Total Pageviews

Thursday, July 9, 2015

ಸಾಧನೆ ಮಾತಲ್ಲ



“when I do count the clock that tells the time”
      ಇದು ಶೇಕ್ಸಪಿಯರ್‍ನ ಸುನೀತವೊಂದರ ಮೊದಲ ಸಾಲು. ಇದರಲ್ಲಿ ಮುಗಿಲ ವಿಸ್ತಾರದ ಪದ “ಟೈಮ್”. ಲೆಕ್ಕಕೆಟುಕದ ಟೈಮ್‍ನ್ನು ಲೆಕ್ಕಕ್ಕೆ, ಲೇಖನಿಗೆ, ವ್ಯವಹಾರಕ್ಕೆ ಹೀಗೆ ಏನೆಲ್ಲಕ್ಕೂ ಸಿಕ್ಕು ಹಾಕುವ ದುರ್ಬಲ ಯತ್ನವನ್ನು ನಾವು ಮಾಡುತ್ತಲೇ ಹೊರಟಿದ್ದೇವೆ. ಇದಕ್ಕೊಂದು ಸಾಧನ ಗಡಿಯಾರ. ದುರಂತದ ಸಂಗತಿಯೆಂದರೆ ಈ ಗಡಿಯಾರವನ್ನೇ ನಾವು ಸಮಯ ಎಂದುಕೊಳ್ಳುತ್ತೇವೆ. ಗಡಿಯಾರ ಸಮಯದ ಸೂಚಕವೇ ವಿನಃ ಅದೇ ಸಮಯವಲ್ಲ. ಅದಕ್ಕೇ ಶೇಕ್ಸಪಿಯರ್ ಹೇಳುವುದು “ಗಡಿಯಾರದ ಗಂಟೆಗಳನ್ನೆಣಿಸುವಾಗ ಅದು ನನಗೆ ಕಾಲದ ಕತೆ ಹೇಳುತ್ತದೆ” ಎಂದು. ಇಂಥ ಕಾಲದ ಹೆಮ್ಮರಕ್ಕೆ ನಾನು-ನೀವು, ಅವರು-ಇವರು ಎಲ್ಲರೂ ಎಲೆ-ಹೂ-ಕಾಯಿಗಳು. ನನಗೆ ದೊರೆತ ಅಂಥ ಒಂದು ಮಹತ್ವದ ಫಲ ನಾಟಕಕಾರ ಎಮ್.ಎಸ್.ಖೇಡಗಿ. ಕಳೆದ ಒಂದು ವರ್ಷದಿಂದ ಅವರು ನನ್ನ ಅಂಕಣದ ಗಂಭೀರ ಓದುಗರು. ಆದರೆ ನಾನು ಮಾತ್ರ ಬಾಲ್ಯದಿಂದ ಅವರ ನಾಟಕಗಳ ಪ್ರೇಕ್ಷಕ. ಈಗಲೂ ಬಿಜಾಪುರದ ಬಸ್ಟ್ಯಾಂಡ್‍ನ ರಂಗಮಂದಿರದ ಪಕ್ಕದಲ್ಲಿ ತಮ್ಮ ಸಾಹಿತ್ಯದ ಒಂದು ಅಂಗಡಿಯನ್ನು ತೆರೆದುಕೊಂಡು ನಮ್ಮಂಥವರಿಗೆ ಮನೆಗೆ ಕರೆದೊಯ್ದು ಊಟ ಮಾಡಿಸಲು ಕಾಯುವವ ಸೂಫಿ ಸಂಸ್ಕøತಿಯ ಸಮೃದ್ಧ ಲೇಖಕ. ಹುಟ್ಟಿನಿಂದ ಮುಸ್ಲಿಮ್‍ರಾದರು ಹಿಂದೂ ಹಬ್ಬ-ಹರಿದಿನಗಳ ಮಹಾನ್ ಪ್ರೇಮಿ. ನಿವ್ರ್ಯಸನಿ, ಸಮಾಧಾನಿ.
