Total Pageviews

Thursday, April 2, 2015

ಅನುಭವದ ನಡಿಗೆ, ಅನುಭಾವದ ಕಡೆಗೆ

   

      ಹೈದರಾಬಾದಿನಿಂದ ಹಿರಿಯ ಕವಿ-ವಿಮರ್ಶಕ ಕೆ.ವಿ.ತಿರುಮಲೇಶ ಹಂಪಿಯಿಂದ ಪ್ರೊ. ರಹಮತ ತರಿಕೇರೆ ಫೊನಾಯಿಸಿ ನನ್ನಹೆಣ್ಣು ಹೇಳುವ ಅರ್ಧಸತ್ಯಕುರಿತು ಕಣ್ದುಂಬಿ, ಮನ ತುಂಬಿ ಮಾತಾಡಿದಾಗ ನಾನು ಮೌನದೊಳಗೆ ಜಾರಿದೆ. ಯಾಕೆಂದರೆ ಈಗ ನಾನು ಸಾಕ್ಷಿಯಷ್ಟೆ. ಸುಮ್ಮನಿರಬೇಕು. ಸುಮ್ಮನೆ, ಸುಮ್ಮನೆ ಬರೀ ಸುಮ್ಮನೆ. ಕವಿತೆ ಓದಿ.

ಗುಹೇಶ್ವರನಲ್ಲಿ ಇಲ್ಲದ್ದು
ಇದೆ ಎಲ್ಲ ಕಡೆಯಲ್ಲೂ

ದೀಪವನ್ನು ಹೊತ್ತಿಸಿನೋಡಿ
ಎಣ್ಣೆ, ಬತ್ತಿ, ಹಣತೆ, ಬೆಂಕಿ ಇದ್ದೂ
ದೀಪಕ್ಕೆ ದೀಪವಾದದ್ದು ನೀವು
ಕಲ್ಲನ್ನು ಬಡಿದು ಎಬ್ಬಿಸಿ
ಉಳಿಸುತ್ತಿಗೆ ಪೆಟ್ಟು ಕೊಟ್ಟು ನೋಡಿ
ಕಡೆದು ಬಂದ ದೇವಾದಿಗಳಲ್ಲಿ
ರೂಪಕಗಳನ್ನು ಕೊಡುವುದು ನಿಮ್ಮ ಕಣ್ಣು

ಆಕಾಶವನ್ನು ದಿಟ್ಟಿಸಿನೋಡಿ
ಕಾಣುವುದು ಮತ್ತು ಕಾಣದಿರುವುದೆಲ್ಲ
ಅಲ್ಲಿದ್ದರೂ,
ಅನಂತವಾಗಿಸುವ ಪರಿ ಇರುವುದು ನಿಮ್ಮಲ್ಲಿ

ಗುಹೇಶ್ವರನೇನು ಮಹಾ!
ಇವನ್ನೆಲ್ಲ ಮೀರಿ
     ಡಾ. ನಾ. ಮೊಗಸಾಲೆಯವರ 328 ಪುಟಗಳಕಾವ್ಯ ಕಾರಣವನ್ನು ಕಣ್ಣಾಡಿಸಿದರೆ ನನನ್ನು ಇನ್ನಿಲ್ಲದಂತೆ ಕಾಡಿದ್ದು ಪದ್ಯ. ಇದು ಅಲ್ಲಮನ ಆತ್ನಸಾಕ್ಷಯನ್ನೆ ಪ್ರಶ್ನಿಸುವ, ತಿಳಿಹೇಳುವ ಅದ್ಭುತ ರಚನೆ. ‘ಅಪರಿಮಿತ ಕತ್ತಲೆಯೊಳಗೆ ವಿಪರೀತ ಬೆಳಕನಿಕ್ಕಿದೊಡೆಎಂದು ಹೇಳಿ ತಬ್ಬಿಬ್ಬುಗೊಳಿಸುವ ಅಲ್ಲಮನ ಹೆಸರಿನಲ್ಲಿ ಒಂದುಅಲ್ಲಮಪ್ರಭು ಪೀಠವನ್ನು ಮೂಡಬಿದ್ರೆ ಮುಂದೆ, ಬೆಳುವಾಯಿಯಿಂದ ಏಳು ಕಿ.ಮೀ ಆಚೆ ಕಾಡಿನಲ್ಲಿ ಕಟ್ಟಿಹಾಕುವಲ್ಲಿ ಹರಸಾಹಸ ಪಡುತ್ತಿರುವವರು ಡಾ. ನಾ.ಮೊಗಸಾಲೆ. ಬರೀ ಅಲ್ಲಮನ ಕುರಿತು ಓದಿ-ಬರೆದು-ಪ್ರವಾಸ ಕೈಗೊಂಡಿದ್ದರೆ ನಾನೀ ಮಾತುಗಳನ್ನು ಅವರ ಕುರಿತು ಅಗ್ಗಡಿಸುವ ಅವಶ್ಯಕತೆ ಇರಲಿಲ್ಲ. ಮೇಲಿನ ಅವರ ಒಂದು ಪದ್ಯ ಸಾಕು, ಅವರು ಅಲ್ಲಮನ ಅರಸುತ್ತ ತಮ್ಮ ವ್ಯಕ್ತಿತ್ವಕ್ಕೊಂದು ಅನುಭೂತಿಯನ್ನು ತುಂಬಿಕೊಂಡಿದ್ದಾರೆ ಎನ್ನಲು.

