Total Pageviews

Wednesday, March 18, 2015

‘ಅವಳಿ’ಗೆ ಶಿರಬಾಗಿ........

ಬೆಂಗಳೂರೆಂಬ ಕಾಲ ನಿರ್ಮಿತ ಬದುಕಿನಲ್ಲಿ ಅವಳೀಗ ನನಗಾಗಿ ಕಾಯಬೇಕಿಲ್ಲ. ಕಾಲಿಲ್ಲದ ಕೂಸು ಕನಸು ಕೊಲ್ಲಬೇಕಿಲ್ಲ. ದೈವಪ್ರೇರಣೆ ಇದ್ದರೆ ಕ್ಷಣಾರ್ಧದಲ್ಲಿ ಬದುಕು, ಪವಿತ್ರ ಬೆಳಕಿನ ತೀರ್ಥಯಾತ್ರೆಯೇ ಆಗುತ್ತದೆ ಎನ್ನುವುದಕ್ಕೆ ಸಾಕ್ಷಿ, ನನ್ನ ಪದ್ದಿ. ತನ್ನ ಮೌನದಿಂದಲೇ ಮಾತಿನ ಶಕ್ತಿ ತಿಳಿಸಿದವಳು ಅವಳು. ಅವಳ ಪುಣ್ಯದ ಗಳಿಕೆಯಿಂದ ಒಂದು ಪುಟ್ಟ ವಾಹನ ಕೊಂಡು, ಅವಳ ಬೆನ್ನಿಗೆ ನನ್ನನ್ನು ಕೂಡ್ರಿಸಿಕೊಂಡು ಸಿಕ್ಕ ಸಿಕ್ಕ ದೇವರಿಗೆ ಹಣೆ ತೀಡುತ್ತಾ-ತೀಡಿಸುತ್ತಾ ಸಾಯಂಕಾಲ ಅವಳು ಹೋದ ರೀತಿಗೆ ನಾನು ಸಾಕ್ಷಿಯಷ್ಟೆ.
ಬಿ. ದಿನಗಳಲ್ಲಿ ನನ್ನ ಪ್ರಥಮ ಕಾವ್ಯ ಸಂಕಲನ ಪ್ರಕಟಗೊಂಡರೂ, ಪಿ.ಯು.ಸಿ ದಿನಗಳಲ್ಲಿಯೇ ನಾನು ನನ್ನ ಸಾಹಿತ್ಯವನ್ನು ಪತ್ರಿಕೆಗಳ ಮೂಲಕ ಪರಿಚಯಿಸಲಾರಂಭಿಸಿದ್ದೆ. ಆದರೆ ನಿಜವಾದ ಆರಂಭ 2005 ರಿಂದಲೆ, ಅದೂ ಬಾಗಲಕೋಟೆಯಿಂದ. ಇಲ್ಲಿಯೇ ಬರೆದು ತೀರಿಸಿದ ಓಶೋ, ಜಗತ್ಪ್ರಸಿದ್ಧ ಭಾಷಣಗಳು, ಚಲ್ಲಾಟದ ಚದುರೆಯರು ಮತ್ತೆ ಮತ್ತೆ ಮುದ್ರಣಗೊಂಡು ನನ್ನ ಜೀವನೋತ್ಸಾಹವನ್ನು ಹೆಚ್ಚಿಸಿವೆ. ನೆಲಕ್ಕಂಟಿಕೊಂಡ ನೆನಪುಗಳನ್ನು ಮೆಲುಕಲು ಕಾರಣವಾಗಿವೆ.
