Total Pageviews

Thursday, February 9, 2017

ಈ ನೆಲವೆಂದರೆ



 ಎರಡು ಸಾವಿರದಾ ಹದಿನೇಳನೇ ವರ್ಷದ ನನ್ನ ಮೊದಲ ಮಹಾ ಸಮಾರಂಭ, ನಾನು ಹೈಸ್ಕೂಲ್ನಿಂದ ಪಿ.ಯು.ಸಿ ವರೆಗೆ ಓದಿದ, ನನ್ನ ಪೂಜ್ಯ ತಂದೆಯವರು ತಮ್ಮ ಪಾಲಿನ ಉಪನ್ಯಾಸಕ ವೃತ್ತಿಯನ್ನು ಪೂರೈಸಿದ, ಚಡಚಣದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಿತು. ಜನೇವರಿ 15 ಮತ್ತು 16 ರಂದುಹಿಂದಿನ ವಿದ್ಯಾರ್ಥಿಗಳ ಸಮಾವೇಶಎಂಬ ಶೀರ್ಷಿಕೆ ಅಡಿಯಲ್ಲಿ ನಡೆದ ಸಮಾರಂಭದ ಮುಖ್ಯ ಆಕರ್ಷಣೆ, ಇಲ್ಲಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು.
15 ಮಧ್ಯಾನ್ಹದ ಗೋಷ್ಠಿಯಲ್ಲಿದ್ದವರು ನಾನು, ಶ್ರೀ ಅಮೃತಾನಂದ ಸ್ವಾಮಿಗಳು ಹಾಗೂ ಎಂ.ಎಲ್.ಸಿ ಅರುಣ ಶಹಾಪೂರ. ಪ್ರಚಲಿತ ಶಿಕ್ಷಣ ವ್ಯವಸ್ಥೆಯ ಹಲವು ಹಂತಗಳ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದು ಇದರ ಉದ್ದೇಶ. ಗುರುದೇವ ಟ್ಯಾಗೋರ್, ಮಹಾತ್ಮಾ ಗಾಂಧಿ ಹಾಗೂ ಪಂಡಿತ ನೆಹರು ದೇಶ ಹಾಗೂ ದೇಶದ ಯುವ ಜನತೆಯ ಆಸರೆ ಹಾಗೂ ಆಶಯಗಳಾದ ಶಿಕ್ಷಣವನ್ನು ಹೇಗೆ ನೋಡಿದರು ಎನ್ನುವುದನ್ನು ಕುರಿತು ನಾನು ಮಾತನಾಡಿದರೆ, ಇಂದಿಗೂ ಪಾಶ್ಚಾತ್ಯ ಅನುಕರಣೆಯಿಂದ ಹೊರಬರಲಾರದ ಭಾರತೀಯ ಶಿಕ್ಷಣ ವ್ಯವಸ್ಥೆಯ ಅಂಧಾನುಕರಣೆಗಳ ಕುರಿತು ಅಮೃತಾನಂದ ಸ್ವಾಮಿಗಳು ಹಾಗೂ ಪ್ರಚಲಿತ ಶೈಕ್ಷಣಿಕ ಸಮಸ್ಯೆಗಳ ಕುರಿತು ಶ್ರೀ ಅರುಣ ಶಹಾಪೂರ ಮಾತನಾಡಿದರು.
  ಸಾವಿನ ಸೂತಕದಿಂದ ಹೊರಬಂದು ಮಾತನಾಡಿದ ನನ್ನ ಮೊದಲ ಸಮಾರಂಭ ಇದೆ. ಅಂದಿನ ಸಮಾರಂಭವನ್ನು ನನ್ನ ಒಂದು ಸ್ವರಚಿತ ಪದ್ಯದಿಂದ ಪ್ರಾರಂಭಿಸಿಕೊಂಡೆ-
ನೆಲವೆಂದರೆ ಮುಗಿಲೆತ್ತರದ ಮಾತು
ಜಲವೆಂದರೆ ಎದೆಯ ಹೊಲೆತೊಳೆದ ಹಾಡು
ಕಾಡುಕಾಡು ಕನಸುಗಳಿಗೆ ಕಾರುಣ್ಯದ ಕೈ ಇದುವೆ
ಹಾಡು - ಪಾಡು ಮನಸುಗಳಿಗೆ ಮೊದಲ ಮೈದಾನ ಇದುವೆ
ಇಲ್ಲಿ ಜಗಳ, ಇಲ್ಲಿ ಪ್ರೀತಿ ಇಲ್ಲೇ ದಕ್ಕಿತು ಬದುಕ ರೀತಿ
ಹಣ್ಣಾಗಿಸು ಪುಣ್ಯದ ಹಿಡಿ ಮಣ್ಣೆ
ಸಣ್ಣಾಗಿಸು ಸಾಸಿರದಲಿ ನಿನ್ನ ವಿನಯದ ಹೆಣ್ಣಾಗಿಸು
