Total Pageviews

Friday, September 23, 2016

ಮುಹಾಜಿರ್‍ನ ಮಾತುಗಳು....(PART-2)



ಗೇಬ್ರಿಯಲ್ ಪ್ರೇರಣೆಯಿಂದ ಮೊಹಮ್ಮದರಿಂದ ಹೊರಬಂದುದೆಲ್ಲ ದೇವವಾಣಿಯಾಗಿದೆ ಎನ್ನುವುದು ಇಸ್ಲಾಮಿಕ್ ಧಾರ್ಮಿಕರ ವಾದ. ತೊಂದರೆ ಇಲ್ಲ, ಆದರೆ ಚಲನಶೀಲವಾದ ಮತ್ತು ಎಲ್ಲಡೆಯೂ ವ್ಯಾಪಿಸಿದ ಒಂದು ಜನಾಂಗದ ಜೀವನ ನಿರ್ದೇಶನದ ನಿಯಮಗಳು ಎಲ್ಲ ಕಾಲಕ್ಕೂ, ಎಲ್ಲಡೆಯೂ ಒಂದೇ ಆಗಿರಬೇಕು ಹಾಗೂ ಅವು ಪ್ರಶ್ನಾತೀತವಾಗಿರಬೇಕು ಎನುವುದೇಕೋ ತುಸು ಅತಿರೇಕವಾಯಿತು. ಧರ್ಮದಾರಿಎನ್ನುವುದಾದರೆ ದಾರಿಗೆ ಉಪದಾರಿಗಳು ಕಾಲಕಾಲಕ್ಕೆ ನಿರಂತರವಾಗಿ ಹುಟ್ಟುತ್ತಲೇ ಇರುತ್ತವೆ. ಅವುಗಳನ್ನು ಗೌರವಿಸಬೇಕಾದುದು ಧರ್ಮದ ಸನಾತನತೆಯ ಸೌಂದರ್ಯವಾಗಿದೆ. ಯಾಕೆಂದರೆ ಯಾವುದು ಸನಾತನವೋ ಅದು ಅಸಹನೀಯತೆಯ ಸಂಕೇತವಾಗಲು ಸಾಧ್ಯವಿಲ್ಲ, ಯಾಕೆಂದರೆ ಅದು ಸಹನೆಯನ್ನು ಸಾವಿರಾರು ವರ್ಷ ಬದುಕಿದ ಮಹಾ ವೃಕ್ಷ.
ಸುಡುವ ಮರಳು, ಸಾವಿನಂತೆ ಎರಗುವ ಗಾಳಿ, ಅಪನಂಬಿಕಗಳಿಂದ ಕ್ಷುದ್ರವಾಗಿದ್ದ ಮನುಷ್ಯರು, ಇಂಥವುಗಳ ಮಧ್ಯ ಒಂದು ಜೀವನ ಧರ್ಮದ ಕನಸು ಎಷ್ಟೊಂದು ದುಬಾರಿ ನೀವೇ ಆಲೋಚಿಸಿ. ಪ್ರಪಂಚವನ್ನೇ ನುಂಗಿ ಹಾಕುವ ಸಮರೋಪಾದಿಯಲ್ಲಿ ವಿಸ್ತಾರಗೊಳ್ಳುತ್ತಿದ್ದ ರೋಮನ್ ಚಕ್ರಾಧಿಪತ್ಯದ ಮುಂದೆ ಅಸ್ಮಿತೆಯಿಲ್ಲದೆ, ಅಲೆಮಾರಿಗಳಾಗಿದ್ದ ಬುಡಕಟ್ಟುಗಳನ್ನೆಲ್ಲ ಸೇರಿಸಿ ಒಂದು ಪರ್ಯಾಯ ಧಾರ್ಮಿಕ ವ್ಯವಸ್ಥೆಯಾಗಿ ನಿಲ್ಲುತ್ತೇನೆ ಎನ್ನುವ ಮೊಹಮ್ಮದರ ಕನಸು ನನ್ನ ಪಾಲಿಗೆ ನೆಪೆÇೀಲಿಯನ್ ಕನಸಿಗಿಂತಲೂ ಮಹತ್ತರವಾದುದು. ಆದರೆ ಭೌಗೋಳಿಕ ಪಾರಮ್ಯಕ್ಕಾಗಿ ನೆಪೆÇೀಲಿಯನ್ ತನ್ನ ಸಾಧನೆಗೆ ಸೈನ್ಯವನ್ನು ನೆಚ್ಚಿಕೊಂಡರೆ ಮೊಹಮ್ಮದರು ನೆಚ್ಚಿಕೊಂಡಿದ್ದು ಕೆಂಪು ಸಮುದ್ರದಿಂದ ಐವತ್ತು ಮೈಲಿ ದೂರದಲ್ಲಿರುವ ಮೆಕ್ಕಾ ಪಟ್ಟಣದ ಒಂದು ಗುಡಿಯನ್ನು. ಕಾಲ ಮತ್ತು ಸಂದರ್ಭಗಳಿಗನುಸಾರವಾಗಿ ಹತ್ತು ಸಾರಿ ಮತ್ತೆ ಮತ್ತೆ ನಿರ್ಮಾಣವಾದ, 40x35 ವ್ಯಾಪ್ತಿಯ 50 ಅಡಿ ಎತ್ತರದ, 361 ವಿಗ್ರಹಗಳಕಾಬಾಎಂಬ ಶೃದ್ಧಾಕೇಂದ್ರದ ಮೂಲಕವೇ ಮೊಹಮ್ಮದರ ಧಾರ್ಮಿಕ ನಾಯಕತ್ವದ ಪುಟ ಪ್ರಾರಂಭವಾಗಬೇಕಿತ್ತು. ಅರಬ್, ಸರಾಕೆನಾಯ್, ಬೆನ್ನಿಸಾದ್, ಬೆದೊವಿನ್, ಬೆನಿಹವಾಜಿನ್, ಕಿನಾನಾ, ಜರಹೂಮ್, ಖುರೇಷಿ-ಹೀಗೆ ಹಲವಾರು ಬುಡಕಟ್ಟು ಜನಾಂಗಗಳ ವ್ಯಾಪ್ತಿಗೆ ಬಂದು ಹೋದ ಸ್ಥಳ ಅಂತಿಮವಾಗಿ ಇಸ್ಲಾಂದ ಪಾಲಿನ ಪವಿತ್ರ ಸ್ಥಳವಾಗಿ ರೂಪುಗೊಳ್ಳುವುದರಲ್ಲಿ ಮೊಹಮ್ಮದರ ಪಾತ್ರ ಮಹತ್ವದ್ದಾಗಿದೆ. ಆದರೆ ಗೊತ್ತಿರಲಿ, ಇದು ಪೈಗಂಬರ್ ಸ್ಥಾಪಿತವಲ್ಲ, ಸಿರಿಯಾ, ಲೆಬನಾನ್, ಪ್ಯಾಲೆಸ್ಟೈನ್ಗಳನ್ನು ಸುತ್ತಿ ಬಂದಿದ್ದ ಅವರ್ಬಿನ್ ಲೂಹಾಯಿ ಎಂಬ ಧರ್ಮನಿಷ್ಠ  ವ್ಯಕ್ತಿ ಎಲ್ಲ ಜನರನ್ನು ಕಾಬಾದೆಡೆಗೆ  ಕರೆದ ಮೊದಲ ವ್ಯಕ್ತಿ.