  `ಸಂತನ ಸ್ವಗತಗಳು’, ‘ಒಂದಿಷ್ಟು ಕರುಣೆ ಮತ್ತಷ್ಟು ನೀರು’, ‘ನಿಶಾಗಾನಮತ್ತುಗಾಂದಿ ಬೀಜ ಬಿತ್ತಿದ್ದು ಇಲ್ಲಿಯೇ. ಇಲ್ಲಿ ಉದಯಿಸಿದ ಸಾಹಿತ್ಯಗಂಗೆ ಸಂಸ್ಕøತಿ, ನಾಗರೀಕತೆಗಳನ್ನು ಹುಟ್ಟುಹಾಕಿ ಗಟ್ಟಿತನ ಮೆರೆದಳೊ ಇಲ್ಲವೊ, ಆದರೆ ನನ್ನ ಕನಸುಗಳ ಪೊರೆದು ಜೀವದಾಯಿಯಾದಳು. ಯಾರೆಲ್ಲ ಸುರಿಯುವ ನನ್ನ ಬದುಕಿನಲ್ಲಿಯ ಕಸ-ಕಡ್ಡಿ-ಹೇಸಿಗೆಯನ್ನು ತಾನೇ ತೊಳೆದು, ಮತ್ತೆ ಹೊಸ ಮನುಷ್ಯ ಮತ್ತು ಮನಸ್ಸಿನೊಂದಿಗೆ ಮುನ್ನುಗ್ಗುವುದನ್ನು, ಮುಗುಳ್ನಗುವುದನ್ನು ಕಲಿಸಿದಳು.
  ಒಂದು ಅಪರೂಪದ ವಿಚಾರ. ಒಮ್ಮೆಯೇ ಕುಳಿತು ನಾನು ಬರೆದು ತೀರಿಸಿದ ಪ್ರೀತಿಯ ಎರಡೇ ಬರಹಗಳು – ‘ಗಾಂಧಿ ಮತ್ತು ಗೂಂಡಾ’, (ಗುಳೇದಗುಡ್ಡ) ಹಾಗೆಯೇಅವಳು ಎಂಬ ಅಪಾರ್ಥ’ (ಬಾಗಲಕೋಟೆ). ಎರೆಡೂ ಬರಹಕ್ಕೆ ಕಾರಣರು ಇಬ್ಬರು ಗೆಳೆಯರು. ಕುಡಿತ, ಲಂಪಟತನ, ಮೋಜಿಗಾಗಿ ಕಾಡಿದ ಗೆಳತಿ-ಗೆಳೆಯರು ನನಗೆ ಕಡಿಮೆ. ಅದೇ ರೀತಿ ಓದು, ಬರಹ ಮತ್ತು ಶಿಸ್ತಿನ ಬದುಕಿಗಾಗಿ ಕಾಡಿದವರೂ ಕೂಡ. ವಿರಳರಲ್ಲಿ ವಿರಳರು ಇಬ್ಬರು ಗೆಳೆಯರು. ವಿಚಿತ್ರವೆಂದರೆ ಇಬ್ಬರೂ ಜಮಖಂಡಿಯವರೆ (ಪ್ರೊ. ರಮೇಶ ಗಣಿ ಮತ್ತು ಪ್ರೊ. ವಿಠ್ಠಲ ದಳವಾಯಿ).
  ಇಬ್ಬರೂ ನನಗಿಂತ ತೀಕ್ಷ್ಣಮತಿಗಳು. ಜಾಣರು, ಬದುಕಿನ ಗಾಣದಲ್ಲಿ ಹಿಂಡಿಸಿಕೊಂಡು ಹಿಪ್ಪಿಯಾಗಿ-ಸಿಪ್ಪೆಯಾಗಿ ಸಾಯದೆ ನನ್ನಂಥವನಿಗೆ ನಿರಂತರ ನಿತಾಂತತೆಯ ನೀರೆರೆದು ಬೆಳೆಸಿದವರು. ಹೀಗಾಗಿ ಎರಡೂ ಬರಹಗಳ ಪ್ರೇಯ-ಶ್ರೇಯ ಗೆಳೆಯರಿಗೇ ಸಲ್ಲಬೇಕು.
