Total Pageviews

Thursday, August 17, 2017

ತುಮುಲಗಳಿಗೆ ತುಟಿಯಾಗಿ Part-2

ರಚನೆಗಳ ಸಂಖ್ಯೆಯನ್ನು ಮುಂದಿಟ್ಟುಕೊಂಡು ಮಾತಾಡುವುದಾದರೆ ಕನ್ನಡ ಕಾವ್ಯವನ್ನುಅವ್ವಕಾಡಿದಷ್ಟುಅಪ್ಪಕಾಡಲಿಲ್ಲವೇನೋ. ಆದರೆ ಕಾವ್ಯದ ತೀವ್ರತೆ ಹಾಗೂ ಸಾಂದ್ರತೆಗಳ ಕುರಿತು ಹೇಳುವುದಾದರೆಅಪ್ಪಎಂಬ ಪಾತ್ರ ಅಥವಾ ಸಂವೇದನೆ ವ್ಯಾಪಿಸಿಕೊಂಡ ರೀತಿ ಅದ್ಭುತವಾದುದು. ಯೋಗಿ ಅವರನನ್ನಪ್ಪಕವಿತೆ ಓದುವಾಗ ಕನ್ನಡ ಕಾವ್ಯ ಗಮನಿಸದ ಕವಿ ಶಂಕರ ಕಟಗಿ ಅವರ ಅಪ್ಪನ ಕುರಿತ ಅಪ್ಪಟ ರಚನೆಹಾರಿ ಹೋದನು ಹಂಸನೆನಪಾಗುತ್ತದೆ. ‘ನನ್ನಪ್ಪನ ನೋವು ನೆನೆದು ಕಂಬನಿಯಾಗಿ ಕರಗಿತುಎನ್ನುವ ಸಾಲುಗಳುಅಪ್ಪ-ಮಗಎಂಬ ಎರಡು ಸತ್ಯಗಳ ಸುತ್ತಲಿನ ಜಾಗತಿಕ ಕಥೆಯನ್ನೇ ಹೇಳುತ್ತವೆ. ‘ಉಂಡ ಊಟದಲ್ಲಿ ಅಪ್ಪನ ಬೆವರ ಹಿಂಡಿಎನ್ನುವುದು ಹೃದಯ ಶುಚಿಯಾಗಿಸಿಕೊಂಡ ಯುವ ತಲೆಮಾರುಗಳಿಗೆ ಮಾತ್ರ ವೇದ್ಯವಾಗುವ ಅನುಭವ. ಕವಿತೆ ನಮಗೆ ಸಮಕಾಲೀನವಾಗುವುದು ವರ್ತಮಾನವನ್ನು ಗರ್ಭಿಕರಿಸಿಕೊಳ್ಳುವ ಮೂಲಕ. ‘ಅಪ್ಪಈಗ ಬೇರುಗಡಿತವಾಗುತ್ತಿರುವ, ಮುಖ ಮುಚ್ಚಿಕೊಳ್ಳುತ್ತಿರುವ ಸಂಗತಿ. ಇದು ಸಹ್ಯದ ಗಡಿ ದಾಟಿ ಅಸಹ್ಯವಾಗುವ ಮೊದಲು ನಮ್ಮ ಸಂವೇದನೆಗಳಿಗೆ ಸಾಣಿ ಹಿಡಿಯಬೇಕಿದೆ. ಇದು ಕವಿತೆಯ ಮುಖ್ಯ ಕಾಳಜಿ.
ರವೀಂದ್ರ ಆರ್ ಅವರಪರಿವರ್ತನೆಕವಿತೆ 
ನದಿಗಳೆಲ್ಲ ಸತ್ತಿರಬಹುದು, ಅಲ್ಲಲ್ಲಿ ತಡೆದಿರಬಹುದು/
ಸಾಗರ ಮುಟ್ಟುವ ಮುನ್ನ ತಮ್ಮತನವ ಸಾಯಿಸಿಕೊಂಡಿರಬಹುದು/
ಹಾಗಾಗಿ ನಮ್ಮ ತೀರದ ಬದಿಯ ಸಾಗರ ಭೀಮ ಗರ್ಜನೆಯೊಂದಿಗೆ ಉಕ್ಕುತ್ತಿಲ್ಲ /
ಇಂದಲ್ಲ ನಾಳೆಯಾದರೂ ಉಕ್ಕಬಹುದೇ ನಮ್ಮ ತೀರದ ಬದಿಯ ಸಾಗರ!