          ಅನಾರೋಗ್ಯದ ಸ್ಪಷ್ಟ ಲಕ್ಷಣಗಳ ಮಧ್ಯದಲ್ಲೂ, ಮಾರ್ಚ 28 ರಂದು ನಾನು ಮೂಡಬಿದ್ರೆಗೆ ಹೊರಟೆ. ದಿನಾಂಕ:27 ರಂದು ತಮ್ಮ ಶೈಕ್ಷಣಿಕ ಅವಧಿಯನ್ನು ಯಶಿಸ್ವಿಯಾಗಿ ಪೂರೈಸಿದ ಮಕ್ಕಳನ್ನು ಬೇಲೂರಿನಿಂದ ಎತ್ತಿಕೊಳ್ಳುವ ಕಾರ್ಯಕ್ರಮ. ಚನ್ನರಾಯಪಟ್ಟಣದ ಆಂಜನೇಯಸ್ವಾಮಿಗೊಂದು ಶರಣು ಹೇಳಿ, ಬೇಲೂರಿನ ವಿಶ್ವ ಶಿಕ್ಷಣ ಸಂಸ್ಥೆಯ ಜಯಣ್ಣ ಹಾಗೂ ಎಲ್ಲ ಶಿಕ್ಷಕ ಬಂಧುಗಳಿಗೂ, ಮಕ್ಕಳನ್ನು ಸಾಕಿದ ಮಾತೆಗೂ, ಗೆಳೆಯ ಸತೀಶ ಹಾಗೂ ಉಳಿದ ಎಳೆಯರಿಗೂ ಕೋಟಿ ನಮನಗಳು ಇವರೆಲ್ಲ "Friend in need friend indeed" ಎಂಬ ಗಾದೆಯನ್ನು ಸತ್ಯವಾಗಿಸಿದವರು.
          ಎರಡೂ ಮಕ್ಕಳನ್ನೂ ಕಾರು ಹತ್ತಿಸಿಕೊಂಡು ಹೊರಡುವಾಗ ಎಂದೆಂದಿಗೂ ಅಲ್ಲೇ ಉಳಿಯುವ, ನಮ್ಮ ನಿರ್ಗಮನ, ಅವಸಾನದ ನಂತರವೂ ನಮ್ಮ ಕತೆ ಹೇಳುವಮರವೆಂಬ ಮಗನ ನೆನಪಾಯಿತು. ಎಷ್ಟೊ ಹೊತ್ತು ಅದರ ಸುತ್ತ, ವಯಸ್ಸಿನಲ್ಲಿ ಈತ ನನ್ನ ಮಗನಿಗೂ ಹಿರಿಯ. ಒಬ್ಬ ಮಗ ನಿಮ್ಮ ಸತ್ಸಂಪ್ರದಾಯ ಮುಂದೊರೆಸುವನೋ ಇಲ್ಲವೊ, ಮರವಂತೂ ನಿಮ್ಮ ಆತ್ಮದ ಮೌನಸಂಗೀತದ ಮಹಾಬೆಳಗು ಮತ್ತು ಮುಂದುವರಿಕೆ.
         ಎಷ್ಟೋ ತಿಂಗಳೊ. ವರ್ಷವೊ ಸ್ಪಷ್ಟ ನೆನಪಿಲ್ಲ. ಮೂಡಿಗೆರೆ, ಕೊಟ್ಟಿಗೆಹಾರ ಅಲ್ಲಲ್ಲಿ ನಿಂತು, ಉಸಿರೆಳೆದುಕೊಂಡು, ಮಲಯ ಮಾರುತದ ಮೈ ಎಲ್ಲ ಓಡಾಡಿ, ಜೇನುಕಲ್ ಸಿದ್ದೇಶ್ವರನಿಗೊಂದು ನಮಸ್ಕಾರ ಹೇಳಿ ಚಾರ್ಮಾಡಿ ತಾಯಿಯ ಮೈ-ಮನಗಳಲ್ಲಿ ಸುತ್ತಾಡುತ್ತಿದ್ದರೆ ನಾವು ಚಿಕ್ಕವರಿದ್ದಾಗ ನಮ್ಮ ತಾಯಿ ಸ್ನಾನ ಮಾಡಿಸುತ್ತಿದ್ದ ನೆನಪು. ಹೆಣ್ಣನ್ನು ಭೂಮಿಗೇಕೆ ಹೋಲಿಸುತ್ತಾರೆ ಎಂದು ನನಗೆ ತಿಳಿದದ್ದು ಆಗಲೆ.