  2003 ಕರುನಾಡ ದೀಪ ದೀಪಾವಳಿ ವಿಶೇಷಾಂಕಕ್ಕೆ ಲೇಖನ ಒಂದನ್ನು ಕೇಳಿದ್ದರು. ಪತ್ರವನ್ನು ಗೆಳೆಯ ವಿಠ್ಠಲನ ಮುಂದಿಟ್ಟು ಕುಳಿತಾಗ ಆತ ಬಿಟ್ಟುಹೋದ ಪದವೆಅವಳು’. ಅವಳನ್ನು ನನ್ನಲ್ಲಿ ಬಿಟ್ಟು ಆತ ಹೊರಹೋದ, ಆನಂತರ ಅವಳ ಎದೆ ಹೊಕ್ಕ ನಾನು ಮುಗ್ಧನಾದೆ, ಮಗುವಾದೆ ಅವಳ ಮೈ-ಸ್ನಿಗ್ಧ ವಾಸನೆಯಾದೆ.
  ಭವಿಷ್ಯದರ್ಶಿಯಾಗದ ಬರಹ ಬಾಳುವುದಿಲ್ಲ. ಹಾಗೆಯೇ ಭವಿಷ್ಯದಲ್ಲಿ ತನ್ನ ಲೇಖನಿ ಯಾವ ಶಬ್ಧಗಳ ಬೆನ್ನೆರುತ್ತದೆ ಎಂದು ಊಹಿಸಿಕೊಳ್ಳಲಾಗದ ಬರಹಗಾರನೂ ಕಳಿಯುವುದಿಲ್ಲ. ಗೊತ್ತಿರಲಿ, ನಾನು ಹೇಳಿದ್ದುಕಳಿಯುವುದಿಲ್ಲಎಂದು. ಕಳಿಯುವುದಕ್ಕೂ-ಕೊಳೆಯುವುದಕ್ಕೂ ಬಹಳ ವ್ಯತ್ಯಾಸವಿದೆ. ಕಳಿತ ಬಾಳೆ ಪಂಚಾಮೃತದಲ್ಲಿ ಬೆರೆತು ಅಭಿಷೇಕ ಎನ್ನಿಸಿಕೊಳ್ಳುತ್ತದೆ. ಕೊಳೆತ ಬಾಳೆ ಬಟ್ಟಿಯಲ್ಲಿ ಬೆರೆಕೆಯಾಗಿ ಶರೀರವನ್ನು ನುಡಿಸಿ ಶರೆ ಎನ್ನಿಸಿಕೊಳ್ಳುತ್ತದೆ. ಎರಡೂ ದ್ರವಗಳೇ, ಆದರೆ ಮುಟ್ಟಿಸುವ ಗಂಥವ್ಯ ಮಾತ್ರ ಭಿನ್ನ.
 ‘ಹೆಣ್ಣು ಹೇಳುವ ಅರ್ಧ ಸತ್ಯ ಪ್ರಿಯಾಂಬಲ್ಅವಳು ಎನ್ನುವ ಅಪಾರ್ಥರಚೆನೆಯಾದದ್ದು 2003 ರಲ್ಲಿ. ಪುಸ್ತಕ ಮಾರುಕಟ್ಟೆಗೆ ಬಂದದ್ದು 2014 ರಲ್ಲಿ. ಒಟ್ಟು 11 ವರ್ಷಗಳ 13 ಹೆಣ್ಣುಗಳ ಕನವರಿಕೆಯ, ಹಂಬಲದ ಹಸಿ ಹಾದಿ. ಹೊಟ್ಟೆ ತುಂಬ ಅನ್ನ, ಮೈ ತುಂಬ ಮತ್ತು, ಭೂ-ಆಕಾಶಗಳ ಒಂದಾಗಿಸಿದ ಮಳೆ ತುತ್ತು, ಎಲ್ಲ ತೀರಿಸಿ, ಅಂದುಅವಳುಬಾದಾಮಿನಲ್ಲಿಯ ಬಾಝಾರಿನಲ್ಲಿ ನಿಲ್ಲುವ ಹೊತ್ತು.
