ಇನ್ನೆಷ್ಟು ಉಳಿದಿತ್ತು ಆ ಒಡಲಿನಲ್ಲಿ?
ಎಣ್ಣೆ ತೀರಿದ ಹಣತೆ ಅದು
ಮಣ್ಣು ಸುರಿಯಬಹುದೆ
ಮತ್ತೆ ತಣ್ಣಗಾಗಿಸಲು
ಕಣ್ಣ ಕುದಿ ಇದ್ದಿಲಾದಾಗ
ಇನ್ನು ನಿದ್ದೆಯೇ ಕೊನೆಯ ನುಡಿಯಾದಾಗ
ಮಣ್ಣು ಸುರಿಯಬಹುದೆ ಪಣತಿಯೆ?
ಮತ್ತೆ ನಿನ್ನ ತಣ್ಣಗಾಗಿಸಲು
ಸಣ್ಣ ಉಸಿರನು ಕಾಯ್ದ
ದೊಡ್ಡ ಆಲಯ ನೀನು
ಕಣ್ಣ ಬೆಳಕನು ಕಾಯ್ದ
ಹಿರಿಯ ಒಡಲು
ಕನಸುಗಳ ಗಗನ
ಬೀಜ ರೂಪಿ ಮಗನ
ವೇದ-ವೇದಾಂತ
ಕರ್ಮ-ಧರ್ಮಾದಿಗಳ
ನೆನಪನ್ನ, ನಗೆಯನ್ನ
ಸೇರಬೇಕಾದ ನೆಲೆಯನ್ನ
ಕೋಟಿ ಕಡಲುಗಳ ನೋವನ್ನ
ಕಾಪಿಟ್ಟ ಒಡಲೇ
ಕಪ್ಪಿಟ್ಟಾಗ ಈಗ,
ಸಣ್ಣಾಗಿ ಕರಗಿ
ಮಣ್ಣಾಗಲು ಹಂಬಲಿಸುವಾಗ
ಮಣ್ಣ ಸುರಿಯಬಹುದೆ?
ಮಣ್ಣನ್ನೆ ಮತ್ತೆ ಮಣ್ಣಾಗಿಸಲು
No comments:
Post a Comment