      ರಂಗಕರ್ಮಿಗಳೆಂದರೆ ನಿದ್ರೆ ಕಾಣದ ಕಣ್ಣಿನ, ಜಳಕವನ್ನು ಜನ್ಮದುದ್ದಕ್ಕೂ ನಿರಾಕರಿಸಿದ, ಬಿಕಾರಿ ಬುದ್ಧಿಯ ಮನುಷ್ಯ ಎಂದು ಬಿಂಬಿಸುವವರಿಂದ ಭಿನ್ನ ನಿಲ್ಲುತ್ತಾರೆ ನಮ್ಮ ಖೇಡಗಿ. ಅವರ ಮನೆಯ ಊಟ ಮಾಡುವವರಿಗೆ ಒಂದು ಬಾಯಿ ಸಾಲುವುದಿಲ್ಲ. ಅವರ ಚಪ್ಪಲಿಯಿಂದ ಷರ್ಟ್‍ವರೆಗೆ ಬಿಳಿಯ ಸಮವಸ್ತ್ರ ಬಿಟ್ಟರೆ ನೀವಿನ್ನೇನೂ ನೋಡುವುದಿಲ್ಲ. ಈಗ ವೃತ್ತಿರಂಗಭೂಮಿ ಸಾಯುತ್ತಿದೆ. ಆದರೆ ಅದರ ಗತವೈಭವಕ್ಕೆ ಅವರ ಮನೆಯೊಂದು ಅಪರೂಪದ ಸಾಕ್ಷಿಯಾಗಿದೆ.
     ಇದೇ ವಾರದಲ್ಲಿ ಬೆಂಳೂರಿನ ವಿಕಾಸಸೌಧದ ಕನ್ನಡ-ಸಂಸ್ಕøತಿ ಮತ್ತು ವಾರ್ತಾ ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿಯವರಾದ ಶ್ರೀ ಬಿ.ಜಿ. ನಂದಕುಮಾರರ ಕಛೇರಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರೂ, ಹಿರಿಯ ವಿದ್ವಾಂಸರೂ ಆದ ಶ್ರೀ ಎಮ್. ಎಚ್. ಕೃಷ್ಣಯ್ಯನವರ ಭೇಟಿಯಾಯಿತು. ಒಂದು ಗಂಟೆಯ ಸಂವಾದದ ನಂತರ ನನಗೆ ಅವರ ಮನೆಗೆ ಬರಲು ಆಹ್ವಾನ. ದಿನಾಂಕ:09-07-2015ರ ಸಾಯಂಕಾಲ ನನ್ನ ಶ್ರೀಮತಿಯವರೊಂದಿಗೆ ರಾಜಾಜಿನಗರದ ಶ್ರೀ ಎಮ್.ಎಚ್.ಕೆ ಅವರ ಮನೆಗೆ, ಹಳೆಯ ಬೆಂಳೂರಿನ ಅತ್ಯಂತ ಹಳೆಯ ಮನೆಯ ಗೇಟ್ ಮುಂದೆ ಸದಾ ಹೊಸಾ ಆಲೋಚನೆಗಳಿಗೆ ಹಸಿಯುವ ಈ ಹಿರಿಯರು ಕಾಯುತ್ತ ನಿಂತ ಪರಿಗೆ ನಾನು ಗಾಬರಿಯಾದೆ. ಅವರಿಗೆ ಸಮಯವೆಂದರೆ ಸರ್ವಸ್ವ. ಸಾಹಿತ್ಯ, ಚರಿತ್ರೆ, ಲಲಿತಕಲೆ, ಕಲಾವಿಮರ್ಶೆ, ಸೌಂದರ್ಯ ವಿಮಾಂಸೆ, ಗಣಕ ಕ್ಷೇತ್ರ ಹೀಗೆ ಸಮಕಾಲೀನ ಬರಹಗಾರರಲ್ಲಿಯ ಸಾಹಿತ್ಯ ಮತ್ತು ಕಲೆಗಳ ಶಾಸ್ತ್ರೀಯತೆಯ ಕುರಿತು ತಲಸ್ಪರ್ಶಿಯಾಗಿ ಮಾತಾನಾಡುವ ಸಾಮಥ್ರ್ಯವಿರುವ ಹಿರಿಯರು. ಪ್ರಾದಿಮ ಮಾನವ ಕಲೆ, ಗಣಕ ಕಲೆ, ಪ್ರಸಾಧನ ಕಲೆ ಹಾಗೂ ಕೋಲಾಜ್ ಕಲೆಗಳ ಕುರಿತು ಅವರ ಬರಹಗಳನ್ನಂತೂ ನಾವು ಓದಲೇಬೇಕು. ಐ.ಎ.ಎಸ್ ವಿದ್ಯಾರ್ಥಿಗಳಿಗೆ ಅವರು ನೀಡುವ ಉಪನ್ಯಾಸಗಳನ್ನು ಕಾಯ್ದಿಡಬೇಕು.
