ಚಂಪಾ - ಕೋಚೆ ಮತ್ತು ಸಾವಿತ್ರಿ
ಆದರೆ
ಈ ಸಾರಿಯ ಬಿಜಾಪುರ(Bijapur)ದ 79 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಪ್ಪಿಸಿಕೊಳ್ಳುವ
ಹಾಗಿರಲಿಲ್ಲ. ಕಾರಣ ಗುರುಗಳಾದ ಚಂಪಾ(Champa) ಅವರ ಫರ್ಮಾನ್. ಈ ಹಿಂದೆಯೂ ಒಮ್ಮೆ ಬೀದರದಲ್ಲಿ ನಡೆದ
ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಇದೇ ಚಂಪಾಜ್ಞೆ ಕಾರಣವಾಗಿತ್ತು. ಈ ಆಜ್ಞೆ ಅಧಿಕಾರಯುತವಾಗಿರುತ್ತದೆ
ಸತ್ಯ, ಆದರೆ ಪ್ರೀತಿಯೊಂದಿಗೆ ಅದು ಎರಕ ಹೊಯ್ದುಕೊಂಡಿರುತ್ತದೆ. ಹಠ ಮತ್ತು ದುರಹಂಕಾರದಿಂದಲ್ಲ ಬದಲಾಗಿ,
ಪ್ರೀತಿಯಿಂದ ಏನೆಲ್ಲವನ್ನೂ ಸಾಧಿಸಲು ಸಾಧ್ಯ ಎನ್ನುವುದಕ್ಕೆ ಸಾಕ್ಷಿಯಾಗಿ ಈ ಚಂಪಾ ನನ್ನನ್ನು ಕಾಡುತ್ತಾರೆ.
ನಾವೆಲ್ಲ ಗೆಳೆಯರು - ಶ್ರೀ ಎಮ್.ಆರ್.ಗಿರಿರಾಜ, ರವಿಕುಮಾರ ದಿನಾಂಕ 08/02/2013 ನಸುಕಿನ 5 ಗಂಟೆಗೆ
ನಮ್ಮ ಪ್ರವಾಸವನ್ನು ಹೊಸದುರ್ಗ, ಹೊಸಪೇಟೆ ಮಾರ್ಗವಾಗಿ ಪ್ರಾರಂಭಿಸಿ, ಸಾಯಂಕಾಲ 4 ಗಂಟೆಗೆ ಬಿಜಾಪುರ
ಜಿಲ್ಲಾ ಸಾಹಿತ್ಯ ಪರಿಷತ್ ಕಾರ್ಯಾಲಯವನ್ನು ಸೇರಿಕೊಂಡೆವು. ಮುಂದಿನ ಕಾರ್ಯಕ್ರಮ ಚಂಪಾ ಸಂಪಾದನೆಯ
ಶ್ರೀ ಕೊ.ಚನ್ನಬಸಪ್ಪನವರ ಕುರಿತ 305 ಪುಟಗಳ, ಕಣ್ವ ಪ್ರಕಾಶನ ಪ್ರಕಟಿಸಿದ ಕೃತಿ ಬಿಡುಗಡೆ ಸಮಾರಂಭ.
ಬಿಡುಗಡೆಗೊಳಿಸಿದವರು ಶ್ರೀ ಮದನಭಾವಿ, ಅಧ್ಯಕ್ಷತೆ ಶ್ರೀ ಪುಂಡಲೀಕ ಹಾಲಂಬಿ, ನನ್ನದು ಪ್ರಾಸ್ತಾವಿಕ,
ಚಂಪಾ ಸಂಪಾದಕರ ನುಡಿ, ಗಿರಿರಾಜು ವಂದನಾರ್ಪಣೆ. ಕಾರ್ಯಕ್ರಮವನ್ನು ನಡೆಯಿಸಿಕೊಂಡು ಹೋದವರು ಬಾಗಲಕೋಟೆಯ
ಗೆಳೆಯ ಡಾ.ಪ್ರಕಾಶ ಖಾಡೆ. ಒಂದು ಗಂಟೆಯ ಸರಳ ಸಮಾರಂಭ.