ನಿನ್ನೆದೆಯ ರುದ್ರವೀಣೆಯ ಸ್ವರಕೆ ತಂತಿಯಾಗಿಸಿ
ಜಗದ ಸಂತೆಯ ಮಿಗೆಯ ಮೀರುವ ದಾರಿ ತೋರಿಸು
 ವ್ಯಕ್ತಿಯೊಬ್ಬ ಸರಕಾರಿ ಆದೇಶವೊಂದನ್ನು ಆಧರಿಸಿ ಶಿಕ್ಷಕನಾದ ಮಾತ್ರಕ್ಕೆ ಆತ ಶಿಕ್ಷಣದ ಎಲ್ಲ ಮಜಲುಗಳನ್ನು ಅರ್ಥೈಸಿಕೊಂಡ ಎಂದರ್ಥವಲ್ಲ ಅಥವಾ ಗುರುವಾದ ಎಂದೂ ಅರ್ಥವಲ್ಲ. ಜ್ಞಾನೋದಯ ಹೊಂದಿದ್ದ ಬುದ್ದ ಮೌನಿಯಾಗಿದ್ದ, ಮಾತನಾಡಿಬಿಟ್ಟರೆ ಜಗತ್ತು ತನ್ನನ್ನು ಗುರುವೆಂದು ಪರಿಗಣಿಸಿ ಬಿಡುತ್ತದೆಂದು ಭಯಭಿತನಾಗಿದ್ದ. ಅಂಥ ಜವಾಬ್ದಾರಿ ಗುರುವಾಗುವುದು
ಜೀವನದ ನಲವತ್ತೊಂದನೆ ವಯಸ್ಸಿನಲ್ಲಿ ಶಾಂತಿ ನಿಕೇತನ ಪ್ರಾರಂಭಿಸಿ ಗುರುವಾಗಲು ಹೋದ ಟ್ಯಾಗೋರ್ ಮೊದಲು ಮಗುವಾಗುವುದು ಹೇಗೆ ಎನ್ನುವುದು ಕಲಿಯಬೇಕೆಂದು ಘೋಷಿಸಿದರು. ಜೊತೆಗೆ ನಮ್ಮ ಶಿಕ್ಷಣ ಏನಾಗಿರಬೇಕು ಹಾಗೂ ಅದರ ಗುರಿಗಳೇನು ಎನ್ನುವುದುನ್ನು ಕೇಳಗಿನಂತೆ ಸೂಚಿಸಿದ್ದಾರೆ.
·     Our education has to confirm us that living one’s own life in truth is living the life of all the world. It must free us from achieving results and ambition of ding benefit to others.
·     The motto of my Shantiniketana – Shantham, Shivam, advaitam – the all peace, the all god and the one.
·     The greatest of educations for which we came prepared is neglected. And we are made to loose our world of innocence to find a bag full of information instead.
·     We should admit that poverty is the school in which we all had our first lessons. Even a millionaire’s son has to be born helplessly poor. He has to learn to walk like the poorest of the children. Poverty is the power that brings us in to complete touch with life.