 
ಮೇಲಿನ ಸಾಲುಗಳಲ್ಲಿಯ ತವಕವೇ ಕವಿತೆ. ಅದು ಕವಿತೆಯ ಜೀವ ದ್ರವ್ಯ. ರವೀಂದ್ರ ಆರ್. ಅವರಪರಿವರ್ತನೆಹಸಿರಿಗೆ, ಹುಟ್ಟಲಿರುವ ಹೊಸ ಕೂಸಿಗೆ, ಬತ್ತಿ ಹೋದ ನದಿಗಳಲ್ಲಿ ಉಕ್ಕಬೇಕಾದ ನೀರಿಗಾಗಿ ತವಕಿಸುತ್ತಿರುವ ಕವಿತೆ. ಇಲ್ಲಿ ನೂರು ಸಾಲು, ಸಾವಿರ ಪದ, ಎಷ್ಟೇಲ್ಲಾ ಅರ್ಥಗಳಿದ್ದರೂ ಅದರ ತವಕ ಮಾತ್ರ ಸಾಗರ. ಸೇರಬೇಕು ಎಂದಾದರೂ ಸಮಷ್ಠಿ ಎಂಬ ಸಾಗರಕ್ಕೆ, ಎಲ್ಲ ಸಮಾವಿಷ್ಟಗೊಳ್ಳುವುದರಲ್ಲಿಯೇ ಇಲ್ಲಿ ಅದಮ್ಯ ಶಕ್ತಿಗಳಾಗಿಪರಿವರ್ತನೆಯಾಗುತ್ತವೆ ಎನ್ನುವುದನ್ನು ಕವಿ ರವೀಂದ್ರ ಮನಮುಟ್ಟುವಂತೆ ಹೇಳಿದ್ದಾರೆ.
ಸ್ಖಲಿಸುತಿದೆ ತನಿವ ಮೌನ
ದಿನಗಳ ಜೊತೆಗೆ ಸಿದ್ಧವಿಲ್ಲದೆ ಬಿದ್ದು
ಕಾಲದೊಳಗೆ
ಗರ್ಭದೊಳಗೆ
ಗುಟ್ಟಾಗಿ ಮುಟ್ಟಿನಲಿ ಬಿಚ್ಚಿಟ್ಟ ಉದರ ದಾರಗಳು
ದೊಡ್ಡ ಕನಸುಗಾರ ಕವಿ, ಕವಿತೆಯೊ ಅವನ ಪಾಲಿನ ಕನಸ ಕಡಲ ಕ್ರಮಿಸುವ ಸಾಹಸ. ಕವಿಗೆ ಸಮೃದ್ಧ ಕನಸುಗಳಿರಬೇಕು ಎನ್ನುತ್ತಾನೆ ಕೀಟ್ಸ್. ಕನಸು ಭಗ್ನಗೊಂಡ ಕಾರಣಕ್ಕೆ ಕಾವ್ಯವನ್ನೇ ನಿಲ್ಲಿಸಿಬಿಡುತ್ತಾನೆ ಕೊಲ್ರಿಡ್ಜ್. ಕನಸೊಡೆದಿದ್ದೆ, ಇನ್ನೆಲ್ಲಿಯ ನಿದ್ದೆ? ಎಂದು ಕೇಳುತ್ತಾನೆ ಕುವೆಂಪು. ಕನಸುಗಳೋ, ಗರ್ಭದೊಳಗೆ, ಗುಟ್ಟಾಗಿ ಮುಟ್ಟಿನಲಿ ಬಚ್ಚಿಟ್ಟ ಉದರ ದಾರಗಳು, ದಿಗಿಲ ನೆಲದಲ್ಲಿ ನಿರ್ವಿಕಾರಿ ಪಾದಗಳು ಎಂದು ಮರು ವ್ಯಾಖ್ಯಾನ ಮಾಡುತ್ತಾನೆ ಕವಿ ನಾಗರಜ ಪೂಜಾರ. ಅವರಸಾವಾಗುವ ಕನಸುಗಳುಕವಿತೆ ಹೊಸ ತಲೆಮಾರಿನ ಪ್ರತಿಮೆ-ರೂಪಕಗಳನ್ನು ಕಾವ್ಯದ ಹೊಸ ಅಭಿವ್ಯಕ್ತಿ ಕ್ರಮವನ್ನು ನಮ್ಮ ಮುಂದಿರಿಸಿದೆ. ನಿಜಕ್ಕೂ ಇದು ಸಾಯದ ಕವಿತೆ.