ಬಹಳ ದಿನಗಳ ನಂತರ ಬೆಂಗಳೂರಿನಲ್ಲಿ ಭಾಗ್ಯ ಸಿಕ್ಕ ಅನುಭವವಾಗಿದೆ. ಕಾರಣ ಶ್ರೀ ಎಂ.ಎಚ್.ಕೃಷ್ಣಯ್ಯ. ನನ್ನ ಈ ಸಂಭ್ರಮಕ್ಕೆ ಅರ್ಥವಿದೆ. ಯಾಕೆಂದರೆ ಪಾಂಡಿತ್ಯ ಫೂಟ್‍ಪಾತ್ ಮೇಲೆ ಸಿಗುವುದಿಲ್ಲ, ಸಿಗುವುದಲ್ಲ.
       ತೀರ ವೈಯಕ್ತಿಕವಾದ ಸಂತೋಷವಾದರೂ ಕೂಡಾ ಸಮಾಜದಿಂದ ಹೊರತಾದ ಒಂದು ಅಸ್ತಿತ್ವ ನನ್ನದಲ್ಲವಾದುದರಿಂದ ಇದನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕಿದೆ. ಒಂದು ವರ್ಷದ ಹಿಂದೆ ನನ್ನ ಶ್ರೀಮತಿಯವರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರಿನ ಕಛೇರಿ ಸೇರಿಕೊಂಡ ಹಿನ್ನೆಲೆಯಲ್ಲಿ, ಸಿಕ್ಕ ದಾರಿಗೆ ಸಮಾಧಾನಪಟ್ಟುಕೊಂಡು, ಪಾಠ-ಪ್ರವಚನಗಳಿಗೆ ನಮಸ್ಕಾರ ಹೇಳಿ, ಆಡಳಿತಾಧಿಕಾರಿಯಾಗಿ ಜವಾಬ್ದಾರಿ ಹೊತ್ತುಕೊಂಡೆ. ಆದರೆ ನನ್ನನ್ನೊಬ್ಬ ಉತ್ತಮ ಉಪನ್ಯಾಸಕನಾಗಿ ಕಂಡ ನನ್ನ ಸಾವಿರಾರು ಅಭಿಮಾನಿಗಳಾದಿಯಾಗಿ ನನ್ನ ತಂದೆಯವರೆಗೂ ನಾನು ಪಾಠ-ಪ್ರವಚನಗಳಲ್ಲಿಯೇ ಇರಬೇಕು, ಸಾಹಿತ್ಯದ ಉತ್ತಮ, ಗಂಭೀರ ವಿದ್ಯಾರ್ಥಿಗಳನ್ನು ಸೃಷ್ಠಿಸಬೇಕು ಎಂದು ಅವರ ಸಂಕಲ್ಪವಾಗಿತ್ತು.
    ಈಗ ಅವರ ಸಂಕಲ್ಪ ಗೆದ್ದಿದೆ. ನಾನು ಮತ್ತೆ ಪಠ್ಯಗಳನ್ನೆತ್ತಿಕೊಂಡು ನನ್ನ ದೈವಗಳಾದ ವಿದ್ಯಾರ್ಥಿಗಳ ಮುಂದೆ ನಿಂತಿದ್ದೇನೆ. ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 4000 ವಿದ್ಯಾರ್ಥಿಗಳು, 100 ಶಿಕ್ಷಕರು ನನ್ನ ಬಳಗವಾಗಿದ್ದಾರೆ. ಬಾರ್ಡ್‍ರ್‍ನಲ್ಲಿ ಇಂಗ್ಲೀಷ್ ಬಾರದಕ್ಕೆ ಬಿಕ್ಕಿ ಅಳುತ್ತಿದ್ದ ಒಂದು ಕಾಲದ ನನ್ನೊಳಗಿನ ಬಾಲಕ, ಈಗ ಬೆಂಗಳೂರೆಂಬ ರಾಜಧಾನಿಯಲ್ಲಿ ಗರಿಗೆದರಿ ಬಾನಾಡಿಯಾಗುವುದು ಒಂದು ದಿನದ ಸಾಧನೆಯ ಮಾತಲ್ಲ, ನಲವತ್ತು ವರ್ಷಗಳ ತಪಸ್ಸು. ನಿರಂತರ ತಪಸ್ಸು. ನನ್ನ ಈ ನಡಿಗೆ ನಿಮಗೂ ಇಷ್ಟವಾಗಿರಬಹುದೆಂದೇ ನನ್ನ ನಂಬಿಕೆ.

No comments:

Post a Comment