     ಚಾರ್ಮಾಡಿಯಿಂದ ಉಜಿರೆಗೆ ಬಂದಾಗ ಜ್ವರವಿತ್ತು. ಆದರೆ ನನ್ನ ರೂಢಿ ಯಾವಾಗಲೂ ಅಲ್ಲಿ ತಿಂಡಿ ತಿಂದು, ಬೆಳ್ತಂಗಡಿಯಲ್ಲಿ ಎಲೆ ಹಾಕಿಕೊಂಡು ಗುರುವಾಯುನ ಕೆರೆಯ ಕೆರೆಯನ್ನು ಕಣ್ಣು ತುಂಬಿಸಿಕೊಂಡರೆ ಪ್ರವಾಸಕ್ಕೊಂದು ಅರ್ಥ ಬಂದಂತೆ. ಆರೋಗ್ಯಕೆಟ್ಟರೂ ಚಿಂತೆಯಿಲ್ಲ ಸಾರಿಯೂ ಅದೆಲ್ಲ ಮಾಡಿಯಾಯಿತು. ವ್ಯತ್ಯಾಸವಿಷ್ಟೇ, ಇಲ್ಲಿಂದ ಉದ್ದಕ್ಕೆ ಹೊರಟುಬಿಡುತ್ತಿದ್ದ ನಾನು ಬಾರಿ ವೇಣೂರು ಜೈನ ಬಸದಿಯಲ್ಲಿ ನನ್ನಿಷ್ಟದ ಅಶ್ವಥರ ಗೀತೆಗಳನ್ನು ಕೇಳುತ್ತ ಒಂದೂವರೆ ಗಂಟೆ ಮಲಗಿಬಿಟ್ಟೆ. ಅಕ್ಕಮಹಾದೇವಿ ಕಿವಿಯಲ್ಲಿಶಯನಕ್ಕೆ ಪಾಳು ದೇಗುಲಗಳುಂಟು ಆತ್ಮಸಂಗಾತಕ್ಕೆ ನೀ ಎನಗುಂಟುಎಂದು ಪಿಸುಗುಟ್ಟುತ್ತಲೇ ಇದ್ದಳು.
       ಕಾಂತಾವರದ ಕರ್ನಾಟಕ ಸಂಘದ ಅತೀ ದೊಡ್ಡ ಡೋನರ್ಗಳಲ್ಲಿ ಒಬ್ಬರಾದ ಪಡಿವಾಳರ ಹೋಟೆಲ್ ಪಡಿವಾಳದಲ್ಲಿ ನಮ್ಮ ವಸತಿಯ ವ್ಯವಸ್ಥೆಯಾಗಿದ್ದರೂ ನಾನದನ್ನು ಪ್ರೀತಿಯಿಂದಲೇ ನಿರಾಕರಿಸಿದಾಗ ನಗು ಮುಖದ ಮೊಗಸಾಲೆ ತಕ್ಷಣಪಂಚಮಿಯಲ್ಲಿ ಎಲ್ಲವನ್ನೂ ಸಿದ್ಧಗೊಳಿಸಿದರು. ಇಲ್ಲಿಯ ದೈವಗಳ ಮುಂದೆ ನನ್ನ ಹೆಂಡತಿಯ ತನ್ನ ನೌಕರಿ ಕುರಿತು ಕೆಲವು ಹರಕೆಗಳಿದ್ದವಂತೆ. ಅದೀಗ ಈಡೇರಿದ ಸಂದರ್ಭ. ಆಕೆ ಅವುಗಳನ್ನು ತೀರಿಸುವುದರಲ್ಲಿ ಮಗ್ನ, ನನಗೆ ನನ್ನಅಂಚೆ ಮನೆಯ ಕವಾಟುಗಳಲ್ಲಿಎಂಬ ಅಪರೂಪದ ಪದ್ಯ ಬರೆದ ಕ್ಷಣದ ಧ್ಯಾನ.