ಜನನಿ ವತ್ಸಲರಮೂರು ಗಂಟುಮಹಿಳಾ ಸಂವೇದನೆಗಳನ್ನು ಪ್ರತಿನಿಧಿಸುವ ಹೊಸ ಕವಿತೆ. ‘ಹರಾಜಿಗಿಟ್ಟಿದ್ದಾಳೆ, ಮೂರು ಗಂಟುಗಳಿಗೆ ತುಟಿಗಳನ್ನು, ಮೊಲೆಗಳನ್ನು, ‘ಶಿರದ ತುಂಬಾ ಸೀರೆಯ ಬೊಟ್ಟು, ಹಣೆಯ ತುಂಬಾ ಸಿಂಧೂರದ ಹಸಿ ಹಿಟ್ಟುಅವಳ ತುಟ್ಟಿಗಳ ಪರ್ವತದ ಬಂಡೆಗಳು ಮಲಗಿರಲು ದೇಹವು ಸೆಣಸಾಡಿ ಖರೀದಿಯಾಯಿತುಗಳಂಥ ಸಾಲುಗಳು ಪ್ರಪಂಚದ ಅತ್ಯಂತ ಮೃದು, ನಾಚಿಕೆಯ ಅಸ್ತಿತ್ವವೊಂದನ್ನು ಬಾಜಾರುಗೊಳಿಸಿವೆ ಎನ್ನಿಸದೆ ಇರಲಾಗದು. ಬರಹ ಬೀಡಾದಿಯಾದಷ್ಟೂ ಕಾಳಜಿ ಹಾಗೂ ಭಾವಗಾಂಭೀರ್ಯ ಶಿಥಿಲವಾಗುತ್ತದೆ. ನಮ್ಮೊಳಗಿನ ಕರಟವೇ ಕಾವ್ಯ. ಅದುವೇ ಪ್ರಧಾನವಾಗಿಬಿಟ್ಟರೆ ಎಲ್ಲ ಕಾಲಕ್ಕೂ ಸಲ್ಲುವ ರೀತಿಯಲ್ಲಿ ಬರಹವನ್ನು ರೂಪಿಸಿಕೊಳ್ಳಲು ಸಾಧಯವಾಗುತ್ತದೆ. ಜನನಿವತ್ಸಲರು ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಭಾರತದ ಮೊದಲ್ದ ಎಂಥ್ರಪಲಾಜಿಸ್ಟಿ ಹಾಗೂ ಮಹಿಳಾವಾದಿ ಇರಾವತಿ ಕರ್ವೆ ಹಾಗೂ ಇಮ್ತಿಯಾಜ್ ದಕ್ರರವಂಥವರ ಬರಹಗಳು ಅವರಿಗೆ ಮಾರ್ಗದರ್ಶಿಯಾಗಲಿ.