 ಜೀಸಸ್, ಮೋಸೆಸ್, ಝರಾತೃಷ್ಟ್, ಮೊಹಮ್ಮದ್, ಬುದ್ಧ ಅಥವಾ ಬಸವ ಯಾರೇ ಆಗಿರಲಿ, ಅವರೆಲ್ಲರೂ ಮನುಷ್ಯರಾಗಿದ್ದರೆನ್ನುವುದೇ ಮನುಷ್ಯರ ಮುಂದಿರುವ ಮಹಾಪಂಥ(ಚಾಲೆಂಜ್). ಯಾವುದೇ ನೆಲೆಯಲ್ಲಾದರೂ ಸರಿ, ಇದನ್ನೊಪ್ಪಿಕೊಳ್ಳದ ಮನುಷ್ಯರು ಆರಾಧಕರಾಗುತ್ತಾರೆ, ಆರಾಧಕರು ಸಾಮಾನ್ಯವಾಗಿ ಸಮಾಜದ ಆರೋಗ್ಯಕ್ಕೆ ಹಾನಿಕಾರಕವಾಗುತ್ತಾರೆ. ಧರ್ಮ ಮತ್ತು ಧರ್ಮಾತ್ಮರು ಅನುಸರಣೆಗೆ ಮಾದರಿಗಳಾಗಬೇಕೆ ವಿನಃ ಆರಾಧನ ಕೇಂದ್ರವಾಗಬಾರದು. ಬಹುತೇಕ ಇದು ತಿರುವು-ಮುರುವಾದುದೇ ಪ್ರಪಂಚದ ಎಲ್ಲ ಧರ್ಮಗಳ ಮತಿಹೀನತನಕ್ಕೆ ಕಾರಣವಾಯಿತು. ಇದು ಇಸ್ಲಾಂದ ಪಾಲಿಗೂ ಸತ್ಯ.
ನಮ್ಮ ನಿಮ್ಮಂತೆಯೆ ಪ್ರಶ್ನೆ, ಸಂಕಷ್ಟ, ಸಂಕಟಗಳಿಗೆ ಸಾಕ್ಷಿಯಾದ ಮೇಲಿನ ಧರ್ಮಾತ್ಮರೆಲ್ಲ ಆಕಾಶದಿಂದ ಉದರಲಿಲ್ಲ. ಉದರವೇ ಎಲ್ಲ ಉತ್ಪತ್ತಿಗಳ ಕರ್ಮಭೂಮಿ. ಪ್ರಪಂಚದ ಯಾವ ಧರ್ಮಗ್ರಂಥವೂ ನಭದಿಂದ ನೆಲಕ್ಕೆ ಇಳಿಯಲಿಲ್ಲ. ಮೊಹಮ್ಮದರ ಪಾಲಿನ ಅಂಥ ಭೂಮಿ ಅವರ ತಾಯಿ ಆಮೀನ್ ಹಾಗೂ ತಂದೆ ಅಬ್ದುಲ್ಲಾ. ಮೊಹಮ್ಮದ್ ಹುಟ್ಟಿದ್ದು ಕ್ರಿ. 570 ನೇ ಅಗಸ್ಟ್ 20 ರಂದು.  ಆದರೆ ಅವರು ಬೆಳೆದದ್ದು ತೂವೈಬಾ ಮತ್ತು ಹಲಿಮಾ ಎಂಬ ಗುಲಾಮ ತಾಯಂದಿರ ಪ್ರೀತಿಯ ಆರೈಕೆಯಲ್ಲಿ. ಹಲವು ತಾಯಂದಿರ ಎದೆಯ ಋಣಭಾರವಿತ್ತು ಮೊಹಮ್ಮದರಿಗೆ. ಜನಾಂಗಭೇದದಿಂದ ನರಳುವ ನೆಲದಲ್ಲಿ ಹಲವು ಜನಾಂಗಗಳ ತಾಯಂದಿರ ಎದೆಹಾಲು ಕುಡಿದು ಅವರು ಪ್ರೀತಿಯ ಎರವಲು ಪಡೆದಿದ್ದರು. ಬಹುತೇಕ ಇದೇ ಕಾರಣವಾಯಿತೇನೊ, ಮೊಹಮ್ಮದರ ಇಡೀ ಬದುಕು ಇವೆರಲ್ಲರನ್ನು ಒಗ್ಗೂಡಿಸುವುದರಲ್ಲಿಯೇ ಕಳೆದುಹೋಯಿತು. ತಾಯಿಯದೊ, ಹೆಂಡತಿಯದೊ ಅಥವಾ ಗೆಳತಿಯದೊ ಎದೆಯ ಋಣಭಾರವೇ ಅಂಥಹದು, ಅಲ್ಲವೇ
ತಂದೆ-ತಾಯಿಗಳಿಬ್ಬರನ್ನು ಆರನೇ ವಯಸ್ಸಿನಲ್ಲಿಯೇ ಕಳೆದುಕೊಂಡಿದ್ದ ಮೊಹಮ್ಮದರನ್ನು ಮಹಾತಾಯಿಯಾಗಿದ್ದ ಅವರ ಅಜ್ಜ ಮುತಾಲಿಮ್ ಅತ್ಯಂತ ಪ್ರೀತಿಯಿಂದ ಬೆಳೆಸಿದ. ದೊಡ್ಡಪ್ಪ ಅಬು ತಾಲಿಬ್ 12 ವರ್ಷದ ಬಾಲಕನನ್ನು ಸಿರಿಯಾದ ಸಂತೆಗಳಿಗೆ ಕರೆದುಕೊಂಡು ಹೋದ. ಇದುವೇ ಮೊಹಮ್ಮದರ ಪಾಲಿನ ಸ್ವರ್ಣ ಘಳಿಗೆ. ಮೂಲಕವೇ ಅವರಿಗೆ ಕ್ರಿಶ್ಚಿಯನ್, ಯಹೂದಿ ಧರ್ಮಗಳ ಸಂಪರ್ಕ ಹಾಗೂ ಜಾಗತಿಕ ಜ್ಞಾನ.
ಅತ್ಯಂತ ಎಚ್ಚರಿಕೆ ಹಾಗೂ ಘನತೆಯ ಯೌವ್ವನವನ್ನು ಕಳೆದ ಮೊಹಮ್ಮದ ತಮಗಿಂತಲೂ 25 ವರ್ಷ ಹಿರಿಯಳಾದ ಖತೀಜಾಳನ್ನು ಮದುವೆಯಾದಾಗ ಅವಳು ಆಗಲೇ ಎರಡು ಮದುವೆಯ ಭಾಗ್ಯಗಳನ್ನು ಕಂಡ 40 ವರ್ಷಗಳ ವಿಧವೆ. ಇವಳಿಂದ ಮೊಹಮ್ಮದರಿಗೆ 8 ಗಂಡು ಹಾಗೂ 4 ಹೆಣ್ಣುಮಕ್ಕಳ ಮಹಾ ಸಂಸಾರ. ಇದರ ಮಧ್ಯ ಅನೇಕ ಮಕ್ಕಳನ್ನು ದತ್ತು ಪಡೆಯುತ್ತಾರೆ ಮೊಹಮ್ಮದ್. ಹಿರಾ ಪರ್ವತದ ಗುಹೆಗಳಲ್ಲಿ ಪಾರ್ಥನೆ ಮಾಡುತ್ತಾ ಅಧ್ಯಾತ್ಮಿಕ ಸಿದ್ಧಿಯನ್ನು ಸಾಧಿಸುತ್ತಾರೆ. ನಲವತ್ತು ವಯಸ್ಸಿನ ತನ್ನ ಗಂಡನನ್ನು ಅಧ್ಯಾತ್ಮಿಕ ಸಾಧನೆಯಲ್ಲಿ ಬಿಟ್ಟುಕೊಟ್ಟಿದ್ದ ಖತೀಜಾ ಮೊಹಮ್ಮದ್ ಸಾಧನೆ ಮಾಡಿ ಹಿಂದಿರುಗಿದಾಗ ಅವರನ್ನು ಪ್ರವಾದಿ ಎಂದು ಒಪ್ಪಿಕೊಂಡು ಮೊದಲ ಶಿಷ್ಯಳಾಗುತ್ತಾಳೆ. ಇವರ ಮೇಲೆ ಜಗತ್ತು ಏನೆಲ್ಲಾ ಅನಾಚರವನ್ನು ಎಸಗುವಾಗ ಮೊಹಮ್ಮದರಲ್ಲಿಸಲಾಂ ಆಲೆಕುಂ(ಶಾಂತಿ ಇರಲಿ ನಿನ್ನ ಮೇಲೆ) ಎನ್ನುವ ಹೃದಯ ಸಂಸ್ಕಾರಕ್ಕೆ ಕಾರಣಳಾಗುತ್ತಾಳೆ.