  ಟ್ಯಾಗೋರರೆ ಸೂಚಿಸುವಂತೆ ಶೈಕ್ಷಣಿಕತೆಗೆ ಮೂರು ಮುಖ್ಯ ನಂಬಿಕೆಗಳು ಬೇಕಾಗುತ್ತವೆ.
Ethos of  Education
·     I am not a creation of school master, the government board of education. I am a mind situated in harmony with the world around.
·     Ignorance of sympathy or its repression is the soul cause of the death of education.
·     The object of education is the freedom of mind which can only be achieved through the path of freedom.
ದೇಶದಲ್ಲಿ 1.3 ಮಿಲಿಯನ್ ಶಾಲೆಗಳಿವೆ. ಇದರಲ್ಲಿ 130 ಕೋಟಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. 677 ವಿಶ್ವವಿದ್ಯಾಲಯ, 37,204 ಕಾಲೇಜುಗಳು ಮತ್ತು 11,443 ಸ್ಟ್ಯಾಂಡ್ ಬೈ ಸಂಸ್ಥೆಗಳಲ್ಲಿ 20 ಮಿಲಿಯನ್ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇಂದು ಶಿಕ್ಷಣ ಒಂದು ಲಾಭಕೋರ ದಂಧೆ. ಸ್ವತಂತ್ರವಾಗಿ ಬದುಕುವ ಪಾಠಗಳನ್ನು ಹೇಳಿಕೊಡುವ ಶಿಕ್ಷಣವೇ ಈಗ ಬಂಡವಾಳಶಾಹಿಗಳ ಕೈಯಲ್ಲಿ ಬಂಧಿತವಾಗಿದೆ. ಅದರ ಮುಕ್ತಿಯೇ ನಮ್ಮೆಲ್ಲರ ಪಾಲಿನ ಮಹಾ ವಿಮೋಚನೆ.
ಶೈಕ್ಷಣಿಕ ಸಮಾವೇಶ ಅದ್ಭುತವಾಗಿತ್ತು.
 ಬದುಕಿನ ಧಾವಂತದಲ್ಲಿ ಎಲ್ಲೆಲ್ಲೋ ಕಳೆದು ಹೋದ ನಮ್ಮ ನಮ್ಮ ಎಷ್ಟೆಲ್ಲ ಗೆಳೆಯ-ಗೆಳತಿಯರನ್ನು ಒಂದು ಕ್ಷಣ ನೋಡಿ, ಮಾತನಾಡಿಸಿ, ನೆನಪುಗಳ ಮೆಲುಕು ಹಾಕಿಕೊಳ್ಳಲು ಅವಕಾಶ ಮಾಡಿಕೊಟ್ಟ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಪರಿಶ್ರಮ ಸಣ್ಣದಲ್ಲ. ನಾನು, ನನ್ನ ಶ್ರೀಮತಿ ಪದ್ಮಶ್ರೀ, ನನ್ನ ತಮ್ಮ ಮಲ್ಲಿಕಾರ್ಜುನ, ಸಹೋದರಿ ವಿಜಯಲಕ್ಷ್ಮಿ, ನಮಗಿಂತಲೂ ಮುಂಚೂಣಿಯಲ್ಲಿ ನಮ್ಮ ತಂದೆ ಪ್ರೊ. ಜಿ.ಜಿ. ಮಠಪತಿ ಎಲ್ಲರೂ ನೆಲದ ಹಂಗು ಹೊತ್ತವರೆ. ಹೀಗಾಗಿ ಸಾರ್ಥಕ ಕ್ಷಣಕ್ಕೆ ಕಾರಣರಾದ ಸಂಸ್ಥೆಯ ಬಂಧುಗಳನ್ನು ಅಭಿನಂದಿಸಿ ಕೆಳಗಿನ ಒಕ್ಕಣಿಕೆಯನ್ನು ಕಳುಹಿಸಿದೆ.

