“ಓಂ ಏಕ ಲಾಖ ಐಂಸೀ ಹಜಾರ ಪಾಂಚೋ ಪೀರ ಪೈಗಂಬರ ಮೌನ ದೀನ
ಜಿತಾ ಪೈಗಂಬರ ಮೌನದೀನ ಕಾಶಿಪತಿ ಗಂಗಾಧರ ಹರಹರ ಮಹಾದೇವ”
ನಮ್ಮ ಬಾಗಲಕೋಟೆಯ ವಿದ್ಯಾನಗರ ದಾಟಿದರೆ ಶಾಹಿಗಳ ಕಾಲದ ಅಪರೂಪದ ಒಂದು ದಖನಿ ಕಲಾಕೃತಿ ಮಳಿಯಪ್ಪಯ್ಯನ ಮಠ. ಅದೀಗ ಒಂದು ಮಿನಿ ಸ್ಮಶಾನ. ಹಲವು ಗೋರಿಗಳೊಳಗೆ ಒಂದು ಗೋರಿಯ ಮೇಲೆ ಮೇಲಿನ ಈ ಸಾಲುಗಳನ್ನು ಬರೆಯಲಾಗಿದೆ. ಮಳೆಗೂ, ಮಳಿಯಪ್ಪಯ್ಯನ ಈ ಮಠಕ್ಕೂ ಮತ್ತು ನನಗೂ ಒಂದು ಮರೆಯಲಾಗದ ಪುಟವಿದೆ. ಅದು ಇಲ್ಲಿ ಅಪ್ರಸ್ತುತ. ಆದರೆ ಇದೇ ಸಾಲುಗಳನ್ನು ಮತ್ತೆ ನಾನು ‘ಸಂವಹನ’ ಎನ್ನುವ ಸಂಶೋಧನಾ ಲೇಖನಗಳ ಸಂಗ್ರಹದಲ್ಲಿ ನೋಡಿ, ನೆನಪುಗಳು ಒತ್ತರಿಸಿ, ರೋಮಾಂಚಿತನಾದೆ. ಅಂದಹಾಗೆ, ಇದಕ್ಕೆ ಕಾರಣರಾದ ವ್ಯಕ್ತಿಯನ್ನು ಕುರಿತು ನಿಮಗೆ ಹೇಳಬೇಕು.
“ಅಪರೂಪದ ವಿದ್ವಾಂಸ, ಸಾತ್ವಿಕ ಸ್ನೇಹ ಜೀವಿ, ನೆಚ್ಚಿನ ಅಧ್ಯಾಪಕ, ಪ್ರತಿಭಾ ಸಂಪನ್ನ, ಕಲೋಪಾಸಕ, ಸಂಶೋಧನೆ, ಕಲೆ-ಸಾಹಿತ್ಯ, ಜೀವನ ಚರಿತ್ರೆ, ಇತಿಹಾಸ ಹೀಗೆ ಹಲವು ಆಯಾಮಗಳಲ್ಲಿ ತೊಡಗಿಕೊಂಡ ಇವರು ಕನ್ನಡಾಂಬೆಯ ಹೆಮ್ಮೆಯ ಪುತ್ರ.” ಇವು ಬಾದಾಮಿಯ ಡಾ. ಶೀಲಾಕಾಂತ ಪತ್ತಾರರಿಗೆ ಅನ್ವಯಿಸಿದ ಅಭಿನಂದನಾ ಸಮಿತಿಯ ನುಡಿಗಳು. 15 ಫೆಬ್ರುವರಿ, 2015 ರ ಮುಂಜಾನೆ 10.30 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 3.30 ನಿಮಿಷಗಳವರೆಗೆ ನಿರಂತರ ಐದು ಗಂಟೆ ನಡೆದ ಅವರ ಅಭಿನಂದನೆ ‘ಪುರದ ಪುಣ್ಯ ಪುರುಷ ರೂಪ’ದಲ್ಲಿ ಹೇಗಿರುತ್ತದೆ ಎನ್ನುವುದಕ್ಕೆ ಒಂದು ಮಹಾ ನಿದರ್ಶನ.