ಮುದ್ದು ತೀರ್ಥಹಳ್ಳಿಯವರಅಲ್ಲಿಯವರೆಗೂ ಒಂಟಿತನವೆಂಬುದುಕವಿತೆಯ ಮೇಲಿನ ಕಿ ಸಾಲುಗಳು ಮಹತ್ತರ ಸಂಗತಿ ಹಾಗೂ ವಿದ್ಯಮಾನಗಳಿಂದ ಅಥವಾ ಬೃಹತ್ ಬರಹಗಳಿಂದ ಬೆರಗು ಸೃಷ್ಟಿಸಲಾರ ಕವಿ ಎನ್ನುವುದನ್ನು ಸ್ಪಷ್ಟಪಡಿಸುತ್ತವೆ. ಹಾಲಿಗೆ ಹುಳಿಯಷ್ಟೇ ಕೆಲಸವಿದೆ ಒಂದು ಸಂಗತಿಗೆ ಕಾವ್ಯದಲ್ಲಿ. ಗದ್ಯ-ಪದ್ಯಗಳ ಗೊಡವೆಗಳನ್ನು ಮೀರಿ ಬರೆಯುವ ಮುದ್ದು ತೀರ್ಥಹಳ್ಳಿ ಕನ್ನಡದ ಪ್ರತಿಭಾನ್ವಿತ ಲೇಖಕಿ. ಬಯಸಿ, ಹಂಬಲಿಸಿ ಬರೆಯುತ್ತಾಳೆ ಅವಳು. ಬರಹ ಅವಳ ಅನಿವಾರ್ಯವಲ್ಲ ಆದರೆ ಅವಶ್ಯಕತೆಯಾಗಿರಿಸಿಕೊಂಡಿದ್ದಾಳೆ. ಪ್ರಚಲಿತ ಕವಿತೆಯಲ್ಲಿ ವಿಚಾರವಾಗಿ ಹುಟ್ಟಿಕೊಂಡು ಕಾಡಲಾರಂಭಿಸಿದ ಪಾದಗಳು ಇಡೀ ಮಾನವಕುಲದ ವಿಷ್ಣು, ನಿರ್ವಿಣ್ಯ ಬದುಕನ್ನು ಕವಿತೆಯಾಗಿಸುತ್ತವೆ. ಕೊನೆಗೆನನ್ನ ಹೂಪಾದಗಳನ್ನು ಬರಿದೆ ನೆನಪಷ್ಟೇಎಮ್ದು ಮುಗಿಯದ ಕವಿತೆ ಆತ್ಮಾವಲೋಕನದ ಆಳ ಕಡಲಲ್ಲಿ ನಮ್ಮನ್ನು ನಿಲ್ಲಿಸಿಬಿಡುತ್ತವೆ. ಪಾದಗಳ ಕಥೆ ಎನ್ನುವುದು ಮತ್ತೇನು? ಮನುಷ್ಯ ಇತಿಹಾಸವಷ್ಟೆ? ಅನಂತಕಾಲದ ಅವಿರತ ದಾರಿಯನ್ನು ಪಾದಗಳು ಕ್ರಮಿಸಿ ಸಂಕಟಗಳ ರಮಿಸಿ, ಸಿಕ್ಕ ದಾರಿಗಳೆಲ್ಲ ಉಪಕೃತಿಯಿಂದ ನಮಿಸಿ ಅವು ಸಹಿಸಿಕೊಂಡ ಯಾತನೆ ಅಷ್ಟಿಷ್ಟಲ್ಲ. ಪಾದ ಹೆಣ್ಣಲ್ಲ ಗಂಡಲ್ಲ. ಸಂದರ್ಭದಲ್ಲಿ ಇದೇ ಪಾದಗಳನ್ನು ಸಾಕ್ಷಿಯಾಗಿಸಿಕೊಂಡು ನಾನು ಬರೆದ ಪದ್ಯದ ಕೆಲ ಸಾಲುಗಳನ್ನು ಇಲ್ಲಿ ಉಲ್ಲೇಖಿಸಬೇಕೆನಿಸುತ್ತದೆ
ಕಾಲು ಕಾಶಿ ಸುತ್ತುವುದಿಲ್ಲ,
ಮಕ್ಕಾಗೆ ಹೋಗಿಯೂ
ಇವಕ್ಕೆ ಮುಕ್ಕಾಲು ಭಾಗ್ಯ ಬರುವುದಿಲ್ಲ
ಗಂಗೆಗೆ ಇಳಿದೂ
ಮೊಳಕಾಲಿನ ಪಾಪ ತೊಳೆಯುವುದಿಲ್ಲ
ಮಾನಸ ಸರೋವರದಲ್ಲೂ ಕಾಲ ಕಥೆಗೆ
ಕನ್ನಡಿ ಸಿಗುವುದಿಲ್ಲ.
ತೌಲನಿಕವಾಗಿ ಮಾತಾಡುವುದಾದರೆ ಕನ್ನಡದಲ್ಲಿ ಕತ್ತಲ ಕುರಿತು ಕನವರಿಸಿದ ಕವಿಗಳು ಕಡಿಮೆಯೇ ಎನ್ನಬೇಕು. ರಾತ್ರಿಗಳ ಕುರಿತು ಹಾಡಿ-ಹಾಡಿಕೊಂಡವರಿದ್ದಾರೆ. ಆದರೆ ಕತ್ತಲೆ ಕುರಿತು ಕಾವ್ಯ ಬರೆದವರು ಕಡಿಮೆಯೆ. ಕವಯತ್ರಿ ನಮನ ಬಿ.ಎನ್ ಅವರಕತ್ತಲು ನನ್ನರಿವಿಗೆ ನಿಲುಕದ್ದು ವಿರಳ ಸಂಗತಿಯ ಕುರಿತು ಕರುಳು ಮಿದಿಯುವಂತೆ ವಿವರಿಸುತ್ತದೆ. ‘ಕತ್ತಲೆ ಅಪ್ಪುತ್ತದೆ ರಸ್ತೆಯನ್ನು, ಕವಲ ದಾರಿಯನ್ನು, ‘ಸುದಲಾಗದ ಕತ್ತಲು, ‘ ಕತ್ತಲು ಹುಟ್ಟು-ಸಾವುಗಳಿಗೆ ಜಾಗ ಕೊಟ್ಟು ಜಾರಿಗೊಳ್ಳುತ್ತದೆ. ಕತ್ತಲಿದೆ ನಮ್ಮೊಳಗೆ ಹಾಗೂ ಹೊರಗೆ. ಅದು ಬೆಳಕಿನಷ್ಟೇ ಶಾಶ್ವತ, ಸುಸಂಸ್ಕೃತ ಹಾಗೂ ಸಾರ್ವಕಾಲೀಕ. ಆದರೆ ಕಿ ಜಗವ ತೂಗುವಕತ್ತಲುನಮ್ಮ ಜಾಢ್ಯ, ಅನೈತಿಕತೆಯ ಸಂಕೇತವಾಗುವುದು ಒಂದು ಸಂಕೇತವಲ್ಲವೇ? ಎನ್ನುವ ಪ್ರಶ್ನೆಯೊಡ್ಡುತ್ತದೆ ನಮನರ ಕವಿತೆ. ‘ ಕತ್ತಲು ನನ್ನರಿವಿಗೆ ನಿಲುಕದ್ದುಎಂದು ಹೇಳುತ್ತಲೇ ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸುವ ಕವಿತೆಯನ್ನು ಅವರು ಕೊಟ್ಟಿದ್ದಾರೆ.
ಬದುಕಿಗೆ ಅಂಟಿಕೊಂಡ ನೆನಪುಗಳ ನಂಟು ಕಾವ್ಯಕ್ಕೆ ಅನಿವಾರ್ಯವೇ. ಯಾಕೆಂದರೆ ಕಾವ್ಯ ಬದುಕಿನ ಭಿನ್ನ ಅನಾವರಣವಷ್ಟೇ. ಕವಿ ತೀರ್ಥೇಶಕುಮಾರ್ ಜಿ.ಎಸ್ ಕವಿತೆಸಾಮಿಪ್ಯಸಾನಿಧ್ಯದ ಹವಣಿಕೆಯದು. ಬರೀ ಮೈಯೆಲ್ಲ ಪ್ರಿತಿಯಲ್ಲ. ಇದು ಆದಿ ಅನಂತಗಳ ಪ್ರಶ್ನೆ. ಸಾವಿನ ಪರೀಧಿಯೊಳಗೆ ಕಿ ಬದುಕು ನೀಗಿಹೋಗುವುದಾದರೂ ಚಿಂತೆಯಿಲ್ಲ ಕವಿಗೆ, ಆದರದು ಅವಳ ಧ್ಯಾನವಾಗದೆ ಹೋಗುವುದಾದರೆ ತಕರಾರುಗಳಿವೆ. ಖಯ್ಯಾಮನಂತೆ ಪ್ರೀತಿಗಾಗಿ ಹಂಬಲಿಸಿ ತೀರ್ಥೇಶಕುಮಾರ್ ಬರೆಯುತ್ತಾರೆ
ಅಲ್ಲೂ ಬಯಸುವೆ ಮೌನ
ನನ್ನವಳ ಪ್ರೇಮ ಧ್ಯಾನ
 
    ‘ನೆತ್ತರು ಹರಿದೆಡೆಯಲ್ಲಿ ಮಲ್ಲಿಗೆಗೆ ಉಳಿವೆಲ್ಲಿ?’ ಎಂಥ ನವಿರಾದ ಭಯಾನಕ ಪ್ರಶ್ನೆ? ಇದು ಪ್ರಮೋದ್ ಮೈಸೂರರಯೋಧ-ಯುದ್ಧ-ಬುದ್ಧಕವಿತೆಯಿಂದ ಎತ್ತಿಕೊಂಡಿದ್ದು. ಹೀಗೆಯೇ ಅವರ ಕವಿತೆಯುದ್ದಕ್ಕೂ ಅನುಭವ ಹರಳುಗಟ್ಟಿದ ಸಾಲುಗಳು. ಉದಾಹರಣೆಗೆ- ‘ಒಡಲ ಕುದಿ ನೆತ್ತರ ಮುದ್ದೆಯಾಗಿ ಬೆಂಕಿಯಲ್ಲಿ ಕರಗಿಹೋಗಿದ್ದನ್ನು ಕಾಣುತ್ತಾ ತಾಯಿ ಕಣ್ಣೀರಾಗುತ್ತಾಳೆ.’, ‘ಮರ ಉರುಳಿ ಬಳ್ಳಿ ಬೇರುಗಡಿತವಾಗುತ್ತದೆ. ಸಮಾಧಾನದಿಂದ ಓದಬೇಕು ಪ್ರಮೋದರ ಕಾವ್ಯವನ್ನು. ಇಲ್ಲಿ ಅವಸರಕ್ಕೆ ಆಸ್ಪದವಿಲ್ಲ. ಹಾಗೊಂದು ವೇಳೆ ಹೋದರೆ ಹೋಗಿಯೇ ಬಿಡುತ್ತದೆ ನಿಮಗೆ ದಕ್ಕಬೇಕಾದ ಬಹಳ ಭಾಗ್ಯ. ಕವಿತೆಯ ಕೊನೆಯ ಸಾಲುಗಳನ್ನು ಓದಿ-
ಯುದ್ಧದೊಡಲೊಳಗೆ ಬುದ್ಧ ಹುಟ್ಟಿ ಬರುತ್ತಾನೆ
ದ್ವೇಷಕ್ಕೆ ಪ್ರೇಮದ ಹಂಬಲ
ಯುದ್ಧಕ್ಕೆ ಶಾಂತಿಯ ಸೆಳೆತ
ಕ್ರೌರ್ಯಕ್ಕೆ ಮಮತೆಯ ತಹತಹ
ಮಡಿಲಾಗುವ ಬುದ್ಧ ಮತ್ತೇ ಮತ್ತೇ
ಹುಟ್ಟುತ್ತಲೇ ಇರುತ್ತಾನೆ
ಯೋಧನ ಭಾವಚಿತ್ರದೆದುರು
ಹಚ್ಚಿಟ್ಟ ಹಣತೆ ಆರುವವರೆಗೂ.....
ಭವಿಷ್ಯದ ಭರವಸೆಯ ಕವಿ ಪ್ರಮೋದ ಅವ್ರ ಕಾವ್ಯದಲ್ಲಿ ಧ್ಯಾನ-ಮೌನಗಳ ಸಮಾಗಮವಿದೆ. ಒಂದು ಕ್ಷಣ ವರ್ತಮಾನಕ್ಕೆ ಮುಖಾಮುಖಿಯಾಗುತ್ತಲೇ ಯಶೋಧರೆ, ರಾಹುಲ, ಕಿಸಾಗೋತಮಿಯವರ ಎದೆಯ ಪ್ರಶ್ನೆಗಳನೆತ್ತಿ ಅಪ್ಪನನ್ನು ಕಟ್ಟಿಕೊಡುವ ಕವಿತೆ ಸಂಪಾದನೆಯನ್ನು ಶ್ರೀಮಂತಗೊಳಿಸಿದೆ.