ಒಂದು ವಾದದ ಪ್ರಕಾರಮುಸ್ಲಿಂಎಂಬುದೂ ಕೂಡಾ ಒಂದು ನಿಂದನೆಯ ಪದವೇ. ಆದರೆ ತನ್ನೆಡೆಗೆ ಎಸೆದ ಅಪಮಾನದ ಕಲ್ಲುಗಳನ್ನೇ ಮೆಟ್ಟಿಲುಗಳನ್ನಾಗಿಸಿಕೊಳ್ಳುವ ತಂತ್ರವನ್ನು ಮೊಹಮ್ಮದ್ ಬಳಸಿ ಮಹಾಮಾನವರಾಗುತ್ತಾರೆ. ನಿರಂತರ ಹತ್ತು ವರ್ಷ ಮೆಕ್ಕಾದಲ್ಲಿ ವಿರೋಧಿಗಳಿಂದ ಏನೆಲ್ಲಾ ಹಿಂಸೆಯನ್ನು ಅನುಭವಿಸುತ್ತಾರೆ. ಇಂಥ ಮೊಹಮ್ಮದರ ಆರಂಭಿಕ ನಾಲ್ಕು ವರ್ಷದ ಹೋರಾಟದಲ್ಲಿ ದಕ್ಕಿದ್ದು ನಲವತ್ತೇ ಜನ. ಸ್ವಯಂ ಉತ್ತಮ ಕವಿಯಾಗಿದ್ದ ಮೊಹಮ್ಮದ್ಇಸ್ಲಾಂಎಂದರೆ ದೇವರಿಗೆ ಸಂಪೂರ್ಣವಾಗಿ ಅರ್ಪಿಸಿಕೊಳ್ಳುವುದು. ಹೀಗೆ ಯಾರು ಅರ್ಪಿಸಿಕೊಳ್ಳುವರೋ ಅವರುಮುಸ್ಲಿಂರು ಎಂದು ಹೊಸ ವಾದವನ್ನು ಸ್ಥಾಪಿಸುತ್ತಾರೆ.
ಅವರ ಅತ್ಯಂತ ಪ್ರೀತಿಯ ಕಿರಿಯ ಹೆಂಡತಿ ಆಯೇಷಾ ಅವರ ನಿಧನದ ನಂತರ 47 ವರ್ಷ ತನ್ನ ಮನೆಯಲ್ಲಿಯೇ ಇದ್ದ ಮೊಹಮ್ಮದ್ ಗೋರಿಯೊಂದಿಗೆ ಬದುಕಿರುತ್ತಾಳೆ. ಅರವತ್ತ್ಮೂರು ವರ್ಷ ಬದುಕಿದ್ದ ಮೊಹಮ್ಮದ್ ಕೊನೆಯ ಇಪ್ಪತ್ತು ವರ್ಷ ಸಂಕಟಪಟ್ಟ ರೀತಿ ಅಲ್ಹಾಹನಿಗೆ ಪ್ರಿಯ. ಒತ್ತಡದ ಬದುಕಿನಿಂದ ಅಕಾಲಿಕವಾಗಿ ವೃದ್ಧವಾದ ಅವರ ಶರೀರ ಕುಗ್ಗಿ ಕುಗ್ಗಿ ಬಸವಳಿದು ಹೋಗಿತ್ತು. ಇಡೀ ಬದುಕೆಂದರೆ ಮತ್ತೇನೂ ಅಲ್ಲ, ಶಾಂತಿಗಾಗಿ ಹೋರಾಟ. ಸಮರ್ಪಣೆಗಾಗಿ ಹೋರಾಟ, ಸಹೋದರತ್ವದ ಸ್ಥಾಪನೆಗಾಗಿ ಹೋರಾಟ ಎಂದು ಬದುಕಿದ್ದ ಪೈಗಂಬರರ ಆಲೋಚನೆಗಳು ಅವರ ಅವಸಾನದ ನಂತರ ಅತ್ಯಂತ ಉಗ್ರ ಸ್ವರೂಪವನ್ನು ಪಡೆದದ್ದು ಒಂದು ದುರಂತವಷ್ಟೆ
 ಪ್ರಪಂಚದ ಎಲ್ಲ ಧರ್ಮಗಳಲ್ಲಿ ಆಗಿರುವಂತೆಯೇ ಈಗ ಇಸ್ಲಾಂದ ಠೇಕಿದಾರರೂ ಹುಟ್ಟಿಕೊಂಡಿದ್ದಾರೆ. ಅದನ್ನು ಪ್ರಶ್ನಾತೀತವೆಂದು ಸಾರುವುದರ ಮೂಲಕ ತಾವು ಪ್ರಶ್ನಾತೀತರು ಎನ್ನುವ ಸುಳ್ಳನ್ನು ಸ್ಥಾಪಿಸುತ್ತಿದ್ದಾರೆ. ಹತ್ಯೆಯ ಮೂಲಕ ಭಯವನ್ನು ಸೃಷ್ಟಿಸಬಹುದು ಎನ್ನುವ ಕಲ್ಪನೆಗಳಲ್ಲಿದ್ದಾರೆ. ಆದರೆ ಇದುವರೆಗೆ ಪ್ರಪಂಚದ ಯಾವುದೇ ಆಲೋಚಕನ ಹತ್ಯೆಯೂ ಯಾವುದೇ ಆಲೋಚನೆಯ ಹತ್ಯೆಯ ಕನಿಷ್ಟ ನಾಂದಿಯನ್ನು ಕೂಡ ಹಾಡಿಲ್ಲ.
ಹೀಗೆಂದ ಮೇಲೆ ಕಳೆದ 700 ವರ್ಷಗಳಿಂದ ನೆಲದೊಂದಿಗಿರುವಇಸ್ಲಾಂಯಾವುದು? ಮತ್ತು ನಾವು ಯಾವ ಇಸ್ಲಾಂನ್ನು ಗೌರವಿಸುತ್ತ ಬಂದಿದ್ದೇವೆ ಎನ್ನುವುದನ್ನು ನಾನು ನನ್ನ ಸಾವಿರ ವರ್ಷದ ಗೆಳೆಯ ಸಾಹಿರ್ ಲುಧಿಯಾನ್ವಿಯ ಸಾಲುಗಳಿಂದ ತಿಳಿದಿದ್ದೇನೆ. ಕಾರಣಕ್ಕಾಗಿ ಬಹಳ ಪ್ರೀತಿಸಿದ್ದೇನೆ ಪದ್ಯವನ್ನು. ಇದೊಂದು ಪೂರಕ ಸಂಗತಿಯಷ್ಟೆ, ಇಡಿಯಾಗಿ ಕವಿತೆಯನ್ನು ದಕ್ಕಿಸಿಕೊಳ್ಳಲಾಗದಿದ್ದರೂ, ಇದರ ಒಂದಿಷ್ಟು ತುಂಡುಗಳನ್ನುಧೂಲ್ ಕಾ ಫೂಲ್ಚಿತ್ರದಲ್ಲಿ ಬಹಳ ಸುಂದರವಾಗಿ ಅಳವಡಿಕೊಂಡಿದ್ದಾರೆ.
             ಶುದ್ಧ ಸಾಹಿತ್ಯಿಕ ರಚನೆಯೊಂದು ಭಾರತೀಯ ಚಲನಚಿತ್ರ ರಂಗಕ್ಕೆ ಒಗ್ಗಿದ ಅಪರೂಪದ ಕೆಲವೇ ಕೆಲವು ಉದಾಹರಣೆಗಳಿವೆ. ಅದರಲ್ಲಿ ಇದೂ ಒಂದು. ನಿಟ್ಟಿನಲ್ಲಿ ಸಾಹಿರ್ ಸುದೈವಿಯೇ ಸರಿ.