ಸಂಸ್ಖøತ ವಿದ್ಯಾರ್ಥಿಯಾಗಿ, ಇಂಗ್ಲೀಷ್ದಲ್ಲಿ ಸ್ನಾತಕ್ಕೋತ್ತರ ಪದವಿ ಪಡೆದು, ಇತಿಹಾಸದಲ್ಲಿ ಸಂಶೋಧನೆ ಮಾಡಿ, ಪ್ರಾಚ್ಯಶಾಸ್ತ್ರದ ಅಧಿಕೃತ ವಕ್ತಾರರಾಗಿ, ನೆಲದ ಮರೆಯ ನಿಧಾನದಂತೆ ಆ
ಭಾಗದ
ದೊಡ್ಡ
ಸಂಶೋಧಕರಾಗಿ
ಅವರು
ಬೆಳೆದ
ರೀತಿ
ನನಗಂತು
ವಿಸ್ಮಯವಲ್ಲ.
ಯಾಕೆಂದರೆ
ಬಾಗಲಕೋಟೆಯಲ್ಲಿ
ಇರುವಷ್ಟು
ಕಾಲ
ನಾನು
ಅತ್ಯಂತ
ಗೌರವದಿಂದ
ಮತ್ತೆ
ಮತ್ತೆ
ಬಾದಾಮಿಗೆ
ಹೋಗುತ್ತಿದ್ದುದೇ
ಇಬ್ಬರ
ಕಾರಣಕ್ಕಾಗಿ
ಒಬ್ಬಳು
ಹೃದಯಗಂಧಿ
ಲೇಖಕಿ
ಕಸ್ತೂರಿ
ಬಾಯರಿ,
ಮತ್ತೊಬ್ಬರು
ಬಾದಾಮಿಯ
ಬಂಡೆಗಳನ್ನು
ಮಾತನಾಡಿಸುವ
ಶಕ್ತಿ
ಇರುವ
ಗುರು
ಡಾ.
ಶೀಲಾಕಾಂತ
ಪತ್ತಾರರಿಗಾಗಿ.
ಕಲಿಕೆಗೆ ಯಾವುದೂ ನೇರವಾಗಿರಬೇಕಿಲ್ಲ. ಇಂದು ನಾನು ಆರಾಧಿಸುವ, ಸ್ಮರಿಸುವ ಅನೇಕ ಗುರುಗಳು ನಮಗೆ ನೇರವಾಗಿ ಕಲಿಸಿದವರೂ ಅಲ್ಲ. ಸದ್ಗುರು ಎನ್ನುವವನ ಪಕ್ಕದಲ್ಲಿ ಒಂದು ಕ್ಷಣದ ಬದುಕೂ ಸಾಕು ಅದು ನಮ್ಮನ್ನು ಮಾರ್ಪಡಿಸಿಬಿಡುತ್ತದೆ. ಹೀಗೆ ಸಿಕ್ಕವರು ಶೀಲಾಕಾಂತ ನನಗೆ. ಬೀದರದ ಸಮ್ಮೇಳನದಲ್ಲಿ ಒಂದು ರೂಮಿನಲ್ಲಿ ನನ್ನ ಪ್ರೀತಿಯ ಗಾಯಕ ಹಂದಿಗನೂರು ರವೀಂದ್ರ ಮತ್ತು ನಾಗತಿಹಳ್ಳಿ ಚಂದ್ರಶೇಖರ ವಾಸ್ತವ್ಯ ಹುಡಿದ್ದರೆ ಇನ್ನೊಂದು ರೂಮಿನಲ್ಲಿ ನನ್ನ ವಾಸ್ತವ್ಯ ಇದೇ ಶೀಲಾಕಾಂತ ಪತ್ತಾರರೊಂದಿಗೆ ನಿರ್ಧಾರವಾಗಿತ್ತು. ಅಂದು ಇಡಿಯಾಗಿ ನಾನು ಗಮನಿಸಿದ್ದು ಅವರು ಶಯನಕ್ಕೆ ಹೋಗುವ ಕ್ರಮವನ್ನು. ಇಂದಿಗೂ ಆ ಕಟ್ಟುನಿಟ್ಟತೆಯನ್ನು ಪಾಲಿಸಲಾಗಿಲ್ಲ ಆದರೆ ಅದು ನನ್ನನ್ನು ನಿರಂತರವಾಗಿ ಕಾಡುತ್ತದೆ.
