Total Pageviews

Saturday, October 22, 2016

ಗಾಂಧಿ - ನಾನು ಮತ್ತು ಸ.ಜ.ನಾ



..ನಾಗಲೋಟಿಮಠರು ಬನಹಟ್ಟಿಯವರು, ನನ್ನ ದೊಡ್ಡಪ್ಪನ ಊರು ಬನಹಟ್ಟಿ. ಸಜನಾ ಬಾಗಲಕೋಟೆಯ .ವಿ.ವದಲ್ಲಿದ್ದರು, ಆಗ ನಾನು ಅಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಉಪನ್ಯಾಸಕನಾಗಿದ್ದೆ. ಇದಕ್ಕೂ ಪೂರ್ವ ಸಜನಾ ಬೆಳಗಾವಿಯ ಕೆ.ಎಲ್.ಇಯಲ್ಲಿದ್ದರು. ನನ್ನ ವೃತ್ತಿ ಬದುಕಿನ ಅಪೂರ್ವ ಪರ್ವವೇ ಬೆಳಗಾವಿಯ ಕೆ.ಎಲ್.ಇಯಿಂದ ಪ್ರಾರಂಭವಾಯಿತು. ಸಜನಾಬಿಚ್ಚಿದ ಜೋಳಿಗೆಬರೆದರು, ನಾನುಜೋಳಿಗೆಯನ್ನು ಕಟ್ಟಿಕೊಂಡೆ ಹೀಗೆ ದಶಕಗಳಿಂದ ಎಂದೂ ಭೆಟ್ಟಿಯಾಗದ ನಾವಿಬ್ಬರೂ ಭಾವನಾತ್ಮಕವಾಗಿ ಬೆರೆತೇ ಹೋಗಿದ್ದೇವೆ. ಸಜನಾ ಮುಂದೆ-ಮುಂದೆ, ನಾನವರ ಹಿಂದೆ-ಹಿಂದೆ, ಇದು ನಮ್ಮ ಅರಿವಿಗೆ ಬಾರದ ನಮ್ಮ ಅಪರೂಪದ ಪಯಣ. ಇದಕ್ಕೊಂದು ಕಳಸವಿಟ್ಟ ಕಾರ್ಯಕ್ರಮ ಹುಕ್ಕೇರಿ ಮಠದಲ್ಲಿ ನನ್ನಗಾಂಧಿಕೃತಿಗೆ ನಡೆದಡಾ. ..ನಾಗಲೋಟಿಮಠ ಸಾಹಿತ್ಯ ರತ್ನ ಪ್ರಶಸ್ತಿ -2015’ ಸಮಾರಂಭ. ಅಂದು ಸಜನಾ ಅವರ ಸೊಸೆ, ಅವರ ಮಹತ್ವದ ವೈದ್ಯಕೀಯ ಸಾಹಿತ್ಯ ಕೃತಿ ಪ್ರಕಟಿಸಿದ ರಂಭಾಪುರಿ, ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರು, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಚಲನಚಿತ್ರ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ, ಕರ್ನಾಟಕದ ಕಬೀರರೆನಿಸಿದ ಶ್ರೀ ಇಬ್ರಾಹಿಂ ಸುತಾರ, ರಾಜಕಾರಣಿಗಳಾದ ರಮೇಶ ಕತ್ತಿ, ಶಶಿಕಾಂತ ನಾಯಕ ಹಾಗೂ ಹುಕ್ಕೇರಿಯ ಸಾವಿರ ಸಾವಿರ ಸಂಖ್ಯೆಯ ಸಭಿಕರು
 ಸಜನಾ ವೈದ್ಯರಾಗಿದ್ದರೂ ಸಂತನಂತೆಯೇ ಬದುಕಿದರು, ಗಾಂಧಿ ರಾಜಕಾರಣದಲ್ಲಿ ಸಂತರಂತಿದ್ದರು. ಸ್ವಂತ ತನಗಾಗಿ ಎನ್ನುವ ಸ್ವಾರ್ಥದ ದಾರಿ ತುಳಿಯದವನೇ ಸಂತ ಎಂದು ಶ್ರೀ ಚಂದ್ರಶೇಖರ ಶಿವಾಚಾರ್ಯರು ಅಂದು ಸರಿಯಾಗಿಯೇ ಹೇಳಿದರು. ಗಾಂಧಿಯಾಗಲಿ, ಸಜನಾ ಆಗಿರಲಿ ಸಮಾಜ ಮುಖಿಯಾದ ಅವರ ನಿಲುವು ಸ್ವಾರ್ಥದ ಗಡಿಯಿಂದ ಅತೀಥವಾಗಿತ್ತು. ಇದು ನಮ್ಮಂಥವರನ್ನು ಕಾಡಬೇಕಾದ ನಿಲುವಲ್ಲವೆ?