          ಕಾಂತಾವರದಲ್ಲಿ 29 ಮಧ್ಯಾಹ್ನ 2.30 ನಿಮಿಷಕ್ಕೆ ಹಾಜರ್. ಇಂದಿನ ನನ್ನ ಉಪನ್ಯಾಸಕ್ಕಿದ್ದವರು ಜನಾರ್ಧನ ಭಟ್, ಶ್ರೀ ಎನ್.ವಿಠ್ಠಲ ಶೆಟ್ಟಿ, 92 ಚಂದ್ರಕುಮಾರ್ ಪಡಿವಾಳ್, ಶೇಖರ್ ಅಜೇಕಾರು, ಡಾ. ನಾ.ಮೊಗಸಾಲೆ, ಕೆ.ಮೋಹನದಾಸ್ ಅಂಡ್ಯತಾಯ ಹಾಗೂ ನೂರಾರು ಹಿರಿಯರು. ಸಭೆಯಲ್ಲಿ ಅತ್ಯಂತ ಕಿರಿಯ ನಾನೇ. ತೊಂದರೆ ಇಲ್ಲ. ಕೇಳುಗನೊ, ನೋಡುಗನೊ ಆಗಿದ್ದರೆ ಕಷ್ಟವಿರಲಿಲ್ಲ, ಆದರೆ ಇಂದು ನಾನು ಮಾತಾಡುತ್ತಿರುವುದು ಅಲ್ಲಮನ ವೇದಿಕೆಯ ಮುಖಾಂತರ ಓಶೋನ ಕುರಿತು.
          ಮೊದಲಿಗೆ ಬಂದು ಕೈ ಕುಲಿಕಿದವರೇ 5 ಲಕ್ಷ ಸುರಿದು, ಪ್ರಪಂಚದ ಎಲ್ಲ ಪುಸ್ತಕಗಳನ್ನು ಕಲೆ ಹಾಕಿ, ಶಿವ ಸಂಸ್ಕøತಿಯನ್ನು ತಿಳಿಯಲು ಹೊರಟ ಸಾಧಕ. ನಾನು ಅವರ ಹೆಸರು ಕೇಳಲಿಲ್ಲ. ಯಾಕೆಂದರೆಜಾತಿ ಪೂಛ ಸಾಧು ಕಿಎಂದಿದ್ದಾರೆ ಕಬೀರ. ದೇಶದಲ್ಲಿ ಜಾತಿಯ ವಾಸನೆ ಇಲ್ಲದ ಹೆಸರು ಎಲ್ಲಿದೆ ಹೇಳಿ? ಗಾಭರಿ, ಭಯ, ವಿನಯದಿಂದಲೇ ವೇದಿಕೆ ಹತ್ತಿದೆ. “ನನಗೆಷ್ಟು ಸಮಯ?” ಎಂದಾಗಕೇವಲ ಒಂದುವರೆ ಗಂಟೆಎಂದರು ಮೊಗಸಾಲೆ. ನನ್ನ ನೀರಿಳಿಯಿತು, ಆದರೆ ನಾ ಕುಸಿಯಲಿಲ್ಲ.
       ಬಹಳ ಹಿಂದೆ ಓಶೋನ ಕುರಿತು ಬರೆಯುವಾಗ ಪ್ರೊ.ವಿದ್ಯಾಶಂಕರ್ ಆದಿಯಾಗಿ ನಾನು ಆತನನ್ನು ಅಲ್ಲಮನೊಂದಿಗೆ ಹೋಲಿಸಿದ್ದೇ ತಪ್ಪು ಎಂದಿದ್ದರು ಅದೇ ತಪ್ಪನ್ನು ನಾನು ಮತ್ತೆ ಧೈರ್ಯದಿಂದ ಪುನರಾವರ್ತಿಸುವ ಸಾಹಸ ಮಾಡಿದೆ. ಯಾಕೆಂದರೆ, ಒಂದು ಘನದೊಂದಿಗೆ ಮತ್ತೊಂದು ಮಹಾ ಘನವನ್ನು ಹೋಲಿಸಿ ನೋಡುವ ಸುಂದಾರವಾದ ತಪ್ಪು ಅದು. ಹೀಗೆ 3 ಗಂಟೆ ಶುರುವಾದ ನನ್ನ ಭಾಷಣ ಮುಗಿದಾಗ 4.45 ನಿಮಿಷ. ನಮ್ಮ ತಾಯಂದಿರು ಹೇಳುತ್ತಾರೆ, ‘ಗಂಡು ಮಗ ಹತ್ತು ರೊಟ್ಟಿ ತಿನ್ನೆಂದರೆ ಹನ್ನೊಂದು ತಿಂದೇಳಬೇಕುಇದು ಸಾಧನೆಗೂ ಅನ್ವಯವಾಗುವ ಮಾತು ಎಂದುಕೊಂಡಿದ್ದರಿಂದ ನಾನು ಇಷ್ಟೊಂದು ದೀಘವಾಗಿ ಮಾತನಾಡಲು ಸಾಧ್ಯವಾಯಿತು.