ಮತ್ತೊಂದು ಸಂದರ್ಭ. ಬಾದಾಮಿಯ ಅವರ ಮನೆಗೆ ನಾನು ಹೋಗಿದ್ದೆ. ಅಂದು ಗಣೇಶ ಚತುರ್ಥಿ. ಜಗಮೊಗಿಸುವ ಲೈಟ್, ಆಭರಣ, ದೀಪಗಳ ಹಾವಳಿ ಮಧ್ಯ ದೇವರ ಪೂಜೆ ನಾವು ನೋಡಿದ್ದೇವೆ ಆದರೆ ಗುರುಗಳಾದ ಶೀಲಾಕಾಂತರ ಗಣೇಶ ಪುಸ್ತಕದ ಮೇಲೆ ವಿರಾಜಮಾನನಾಗಿದ್ದ, ಪೂಜೆ ಸರಳವಾಗಿತ್ತು. ಆದರೆ ಶ್ರದ್ಧೆ ಪ್ರಾಮಾಣಿಕವಾಗಿತ್ತು. ಅಂದಿನಿಂದಲೂ ನನ್ನ ಪಾಲಿಗೆ ಇವರು ಒಬ್ಬ ಡಿಯೋಜಿನಸ್.
ಪ್ರಪಂಚವನ್ನು ಗೆದ್ದು ಬಂದ ಅಲೆಗ್ಘಾಂಡರ ನದಿ ದಂಡೆಯಲ್ಲಿ ಮರಳಿನ ಮೇಲೆ ಬೆತ್ತಲಾಗಿ ಮಲಗಿದ್ದ ಡಿಯೋಜಿನಸ್ನನ್ನು ಕಂಡು, ‘ನಾನು ನಿನ್ನಂತಾಗಬೇಕು ಏನು ಮಾಡುವುದು’ ಎಂದ. ಮುಗುಳ್ನಕ್ಕ ಡಿಯೋಜನಸ್, ‘ಅಲೆಗ್ಘಾಂಡರ ಈ
ಪ್ರಪಂಚದಲ್ಲಿ
ನಿನ್ನಂತೆ
ಆಗುವುದು,
ಸಾಧಿಸುವುದು
ಬಹಳ
ಕಷ್ಟ.
ಆದರೆ,
ನನ್ನಂತಾಗುವುದು
ಬಹಳ
ಸರಳ.
ಅದಕ್ಕೆ
ನಿರ್ಮೋಹಬೇಕಷ್ಟೆ
ಎಂದು
ಹೇಳುವುದರಲ್ಲಿ
ಬಿಸಿಲಿನಿಂದ
ದಣಿದ
ನಾಯಿಯೊಂದು
ಬಂದು
ನೀರಿಗೆ
ಬಿತ್ತು.
ನಾಲಿಗೆಯಿಂದ
ನೀರು
ಕುಡಿಯಲಾರಂಭಿಸಿತು.
ಡಿಯೋಜಿನಸ್
ಈಗ
ತನ್ನೊಂದಿಗೆ
ತಂದಿದ್ದ
ಒಂದೇ
ಒಂದು
ತಟ್ಟೆ
ಇದ್ದ
ಬ್ಯಾಗನ್ನು
ಎತ್ತೆಸೆದ.
ದೇವರು
ಬೊಗಸೆಯಾಗಿಸಲು
ಕೈಗಳನ್ನು
ಕೊಟ್ಟಿರುವಾಗ
ಬುದ್ಧಿಗೇಡಿ
ನಾನು,
ಈ
ತಟ್ಟೆ
ಹೊತ್ತುಕೊಂಡು
ನಾನು
30 ವರ್ಷ
ತಿರುಗಿದೆನಲ್ಲ
ಎಂದು
ತನ್ನೆಡೆಗೆ
ತಾನೇ
ನಕ್ಕ.
