೂಡ ಆಚರಿಸಿಕೊಂಡು, ವರ್ತಮಾನದಲ್ಲಿ ಯುಜಿಸಿಯು ದೇಶದ ಪುರಾತನ ಶೈಕ್ಷಣಿಕ ಕೇಂದ್ರಗಳಾಗಿದ್ದ, ನಳಂದ, ತಕ್ಷಶಿಲೆ ಮತ್ತು ವಿಕ್ರಮಶಿಲೆಗಳ ಜ್ಞಾನ ಪರಂಪರೆಯನ್ನು ಶಿಕ್ಷಣ ಪ್ರಸಾರದ ತನ್ನ ಬುನಾದಿಯಾಗಿಸಿಕೊಂಡಿದೆ. ಹಿಂದೆ ಕೊರಿಯಾ, ಚೈನಾ, ಬರ್ಮಾ, ಸಿಲೋನ್, ಟಿಬೇಟ್ ಮತ್ತು ನೇಪಾಳಗಳಿಂದ ಭಾರತೀಯ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಿದ್ದ ಉದಾಹರಣೆಗಳಿವೆ. ಆಧುನಿಕ ಭಾರತದಲ್ಲಿಯೂ ನಮ್ಮ ಶಿಕ್ಷಣ ಕೇಂದ್ರಗಳು ಅದೇ ರೀತಿ ಕಾರ್ಯನಿರ್ವಹಿಸಬೇಕೆಂಬುದು ಯುಜಿಸಿಯ ಪ್ರಮುಖ ಕಾಳಜಿ. ನಮ್ಮ ಕಾಲೇಜು ಶಿಕ್ಷಣ ಇಲಾಖೆಯ ಎಲ್ಲ ಕಾಲೇಜುಗಳೂ ಒಂದಿಲ್ಲ ಒಂದು ನಿಟ್ಟಿನಲ್ಲಿ ಯುಜಿಸಿಯ ವ್ಯಾಪ್ತಿಗೆ ಒಳಪಡುತ್ತಿದ್ದು, ಇಲಾಖೆಯಲ್ಲಿರುವ ಎಲ್ಲ 2 (ಎಫ್) ಮತ್ತು 12 (ಬಿ) ಮಾನ್ಯತೆಯ ಕನಿಷ್ಠ 100 ಕಾಲೇಜುಗಳು ಯುಜಿಸಿಯ ಧನಸಹಾಯದ ಸಮರ್ಪಕ ಲಾಭಗಳನ್ನು ಪಡೆಯುತ್ತಿದ್ದು, ಯುಜಿಸಿಯ ಪ್ರಾದೇಶಿಕ ಕಛೇರಿಯಿರುವ ಪ್ರಮುಖ ರಾಜ್ಯವಾದ ಕರ್ನಾಟಕ ಮಾತ್ರ ಎರಡನೇ ಸ್ಥಾನದಲ್ಲಿ ಉಳಿದಿದೆ. ಪಕ್ಕದ ಕೇರಳ ರಾಜ್ಯ ಮೊದಲ ಸ್ಥಾನದಲ್ಲಿದೆ.
ನಾಗರೀಕ ಪ್ರಜ್ಞೆಯ ಮೊದಲ ತೊದಲುಗಳನ್ನು ಸರಿಪಡಿಸುವ ಮಹತ್ವದ ಕ್ರಿಯೆ ನಡೆಯುವ ಪ್ರತಿಯೊಂದು ಕಾಲೇಜಿಗೆ ಯುಜಿಸಿಯು ಸಂಸ್ಥೆಯ ಧ್ಯೆಯ, ಉದ್ದೇಶ ಹಾಗೂ ಕ್ರಿಯಾಯೋಜನೆ ಕುರಿತಾಗಿ ವಿವರವನ್ನು ಕೇಳುತ್ತಿದೆ. ಪರಿಣಾಮವಾಗಿ ನಾವಿಂದು ಎಲ್ಲ ಕಾಲೇಜುಗಳ ಆವರಣಗಳಲ್ಲಿ ಅವುಗಳನ್ನು ವಿಶೇಷವಾಗಿ ಬರೆಯಿಸಿ ಹಾಕಿರುವುದನ್ನು ಕಾಣುತ್ತೇವೆ. ದುರಂತದ ಸಂಗತಿಯೆಂದರೆ ಅತ್ಯಂತ ಪ್ರಾಮಾಣಿಕವಾಗಬೇಕಾದ ಕಾರ್ಯವೆ ಕಲಬೆರಿಕೆಯಾಗಿದೆ. ವಾಕ್ಯ, ಉದ್ದೇಶ ಹಾಗೂ ಗುರಿಗಳೆಲ್ಲ ಎರವಲಾಗಿರುವುದು ಕಂಡು ಬರುತ್ತದೆ. ಮೊದಲ ಹೆಜ್ಜೆಯೆ ಆತ್ಮ ವಂಚನೆಯಿಂದ ಪ್ರಾರಂಭವಾದರೆ ಆತ್ಮೋನ್ನತಿಯ ಮುಂದಿನ ದಾರಿಯನ್ನು ನಮ್ಮದಾಗಿಸಿಕೊಳ್ಳುವುದು ಹೇಗೆ ಇದು ನಮ್ಮ ಮುಂದಿರುವ ಪ್ರಶ್ನೆ. ಯುಜಿಸಿಯು ಇಂದು ಶಿಕ್ಷಣದ ಗುಣಾತ್ಮಕತೆಗಾಗಿ, ಶಿಕ್ಷಕರ ಬೌದ್ಧಿಕ ಕ್ಷಮತೆಯ ವಿಸ್ತಾರಕ್ಕಾಗಿ ಕೋಟಿ ಕೋಟಿ ಹಣ ವಿನಿಯೋಗಿಸುತ್ತಿದೆ. ಆದರೆ ಕೋಟಿಗಳನ್ನು ಕಳೆಯುವ ಆಟದಲ್ಲಿ ನಮ್ಮನ್ನೇ ನಾವು ಕಳೆದುಕೊಂಡ ದುರಂತಕ್ಕೆ ಸಮುದಾಯಗಳು ಇಂದು ಉದಾಹರಣೆಗಳಾಗುತ್ತಿವೆ. ಇದು ನಿಲ್ಲಬೇಕು, ಇದು ನಿಜವಾದ ಎಲ್ಲ ಶಿಕ್ಷಣ ಪ್ರೇಮಿಗಳ ಕಳಕಳಿ.
ಜ್ಞಾನವನ್ನು, ಅದರ ಪ್ರಸರಣವನ್ನು ದಾಸೋಹವಾಗಿಸಿಕೊಂಡ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆ ಸಮಾಜದ, ಸರಕಾರದ ಹಾಗೂ ಯುಜಿಸಿಯ ಸಹಾಯ ಪಡೆದು ಒಂದು ಸಾರ್ಥಕ ದೀರ್ಘ ದಾರಿಯನ್ನು ಈಗಾಗಲೆ ಕ್ರಮಿಸಿದೆ. ಇಂದು ನಾಡಿನ ಉದಯೋನ್ಮುಖ ಸಂಸ್ಥೆಗಳಿಗೆ ಅದು ಪ್ರೇರಣೆಯಾಗುವ ಪರಂಪರೆಯ, ಪ್ರಯೋಗಶೀಲತೆಯ ಮತ್ತು ಫಲಿತಾಂಶದ ಹಿನ್ನಲೆಯನ್ನು ಸಾಧಿಸಿದೆ. ವ್ಯಯಕ್ತಿಕವಾಗಿ ನನ್ನ ಮನೆತನದ ಎರಡು ತಲೆಮಾರುಗಳ ಬುತ್ತಿ-ಬೆಳಕಾದುದು ಸಂಸ್ಥೆ. ಒಂದೊಮ್ಮೆ ಇಲ್ಲಿ ನನ್ನ ಬಾಲ್ಯ, ಯೌವ್ವನಗಳರಳಿದವು ಎನ್ನುವುದು, ನನ್ನ ತಂದೆ ಇಲ್ಲಿದ್ದರೆನ್ನುವುದು ಗತಕಾಲದ ಸಂಗತಿಯಾಗಬೇಕಿಲ್ಲ. ಶಿಕ್ಷಣದ ದಾರಿಯೆ ಹಾಗೆ. ಗತಿಸಿಯೂ ವರ್ತಮಾನ, ಪ್ರಚಲಿತದಲ್ಲಿದ್ದೂ ಪರಂಪರೆ. ಹೀಗಾಗಿ ನಾಡಿಗೆ, ನಾಗರೀಕತೆಗೆ, ಪ್ರಗತಿಗೆ ಮಹತ್ವದ್ದೇನೊ ಇನ್ನೂ ಇಲ್ಲಿ ಜರುಗಬೇಕಾದುದ್ದೇನೊ ಇದೆ ಎಂದೇ ನನ್ನ ನಂಬಿಕೆ.
ಇದುವರೆಗಿನದು ಸಾರ್ಥಕ ದಾರಿ ಎನ್ನುವುದಾದರೆ ಮುಂದೆ ಸಾಗಬೇಕಾದುದು ಸದ್ಭಾವದ, ಸಂಕಲ್ಪದ ಹಾಗೂ ಸಮಾವಿಷ್ಠತೆಯ ದಾರಿ, ನಮ್ಮ ಪೂರ್ವಸೂರಿಗಳ ನಿರೀಕ್ಷೆಯ ದಾರಿ. ಕೆರೆಯ ನೀರನು ಇದುವರೆಗೆ ಪಡೆದಾಗಿದೆ. ನೀಡುವ ಮೋಡವಾಗಿ ತೇಲಬೇಕಿದೆ.

No comments:

Post a Comment