ತು ಹಿಂದೂ ಬನೇಗಾ ಮುಸಲ್ಮಾನ್ ಬನೇಗಾ
ಇನ್ಸಾನ್ ಕಿ ಔಲಾದ್ ಹೇ
ಇನ್ಸಾನ್ ಬನೇಗಾ
ಅಚ್ಚಾ ಹೇ ಅಭಿ ತಕ್ ತೇರಾ ಕುಛ್ ನಾಮ್ ನಹೀ ಹೈ
ತುಜಕೊ ಕಿಸಿ ಮಝಹಬ್ ಸೆ ಕೋಯಿ ಕಾಮ್ ನಹೀ ಹೈ
ಜಿಸ್ ಇಲ್ಮ್ ನೇ ಇನ್ಸಾನ್ ಕೊ ತಕ್ಸಿಮ್ ಕಿಯಾ ಹೈ
ಉಸ್ ಇಲ್ಮ್ ಸೇ ತುಜ್ ಪರ್ ಕೊಯಿ ಇಲ್ಜಾಮ್ ನಹೀ ಹೈ

ತು ಬದಲೇ ಹುವೇ ವಕ್ತ್ ಕಿ ಪೆಹಚಾನ್ ಬನೇಗಾ
ಇನ್ಸಾನ್ ಕಿ ಔಲಾದ್ ಹೇ ಇನ್ಸಾನ್ ಬನೇಗಾ

ಮಾಲೀಕ್ ನೇ ಹರ್ ಇನ್ಸಾನ್ ಕೊ ಇನ್ಸಾನ್ ಬನಾಯಾ
ಹಮ್ ನೆ ಉಸೆ ಹಿಂದೂ ಯಾ ಮುಸಲ್ಮಾನ್ ಬನಾಯಾ
ಕುದರತ್ ನೆ ಜೊ ಭಕ್ಷಿದಿ ಹಮೆ ಏಕ್ ಹೀ ಧರತಿ
ಹಮ್ನೇ ಕಯಿ ಭಾರತ್ ಕಯಿ ಇರಾನ್ ಬನಾಯಾ