ಪ್ರೀತಿಯ
ವಿಷಯ, ಚಂಪಾ ನಮ್ಮನ್ನು ಬಿಜಾಪುರಕ್ಕೆ ಕರೆದದ್ದು. ನನಗೂ ಬಿಜಾಪುರಕ್ಕೂ ಎಷ್ಟೆಲ್ಲ ನೆನಪಿನ ನಂಟು,
ಬಿಜಾಪುರ ಎಂದರೆ ಗೋಲಗುಮ್ಮಟ, ವಚನ ಕಮ್ಮಟ, ಬಸವಣ್ಣ(Basavanna), ಸೂಫಿ(Sufi), ಸಿದ್ಧೇಶ್ವರ ಸ್ವಾಮೀಜಿ(Siddheswara
Swamiji), ಸಿಂಪಿ ಲಿಂಗಣ್ಣ ಮತ್ತು 79 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಶ್ರೀ
ಕೊ.ಚನ್ನಬಸಪ್ಪ(Koche). ವಿಚಿತ್ರ ನೋಡಿ, ಬಿಜಾಪುರದ ಶ್ರೀ ಫ.ಗು.ಹಳಕಟ್ಟಿಯವರು ಬಳ್ಳಾರಿಯಲ್ಲಿ ನಡೆದ
ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರೆ, ಇಂದು ಬಿಜಾಪುರದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ
ಬಳ್ಳಾರಿಯ ಶ್ರೀ ಕೊ.ಚನ್ನಬಸಪ್ಪನವರು ಅಧ್ಯಕ್ಷರಾಗಿರುವುದು. ತೊಂಬತ್ತು ವರ್ಷಗಳ ನಂತರ, ತೊಂಬತ್ತರ
ಹಿರಿಯರನ್ನು ಗೌರವಿಸುವ ಅವಕಾಶ ಬಿಜಾಪುರಕ್ಕೆ. ನಲವತ್ತೈದು ಕೃತಿಗಳನ್ನು ಬರೆದ ಕೋಚೆ 1974-75 ರಲ್ಲಿ
ಇದೇ ಬಿಜಾಪುರದಲ್ಲಿ ಜಿಲ್ಲಾ ಸಶನ್ಸ್ ನ್ಯಾಯಾಧೀಶರಾಗಿದ್ದರು. ಪಾಟೀಲ ಪುಟ್ಟಪ್ಪ(Patil
Puttappa) ಕೇಳುತ್ತಾರೆ, “ಕವಿ, ಕತೆಗಾರ, ಕಾದಂಬರಿಕಾರ, ವಾಗ್ಮಿ, ವಿಮರ್ಶಕ, ಪ್ರಬಂಧಕಾರ, ಮಾನವತಾವಾದಿ,
ದೇಶ ಭಕ್ತ, ಸ್ವಾತಂತ್ರ್ಯ ಸೇನಾನಿ, ಕರ್ನಾಟಕ ವತ್ಸಲ, ಏಕೀಕರಣವಾದಿ, ಗಡಿ ಹೋರಾಟಗಾರ, ಕನ್ನಡದ ಕಟ್ಟಾಳು,
ಸಾರ್ವಜನಿಕ ಸಮಸ್ಯೆಗಳ ವಕೀಲ, ನ್ಯಾಯವಾದಿ, ನ್ಯಾಯಾಧೀಶ, ತತ್ತ್ವ ಜಿಜ್ಞಾಸು, ಪತ್ರಿಕೋದ್ಯಮಿ, ಪತ್ರಿಕೆಯ
ಅಂಕಣಕಾರ, ಬಡವರ ಬಂಧು-ಕೋ.ಚನ್ನಬಸಪ್ಪನವರನ್ನು ಏನೆಂದು ವರ್ಣಿಸಬೇಕು? ಅವರ ಬಗೆಗೆ ಯಾವ ವಿಶೇಷಣ ಹಚ್ಚಿ
ಹೇಳಿದರೂ ವರ್ಣನೆ ಅಪೂರ್ಣವೆನಿಸುತ್ತದೆ.”