  ಬಾದಾಮಿಯ ವಿಶ್ವ ಚೇತನ ವೇದಿಕೆಯ ಇಷ್ಟಲಿಂಗ ಶಿರಸಿ ಹಾಗೂ ಅವರ 32 ಮಂದಿಯ ಗೆಳೆಯರ ಗಟ್ಟಿ ಬಳಗ, ‘ಅವಳನ್ನು ಆಲಿಸುವ ಒಂದು ಕನಸು ಕಂಡರು. ನನಗೆಅವಳಸುತ್ತಿನ ಮಾತೆಂದರೆ ಬೇಸರ. ಅವಳೇನಿದ್ದರೂ ನಿತ್ಯದ ಧ್ಯಾನ ನನಗೆ. ಹೀಗಾಗಿ ಮೈ ನೆಕ್ಕುವವರ ಮಧ್ಯಅವಳ ಮೌನದ ಹಾಡು ಬೇಕೆ? ಅದು ನಡು ಬಾಝಾರಿನಲ್ಲಿ?’ ಎಂದೆ. ಹೀಗೆ ಕೇಳುವಾಗ ಒಂದು ಕ್ಷಣ ದಶಕದ ಹಿಂದೆ ಬಾದಾಮಿಯ ಬಾಝಾರು, ಕಾಯ್ದ ಬಂಡೆ ಮತ್ತು ಧೂಳನ್ನು ಕುರಿತು ಬರೆದ ರೋವಿನಾ ಹಿಲ್ಲಳಅವಳ ಕಣ್ಣಿನ ಬಸಿರುನನ್ನ ಕಿವಿಯೊಳಗೆ ಹಾಡುತ್ತಿತ್ತು.
 ಅವರು ಹಠಮಾರಿ ಹುಡುಗರು, ನಾನು ಅಲೆಮಾರಿ ಜಂಗಮ, ‘ಅವಳು’? ಒಟ್ಟಾರೆ ಅವಲೋಕನವೆಂಬ ಸುಂದರ ಅಪಾರ್ಥಅವಳಸುತ್ತ ನಡೆದೇ ಹೋಯಿತು.
  ರೇಣುಕಾರೆಡ್ಡಿ ನಿರ್ದೇಶನದ, ಪದ್ಮಶ್ರೀಯ 20 ನಿಮಿಷಗಳಅವಳು ಎಂಬ ಯಕ್ಷ ಪ್ರಶ್ನೆಯೊಂದಿಗೆ ಶುರುವಾದಅವಳಪ್ರಾರಂಭದಲ್ಲಿ ನಾನಿರಲೇಬಾರದು ಎಂಬ ಆಸೆ ಈಡೇರಿತು. ಕೆಳಗೆ ಕುಳಿತು ಮೊಟ್ಟೆ ಮಾರುವ ಬಾಗವಾನರೊಂದಿಗೆ, ಟೇಲರ್ಸ್, ವೆಲ್ಡರ್ಸ್ ಹಾಗೂ ಸ್ಕ್ಯಾವೆಂಜರ್ಸ್ರುಗಳು ನನ್ನ ಸಾಹಿತ್ಯವನ್ನು ಗ್ರಹಿಸುವ ರೀತಿಗೆ ಚಪ್ಪಾಳೆ ತಟ್ಟುವ ಪ್ರೀತಿಗೆ ನಾನು ಶಬ್ಧಶಃ ಮಂತ್ರಮುಗ್ದನಾಗಿದ್ದೆ.