    ಎತ್ತಿಕೊಂಡದ್ದು ಓಶೋನ ಒಂದೇ ಮಾತು, “ಭಿಕ್ಷೆಯುಂಡು, ಬಯಲ ಬಯರಾಗಿಗಳಾಗಿ ಅಂಡೆಲೆಯುವ ಸಾಧಕರು ನಿಮ್ಮ ಲೌಕಿಕ ಭಾರತದಲ್ಲಿ ನಿರುಪಯುಕ್ತ ಎಂದುಕೊಂಡ ಮರುಕ್ಷಣವೆ ದೇಶದ ಆತ್ಮ ಸತ್ತಿತು ಎಂಬುದನ್ನು ಮರೆಯಬೇಡಿಎಂಥ ಎಚ್ಚರಿಕೆ! ಇಡೀ ಪ್ರವಾಸದಲ್ಲಿ ಮಾತನ್ನು ಮತ್ತೆ ಮತ್ತೆ ನನಗೆ ನಾನೇ ಹೇಳಿಕೊಂಡಾಗ ನನ್ನ ಕಾಡಿದ್ದು ನನ್ನ ಶ್ರೀಶೈಲ. ಅಲ್ಲಿಯ ಸಾಧು, ಬೈರಾಗಿ, ಸಂತರುಗಳ ದಂಡು. ಬೆಳಗಾದರೆ ನಮ್ಮ ಮನೆಯ ಪಕ್ಕದ ಸ್ನಾನಾಲು ಘಟ್ಟದಲ್ಲಿ ಬೆತ್ತಲೆಯಾಗಿ ಚಿತ್ರವಿಚಿತ್ರವಾಗಿ ಕಾಣುತ್ತಿದ್ದ ಇವರು ದಿನವೆಲ್ಲ ಕಾಡಿನಲ್ಲಿ ಮಾಯ. ಮತ್ತೆ ಸಂಜೆ 7 ಗಂಟೆಗೆ ಮಬ್ಬುಗತ್ತಲಲ್ಲಿ ಬೆರಳೆಣಿಕೆಯ ಮನೆಗಳ ಮುಂದೆ ಭಿಕ್ಷೆಗಾಗಿ.
      ಸದಾ ಅರೆ ನಗ್ನರಾಗಿಯೇ ಇರುತ್ತಿದ್ದ ಇವರು, ಬೆತ್ತಲೆಯ ಹಂಗುಹರಿದವರು. ಇಂದು ನಾವು ಸುದ್ದಿಯಾಗಿಸುವ ಸಾಮೂಹಿಕ ಅತ್ಯಾಚಾರ, ಬಲಾತ್ಕಾರ ಹಾಳು ಮೂಳುಗಳ ಲೇಪನವಿಲ್ಲದೆ ದೇಶದ ಆತ್ಮ ಕಾಯ್ದವರು. ಪ್ರಗತಿಯ ಹೆಸರಿನಲ್ಲಿ ಹೊಸದೇನನ್ನೂ ಮಾಡದಿದ್ದರೂ ಹುಟ್ಟುವ ಹೊಸ ಜನಾಂಗಕ್ಕಾಗಿ ಸಾಧನೆಯ ಬೀಜ ಮಂತ್ರ ಊದಿದವರು. ಇವರು ದೇಶದ ಜಂಗಮತ್ವದ ವಾರಸುದಾರರು. ಬಹುತೇಕ ಓಶೋನ ಮಾತಿನ ಮುಂದೆ ಎಲ್ಲಾ ಧ್ವನಿಗಳಿರಬಹುದು.