ಜೋ ತೊಡೆಗಾ ಹರ ಬಂದ್ ವೋ ತೂಫಾನ್ ಬನೇಗಾ
ಇನ್ಸಾನ್ ಕೀ ಔಲಾದ್ ಹೈ ಇನ್ಸಾನ್ ಬನೇಗಾ

ನಫರತ್ ಜೋ ಸಿಖಾಯೇ ವೋ ಧರಮ್ ತೇರಾ ನಹೀ ಹೈ
ಇನ್ಸಾಫ್ ಜೋ ರೂಂದೆ ವೋ ಕದಮ್ ತೇರಾ ನಹೀ ಹೈ
ಕುರ್-ಆನ್ ಹೊ ಜಿಸಮೆ ವೋ ಮಂದಿರ್ ನಹೀ ತೇರಾ
ಗೀತಾ ಹೊ ಜಿಸಮೆ ವೋ ಹರಮ್ ತೇರಾ ನಹೀ ಹೈ

ತು ಅಮ್ನ್ ಕಾ ಔರ್ ಸುಲಹ ಕಾ ಅರಮಾನ್ ಬನೇಗಾ
ಇನ್ಸಾನ್ ಕೀ ಔಲಾದ್ ಹೈ ಇನ್ಸಾನ್ ಬನೇಗಾ

ಯೇ ದಿನಕೆ ತಾಜರ್ ಯೇ ವತನ್ ಬೇಚನೆವಾಲೆ
ಇನ್ಸಾನೊಕಿಂ ಲಾಶೋ ಕೆ ಕಫನ್ ಬೆಚನೆವಾಲೆ
ಯೇ ಮೆಹಲೊ ಮೆ ಬೈಟೆ ಹುವೆ ಕಾತಿಲ್ ಯೇ ಲುಟೆರೆ
ಕಾಟೋಂ ಕೆ ಮಜರೂಹ್ ಚಮನ್ ಬೇಚನೆವಾಲೆ

ತು ಇನ್ ಕೆ ಲೀಯೆ ಮೌತ್ ಕಾ ಯೇಲಾನ್ ಬನೇಗಾ
ಇನ್ಸಾನ್ ಕಿ ಔಲಾದ್ ಹೇ ಇನ್ಸಾನ್ ಬನೇಗಾ

           ಕವಿತೆಯನ್ನು ಬಹಳ ಪ್ರೀತಿಸಿದೆ ಎಂದು ಹೇಳಿದೆ. ಧರ್ಮ-ದೇಶ, ಯುದ್ಧ-ವಿಭಜನೆಗಳಂಥ ಶಬ್ದಗಳು, ಅವುಗಳ ಸುತ್ತಲಿನ ನೆಲ-ನೆತ್ತರ ದಾಹದ ರಾಜಕರಣಗಳ ಆಳಗಲ ಅರ್ಥವಾಗುವುದಕ್ಕಿಂತ ಮುಂಚಿನಿಂದಲೂ ಕೇಳಿದಾಗಲೊಮ್ಮೆ ಸಾಲುಗಳೇಕೊ ನನ್ನ ಮೈ ನವೀರೇಳಿಸುತ್ತಿದ್ದವು. ಕವಿತೆಯೊಂದರ ಸುಖವೇ ಇದು. ಅದು ಅರ್ಥ, ಅನರ್ಥ, ಅಪಾರ್ಥಕ್ಕೆ ದಕ್ಕಿ ಹಿಪ್ಪೆಯಾಗುವ ಮೊದಲು ಸುಮ್ಮನೆ ತಂಗಾಳಿಯಂತೆ ನಮ್ಮಲ್ಲೊಮ್ಮೆ ಸುಳಿದುಹೋಗಿಬಿಡುತ್ತದಲ್ಲಾ, ಅದೇ ಅದರ ಸಾರ್ಥಕ್ಯ. ಆನಂತರದ ಕವಿತೆ ಯಾರದೋ ಅರ್ಥಕ್ಕೆ ದಕ್ಕಿ, ನಮಗೂ ತಿಳಿಯದಷ್ಟು ನಮ್ಮ ಬುದ್ಧಿಗೇ ಹೊರೆಯಾಗುವ, ನನ್ನ ಕಣ್ಣರಳಿಸದ ಹೆಂಡತಿಯ ಭಾವಚಿತ್ರವಿದ್ದಂತೆ