   1.45 ನಿಮಿಷಅವಳುಎಂಬ ಕಂಬದ ಸುತ್ತ ಮೂಡುತ್ತಿದ್ದ ಬಿಂಬಗಳನ್ನು ನೋಡಿ, ಮತ್ತೆ ಮತ್ತೆ ಕಣ್ಣೀರಾದವರು ನನ್ನ ಪೂಜ್ಯ ತಂದೆಯವರು. ಹೊಗಳಿಕೆಯಲ್ಲಿ ಅವರೊಬ್ಬ ಹಲಾಲ್ಕೋರ್, ಮಹಾ ಜಿಪುಣ, ಆದರೆ ಕಳೆದ ಅನೇಕ ಸಭೆಗಳಲ್ಲಿ ಆತನಿಗೇ ಗೊತ್ತಾಗದೆ ನನ್ನ ಹೊತ್ತು ತಿರುಗುತ್ತಿದ್ದಾರೆ. ಬಾದಾಮಿಯ ತಾಯಂದಿರು ಈಗ ಹಸಿಯುವುದು ಬರೀ ಆತನನ್ನು ನೋಡಲು. ಅಂದು ನನ್ನ ತಂದೆ, ಮಧ್ಯ ಮಧ್ಯ ಚಹಾ, ಸಾಯಂಕಾಲದ ಬಜಿಗಳನ್ನು ಒದಗಿಸುತ್ತ ಸುತ್ತುವರೆದ ಶಿಷ್ಯಂದಿರು, ಅಭಿಮಾನಿಗಳ ಮಧ್ಯ ಸವಿದ ಸುಖ ಬದುಕನ್ನು ವಿನೀತಗೊಳಿಸಿದವು.
  ಒಟ್ಟು ಪ್ರಯಾಸಕ್ಕೆ ಒಂದು ತಿಂಗಳಿಂದ ಸಣ್ಣಾದವನು 45 ಕೆ.ಜಿ ತೂಕದ ಇಷ್ಟಲಿಂಗ. ಈತ ತೂಕದಲ್ಲಿ ಸಿದ್ದೇಶ್ವರ ಶ್ರೀಗಳೊಂದಿಗೆ ಸ್ಪರ್ಧೆಯಲ್ಲಿದ್ದಂತಿದೆ. ಅಂದಹಾಗೆ ಕಕ್ಕಮರಿಗೆ ಹೋಗಿ ಕ್ರತಿಯನ್ನು ಅವರಿಗೆ ಮುಟ್ಟಿಸಿ ಬಂದಿದ್ದಾನೆ. ಇತ ಸಣ್ಣಾದವನು ನಾವು ಕಣ್ಣಾದವರು. ನನ್ನಲಜ್ಜೆ ಲಾವಣ್ಯದಕೊನೆಯ ಭಾಷಣ ಮುಗಿಯುತ್ತಲೆ 10,000/- ರೂಗಳ ಸಾಕಿ ಓದುಗರ ಕೈ ಸೇರಿಯಾಗಿತ್ತು . ಮತ್ತೆ 2000/- ರೂಗಳ ಬೇಡಿಕೆ ಬಾಕಿ ಇತ್ತು. ನಮ್ಮೊಂದಿಗೆ ಕೆನಡಾದಿಂದ ಬಂದ ಎರನ್ ಪಾರ್ಡಿ ಮತ್ತು ಜಸ್ಸಿಕಾರ ಪ್ರೀತಿ ಇತ್ತು. ಇಡಿಯಾಗಿ ಕಾರ್ಯಕ್ರಮದಲ್ಲಿ ಕುಳಿತು ತುಂಡು ತುಂಡಾದ ನನ್ನ ಇಂಗ್ಲೀಷ್ ಮೂಲಕವೇ ಖಂಡಾಂತರದ ಸಂಬಂಧ ಸ್ಥಾಪಿಸಿದವರು ಅವರು.