ಇಂಥ
ಕೋಚೆ ನನ್ನ ‘ಗಾಂಧಿ:ಅಂತಿಮ ದಿನಗಳ’ ಮುಂದುವರೆದ ಭಾಗವಾದ ‘ಗಾಂಧಿ:ಮುಗಿಯದ ಅಧ್ಯಾಯ’ ಕೃತಿಯ ಮುನ್ನುಡಿಯನ್ನು
ಬರೆಯಬೇಕಿತ್ತು. ಆದರೆ, ಅಷ್ಟರಲ್ಲಿ ಅವರು ಸಮ್ಮೇಳನಾಧ್ಯಾಕ್ಷರಾಗಿ ಆಯ್ಕೆಯಾಗಿ ಬಿಡುವಿಲ್ಲದಂತಾದಾಗ
ಗಾಂಧಿ ನಿಧನದ ಹುತಾತ್ಮರ ದಿನದಂದೇ ಈ ಕೃತಿಯನ್ನು ಲೋಕಾರ್ಪಣೆ ಮಾಡಬೇಕೆಂದಿದ್ದ ನಾನು ಆ ವಿಚಾರವನ್ನ
ಕೈ ಬಿಟ್ಟೆ. ನೆಮ್ಮದಿ ಇದೆ, ಎಂಥ ಆಘಾತಗಳ ಮಧ್ಯೆಯೂ ಗಾಂಧಿ ಬಂದೇ ಬಿಟ್ಟ. ಅದು ಗಾಂಧಿ ಎಂಬ ಚೇತನಕ್ಕಿರುವ
ಶಕ್ತಿ ಎಂದುಕೊಂಡಿದ್ದೇನೆ. ಬರಹ ಬರಬೇಕಾದುದೇ ಹಾಗೆ. ಈ ಹಿಂದಿನ ಸಮ್ಮೇಳನಾಧ್ಯಕ್ಷರಾದ ಸಿ.ಪಿ.ಕೆ
ನನ್ನ ಪ್ರೀತಿಯ ಬರಹಗಾರರಲ್ಲಿ ಒಬ್ಬರು. ಎಲ್ಲೋ ಒಂದು ಮಹತ್ವದ ಬರಹ ಅವರ ಕುರಿತು ನಾನು ಮಾಡಲೇ ಇಲ್ಲ
ಎಂದುಕೊಳ್ಳುತ್ತಿರುವಾಗಲೇ ಗೆಳೆಯ ಮಾನಸ ಸಂಪಾದಿಸಿದ ‘ಸಿ.ಪಿ.ಕೆ ಬಾಳ ದೀಪಿಕೆ’ ಕೃತಿಗೆ ‘ನಮ್ಮ ಸಿ.ಪಿ.ಕೆಗೊಂದು
ಸ್ವಾರಿ ಹೇಳಬೇಕು’ ಎನ್ನುವ ನನ್ನ ಲೇಖನದ ಮೂಲಕ ಅವರ ಪುಸ್ತಕ ಅಚ್ಚಾಯಿತು. ಈ ಸಾರಿಯೂ ಅಷ್ಟೆ ‘ಬೇಡಿ
ಕಳಚಿತು ದೇಶ ಒಡೆಯಿತು’ದಂಥ ದೊಡ್ಡ ಕಾದಂಬರಿ ಬರೆದ ಕೋಚ ಕುರಿತು ನನಗೇನೂ ಮಾಡಲಾಗಲಿಲ್ಲವಲ್ಲ ಎಂದುಕೊಂಡಾಗ
ಗುರುಗಳಾದ ಚಂಪಾ ಕಾರಣಕ್ಕಾಗಿ ಬಿಜಾಪುರದ ಈ ಪುಸ್ತಕ ಬಿಡುಗಡೆಯ ಪ್ರಾಸ್ತಾವಿಕ, ಕೋಚಯ ಸಾಮಿಪ್ಯ ಸಾಧ್ಯವಾಯಿತು.
ಬಹಳ
ಹೇಳುವುದರಲ್ಲಿ ಅರ್ಥವಿಲ್ಲ. ಈ ಕೋಚ ಶ್ರೀ ಅರವಿಂದರ(Shri Aurobindo) ‘ಸಾವಿತ್ರಿ’(Savitri)ಯನ್ನು
ಕನ್ನಡದಲ್ಲಿ ಸಾಧ್ಯವಾಗಿಸಿದ ಭೀಮ ಸಾಹಸಿ, ಅವಳನ್ನು ಕೊನೆಗೂ ಕನ್ನಡಕ್ಕೆ ತಂದ ಭಗೀರಥ. ಈಗ ಅವರ ಈ
ಅನುವಾದ ನನಗೆ ಎಷ್ಟೆಲ್ಲ ಕಾಡಿದೆ. ನನ್ನ ‘ಸಾಕಿ’ಯ ಸುಖವಾಗಿದೆ. ಓದಿ, ಈ ಸಾಲುಗಳಲ್ಲಿರುವ ಆ ಅವಳನ್ನು
ನೀವು ನೋಡಬೇಕಿದೆ.
ಅವಳೇ ಸುವರ್ಣ ಸೇತುವೆ,
ಅದ್ಭುತ ಅಗ್ನಿ,
ಆಜ್ಞೇಯ ದುಜ್ವಲ ಹೃದಯ
ಅವಳೆಯೆ,
ಭಗವಂತನ ಗಂಭೀರ ಗರ್ಭದ
ನಿಃಶ್ಯಬ್ಧದೊಂದು ಶಕ್ತಿ
ಅವಳೆ
ಅವಳೆ ‘ಪರಾಶಕ್ತ’, ಅನಿವಾರ್ಯ
‘ಗೀರ್ವಾಣ’
No comments:
Post a Comment