ಹೆಂಡತಿ ನಮ್ಮವಳೇ, ಗೊತ್ತಿರಲಿ ಗೆಳೆಯರೇ, ಆದರೆ ನಮ್ಮ ಹೆಂಡತಿಯ ಭಾವಚಿತ್ರ ನಮ್ಮದಲ್ಲ. ಅದು ಕ್ಯಾಮರಾಮೆನ್ ಕಣ್ಣೊಳಗಿನದ್ದು.
          ಕ್ಷಮಿಸಿ, ಸಾಹಿರ್ ಸಾಲುಗಳ ಸುಖ ಹಂಚಿಕೊಳ್ಳಬೇಕಾದ ನಾನು ಹೆಂಡಂದಿರ ಭಾವಚಿತ್ರಗಳ ಸಮಸ್ಯೆಗಳಿಗೆ ಕೈ ಹಾಕಿದೆ. ಇವು, ಇವೇ ಸತ್ಯದ ಅಪಾಯಗಳು.
ಸಾಹಿರ್ ಕವಿತೆಯನ್ನು ಬರೆಯುತ್ತ ಒಂದಿಷ್ಟು ಅವನ ಸಂದರ್ಭದಲ್ಲಿ ನಡೆದ ಐತಿಹಾಸಿಕ ಮಾರಣಹೋಮಗಳಿಗೆ ಸಾಕ್ಷಿಯಾಗಿ ತುಂಬ ವಾಚಾಳಿಯಾಗಿದ್ದಾನೆ. ಮೊದಲ ನಾಲ್ಕು ಪದ್ಯಗಳಷ್ಟೇ ಸಾಕಾಗಿದ್ದವೇನೋ ಕವಿತೆ ಶಾಶ್ವತವಾಗಲು ಅಥವಾ ಸಾಹಿರ್ ನಮ್ಮ ಚಿಂತನೆಯಾಗಲು. ಕೊನೆಯ ಎರಡು ಪದ್ಯಗಳಲ್ಲಿ ಹೇಳಿದ್ದನೇ ಹೇಳುತ್ತಾನೆ. ಹೇಳಿದ್ದಕ್ಕೆ ಸಾಕ್ಷಿಯಾಗಿ ಹೆಣಗಳನ್ನಿಟ್ಟು ಪ್ರಶ್ನೆಗಳನ್ನು ಕೇಳುತ್ತಾನೆ.
           ನನ್ನ ತಂಗಿಯ ಮದುವೆ ನನ್ನೂರು ಚಡಚಣದಲ್ಲಿ ಜರುಗಿತು. ನನ್ನ ಮದುವೆ ಆದಿಯಾಗಿ ನಾನು ಸಾಕ್ಷಿಯಾದ, ನೇತೃತ್ವ ವಹಿಸಿದ ಮದುವೆಗಳೆಲ್ಲವೂ ಪ್ರೇಮ ವಿವಾಹಗಳೇ. ಥ್ಯಾಂಕ್ಸ್ ಟು ಗಾಡ್!! ಸಧ್ಯಕ್ಕೆ ಕರ್ಮಠರ ಲೇವಡಿಗೆ ಗುರಿಯಾಗದೆ ನಾವೆಲ್ಲ ಪ್ರೇಮಿಗಳೂ ನೆಮ್ಮದಿಯಾಗಿದ್ದೇವೆ. ನಮ್ಮೂರಲ್ಲೇ ತಂಗಿಯ ಮದುವೆ ನಡೆದ ಸ್ಥಳ ಒಂದು ಸನಾತನ ಹಿಂದೂ ದೇವಾಲಯ. ಅದಕ್ಕೆ ನೂರಾರು ಮೆಟ್ಟಿಲುಗಳು. ಮೊದಲ ಮೆಟ್ಟಿಲಿಗೊಂದುಹಾರ್ದಿಕ ಸ್ವಾಗತ. ಹತ್ತೆ ಮೆಟ್ಟಿಲನ್ನೇರಿ ಬಂದರೆ ಸಾಹಿರ್ ಪದ್ಯತು ಹಿಂದೂ ಬನೇಗಾ...........’ ತುಂಬ ಆಸೆ ಪಟ್ಟು ಸಾಮರಸ್ಯದ ಸಂಕೇತವಾಗಿ ಪದ್ಯ ಬರೆಯಿಸಿ ಹಾಕಿದ್ದೆ.
                   ಮದುವೆಯ ಮಹಾ ನೇತೃತ್ವ ವಹಿಸಿದವನು ಒಬ್ಬ ಮುಸಲ್ಮಾನ್(ಬಸೀರ್ ಮುಲ್ಲಾ). ಒಂದರ್ಥದಲ್ಲಿ ಕಳೆದ 45 ವರ್ಷಗಳಿಂದ ಮಸೀದಿಗೆ ಹೋಗಿ ಮೊಣಕಾಲು ಮಡಚದೆ ಕಾಯಕದಲ್ಲಿ ಮುಸ್ಲಿಂನಾದ ಈತಇಸ್ಲಾಂಕ್ಕೆ ಹೊಸ ಅರ್ಥವನ್ನು ಸೇರಿಸಿದಾತ!! ನನಗಿಂತಲೂ ಒಂದು ವರ್ಷ ಹಿರಿಯನಾದ ಇವನೊಂದಿಗೆ ನಾನು ವಯಸ್ಸಾದಂತೆ ಇಸ್ಲಾಂದ ಅರ್ಥವನ್ನು ವಿಸ್ತರಿಕೊಳ್ಳುತ್ತಲೇ ಇದ್ದೇನೆ.
           ಕಾಲ ಗತಿಸುತ್ತದೆ. ಮಗ ಹುಟ್ಟುತ್ತಾನೆ, ಹಣೆಗೆ ಮೂರು ಸಾಲು ವಿಭೂತಿ ಹಚ್ಚಿಕೊಂಡು ಮತ್ತೆ ಇದೇ ಸಾಹಿರ್ ಸಾಲುಗಳನ್ನು ಗುನುಗುನಿಸುತ್ತಾನೆ. ಎಲ್ಲರಿಗೂ ಒಳಗೊಳಗೆ ಹಸಿವಿರುವುದೇ ಇಂಥ ಧರ್ಮಕ್ಕಾಗಿ. ಹೀಗಾಗಿಯೆ ಅವನಿಗೆ ಎಲ್ಲಿಲ್ಲದ ಚಪ್ಪಾಳೆ. ಸಂಕೇತಗಳಿಗೆ ಜೋತು ಬೀಳದ ನನ್ನ ಮಗನಹಿಂದೂ-ಮುಸ್ಲಿಂಹಾಡು ಒಂದು ಮೋಜಿನ ಕಥೆಯಷ್ಟೆ.
        ಸಾಹೀರ್ ಸಾಲುಗಳನ್ನು ಹಾಡಿ ತನ್ನ ಶಾಲೆಯಲ್ಲಿ ಮುಸ್ಲಿಂ ಮಕ್ಕಳ ಊಟದ ಡಬ್ಬಿಯಿಂದನಾನ್ವೆಜ್ತಿನ್ನುವ ನನ್ನ ಮಗ, ರಾಜಕುಮಾರರ ಸಾಲುಗಳನ್ನು ಹಾಡಿ ಮಂತ್ರಾಲಯದ ರಾಘವೇಂದ್ರರ ಅಭಿಮಾನಿಗಳ ಸಾಲಿನಲ್ಲೂ ಸಲ್ಲುವ ಸುಖವೇ.
ಗೊತ್ತಿರಲಿ, ಧರ್ಮದ ಸುಖವನ್ನು ಹೇಳಲು, ಸಂತಾನಗಳೇ ಸರಿಯಾದ ಮಾರ್ಗಗಳು.
ಸಂತಾನಗಳೆನ್ನುವುದು ನಮ್ಮ ಹದವಾದ ಹಿಡಿಮಣ್ಣು. ನಿಮಗೆ ಸಮಾಧಾನವಾಗುವ ಯಾವ ಧರ್ಮದ ನೀರನ್ನೂ ಅದಕ್ಕೆ ಬೆರೆಸಿ, ನಿಮಗಿಷ್ಟವಾದ ಯಾವ ಮೂರ್ತಿಯನ್ನೂ ಸೃಷ್ಟಿಸಿಕೊಂಡು ನೀವು ಸುಖ ಪಡಬಹುದು.
ನನಗೆ ದಕ್ಕಿದಇಸ್ಲಾಂ, ನಾನು ಹುಟ್ಟಿದಹಿಂದೂ, ನನ್ನನ್ನು ಆಳಿದಕ್ರಿಶ್ಚಿಯನ್, ನನ್ನ ನೆಲದಿಂದ ಅಳಿದಪಾರ್ಸಿ, ನನ್ನೊಂದಿಗಿದ್ದೂ ನನ್ನ ಮುಗುಳ್ನಗೆಯಿಂದ ಮರೆಯಾದಬೌದ್ಧ- ನನ್ನ ಕೈಯೊಳಗಿನ ಹಸಿ ಮಣ್ಣಷ್ಟೇ.
ಧರ್ಮವೆನ್ನುವುದು ನನ್ನ ಗೋರಿಯ ಮೇಲೂ ಹಾರುವ ಬಾವುಟ. ಆದರೆ ಬದುಕಿನುದ್ದಕ್ಕೂ ಎಷ್ಟೆಲ್ಲಾ  ಅನರ್ಥ, ಅಶಿಸ್ತು ಮತ್ತು ಅತಾರ್ಕಿಕತೆಗೆ ಕಾರಣವಾಗುವ ಧರ್ಮಗಳ ಕುರಿತೇ ನಮ್ಮ ಶರೀಫ ಮಾಸ್ತರರು ಹಾಡಿದರೇನೋ-
ಕೋಳಿಯೇ ನೀ„„ ಕೋಳಿಯೇ
ಹಿಂಗಹಾಳ ಮಾಡುದು ಕಂಡು
ತಾಳಲಾರದು ಮನ ಕೋಳಿಯೇ