ಹಿರಿಯರೆ/ಆತ್ಮೀಯರೆ
                                    ಅಭಿನಂದನೆಗಳು
ಹೊಸ ವರ್ಷದ ಹೊಸ್ತಿಲಲ್ಲಿ, ಊರ ಅದಿದೈವವಾದ ಸಂಗಮನಾಥನ ಸಾನಿಧ್ಯದಲ್ಲಿ, ‘ಪ್ರಾಮಾಣಿಕ, ‘ಪವಿತ್ರಸಂತರೊಬ್ಬರ ಮಾರ್ಗದರ್ಶನದಲ್ಲಿ, ಇಡೀ ಚಡಚಣದ ಸಮಾಜ ಅಭಿಮಾನ ಪಡಬೇಕಾದ ಶ್ಲಾಘನೀಯ, ಸ್ತುತ್ಯ ಕಾರ್ಯವನ್ನು ತಾವುಗಳೆಲ್ಲ ಮಾಡಿದ್ದೀರಿ, ಸಮ್ಮೇಳನದ ನೆಪದಲ್ಲಿ ಇಡೀ ಸಂಗಮ-ಸಂತಾನಗಳ ಮಧ್ಯ ಶೈಕ್ಷಣಿಕ ಸಂಬಂಧ ಬೆಸೆದಿದ್ದೀರಿ, ಪರಸ್ಪರ ಬೆರೆಸಿದ್ದೀರಿ ಮತ್ತು ಒಂದು ಪವಿತ್ರ ಸಂಸ್ಕøತಿಗೆ ಮೂಲಕ ನಾಂದಿ ಹಾಡಿದ್ದೀರಿ. ಅದಕ್ಕಾಗಿ ತಮಗೆಲ್ಲ ನನ್ನ ವೈಯಕ್ತಿಕ ಅಭಿನಂದನೆಗಳು.
 ದಿನಾಂಕ:15/16.01.2017 ರಂದು ನಮ್ಮ ಪಾಲಿಗೆ ಮಹಾಮೇಳ. ಕುಂಭಮೇಳದಂಥ ಒಂದು ಮಹಾಮೇಳ. ಪ್ರಮಾಣದಲ್ಲಿ ಸಮಾಜದ ಎಲ್ಲ ಸ್ಥರಗಳ, ಭಾಗದ, ಎಲ್ಲ ಸಮುದಾಯಗಳ ಜನರನ್ನು ಸೇರಿಸುವುದೇನು ಹುಡುಗಾಟದ ಮಾತೆ?! ಯಶಸ್ಸಿಗಾಗಿ ತಾವೆಲ್ಲ ಎಷ್ಟು ಪ್ರಯತ್ನಿಸಿದ್ದೀರಿ ಎಂದು ನಾನು ಚೆನ್ನಾಗಿ ಬಲ್ಲೆ. ‘ಎನಗಿಂತ ಕಿರಿಯರಿಲ್ಲ, ಸಾಧಕರಿಗಿಂತ ಹಿರಿಯರಿಲ್ಲಎಂದು ಎಲ್ಲರನ್ನೂ ಅತ್ಯಂತ ವಿನಯದಿಂದ ಕೂಡ್ರಿಸಿ ಸನ್ಮಾನಿಸಿದ್ದರಿಂದ ಅದು ಭಾಗದ ಶರಣ ಸಂಸ್ಕøತಿಯನ್ನು ಗೆಲ್ಲಿಸಿದೆ. ಹೂವಿನೊಂದಿಗೆ ನಾರು, ನಿಮ್ಮೊಂದಿಗೆ ನಾವು ದೈವ ಕೃಪೆಗೆ ಒಳಗಾಗಿದ್ದೇವೆ.
ಬದುಕು ಬಹಳ ದೊಡ್ಡ ಗುರು. ಅದರಂತೆ ಪ್ರತಿ ಸಮಾರಂಭವೂ ಕೂಡಾ. ಇಲ್ಲಿ ಸಾವಿನವರೆಗೂ ಎಲ್ಲವೂ ಕಲಿಕೆಯೆ. ಕಲಿಯುತ್ತಲೇ ಇರುತ್ತೇವೆ/ಇರಬೇಕು. ಸಮಾರಂಭ ತಮಗೆಲ್ಲ ಸಾಕಷ್ಟು ಸಿಹಿ-ಕಹಿ ಪಾಠಗಳನ್ನು ಕಲಿಸಿರಬಹುದು. ಅವೆಲ್ಲ ಇದ್ದುದೆ, ಇರಬೇಕಾದುದೆ. ಇದೆಲ್ಲದಕ್ಕೂ ಮಿಗಿಲಾದುದು ನೀವು ತೋರಿಸಿದ ಪ್ರೀತಿ. ಕುಟುಂಬ ಸಮೇತವಾಗಿ ನಾವೆಲ್ಲ ಬಂದು ನಿಮ್ಮೊಂದಿಗೆ ಸೇರುವಂತೆ ಮಾಡಿದಿರಿ, ಮಾತನಾಡಿಸಿದಿರಿ, ಹಾಡಿಸಿದಿರಿ, ಅನ್ನ, ನೀರು, ಹೂ ಹೊದಿಕೆಗಳನ್ನು ನೀಡಿ ಗೌರವಿಸಿದಿರಿ.
      ಇದಕ್ಕಾಗಿ ನಾನು, ನನ್ನ ತಂದೆ-ತಾಯಿ, ನನ್ನ ಶ್ರೀಮತಿ ಪದ್ಮಶ್ರೀರಾಗಂ, ಮಕ್ಕಳು ತಮಗೂ ಸಂಸ್ಥೆಯ ಸಮಸ್ತ ಶಿಕ್ಷಕ, ಶಿಕ್ಷಕೇತರ ಹಾಗೂ ಪ್ರಚಲಿತ ವಿದ್ಯಾರ್ಥಿ ಬಳಗಕ್ಕೂ ಋಣಿಯಾಗಿದ್ದೇವೆ. ತಮ್ಮ ಅಭಿಮಾನವನ್ನು ಹೃದಯಾರೆ ಸ್ಮರಿಸಿಕೊಂಡಿದ್ದೇವೆ.
ಧನ್ಯವಾದಗಳೊಂದಿಗೆ        

                              

No comments:

Post a Comment