ದೇಶದ ಶೇಷ್ಠ ಚಿಂತಕರಾಗಿದ್ದ ಕವಿ ರವೀಂದ್ರನಾಥ ಟ್ಯಾಗೋರ ವ್ಯಕಿ ಬದುಕಿನ ಹಲವು ಆಯಾಮಗಳ ಕುರಿತು ಬರೆದಿದ್ದಾರೆ. ಅವರು ಶೈಕ್ಷನಿಕ ಪ್ರಶ್ನೆಗಳ ಕುರಿತು ಮಾತನಾಡುತ್ತ ಹೇಳುತ್ತಾರೆ, ‘ಬಡತನವನ್ನು , ಅದು ನೀಡಿದ ಅಪರೂಪದ ಅನುಭವಗಳನ್ನು ಜತನವಾಗಿ ಕಾಪಿಟ್ಟುಕೊಳ್ಳಬೇಕುಎಂದು ಬರೆಯುತ್ತಾರೆ. ಕವಿಗಂತೂ ಇದು ಕಾವ್ಯದ ಮೂಲದ್ರವ್ಯ
ನಮ್ಮನೆಗೆ ಬೇಕಿಲ್ಲ ಬುಡ್ಡಿದೀಪದ ಬೆಳಗು
ರಾತ್ರಿ ಚಂದ್ರನ ಬೆಳಗು
ಹಗಲಾದರೇ ಸೂರ್ಯನ ಬೆಳಗು
ಬೇರಿನಾಟದಲ್ಲಿ ನಾವೇ ಸಾಕ್ಷಿಸತ್ಯಗಳು
ಪ್ರೀತಿಯ ಮನಸುಗಳು
ಎಂದು ಬರೆಯುವಸೂರುಕವಿತೆಯ ಕೃಷ್ಣಮೂರ್ತಿ ಇಂದಲವಾಡಿ ಮುಂದೊಮ್ಮೆ ಇದುವೇ ತಮ್ಮನ್ನು ಕವಿಯಾಗಿಸಿದ ಪರಿಗೆ ಬೆರಗಾಗಿದ್ದಾರೆ. ಅವರಸೂರುಕವಿತೆ ನಿಜಕ್ಕೂ ಬಡತನದ ಬೆರಗು.ಕೊನೆಯ ಕವಿ ಯೋಗೇಶ್
ಚರ್ಚೆಯ ಕೊನೆಯ ಕವಿ ಯೊಗೇಶ ಎಸ್.ಕೊಪ್ಪಲು, ಅತ್ಯುತ್ತಮ ಧ್ವನಿಪೂರ್ಣ ಕವಿತೆಭೂತೇರು. ಹನಿಹನಿಗೂ ತೆನೆ-ತೆನೆಗಳ ಲೆಕ್ಕ ಇಟ್ಟು ನಮ್ಮ ಪೆÇರೆವ ಸ್ಪಷ್ಟ ಕಾಲಕಾಲಕ್ಕೆ ನಮ್ಮ ಕಾವ್ಯ ಪರಂಪರೆಯ ದಿಕ್ಕನ್ನೆ ಬದಲಿಸಿದೆ. ನಮ್ಮ ಕವಿಗಳ ಭಾವ-ಬುದ್ಧಿಗಳನ್ನು ಮತ್ತಷ್ಟು ನವಿರಾಗಿಸಿದೆ. ನಿಸರ್ಗದ ಅನೂಹ್ಯ ಸಂಬಂಧಗಳ ಪ್ರಶ್ನಿಸುವ ಯೊಗೇಶರ ಕವಿತೆ ನಮ್ಮೆದೆಯನ್ನು ಹಸಿರಾಗಿಸುತ್ತದೆ. ನೆಮ್ಮದಿಯ ದಾರಿಗಳನ್ನು ಹುಡುಕುತ್ತದೆ.
ಕವಿತೆ ಒಂದು ಕುದಿ. ಇದು ಎಲ್ಲರಿಗೂ, ಎಲ್ಲ ಕಾಲಗಳಲ್ಲೂ ಹದವಾಗಿ ದಕ್ಕಿದೆ ಎಂದುಕೊಳ್ಳಲಾಗದು. ಕೆಲವು ಕುದಿಗಳೇ ಅಪೂರ್ಣ. ಸಂದರ್ಭವೆಂಬ ಒಲೆಯಿಂದ ಆಚೆಗೆ ಸರಿಸಿಡುತ್ತಲೇ ಕುದಿಯ ಹದ ಮುರಿದುಬಿಡುತ್ತದೆ, ಅರೆಬೆಂದ ಕಾವ್ಯ ಅವಸಾನವಾಗುತ್ತದೆ. ಇದು ನಮಗೆ ಅಪರಿಚಿತ ಅನುಭವವೇನು ಅಲ್ಲ. ಕೇವಲ ಒಂದು ಸಂದರ್ಭದ ಉದ್ದೇಶಗಳನ್ನು ಈಡೇರಿಸಲು ಹುಟ್ಟಿದ ಕವಿ ಮತ್ತು ಕಾವ್ಯಗಳೆರಡು ಈಗ ಉಳಿದುಕೊಂಡಿಲ್ಲ. ಇದು ಒಂದು ಎಚ್ಚರಿಕೆ. ಒಮ್ಮೆ ಹುಟ್ಟುವ ದೇಹ ಮತ್ತು ಮನಸ್ಸು ಏನನ್ನು ಅರಗಿಸಿಕೊಂಡು ಆಚೆ ಎಸೆಯುತ್ತದೆ. ಆದರೆ ಏನನ್ನು ಅರಗಿಸಿಕೊಳ್ಳಬೇಕು, ಯಾವುದಕ್ಕೆ ಸಾಕ್ಷಿಯಾಗಬೇಕು ಮತ್ತಿನ್ಯಾವುದಕ್ಕೆ ಶಬ್ದವಾಗಬೇಕು ಎನ್ನುವ ಸೂಕ್ಷ್ಮತೆ ದಕ್ಕಿದವನೇ ಸಮರ್ಥ ಹಾಗೂ ಸಾರ್ವಕಾಲೀಕ ಕವಿಯಾಗುತ್ತಾನೆ. ಹೆಜ್ಜೆ ಮುಂದಿಟ್ಟಂತೆ ರಸ-ಋಷಿಯಾಗುತ್ತಾನೆ.
