Total Pageviews

Friday, June 12, 2015

ವಾಸುದೇವನಿಗೊಂದು ಪತ್ರ



ಸಂಕಟಗಳನ್ನು ಸಂಭ್ರಮಿಸಿಕೊಂಡ ಸಹೃದಯಿಯೊಬ್ಬನ ಪತ್ರ ಇಷ್ಟರಲ್ಲೇ ಬರುತ್ತದೆ ಎಂಬ ನಿರೀಕ್ಷೆ ನನಗಿತ್ತು. ಎರಡು ದಿನಗಳ ಹಿಂದಷ್ಟೆ ನಿನ್ನ ಪತ್ರ ಬಂತು. ನಾನು ಬರೆದೂ ಉರಿದಷ್ಟು ನೀನು ಓದಿ ತೋಡಿಕೊಂಡಿರುವೆ. ಅರ್ಧ ಮತ್ತು ಮತ್ತು ಮುತ್ತಿನ ಎಸ್.ಎಂ.ಎಸ್ ಲೋಕದಲ್ಲಿ ಒಂದು ದೀರ್ಘ ಪತ್ರ ಪಡೆಯುವುದೆಂದರೆ ಅದು ಹೆಂಡತಿಯೊಂದಿಗಿನ ಅಪರೂಪದ ಸಂಭೋಗದೂಟ!!! ಊಟ ಹೆತ್ತೊಡಲಿನ ಹೆಂಡತಿಯೊಂದಿಗೆ ಮಾತ್ರ ಸಾಧ್ಯ. ಆಸೆಗೊಂದು ಹೇಸಿ ನೆಪ ಹೇಳುವ ಗಣಿಕೆಯರಿಂದಲ್ಲ.
ಗೊತ್ತಿರಲಿ ಕೇಶವ, ಜನರೆಲ್ಲ ಒಂದು ನಿದ್ರೆ ತೆಗೆದು ಮಗ್ಗಲು ಹೊರಳಿಸುವ ಮಧ್ಯರಾತ್ರಿ ಹನ್ನೆರಡಕ್ಕೆ ಶುರುವಾಗುವ ನನ್ನ ಆತ್ಮಾಲಾಪ, ನಸುಕಿನ ಮೂರು ಗಂಟೆಗೆ ತಣ್ಣಗಾಗುತ್ತದೆ ವಾಸುದೇವ್. ‘ಕಾವ್ಯಕ್ಕೆ ಉರುಳಿ ಮೂಲಕ ನಾನು ನನ್ನನ್ನೇ ಬಿಚ್ಚಿಕೊಳ್ಳುತ್ತಿದ್ದೇನೆ, ಬಹುತೇಕ ಆತ್ಮ ಸತ್ತವರ ಮಧ್ಯ ಎಚ್ಚರವಾಗಿರುವ, ಜಾತಿ ಡೊಂಬರತನದಿಂದ ಮುಕ್ತವಾಗಿರುವ ನನ್ನ ಎಳೆಯ ಗೆಳೆಯ ನೀನು
 ನಿಮ್ಮಂಥವರಿಗಾಗಿಯೇ ಬೆಂಕಿಯಂತೆ ಬದುಕಿದವರ ಪುಟಗಳ ಬರೆದಿಟ್ಟೆ ನಾನು. ನನ್ನ ಅಂತರಂಗದ ಗೆಳತಿಯೊಬ್ಬಳು ನನ್ನ ಇಡೀ ಕುಟುಂಬಕ್ಕೆಕೇಶವ ನಾಮಾವಳಿಯನ್ನು ಕಲಿಸಿ ಅವಳದೆಲ್ಲಿ ಮರೆಯಾದಳೋ, ಮೀರಾಬಾಯಿ ಮತ್ತು ರಾಧೆಗೂ ಅರ್ಥವಾಗದ ಅದ್ಯಾವ ದಿವ್ಯಾನಂದ ಹೊಂದಿದಳೋ ಅವಳಿಗೇ ಗೊತ್ತು. ಆದರೆ ಕೇಶವನ ಸ್ಮರಣೆ ಮಾತ್ರ ನಮ್ಮ ಬದುಕಿನ ಭಾಗ್ಯ ಬದಲಿಸಿತು.
ಪ್ರಪಂಚ ಕಾಣದ ಮಹಾಯುದ್ಧದ ಸಾಕ್ಷಿಪ್ರಜ್ಞೆಯಾದ ತಾಯಿಯಂಥ ಕೇಶವನ ಇನ್ನೊಂದು ಹೆಸರೇ ವಾಸುದೇವ. ಇವನಂಥ ದುರಂತ ನಾಯಕ ಮತ್ತೊಬ್ಬನಿಲ್ಲ. ಆದರೆ ಇವನ ದುರಂತದ ಮಜಲುಗಳನ್ನು ವಿಶ್ಲೇಷಿಸುವ ಅಧ್ಯಾತ್ಮಿಕ ಸಿದ್ಧತೆ ನನ್ನೊಳಗಿಲ್ಲ. ಕೃಷ್ಣನ ರಾಸಲೀಲೆಯನ್ನು ಕುರಿತು ಮಾತಾಡುವ ನಮಗೆ ಕ್ರಿಯೆಯನ್ನು ಲೀಲೆಯಾಗಿಸುವ ಶಕ್ತಿಯೂ ಇಲ್ಲ, ಕಾಮವನ್ನು ರಸಮಯವಾಗಿಸಿಕೊಳ್ಳುವಷ್ಟು ರಾಜ ಗಾಂಭೀರ್ಯದ ಬದುಕಿಲ್ಲ. ರಾಜಧಾನಿಯ ತಿಪ್ಪೆಗಳ ಕಡೆಗೆ ಒಂದು ಕ್ಷಣ ನೋಡಿದರೆ ಸಾಕು ಹಿಂದಿನ ರಾತ್ರಿಗೆ ಎಷ್ಟೊಂದು ಸಾಹಸ ಪಟ್ಟಿದ್ದಾರೆ ನಮ್ಮ ಯುವಕರು ಎನ್ನುವುದು ಸ್ಪಷ್ಟವಾಗುತ್ತದೆ. ರಸಗಂಧಿ, ರಾಸಲೀಲೆ, ರಸಯಾತ್ರೆ, ರಸಮಯ, ರಸದೂಟ ರಸಋಷಿ ಎಲ್ಲ ಪದಗಳು ನವೋದಯದವರೊಂದಿಗೇ ಮುಗಿದು ಹೋದವೆನೊ. ಒಂದರ್ಥದಲ್ಲಿ ಕಂಪ್ಯೂಟರ್ ಕಾಮದ ನಮ್ಮ ಲಲನೆಯರಿಗೆ ಕೃಷ್ಣನೂ ಬೇಕಿಲ್ಲ, ಆತನ ರಾಸಲೀಲೆಯಂತೂ ಇವರಿಗೆ ಜನ್ಮದಲ್ಲಿ ದಕ್ಕುವುದಿಲ್ಲ
 ಚಾನಲ್ಗಳ ಮೈಕ್ಗಳನ್ನು ಮುಂದಿಟ್ಟ ಮಾತ್ರಕ್ಕೆ ಬೆಂಗಳೂರಿನ ಸೂಳೆಯರನ್ನು ನಾಚಿಸುವಷ್ಟು ಶಬ್ಧ ಹಾದರ ಮಾಡುವ ಸಾಹಿತ್ಯ ಸಂತರನ್ನು, ಸರ್ಕಾರದ ಧೋರಣೆಗಳಿಗೆ ತಕ್ಕಂತೆ ತಾಳತಟ್ಟುವ ಬುದ್ಧಿವಂತರನ್ನು ನಾನು ನಿತ್ಯ ನೋಡುತ್ತೇನೆ. ಆದರೆ ಹೇಸಿಗೆಯನ್ನು ಹತ್ತು ಸಾರಿ ಮಾತನಾಡಿದರೂ ಅದು ಹೇಸಿಗೆಯೇ. ಇಂಥವರನ್ನು ಗಲ್ಲಿಗೇರಿಸಿದರೆ ಗಲ್ಲು ಗಂಬವೂ ಹೇಸಿಗೆಯೇ. ಪುಣ್ಯದ ಗರ್ಭದಿಂದ ಹುಟ್ಟಿದವರನ್ನು ಮಾತ್ರ ಗಲ್ಲಿಗೇರಿಸಬಹುದು. ಶಬ್ಧ ಸೂಳೆಯರನಲ್ಲ. ನಾನು ನಿಮ್ಮಂಥವರಧ್ಯಾನದ ಹಣತೆಹಚ್ಚಿಟ್ಟುಕೊಂಡು ಈಗ ಬರೆಯುತ್ತಿದ್ದೇನೆ ವಾಸುದೇವ. ಹಗ್ಗ (ಜನಿವಾರ, ಲಿಂಗ, ನಮಾಜದ ಸಂಘ)ಹರಿದುಕೊಂಡು ಬಂದರೆ ಅದು ಸಮಾಜದ ಭಾಗ್ಯ. ಅಂದಹಾಗೆ, ನನ್ನ ಮಗ ಸಿದ್ಧಾರ್ಥ ಪ್ರೀತಿಯ ಕವಿ ಸಾಹಿರ್ ಲುದಿಯಾನ್ವಿಯ ರಚನೆಯೊಂದನ್ನು ಹಾಡುತ್ತಾನೆ. ಅದರೊಳಗಿನ ಎರಡು ಸಾಲು
ಜೋ ತೊಡೆಗಾ ಹರ್ ಬಂಧ
ತುಫಾನ್ ಬನೇಗಾ. . . .
*****
ತು ಬದಲೆ ಹುಯಿ ವಕ್ತ ಕಿ
ಪೆಹಚಾನ್ ಬನೇಗಾ
ಇದು ಬರಹವನ್ನು ಗಂಭೀರವಾಗಿ ಎತ್ತಿಕೊಂಡ ಎಲ್ಲ ಸೃಜನಶೀಲ ಮನಸ್ಸುಗಳಿಗೂ ಅನ್ವಯವಾಗುವ ಮಾತು. ಜೊತೆಗೆ ನಾವು, ನಮ್ಮ ಬದುಕು ಮತ್ತು ಬರಹ ಮುಟ್ಟಬೇಕಾದ ಗುರಿಗೆ ನನಗೆ ನೆಟ್ಟಗೆ ಕಾಣುವ ದಾರಿ ಇದೊಂದೆ
 ಪತ್ರ ಮುಗಿಸುತ್ತಿದ್ದೇನೆ, ಈಗ ನನ್ನ ಪ್ರಾರ್ಥನೆಯ ಸಾಲು ನೀನು ಕೇಳಬೇಕಲ್ಲ -
ಏಸು ಜನ್ಮ ಬಂದರೇನು ದಾಸನಲ್ಲವೇನು ನಾನು
ಘಾಸಿ ಮಾಡದಿರೋ ಇನ್ನು ವಾಸುದೇವನೆ

         

No comments:

Post a Comment