ಹೀಗೆ ಜ್ಞಾನಿ ಸದಾ ತನ್ನನ್ನು ನೋಡಿ ನಗುತ್ತಾನೆ. ಅಜ್ಞಾನಿ, ದುರಹಂಕಾರಿ ಅನ್ಯರ ಲೇವಡಿಯಲ್ಲಿ ತನ್ನ ಆತ್ಮದ ಅಂದವನ್ನು ಕೆಡಿಸುತ್ತಾನೆ.
ನನ್ನ ಗುರುಪರಂಪರೆ ನಾನು ಸದಾ ಋಣಿಯಾಗಿದ್ದೇನೆ. ಬಹಳ ಸಣ್ಣ ಮನುಷ್ಯ ನಾನು. ಆದರೆ ಈ ನನ್ನ ಗುರು ಬಂಧುಗಳು ನನ್ನನ್ನು ಸದಾ ಹೆಗಲ ಮೇಲೆ ಹೊತ್ತು ತಿರುಗಿದ್ದಾರೆ. ಈ ದಿನವೂ ಅಷ್ಟೆ. ಅಭಿನಂದನಾ ಕೃತಿಯ ಬಿಡುಗಡೆಗೆ ಬಂದವರು ಡಾ. ಹಂಪನಾ, ‘ಸಂವಹನ’ ಕೃತಿ ಬಿಡುಗಡೆಗೆ ಬಂದವನು ನಾನು. ನನ್ನೊಂದಿಗೆ ವೇದಿಕೆಯ ಮೇಲೆ ಗುರುಲಿಂಗ ಕಾಪ್ಸೆ, ಧರ್ಮಗುರುಗಳು, ಅನೇಕ ಇತಿಹಾಸಕಾರರು ಹೀಗೆ ದೊಡ್ಡ ದಂಡು.
ಶೀಲಾಕಾಂತ ಪತ್ತಾರರ ‘ಸಂವಹನ’ಉತ್ತರ ಕರ್ನಾಟಕದ ಪ್ರತಿ ವ್ಯಕ್ತಿಯ ಮನೆಯಲ್ಲಿ ಇಎಬೇಕಾದ ಕೃತಿ. ಕಪ್ಪೆ ಅರಭಟ್ಟ ಡಾ. ಬಿ.ಎಸ್ ಗದಗಿಮಠ, ಸ.ಸಾ ಮಾಳವಾಡ, ಚೈನಾ ಭಾರತದ ಮೇಲೆ ದಾಳಿ ಮಾಡಿದಾಗ 105 ತೊಲೆ ಚಿನ್ನವನ್ನು ರಾಷ್ಟ್ರಕ್ಕೆ ನೀಡಿದ ಕೆ.ಎಂ ಪಟ್ಟಣಶಟ್ಟಿ, ಕಿರಾಣಾ ಘರಾನಾದ ಗಾಯಕಿ ಗಂಗೂಬಾಯಿ, ಬೇಂದ್ರೆ ತನಯ ಬಸು ಪಟ್ಟದ, ನಾಡೋಜಾ ಆರ್.ಎಂ ಹಡಪದ ಹೀಗೆ ಅನೇಕ ಮಹನಿಯರನ್ನು ಕುರಿತು ಹೇಳುವ ಈ ಕೃತಿ ಭಾರತದ ಪ್ರಪ್ರಥಮ ದೇವಾಲಯವಾದ ಲಾಡಖಾನ್ ಗುಡಿ, ಚಾಲುಕ್ಯರ ನೆಲೆ, ಬನಶಂಕರಿ ದೇವಾಲಯದ ಐತಿಹ್ಯ, ನೇಪಾಳದಲ್ಲಿ ನಡೆಯುವ ಕುಮಾರಿ ಪೂಜೆ ಹೀಗೆ ಹಲವಾರು ವಿಚಾರಗಳನ್ನು ಸಂಗ್ರಹಿಸಿದ ಅದ್ಭುತ ಸಂಶೋಧನಾ ಕೃತಿ.