ಹಚ್ಚ-ಹಸಿರು ಕೆಂಪು ಪುಚ್ಚದ ಕೋಳಿ
ಅಚ್ಚುತಗೆಚ್ಚರ ಕೊಟ್ಟಂಥ ಕೋಳಿ
ಹೆಚ್ಚಿನ ಬ್ರಹ್ಮನು ಮೆಚ್ಚಿದ ಕೋಳಿ
ಹುಚ್ಚೆದ್ದು ರುದ್ರನ ಕಚ್ಚಿದ ಕೋಳಿ

ಬಲ್ಲಿದ ಯಜ್ಞಕ್ಕೆ ಸಲ್ಲುವ ಕೋಳಿ
ಎಲ್ಲಾರು ಕೊಯ್ಕೊಂಡು ತಿನ್ನುವ ಕೋಳಿ
ಕಲ್ಲಿನೊಳಗೆ ಬುಟ್ಟಿ ಕೂಗುವ ಕಾಲಕ್ಕೆ
ಮುಲ್ಲಾನ ಕೈಯೊಳು ಮೃತವಾದ ಕೋಳಿ
                     ಮುಲ್ಲಾನ ಕೈಯಲ್ಲಿ ಮೃತವಾದ ಕೋಳಿ ಮಠಪತಿಯ ಕೈಯಲ್ಲಾದರೂ ಮಹಾ ಬದುಕಿನ ಸುಖವನ್ನುಣಬೇಕಾಗಿತ್ತು. ಅಂತಿಮವಾಗಿ ಮುಲ್ಲಾ-ಮಠಪತಿಗಳಿಬ್ಬರಿಗೂ ಬೇಕಾದುದು ಧರ್ಮವೇ. ಅವರಿಬ್ಬರನ್ನು ಸುಂದರ ಮನುಷ್ಯರನ್ನಾಗಿಸುವ ಧರ್ಮ. ಆದರೆ, ಅಂಥದ್ದೊಂದು ಧರ್ಮ ಪ್ರಪಂಚದಲ್ಲಿಲ್ಲದಿರುವುದೇ ಎಲ್ಲ ರಾಜಕಾರಣ, ದೇಶಕಾರಣಗಳಿಗೆ ಸೋಪಾನ. ಹೀಗಾಗಿಯೇ ಕಬೀರ ಇದರ ಹೆಡಮುರಿಗೆ ಕಟ್ಟಿ ಒಂದು ಮಾತು ಹೇಳಿದ-
ಬ್ರಾಹ್ಮಣನ ಮನೆಯಲ್ಲಿ ಅವನ ಹೆಂಡತಿ ನಾ
ಯೋಗಿಯ ಕುಟಿರದಲ್ಲಿ ಯೋಗಿನಿ
ತುರ್ಕರ ಮನೆಯಲ್ಲಿ ಕಲಮಾ ಓದುವ ನಾನು
ಒಂಟಿಯಾಗಿಯೇ ಇರುವೆ ಒಡಲಿನಲ್ಲಿ
ಬಂಧುಗಳೆ, ಸರ್ವಜನಾಂಗದ ಶಾಂತಿಯ ತೋಟವೆಂದು ಕರೆಯಿಸಿಕೊಳ್ಳುವ ಕರ್ನಾಟಕದ 12ನೇ ಶತಮಾನದ ಇತಿಹಾಸದಲ್ಲಿ ಇಡಿ ಮನುಕುಲವೇ ನಾಚಿಕೆ ಪಡುವ ರೀತಿಯಲ್ಲಿ ನಿಜವಾದ ಧರ್ಮಿಷ್ಠರ ಆಲೋಚಕರ ಹತ್ಯೆಯಾಯಿತು. ಭರತಭೂಮಿಯಿಂದ ಬೌದ್ಧರ ಪಲಾಯನವಾಯಿತು. ‘ಮಜಹಬ್ ನಹೀ ಸಿಖಾತಾ ಆಪಸ್ ಮೇಂ ಭೈರ್ ರಖನಾಎನ್ನುವ ಮೊಹಮ್ಮದ್ ಇಕ್ಬಾಲರ ಪಾಕಿಸ್ತಾನ ಮತ್ತು ಭಾರತದಲ್ಲಿ ಅಮೃತಸರದಿಂದ ಲಾಹೋರದವರೆಗೆ ಹೆಣಗಳ ರಾಶಿಯೇ ಬಿದ್ದಿತ್ತು. ಹೀಗೆ ಎಲ್ಲ ಧರ್ಮಗಳು ಮೂಲ ಪುರುಷನ ಕಾಳಜಿಗಳಿಂದ ದೂರವಾದ ವ್ಯವಹರಗಳೇ. ಹುಟ್ಟಿದ ಮಕ್ಕಳೆಲ್ಲರೂ ಅಪ್ಪನ ಆದರ್ಶಗಳ ವಾರಸುದಾರರಾಗುವುದಿಲ್ಲ. ವಸ್ತುಗಳಿಗಾಗಿ ನಡೆಯುವ ಅವರ ಹೋರಾಟಕ್ಕೆ ದೇವರಿಂಅಲೂ ಪರಿಹಾರ ಸಿಗುವುದಿಲ್ಲ. ನಮ್ಮ ನಮ್ಮ ಧರ್ಮಗಳ ಕಥೆಯೂ ಅಷ್ಟೆ, ಎಲ್ಲವೂ ತೂತು ಬಿದ್ದ ದೋಸೆಗಳೆ.
ಪ್ರಸ್ತುತ ಸಂಕಲನದಲ್ಲಿ ಇಸ್ಲಾಂದಲ್ಲಿ ಹುಟ್ಟಿಯೂ ಇಸ್ಲಾಮಿಕ್ ಕಟ್ಟರ್ವಾದಿಗಳಿಂದಲೇ ಹತ್ಯೆಯಾದ, ಬಹಿಷ್ಕ್ರತಗೊಂಡ ಲೇಖಕರೊಂದಿಗೆ ಕೆಲವು ಇಸ್ಲಾಂಯೇತರ ಅಪರೂಪದ ಚಿಂತಕರಿದ್ದಾರೆ. ಇದು ಎಲ್ಲ ಧರ್ಮಗಳಲ್ಲಿ ನಡೆಯುವ ನಿತ್ಯ ಮರಣಹೋಮ ಎಂದು ಈಗಾಗಲೇ ಹೇಳಿದೆ. ‘ಕಾವ್ಯಕ್ಕೆ ಉರುಳುಅಂಕಣಮಾಲೆಯನ್ನು ಬರೆಯುತ್ತಾ ಪ್ರಪಂಚದಲ್ಲಿ ಆಲೋಚನೆ ಮಾತ್ರಕ್ಕಾಗಿ ಹತ್ಯೆಗೀಡಾದ ಲೇಖಕರ ಕುರಿತು ಬರೆಯುವಾಗ ಸಿಕ್ಕ ಅಪರೂಪದ ಮಾನವೀಯ ಪುಟಗಳಿವು. ಇದು ಯಾವುದೋ  ಜನಾಂಗ ಹಾಗೂ ಧರ್ಮಗಳ ಕುರಿತ ಉದ್ದೇಶಿತ ಅನ್ವೇಷಣೆಯಲ್ಲ. ಆದರೆ ಇವರನ್ನೆಲ್ಲ ಒಂದೆಡೆ ಸೇರಿಸಿ ಒಂದು ಮೊತ್ತವಾದಾಗ ತೆರನಾದ ಗುಮಾನಿ ಬರುವುದಾದರೆ ಅದಕ್ಕೆ ನಾವು-ನೀವ್ಯಾರೂ ಕಾರಣವಾಗಬೇಕಿಲ್ಲ. ಒಂದಂತೂ ಸತ್ಯ, ಇವರೆಲ್ಲ ಲೇಖಕರು. ತಮ್ಮ ತಮ್ಮ ಪಾಲಿನ ಸತ್ಯವನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಯತ್ನಿಸಿದ ಸಹೃದಯಿ ಮನುಷ್ಯರು.
Add caption
ಬರಹವೆನ್ನುವುದೇ ಅಪಾಯಕಾರಿ. ಅಂದುಕೊಂಡದೊಂದಾದರೆ ಆಕಾರ ಪಡೆಯುವುದು ಮತ್ತೊಂದು. ಇಂಥ ಅಪಾರ್ಥದ ಘಳಿಗೆಗಳಲ್ಲಿ ಏನೆಲ್ಲಾ ಘಟಿಸಿವೆ.  ಕುಂಬಾರ ಸೃಷ್ಟಿಸಿದ ಎಲ್ಲ ಮಡಿಕೆಗಳೂ ಮಾರುಕಟ್ಟೆಗೆ ಬರುವುದಿಲ್ಲ. ಆದರೆ ಮಾರುಕಟ್ಟೆಗೆ ಬಂದ ಪ್ರತಿ ಮಡಿಕೆಯ ಹಿಂದೆ ಮಡಿದ ಅದೆಷ್ಟೊ ಮಡಿಕೆಗಳ ಕಥೆ ಇದೆ. ಅವುಗಳೆಲ್ಲದರಲ್ಲಿ ಪ್ರಯೋಗದ ನೆಲೆಯಲ್ಲಿಯೇ ಸತ್ತ ವಿಷಾದದ ಛಾಯೆ ಇದೆ. ಒಬ್ಬ ಪ್ರಜ್ಞಾವಂತ ಓದುಗನಿಗೆ ಅವುಗಳನ್ನು ಹೊರತುಪಡಿಸಿದ ಮಡಿಕೆಯ ನೀರು ತೃಷೆಯನ್ನು ಹಿಂಗಿಸುವುದಿಲ್ಲ. ಇದೇ ಕಾರಣ ನಾನಿವರೆಲ್ಲರನ್ನು ನಿಮ್ಮೆದುರು ತಂದು ನಿಲ್ಲಿಸಿದ್ದೇನೆ. ಇವರೆಲ್ಲರೂ ನಿಮ್ಮೊಳಗಿರುವ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಝರಾಸ್ಟ್ರಿಯನ್ ಇನ್ನೂ ಏನೇನೋ ಆಗಿರುವ ಒಡೆದ ಮಡಿಕೆಗಳು. ಆದರೆ ಇದೆಲ್ಲವನ್ನೂ ಮೀರಿದ ಸತ್ಯ ಇವರು ನಮ್ಮೊಳಗಿನ ಧ್ವನಿಗಳು. sorry ಇವರು ನೀವೆ.
ನೆಲದಲ್ಲಿ ಹುಟ್ಟಿದ ಕಾರಣ ಓರ್ವ ಹಿಂದೂವಾಗಿ ಕಳೆದ 700 ವರ್ಷಗಳಿಂದ ನನ್ನೆದೆಯೊಳಗೆ ಇಸ್ಲಾಂನ್ನು ಕಾಪಿಟ್ಟುಕೊಂಡು ಸೂಫಿಗಳನ್ನು ಹೆತ್ತು, ಶಾಂತಿಯನ್ನು ಬಯಸುವ ನಾನು ಅಂತಿಮವಾಗಿ ನಂಬುವುದಿಷ್ಟೆ-
“God loves those who forgive their fellow beings. God is forgiving and is anxious to forgive all those who will come to Him with contrite hearts.”
                                                                                -Excellence in Islam

No comments:

Post a Comment