 ಮರುದಿನ ಅಥಣಿ ಮಾರ್ಗವಾಗಿ ನನ್ನೂರಿಗೆ. ನನ್ನೂರು ಯಾವುದು? ಜಿಲ್ಲೆ ಯಾವುದು? ತಾಲೂಕು ಯಾವುದು? ಇವು ನಾಲ್ಕು ದಶಕಗಳಿಂದ ಕಾಡಿದ ಪ್ರಶ್ನೆಗಳು. ಆದರೆ ಇತ್ತೀಚೆಗೆ ಗೆಳೆಯ ಬಸೀರ ಚಡಚಣದಲ್ಲಿಜೋಳಿಗೆಕಟ್ಟಿಸಿ ಅಲೆಮಾರಿಯಾಗಿದ್ದ ನನ್ನನ್ನು ಅಲ್ಲಿ ನಿಲ್ಲಿಸಿ ಚಡಚಣ ನಿನ್ನೂರು, ವಿಜಯಪುರ ನಿನ್ನ ಜಿಲ್ಲೆ, ಇಂಡಿ ನಿನ್ನ ತಾಲೂಕು ಎಂದು ಹೇಳಿದ್ದ. ನಾನು ಒಂದಿಷ್ಟು ನಿರಾಳನಾಗಿದ್ದೆ.
ಆದರೆ ಈಗ ಹಾಗಲ್ಲ, ವಾಸ್ತವದಲ್ಲಿ ನನ್ನ ತಂದೆಯ ಊರು ಅಡಹಳ್ಳಿ ತಾಯಿಯ ತವರು ತೆಲಸಂಗ ಎರಡೂ ಅಥಣಿ ತಾಲೂಕಿನಲ್ಲಿವೆ. ಅಥಣಿಯ ಜನತೆ ಆಗಾಗ ನಿಲ್ಲಿಸಿ ನೀವು ಇಲ್ಲಿಯವರು ನಮ್ಮವರು ಎನ್ನುತ್ತಿದ್ದಾರೆ. ಅದರಲ್ಲೂ ಮೋಟಗಿ ಮಠದ ಪುಸ್ತಕ ಸಂಸ್ಕøತಿಯ ಚೆನ್ನಬಸವದೇವರ ಪ್ರಯತ್ನ ಸ್ಮರಣೀಯ. ಅಥಣಿಯ ಗಡಿ ದಾಟಿ ನಾನು ಎಲ್ಲೇ ಸನ್ಮಾನಿತನಾಗಿ ಬಂದರೂತವರು ಸನ್ಮಾನಎಂದು ಪ್ರೀತಿಯ ಒಂದು ಶಾಲು ಹಿಡಿದು ಬಾಗಿಲಲ್ಲೇ ನಿಂತಿರುತ್ತಾರೆ. ಇಂದು 14.10.2016 ರಂದು ಮೃತ್ಯುಂಜಯ ಸ್ವಾಮಿಗಳ 93ನೇ ಸ್ಮರಣೋತ್ಸವ. ಸಜನಾ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಮತ್ತೆ ಗೌರವಗಳಿಂದ ಪ್ರೀತಿಯ ಸನ್ಮಾನ. ಎಷ್ಟಾದರೂ ಇದು ಇವ ನಮ್ಮವ ಎಂಬ ಸಂಸ್ಕøತಿಯ ನಾಡು.
ಮುಂದೆ ಮರುದಿನ 15.10.2016 ರಂದು ಚಡಚಣದ ನನ್ನ ಜೋಳಿಗೆಯಲ್ಲಿ ನನ್ನ ಗಾಂಧಿಗೆ ಬಂದ ಪ್ರಶಸ್ತಿಯನ್ನು ನನ್ನೂರು ಜನತೆಗೆ ಅರ್ಪಣೆ. ಎಲ್ಲಿಯ ಗಾಂಧಿ? ಎಲ್ಲಿಯ ..ನಾ? ಮತ್ತೆಲ್ಲಿಯ ರಾಗಂ? ಇವೆಲ್ಲ ಜೋಳಿಗೆಯ ಮಡಿಲಿಗೆ ಬರಬೇಕಾದರೆ ಮಣ್ಣಿಗೆ ಏನೋ ಶಕ್ತಿ ಇರಲೇ ಬೇಕು. ಇದೆ.
 ಪುಣ್ಯದ ದಾರಿ ಹಿಡಿದು ಇರುವೆಯಂತೆ ಬದುಕಿದರೂ ಸಾಕು ನಿಂತ ನೆಲದಲ್ಲೊಂದು ನೆಲೆ ಪ್ರಾಪ್ತಿಯಾಗುತ್ತದೆ ಎನ್ನುವುದನ್ನು ಗಾಂಧಿ, ..ನಾ ನನಗೆ ಮನಗಾಣಿಸಿದ್ದಾರೆ. ನಮ್ಮೊಂದಿಗೆ ಪ್ರವಹಿಸಿ, ಪ್ರಯಾಣಿಸಿ ನನ್ನ ಕುಟುಂಬವೂ ಮಹಾ ಜಂಗಮ ಸಂಸ್ಕøತಿಯ ಸುಖ ಉಂಡಿದೆ. ನಾವು ನಿಮ್ಮಿಂದಾಗಿ ಧನ್ಯಾರಾಗಿದ್ದೇವೆ.


No comments:

Post a Comment