ನನಗೆ ದಕ್ಕಿದ ಕಾವ್ಯದ ಕಟ್ಟಿನಲ್ಲಿ ಅರೆ ಕುದಿಯ ಕವಿ-ಕವಿತೆಗಳ ಸಂಖ್ಯೆಯೇ ಪ್ರಧಾನ. ಆರಂಭವಾಗುವ ಮುನ್ನವೇ ಮುಗಿಸುವ ಅವರಸದಲ್ಲಿದೆ ಕಾವ್ಯ. ಇದು ಬರೀ ಸ್ಮೃತಿಯನ್ನು ನಂಬಿದ ಧ್ಯಾನ. ಮೊಬೈಲ್, ಕಂಪ್ಯೂಟರ್, ಫೇಸ್ ಬುಕ್, ಟ್ವಿಟರ್ಗಳಿಗೆ ಸಂಗತಿಯಾಗುತ್ತ ದಿಢೀರ್ ಎಂದು ಪ್ರಕಟಗೊಂಡ ಕವಿತೆಗಳನ್ನು ಹುರಿಗೊಳಿಸುವ ಅವಶ್ಯಕತೆ ಇತ್ತು. ಕವಿತೆಯನ್ನು ಮಾತುಗಳ ಗಡಿಯಿಂದ ಆಚೆ ತಂದು ಧ್ವನಿ-ಧ್ಯಾನವಾಗಿಸುವ ಸಾಧ್ಯತೆ ಇತ್ತು. ಗಕ್ಕನೇ ನಿಂತು ದಿಕ್ಕು ಕಾಣದ ಕೂಸಾಗುವ ಕವಿತೆಯನ್ನು ರಮಿಸುವ ಸಾಧ್ಯತೆ ಇತ್ತು. ಸಾಕಷ್ಟು ಜೀವದ್ರವ್ಯವಿರುವಾಗ ಪ್ರಣಾಳ ಶಿಶುಗಳ ಅವಶ್ಯಕತೆ ಇರಲಿಲ್ಲ. ನಿಟ್ಟಿನಲ್ಲಿ ಮುಂದೆ ಸಾಗುವ ಮುಂಚೆ ಮೇಲೆ ನಮೂದಿಸಿದ ಎಲೆಕ್ಟ್ರಾನಿಕ್ ಸಾಧ್ಯತೆಗಳೂ ಕೂಡ ಖಾಲಿ ಹಾಳೆಗಳಷ್ಟೇ ಸ್ವಚ್ಚ, ಶುಭ್ರ ಮತ್ತು ಸ್ವ-ಅಧೀನ ಎನ್ನುವ ಭರವಸೆ ಬೇಕಿದೆ ಕವಿಗೆ. ಅಲಂಕಾರಗಳು ಬೇಕಿಲ್ಲ ಕವಿತೆಗೆ, ಚಿತ್ರಗಳ ಸಮರ್ಥನೆ ಬೇಕಿಲ್ಲ , ಏಕೆಂದರೆ
ಕವಿತೆಯಂಥ ಆಭರಣ ಪ್ರಪಂಚದಲ್ಲಿ ಮತ್ತೊಂದಿಲ್ಲ


No comments:

Post a Comment