ಐದು ಗಂಟೆಗಳ ಸಮಾರಂಭ ಮುಗಿಸಿ, ಸಾಯಂಕಾಲ ಕಸ್ತೂರಿ ಬಾಯರಿ ಮನೆಗೆ ಹೋದರೆ ಅದೊಂದು ಮಹಾ ಭಾವಲೋಕ.
ಸದಾ ತೆಕ್ಕೆಗೆ ಹಾಕಿಕೊಂಡು, ಗದ್ದ ತೀಡಿ, ತಲೆ ನೇವರಿಸಿ ಮಾತಾಡುವ ತಾಯಿ ಅವಳು. ಈ ಸಾರಿ ಅವಳ ಅಪ್ಪುಗೆಗೆ ನನ್ನ ಪದ್ದಿ ಪುಳಕಿತಳಾದ ಪರಿ ಅವಳ ಶಬ್ಧದಲ್ಲೇ ಕೇಳಬೇಕು. ಈಗ ಬಾಯರಿ ನನ್ನ ಹೆಣ್ಣುಗಳ ಅರ್ಧಸತ್ಯದಲ್ಲಿ ಮುಳುಗಿ ಹೋಗಿದ್ದಾಳೆ. ಜಯಂತ್ ಕಾಯ್ಕಿಣಿಯಿಂದ ರಹಮದ್ ತರಿಕೇರೆವರೆಗೆ ಈ ಪುಸ್ತಕವನ್ನು ಕಳುಹಿಸಿ ಸಂಭ್ರಮಿಸಿದ್ದಾಳೆ. ನನ್ನ ಕೈಗೆ ‘ಪ್ರೀತಿ ಎಂದರೆ ಚಂದ್ರನಂತೆ’ ಕೃತಿ ನೀಡಿ ಚಿಂತೆಗೆ ಹಚ್ಚಿದ್ದಾಳೆ. ನನ್ನ ಹೆಂಡತಿಗೆ ಚಂದದ ಸೀರೆಯುಡಿಸಿ, ‘ಛಂದಾಗಿರು ಮಗಳೆ’ ಎಂದು ಆಶೀರ್ವದಿಸಿದ್ದಾಳೆ.
ಮರೆಯುವ ಮುನ್ನ ತುಂಬ ದಣಿದಿದ್ದ ನಾನು ಈ ದಿನ ಕಾರಿನಲ್ಲಿ ಕುಳಿತರೂ ಮೈನೋವಿನಿಂದ ಬಳಲುತ್ತಿದ್ದೆ. ಮೂರುವರೆ
ಸಾವಿರ ಜನಗಳ
ಸಮಾರಂಭದ ಭಾರ
ಇಳಿಸಿ ಸಂಜೆ
ಬಾದಾಮಿಯ ಊರ
ಹೊರಗಿರುವ ‘ಲೆಮನ್
ಟ್ರೀ’ ಗೆ
ಗೆಳೆಯರು ಕರೆದೊಯ್ದಾಗ,
ಅದರ ಮಾಲೀಕನಾದ
ಮುಸ್ಲಿಂ ಯುವಕನೂ
ಶೀಲಾಕಾಂತರ ಶಿಷ್ಯನೆ.
ಒಬ್ಬ ಗುರು
ಶಿಷ್ಯರನ್ನು ಹೇಗೆ
ರೂಪಿಸಿರುತ್ತಾನೆ ಎನ್ನಲು
ಆತನ ಹೊಟೇಲ್ನಲ್ಲಿಯ ಈ ಫಲಕವನ್ನು
ನೀವು ಗಮನಿಸಬೇಕು
“Please taste the food before you fill your plate. To avoid
the wastage, please do not leave food in the thali. Anything left would be
charged extra!! Don’t waste salad and lemon pieces, also. No excuse, please.
You afford. I can afford but the Nation can’t”
ಇಷ್ಟು ಪ್ರಜ್ಞೆ
ನಮಗಿದ್ದರೆ ಸಾಕು,
ನಮಗೂ ದಕ್ಕುತ್ತಾರೆ ಪತ್ತಾರರಂಥ ಪುಣ್ಯವಂತರು.