  ಬಾದಾಮಿ, ಬನದ ಹುಣ್ಣಿಮೆ, ಬನಶಂಕರಿ ಎಂಬ ಮೂರು ಪದಗಳ ಸುತ್ತಲೂ ಆರು ವರ್ಷಗಳ ನನ್ನ ಮದುವೆ ಮಕ್ಕಳು ಮತ್ತು ಸಾಧನೆಯೆಂಬ ಮೆರವಣಿಗೆ ನಡೆದಿದೆ. ನಾನು ಅವಳಿಗೆ ಬೇಡಿ ಭಿಕ್ಷುಕನಾಗಿಲ್ಲ, ನೀಡಿ ನಿರ್ಮೋಹಿಯಾದ ಅವಳು ಅಹಂಕಾರಿಯಾಗಿಲ್ಲ. ಅವಳೊಂದಿಗಿನ ಆತ್ಮ ಸಂವಾದದಲ್ಲಿ ಅವಳಿಗೆ ಗೆಲುವಿಲ್ಲ, ನನಗೆ ಸೋಲಿಲ್ಲ.
ಮುಂಜಾವು ಅವಳು ನನ್ನ ಹರಸಲೆಂದೇ ಕಾಯ್ದು ಕುಳಿತಿದ್ದಳೇನೊ ಎನ್ನುವಂತೆ ಆಶೀರ್ವಾದದ ದಿವ್ಯ ಪ್ರಭೆಯೊಂದಿಗೆ, ಕುಂತಿಯ ಮಹಾ ದೃಷ್ಠಿಯೊಂದಿಗೆ ಕಾಯುತ್ತಿದ್ದಳು. ಕರ್ಣನಂತೆ ಬೆತ್ತಲಾಗುವ ಭಕ್ತಿ ನನಗೆ ಬೇಕಿತ್ತಷ್ಟೆ. ಅಂತೆಯೇ ಹೇಳುವುದಲ್ಲವೆ? ‘ಮಾದೇವಿ ಕೊಟ್ಟರೆ ಮನೆ ತುಂಬ ಮೂದೇವಿ ಕೊಟ್ಟರೆ ಮೂಲೆ ತುಂಬ!’
  ಅವಳ ಗೆಲ್ಲಿಸಿದ ನನ್ನ ಪದ್ದಿಗೆ, ಅವಳ ಓರಣಗೊಳಿಸಿದ ನನ್ನೆಲ್ಲ ಗೆಳತಿಯರಿಗೆ, ಓದಿ ಪ್ರತಿಕ್ರಿಯಿಸಿದ ತಾಯಂದಿರರಿಗೆ, ಮೂದಲಿಸಿದ ಮೂದೇವಿಯರಿಗೆ ನಾನು ಶಿರಬಾಗಿ ನಮಿಸಿದ್ದೇನೆ. ಯಾಕೆಂದರೆ ನನ್ನ ಬದುಕೆನ್ನುವುದು ಅವಳು ನೀಡಿದ ಪ್ರೀತಿ, ಹಿಂಸೆ, ಸತ್ಕಾರ, ಧಿಕ್ಕಾರ, ಮಧುರ ನೋವು ಅಲ್ಲದೆ ಮತ್ತೇನು ಅಲ್ಲ.
  ನಾವೆಲ್ಲ ನುಡಿಜಾತ್ರೆಯಲ್ಲಿ ಮೈ ಮರೆತಾಗ ನಡೆ ತಪ್ಪದ ನನ್ನ ಅಸ್ಥಿತ್ವವನ್ನು ಅಲ್ಲಿಯೂ ಕಾಯ್ದಿಟ್ಟವಳುಅವಳೆ’. ಹೆಸರು ತರಂಗಿಣಿಯಷ್ಟೆ. ನಾನಿಲ್ಲದ ಮೊದಲ ಎನ್.ಎಸ್.ಎಸ್ ಕ್ಯಾಂಪ್. ಆದರೆ ನನ್ನಂತೆಯೇ ಮೈಕ್ ಹಿಡಿದು ನನ್ನ ಇರುವನ್ನು ದಿಟವಾಗಿಸಿದ ನನ್ನ ಮಗಳ ಮೊದಲ ಕ್ಯಾಂಪ್. ನಿಮ್ಮ ಹರಕೆ ಅವಳೊಂದಿಗಿದೆ ಅಲ್ಲವೆ?


No comments:

Post a Comment