       ಕಾರ್ಯಕ್ರಮ ಮುಗಿಸಿಕೊಂಡು ಕರ್ನಾಟಕ ಸಂಘದ ವೇದಿಕೆ ಇಳಿದಾಗ ಅದೇ ಗಡ್ಡದಾರಿ ಹಿರಿಯ ಸಾಧಕರು ನನ್ನ ಪುಸ್ತಕಗಳನ್ನು ಖರೀದಿಸಿಕೊಂಡು ಬಂದುಅಟೋಗ್ರಾಫ್ ಪ್ಲೀಸ್ಎಂದಾಗ ನನಗೆ ನೆನಪಾದುದು ನನ್ನ ತಾಯಿ-ತಂದೆ ಮತ್ತು ಗುರುರಾಯ. ನಾನು ಸೋತಾಗ ನನ್ನ ನಡೆಸುವ ಶಕ್ತಿಗಳಿವೆ. ಖಂಡಿತವಾಗಿಯೂ ಘಟ್ಟದ ಜನರ ಪಾಂಡಿತ್ಯ ಮತ್ತು ಇಂದಿನ ಪ್ರೀತಿಗೆ ನಾನು ನಿಶ್ಯಬ್ಧ.
        ಇಲ್ಲಿಂದ ಮುಂದೆ ಚೌಟ್ರಚೌಕಿಗೆ, ಇದೊಂದು ರಂಗವನ. ಅದು ಅಲ್ಲಮ ಪೀಠದ ಪಕ್ಕದಲ್ಲಿಯೇ. ಕಾಡಿನ ಮಧ್ಯ ಕೋಟಿ ಕೋಟಿ ಸುರಿಯುವ ಜನಗಳು ಒಂದು ರೀತಿಯ ಅಲ್ಲಮರೆ. ಎಷ್ಟೆಲ್ಲ ಮಾಡಿ ಸುಮ್ಮನೆ ನಿರ್ಮೋಹಿಯಾಗಿ ವ್ಯಾಕರಣ ಬದ್ಧರಾಗಿ ಬದುಕಿ ಸಾಯುತ್ತಾರೆ. ಆದರೆ ಬದುಕಿನ ಶಿಸ್ತನ್ನು ಬಲಿಕೊಡಲಾರರು. ಜನಾಂಗ, ದೇಶ, ಸಂಸ್ಕøತಿ ಬಿಟ್ಟುಕೊಡಲಾರರು.
    ಇಲ್ಲಿಂದಮೊಗಸಾಲೆಗೆ. ಅದೊಂದು ಪ್ರೀತಿಯ ಮಹಾ ಲೋಕ. ಹೋದ ತಕ್ಷಣ ನಿಮಗಾಗಿ ಕಾಯುತ್ತ ಕುಳಿತು ಕುಳಿತು ಬಂದ ಕ್ಷಣವೆ ಹೆಗಲಿಗೆ ಬೀಳುವ ತಾಯಿಯಂಥ ಎರಡು ನಾಯಿಗಳು. ನಮ್ಮ ಮೊಗಸಾಲೆಯವರನ್ನೂ ಆಕರ್ಶಣೆಯಲ್ಲಿ ಹಿಂದೆ ಹಾಕಬಲ್ಲ ಶ್ರೀಮತಿ ಮೊಗಸಾಲೆ, ಮಗಳಿಗಿಂತಲೂ ಮಗಳೆನಿಸುವ ಸೊಸೆ, ಎಂಬತ್ತರ ಆಸುಪಾಸಿನ ಎರಡು ಹಿರಿಯ ಜೀವಗಳು, ಜೊತೆಗೆ ನಮ್ಮ ಬಾಗಲಕೋಟೆಯಿಂದ ಬಂದು ಇವರ ತೋಟ ಸೇರಿದ ಒಬ್ಬ ಹಿರೇಮಠ.
     ಅದೆಲ್ಲಿಂದ ಬಂತೋ ಮೊಗಸಾಲೆಯವರಿಗೆ ಜಂಗಮರಜೋಳಿಗೆ’. ಅದು ಕೈ ಹಾಕಿದಷ್ಟೂ ಅಜೂಬಾ!!!

ಇದು ಅನುಭವದ ನಡಿಗೆ, ಅನುಭಾವದ ಕಡೆಗೆ.


No comments:

Post a Comment